ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರನ ಬೇಡಿಕೆ ಪತ್ರ : ಉಡುಪಿ-ಚಿಕ್ಕಮಗಳೂರು ನೂತನ ಸಂಸದರಿಗೆ

By ಗೌತಂ ಹೆಗ್ಡೆ ಉಳ್ತರ್, ಕುಂದಾಪುರ
|
Google Oneindia Kannada News

ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವು ಕಡಲ ತಡಿ, ಮಲೆನಾಡು ಮತ್ತು ಬಯಲುಸೀಮೆ ಪ್ರದೇಶವನ್ನು ಹೊಂದಿದೆ. ಬಿಜೆಪಿಯಿಂದ ಶೋಭಾ ಕರಂದ್ಲಾಜೆ, ಜೆಡಿಎಸ್ ನಿಂದ ಪ್ರಮೋದ್ ಮಧ್ವರಾಜ್ ಅವರು ಪ್ರಮುಖ ಸ್ಪರ್ಧಿಯಾಗಿದ್ದಾರೆ. ಈಗ ಚುನಾವಣೆ ನಿಂತಿರುವ ಎಲ್ಲರಿಗೂ ಒಳ್ಳೆಯದಾಗಲಿ. ಗೆದ್ದ ಮೇಲೆ ಕೆಲವು ವಿಷಯಗಳ ಬಗ್ಗೆ ನೀವು ಅಗತ್ಯವಾಗಿ ಗಮನ ಹರಿಸಬೇಕು ಎಂದು ಮತದಾರರಾದ ಗೌತಮ್ ಹೆಗ್ಡೆ ಅವರು ತಮ್ಮ ಬೇಡಿಕೆ, ನಿರೀಕ್ಷೆಗಳನ್ನು ಪಟ್ಟಿ ಮಾಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕ್ಷೇತ್ರವು 8 ವಿಧಾನ ಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಉಡುಪಿ, ಕಾರ್ಕಳ, ಕುಂದಾಪುರ, ಕಾಪು ಹಾಗು ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ತರೀಕೆರೆ. ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಜಾತೀ ಸಮೀಕರಣ ಹೆಚ್ಚು ಪ್ರಭಾವ ಬೀರುತ್ತದೆ ಎನ್ನಬಹುದು.

ಉಡುಪಿ ಜಿಲ್ಲೆಯಲ್ಲಿ ಬಿಲ್ಲವರೇ ದೊಡ್ಡ ಸಂಖ್ಯೆಯ ಮತದಾರರು. ಇಲ್ಲಿಯ ಬಿಲ್ಲವರೇ ಚಿಕ್ಕಮಗಳೂರಿನ ಈಡಿಗರು ಎಂದು ಕರೆಯಲಾಗುತ್ತದೆ. ಹಾಗೆಯೇ ಈ ಭಾಗದ ಬಂಟರದ್ದು ಇಲ್ಲಿನ ಎರಡನೇ ಬಹುದೊಡ್ಡ ಸಮುದಾಯ . ಚಿಕ್ಕಮಗಳೂರಿನ ಒಕ್ಕಲಿಗ ಸಮುದಾಯ ಈ ಬಂಟ ಸಮುದಾಯ ದೊಂದಿಗೆ ಗುರುತಿಸಿಕೊಂಡಿದೆ.

ಸಂವಿಧಾನದ ಆರ್ಟಿಕಲ್ 343-351 ಅನ್ನು ತಿದ್ದುಪಡಿ

ಸಂವಿಧಾನದ ಆರ್ಟಿಕಲ್ 343-351 ಅನ್ನು ತಿದ್ದುಪಡಿ

1) ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಬ್ಯಾಂಕಿಂಗ್ ಪರೀಕ್ಷೆಗಳ ನಿಯಮಗಳನ್ನು (ಐಬಿಪಿಎಸ್) ಕನ್ನಡಗರಿಗೆ ಅನುಕೂಲವಾಗುವಂತೆ ಕೂಡಲೇ ತಿದ್ದುಪಡಿ ತರಬೇಕು.
2) ಸರ್ಕಾರವು ಸಂವಿಧಾನದ ಆರ್ಟಿಕಲ್ 343-351 ಅನ್ನು ತಿದ್ದುಪಡಿ ಮಾಡಬೇಕಾಗಿದೆ. ಕನ್ನಡ ಹಾಗು ಇನ್ನಿತರ ಹಿಂದಿಯೇತರ ನುಡಿಗಳನ್ನು ಸಮಾನವಾಗಿ ನಡೆಸಿಕೊಳ್ಳಬೇಕು. ಸರ್ಕಾರವು ಒಕ್ಕೂಟದ ಅಧಿಕೃತ ಭಾಷೆಯಾಗಿ ಕನ್ನಡವನ್ನು ಮಾಡಬೇಕು ಹಾಗು ತುಳು / ಕೊಡವವನ್ನು ಶೆಡ್ಯೊಲ್ ಭಾಷೆಯಾನ್ನಾಗಿ ಸೇರಿಸಬೇಕು.

ಗ್ರಾಹಕರ ಕಾಯ್ದೆಗೆ ಬದಲಾವಣೆಗಳನ್ನು ತರಬೇಕಾಗಿದೆ

ಗ್ರಾಹಕರ ಕಾಯ್ದೆಗೆ ಬದಲಾವಣೆಗಳನ್ನು ತರಬೇಕಾಗಿದೆ

3) ಯಾವುದೇ ವಸ್ತುಗಳ ಪ್ಯಾಕೇಜ್ ಮೇಲೆ ಅಥವಾ ಜೀವ ಉಳಿಸುವ ಶೆಡ್ಯೊಲ್ H / H1 / X ಔಷಧಿಗಳಲ್ಲಿ ಇಂಗ್ಲಿಷ್ / ಹಿಂದಿ ಹೊರತುಪಡಿಸಿ ಕನ್ನಡ ಭಾಷೆಯಲ್ಲಿ ಯಾವುದೇ ಮಾಹಿತಿ ಇರುವುದಿಲ್ಲ ಕೆಲವೊಮ್ಮೆ ಜೀವಕ್ಕೆ ಅಪಾಯ ತಂದಂಥ ಪ್ರಸಂಗವೂ ಇದೆ. ಗ್ರಾಹಕರ ಕಾಯ್ದೆಗೆ ಬದಲಾವಣೆಗಳನ್ನು ತರಬೇಕಾಗಿದೆ.
4)ಕಲಿಕೆಯನ್ನು/ಶಿಕ್ಷಣ ಉಳಿಸಲು ಜಂಟಿ ಪಟ್ಟಿಯಿಂದ(ಕನ್ಕುರೆಂಟ್) ರಾಜ್ಯ ಪಟ್ಟಿಗೆ ಹಿಂತಿರುಗಿಸಬೇಕು.
5)ಗ್ರಾಮೀಣ ಕರ್ನಾಟಕದ ವಿದ್ಯಾರ್ಥಿಗಳು ಹಾಗು ಪಿಜಿಗೆ ಆಯ್ಕೆ ಬಯಸುವ ಕನ್ನಡಿಗರ ಹಿತಾಸಕ್ತಿಯನ್ನು ರಕ್ಷಿಸಲು NEET ಅನ್ನು ನಿಲ್ಲಿಸಿ, ಕರ್ನಾಟಕದ ವೈದ್ಯಕೀಯ ವ್ಯವಸ್ಥೆಯನ್ನು ಕಾಪಾಡಿ.

ಅಂತಾರಾಜ್ಯ ನದಿಯ ವಿವಾದಗಳ ಚರ್ಚೆ

ಅಂತಾರಾಜ್ಯ ನದಿಯ ವಿವಾದಗಳ ಚರ್ಚೆ

6) ಅಂತಾರಾಜ್ಯ ನದಿಯ ವಿವಾದಗಳ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ, ಕರ್ನಾಟಕ ಹಿತಾಸಕ್ತಿಯನ್ನು ಕಾಪಾಡಿ
7)GST ಯೊಂದಿಗೆ, ರಾಜ್ಯಗಳು ಗ್ಲೋರಿಫೈಡ್ ಮುನ್ಸಿಪಾಲಾಟಿಗಳಾಗಿವೆ . ಕೇಂದ್ರ ಸರ್ಕಾರದಿಂದ ಸಂಗ್ರಹಿಸಲ್ಪಟ್ಟ ಸೆಸಗಳಲ್ಲಿ ರಾಜ್ಯಗಳ ನಡುವೆ ಹಂಚಿಕೊಳ್ಳಬೇಕು ಹಾಗು ಸೆಸನ್ನು ಹಾಕುವ ಹಕ್ಕುಗಳನ್ನು ರಾಜ್ಯಕ್ಕೆ ನೀಡಬೇಕು.ಜಿಎಸ್ಟಿ ಕೌನ್ಸಿಲ್ನಲ್ಲಿ ಒಂದು ರಾಜ್ಯಕ್ಕಿರುವ ಮತದಾನ ಹಕ್ಕಿನಷ್ಟೆ ಕೇಂದ್ರ ಸರ್ಕಾರಕ್ಕೆ ಇರಬೇಕು.ಕೇಂದ್ರ ಸರ್ಕಾರಕ್ಕಿರುವ ಹೆಚ್ಚಿನ ಹಕ್ಕು/ಒಂಥರಾ ವೀಟೊ ಪವರ್ ಒಕ್ಕೂಟ ವ್ಯವಸ್ಥೆಯ ಆಶಯದ ವಿರುದ್ಧವಾಗಿದೆ

ಕೇಂದ್ರೀಯ ಉದ್ಯೋಗಗಳಿಗೆ ಕನ್ನಡದಲ್ಲಿ ಕೂಡ ಪರೀಕ್ಷೆ

ಕೇಂದ್ರೀಯ ಉದ್ಯೋಗಗಳಿಗೆ ಕನ್ನಡದಲ್ಲಿ ಕೂಡ ಪರೀಕ್ಷೆ

8) ಆಳ್ವಿಕೆ ಜನರ ಹತ್ತಿರ ಹಾಗಬೇಕೆಂದರೆ ಹೆಚ್ಚಿನ ವಿಕೇಂದ್ರೀಕರಣದ ಅಗತ್ಯತೆ ಇದೆ.ಜಂಟಿ ಪಟ್ಟಿಗಳಿಂದ ಆಳ್ವಿಕೆ ಜವಾಬ್ದಾರಿಯನ್ನು ತೆಗೆದುಹಾಕಿ ರಾಜ್ಯ ಪಟ್ಟಿಗೆ ಸೇರಿಸಬೇಕು.
9) 15 ನೇ ಹಣಕಾಸು ಆಯೋಗವು, 2011 ಜನಸಂಖ್ಯೆಯ ಆಧಾರದ ಮೇಲೆ ತೆರಿಗೆ ವಿತರಣೆಯನ್ನು ಬಲವಾಗಿ ವಿರೋಧಿಸಬೇಕು ಹಾಗು ಸದ್ಯಕ್ಕೆಯಿರುವ 42% ಟ್ಯಾಕ್ಸ್ ಪಾಲನ್ನು 50%ಕ್ಕೆ ಏರಿಸಬೇಕು.
10) ಕನ್ನಡಿಗರಿಗೆ ಅನುಕೂಲವಾಗಲು, ಕೇಂದ್ರೀಯ ಉದ್ಯೋಗಗಳಿಗೆ ಕನ್ನಡದಲ್ಲಿ ಕೂಡ ಪರೀಕ್ಷೆ ನಡೆಸಬೇಕು. ಪ್ರಸ್ತುತ, ಹೆಚ್ಚಿನ ಪರೀಕ್ಷೆಗಳು ಇಂಗ್ಲಿಷ್ನಲ್ಲಿ ,ಹಿಂದಿಯಲ್ಲಿ ನಡೆಸಲ್ಪಡುತ್ತವೆ

ಇಕೊ ಪ್ರವಾಸೋದ್ಯಮ

ಇಕೊ ಪ್ರವಾಸೋದ್ಯಮ

11)ಕೋಸ್ಟಲ್ ರೇಗುಲೇಷನ್ ಆಕ್ಟ್ 2018 ರ ಅಧಿಸೂಚನೆಯಲ್ಲಿ ಬದಲಾವಣೆ ಬೇಕಾಗಿದೆ. ಸಣ್ಣ ಮೀನುಗಾರರು ಹಾಗು ನಮ್ಮ ಪರಿಸರದ ರಕ್ಷಣೆ ಮೊದಲ ಆಧ್ಯತೆ ಕೊಡಬೇಕಾಗಿದೆ. ಎತ್ತರದ ಕಟ್ಟಡಗಳು/ರೆಸಾರ್ಟ್ಗಳಿಗಿಂತ ಇಕೊ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಹಾಗು ಕಸ್ತೂರಿ ರಂಗನ ವರದಿ ಅನುಷ್ಠಾನ ಬರುವದಕ್ಕೆ ಮುಂಚೆ, ಎಲ್ಲ ಗ್ರಾಮ ಪಂಚಾಯಿತಿ ಅನುಮತಿ ಪಡೆಯ ತಕ್ಕದ್ದು.

ಕಾಳು ಮೆಣಸು/ಅಡಿಕೆ ಬೆಲೆಗಳ ಕುಸಿತ

ಕಾಳು ಮೆಣಸು/ಅಡಿಕೆ ಬೆಲೆಗಳ ಕುಸಿತ

12) ISFTA , SAFTA ಒಪ್ಪಂದಗಳ ದುರ್ಬಳಕೆಯಿಂದ ಕಾಳು ಮೆಣಸು/ಅಡಿಕೆ ಬೆಲೆಗಳ ಕುಸಿತಕ್ಕೆ ಕಾರಣವಾಗಿವೆ. ಆಮದು ತೆರಿಗೆ ವಿಧಿಸಲು CFI ಮೌಲ್ಯವನ್ನು ನಿಯಮಿತವಾಗಿ ಮೌಲ್ಯಮಾಪನ ಮಾಡಬೇಕಾಗಿದೆ. ಈ ಒಪ್ಪಂದಗಳ ಮರುಪರಿಶೀಲನೆ ಅಥವಾ ದುರ್ಬಳಕೆ ತಪ್ಪಿಸಲು ಕಟ್ಟುನಿಟ್ಟಾದ ನಿಯಮಗಳು ತರಬೇಕು.

ರೈತರಿಗೆ ತಂತ್ರಜ್ಞಾನದ ಬಳಕೆಗೆ ಕಾನೂನಿನ ಬಲ

ರೈತರಿಗೆ ತಂತ್ರಜ್ಞಾನದ ಬಳಕೆಗೆ ಕಾನೂನಿನ ಬಲ

13)ಎಲ್ಲ ಸರ್ಕಾರವು ರೈತರಿಗೆ ಕೃಷಿ ತಂತ್ರಜ್ಞಾನ/ ಬಿಟಿ ತಂತ್ರಜ್ಞಾನದ ಪ್ರವೇಶವನ್ನು ನಿರ್ಬಂಧಿಸಿದೆ.ಜಗತ್ತಿನಾದ್ಯಂತದ ಇಂತಹ ತಂತ್ರಜ್ಞಾನವನ್ನು ಬಳಸಿ ರೈತರು ಪ್ರಗತಿಹೊಂದಿದ್ದಾರೆ‌. ನಮ್ಮ ರೈತರಿಗೆ ತಂತ್ರಜ್ಞಾನದ ಬಳಕೆಯನ್ನು ತಡೆಹಿಡಿಯುವುದು ಅನ್ಯಾಯ.ಇದಕ್ಕೆ ಕಾನೂನುಗಳು ಬದಲಾಗಬೇಕು.
14) ಕರ್ನಾಟಕದ ವ್ಯವಹಾರ ಅಭಿವೃದ್ಧಿ, ಸಂಸ್ಕೃತಿ ಹರಡುವಿಕೆ, ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುಲು ವಿಶ್ವದ ಹೆಚ್ಚಿನ ದೂತಾವಾಸದಲ್ಲಿ ರಾಜ್ಯದ ಪ್ರತಿನಿಧಿಗಳಿರಬೇಕು.

ಕುಂದಾಪುರದಿಂದ ಶಿವಮೊಗ್ಗಕ್ಕೆ ರೈಲು ಮಾರ್ಗ

ಕುಂದಾಪುರದಿಂದ ಶಿವಮೊಗ್ಗಕ್ಕೆ ರೈಲು ಮಾರ್ಗ

15) ಬೆಂಗಳೂರಿಂದ ಕುಂದಾಪುರಕ್ಕೆ, ಜನರ ಅನುಕೂಲಕರ ಸಮಯದಲ್ಲಿ ಹೆಚ್ಚಿನ ರೈಲುಗಳು ಓಡುವಂತಾಗ ಬೇಕು. ಕುಂದಾಪುರದಿಂದ ಶಿವಮೊಗ್ಗಕ್ಕೆ ರೈಲು ಮಾರ್ಗ ಯೋಜನೆ ರೂಪಿಸಬೇಕು.ಇದ್ದರಿಂದ ಕರಾವಳಿಯನ್ನು ಉಳಿದ ಕರ್ನಾಟಕ ಭಾಗಕ್ಕೆ ಸಂಪರ್ಕ ಕಲ್ಪಿಸುವುದು ಮತ್ತು ವ್ಯವಹಾರ ವಹಿವಾಟು ಅಭಿವೃದ್ಧಿ ಹೊಂದಲು ಸಹಕಾರಿಯಾಗುತ್ತದೆ.

ಖಾಸಗಿ ಮಸೂದೆ ಮಂಡನೆ

ಖಾಸಗಿ ಮಸೂದೆ ಮಂಡನೆ

16) ಉಡುಪಿ ಜಿಲ್ಲೆಯಲ್ಲಿ ಸುಮಾರು 1 ರಷ್ಟು ಅಪಾಯಕಾರಿ TFR (ಹೆರುವಣಿಕೆ)ಇದೆ. ನಮ್ಮ ವಿಶಿಷ್ಟ ಜನಾಂಗೀಯತೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಸರ್ಕಾರವು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು.
17)ಸಮಾಜದ ಒಳಿತಿಗಾಗಿ, ನೀವು ಪ್ರೈವೇಟ್ ಬಿಲ್ ಮಂಡಿಸುವದರ ಬಗ್ಗೆ ಗಮನ ನೀಡಿ.

English summary
Udupi-Chikmagalur constituency voter Gautam Hegde of Ultar village, Kundapur has listed out many demands before new MP to be declared on May 23. BJP has fielded Shobha Karandlaje and JD(S) has fielded Pramod Madhwaraj as its candidate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X