ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಚಿತ್ರ: ಕೇಂದ್ರ ಸಚಿವೆ, ಹೋರಾಟಗಾರ್ತಿ ಸಂಸದೆ ಶೋಭಾ

|
Google Oneindia Kannada News

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಸಚಿವ ಸಂಪುಟ ಸೇರಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೂ ಸಕ್ರಿಯವಾಗಿ ಗುರುತಿಸಿಕೊಂಡ ಶೋಭಾ ಕರಂದ್ಲಾಜೆ ಸಂಸದೆ, ಮಾಜಿ ಸಚಿವೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹೀಗೆ ವಿವಿಧ ಸ್ತರಗಳಲ್ಲಿ ಬಿಜೆಪಿಯ ಪ್ರಮುಖರಾಗಿ ಗುರುತಿಸಿಕೊಂಡವರು.

Recommended Video

ಹೋರಾಟ ಮಾಡಿಕೊಂಡು ಕೇಂದ್ರದ ಮಂತ್ರಿಯಾದ ಶೋಭಾ ಕರಂದ್ಲಾಜೆ ಹಿನ್ನಲೆ ಆದ್ರು ಏನು..?| Oneindia Kannada

ರಾಜಕೀಯ ಹಾಗೂ ಸಾಮಾಜಿಕವಾಗಿ ತಮ್ಮ ಕಟ್ಟಾ ಹಿಂದುತ್ವದ ವಿಚಾರಧಾರೆಗಳಿಂದ, ಹರಿತವಾದ ಹೇಳಿಕೆಗಳಿಗೆ ಹೆಸರುವಾಸಿ ಹಲವು ಬಾರಿ ವಿವಾದಕ್ಕೂ ಈಡಾಗಿದ್ದರು.

ಪರಿಸರ ಹೋರಾಟಗಾರ್ತಿಯಾಗಿ ಮೊದಲಿಗೆ ಗುರುತಿಸಿಕೊಂಡಿದ್ದ ಶೋಭಾ ಕುಮಾರಧಾರಾ ನದಿಗೆ ಡ್ಯಾಂ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ್ದರು. ಎತ್ತಿನ ಹೊಳೆ ಯೋಜನೆಯ ಹೋರಾಟದಿಂದಾಗಿ ರಾಷ್ಟ್ರಮಟ್ಟದಲ್ಲಿ ಹೆಸರಾದವರು ಶೋಭಾ ಕರಂದ್ಲಾಜೆ.

 Udupi- Chikkamagaluru MP A Shobha Karandlaje Biography, Education, Age, Net worth, Assets and Political Career

ಕರಾವಳಿಯಲ್ಲಿ ಶಾಂತಿ ಕದಡಿದ ಆರ್ ಎಸ್ ಎಸ್ ಕಾರ್ಯಕರ್ತರ ಹತ್ಯೆಯ ಸಂದರ್ಭದಲ್ಲೂ ಸರ್ಕಾರದ ವಿರುದ್ಧ ಉಗ್ರ ಹೋರಾಟ ನಡೆಸಿ, ಕರ್ನಾಟಕದ ದಿಟ್ಟ ಮಹಿಳಾ ರಾಜಕಾರಣಿ ಎಂಬ ಖ್ಯಾತಿಗೆ ಪಾತ್ರರಾದವರು.

ರಾಜಕೀಯ ಪ್ರವೇಶ ನಂತರ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರನ್ನು ರಾಜಕೀಯ ಗುರುವಾಗಿ ಪರಿಗಣಿಸಿ ಅವರ ರಾಜಕೀಯ ಏಳು ಬೀಳುಗಳಲ್ಲಿ ಜೊತೆಯಾಗಿದ್ದವರು.

ಶೋಭಾ ಊರು, ವಿದ್ಯಾಭ್ಯಾಸ

  • 1966, ಅಕ್ಟೋಬರ್ 23 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಾರ್ವಾಕ ಎಂಬ ಪುಟ್ಟ ಗ್ರಾಮದಲ್ಲಿ ಜನನ.
  • ತಂದೆ ಮೋನಪ್ಪ ಗೌಡ, ತಾಯಿ ಪೂವಕ್ಕ.
  • ಎಳೆ ವಯಸ್ಸಿನಲ್ಲಿಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದೊಂದಿಗೆ ಒಡನಾಟ. ಪೂರ್ಣಾವಧಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಣೆ.

ವಿದ್ಯಾರ್ಹತೆ

ಮಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಸೋಶಿಯಲ್ ವರ್ಕ್ಸ್ ವಿಷಯದಲ್ಲಿ ಸ್ನಾತಕೋತ್ತರ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ.

ಸಮಾಜ ಸುಧಾರಣಾ ಹೋರಾಟಗಳಲ್ಲಿ ಭಾಗಿ

  • ಕುಮಾರಧಾರ ನದಿಗೆ ಆಣೆಕಟ್ಟು ಕಟ್ಟುವುದನ್ನು ವಿರೋಧಿಸಿ, ಪಶ್ಚಿಮ ಘಟ್ಟ ಉಳಿಸಿ ಅಭಿಯಾನದಲ್ಲಿ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸಿದ್ದರು. ಪರಿಸರಕ್ಕೆ ಹಾನಿಯಾಗುವಂಥ ಯೋಜನೆಗಳನ್ನು ವಿರೋಧಿಸಿ ಹೋರಾಟ. ಕಾಲೇಜು ಓದುವ ಸಮಯದಲ್ಲೇ ಹಲವು ಸಮಾಜ ಸುಧಾರಣಾ ಹೋರಾಟಗಳಲ್ಲಿ ಭಾಗಿ.

ಘೋಷಿತ ಆಸ್ತಿ:
ಒಟ್ಟು ಆಸ್ತಿ: 7.1 ಕೋಟಿ ರು
ಸಾಲ: 3.81 ಕೋಟಿ ರು.

ರಾಜಕೀಯ ಜೀವನ:

  • 1994 ರಲ್ಲಿ ಬಂಟ್ವಾಳ ವಿಧಾನಸಭೆಗೆ ಸ್ಪರ್ಧಿಸಿದ್ದ ಶಕುಂತಲಾ ಶೆಟ್ಟಿಯವರ ಒಡನಾಟದಿಂದ ರಾಜಕೀಯ ಪ್ರವೇಶ.
  • 1997 ರಲ್ಲಿ ಉಡುಪಿ ಜಿಲ್ಲೆ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆ.
  • 1997 ರಲ್ಲಿ ಬೆಂಗಳೂರು ರಾಜಕೀಯ ರಂಗ ಪ್ರವೇಶ.
  • 1999 ರಲ್ಲಿ ಬಿ.ಎಸ್.ಯಡಿಯೂರಪ್ಪನವರ ಸಂಕಲ್ಪ ರಥಯಾತ್ರೆಯಲ್ಲಿ ಭಾಗಿ. ನಂತರ ಹಲವು ಹೋರಾಟ, ಪಾದಯಾತ್ರೆ, ಸತ್ಯಾಗ್ರಹ ನಡೆಸಿದ ಅನುಭವ.
  • 2000 ನೇ ಇಸವಿಯಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆ. * 2004 ರಲ್ಲಿ ವಿಧಾನ ಪರಿಷತ್ ಸದಸ್ಯೆಯಾಗಿ ಆಯ್ಕೆ.
  • 2008 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾಗಿ ಆಯ್ಕೆ.
  • ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯನಿರ್ವಹಣೆ.
  • ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕೆಲಸ ನಿರ್ವಹಿಸಿದ ಅನುಭವ, ದಸರಾ ಮಹೋತ್ಸವ ನಿಭಾಯಿಸಿದ ಅನುಭವ.
  • 2009 ರಲ್ಲಿ ಕೆಲವು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ.
  • 2010 ರಲ್ಲಿ ಕರ್ನಾಟಕ ಸರ್ಕಾರದಲ್ಲಿ ಇಂಧನ ಸಚಿವೆಯಾಗಿ ಅಧಿಕಾರ ಸ್ವೀಕಾರ.
  • 2012 ರಲ್ಲಿ ಬಿಜೆಪಿಯ ಕೆಲವು ನಾಯಕರೊಂದಿಗೆ ಭಿನ್ನಾಭಿಪ್ರಾಯ ಮೂಡಿ, ಬಿ ಎಸ್ ಯಡಿಯೂರಪ್ಪನವರು ಸ್ಥಾಪಿಸಿದ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ಕ್ಕೆ ಸೇರ್ಪಡೆ.
  • 2013 ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಬಿಜೆಪಿಯ ಸುರೇಶ್ ಕುಮಾರ್ ವಿರುದ್ಧ ಸೋಲು.
  • 2013 ರಲ್ಲಿ ಬಿಜೆಪಿಯೊಂದಿಗೆ ಕೆಜೆಪಿ ವಿಲೀನ.
  • 2014 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಗರಿಷ್ಠ ಮತಗಳ ಅಂತರದಿಂದ ಗೆಲುವು.
  • 2021ರಲ್ಲಿ ಮೋದಿ ಸರ್ಕಾರ 2.0ರಲ್ಲಿ ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕಾರ.

English summary
A Shobha Karandlaje Profile: Udupi- Chikkamagaluru MP A Shobha Karandlaje Biography, Education, Age, Net worth, Assets and Political Career details in kannada. Read on
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X