ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಬ್ಬರ ಮಹತ್ವದ ಸಾಧನೆ, ಮಂಗಳನ ಫೋಟೋ ಕಳಿಸಿದ ‘ಹೋಪ್’

|
Google Oneindia Kannada News

ಅಂಗಾರಕ, ಮಂಗಳ, ಕೆಂಪು ಗ್ರಹ ಹೀಗೆ ನಾನಾ ಹೆಸರುಗಳಿಂದ ಸಾವಿರಾರು ವರ್ಷಗಳಿಂದ ಮನುಷ್ಯನನ್ನು ತನ್ನತ್ತ ಸೆಳೆಯುತ್ತಿರುವ ಮಂಗಳ ಗ್ರಹ ನಮಗೆಲ್ಲಾ ಹತ್ತಿರವಾಗುತ್ತಿದೆ. ಹಾಗೆಂದು ಮಂಗಳ ಗ್ರಹ ಭೂಮಿಗೆ ಹತ್ತಿರವಾಗುತ್ತಿದೆಯಾ ಎಂದು ಪ್ರಶ್ನಿಸಬೇಡಿ ಮತ್ತೆ. ಏಕೆಂದರೆ ಮಂಗಳ ಗ್ರಹ ಇದ್ದ ಜಾಗದಲ್ಲೇ ಇದೆ, ಆದರೆ ಮಾನವ ಮಂಗಳನನ್ನು ಅತಿ ಸುಲಭವಾಗಿ ತಲುಪುವ ಸಾಹಸ ಮಾಡುತ್ತಿದ್ದಾನೆ ಅಷ್ಟೇ.

ಅದರಲ್ಲೂ 2021ರ ಫೆಬ್ರವರಿ ತಿಂಗಳನ್ನ ಮಂಗಳ ಗ್ರಹದ ತಿಂಗಳು ಎಂದರೂ ತಪ್ಪಾಗಲಾರದು. ಇದಕ್ಕೆ ಕಾರಣ ಒಂದೇ ತಿಂಗಳಲ್ಲಿ 3 ಮಹತ್ವದ ಯೋಜನೆಗಳು ಮಂಗಳ ಗ್ರಹ ತಲುಪಿರುವುದು. ನಾಸಾ, ಯುಎಇ ಹಾಗೂ ಚೀನಾ ಈ ಗ್ರಹದ ಬೆನ್ನು ಬಿದ್ದಿವೆ. ಅದರಲ್ಲೂ ಯುಎಇ ಅರಬ್ ದೇಶಗಳಲ್ಲೇ ಪ್ರಥಮ ಬಾರಿಗೆ ಮಂಗಳ ಗ್ರಹದತ್ತ ಬಾಹ್ಯಾಕಾಶ ನೌಕೆ ಉಡಾಯಿಸಿದ ಕೀರ್ತಿ ಗಳಿಸಿದೆ. ಇದೇ ಯುಎಇ ನಿರ್ಮಿತ ಉಪಗ್ರಹ ಮಂಗಳನ ಸುತ್ತುಹಾಕಲು ಶುರು ಮಾಡಿದ್ದು, ಕೇವಲ 2-3 ದಿನದಲ್ಲಿ ಮಂಗಳ ಗ್ರಹದ ಅತಿ ಸಮೀಪದ ಚಿತ್ರವನ್ನು ಭೂಮಿಗೆ ರವಾನಿಸಿದೆ.

ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..! ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!

25 ಸಾವಿರ ಕಿ.ಮೀ. ದೂರದಿಂದ ಕ್ಲಿಕ್..!

25 ಸಾವಿರ ಕಿ.ಮೀ. ದೂರದಿಂದ ಕ್ಲಿಕ್..!

ಯುಎಇ ನಿರ್ಮಿತ ಉಪಗ್ರಹ 'ಹೋಪ್' ಮಂಗಳ ಗ್ರಹವನ್ನು ಸುತ್ತುತ್ತಾ, ಸುಮಾರು 25 ಸಾವಿರ ಕಿಲೋ ಮೀಟರ್ ಎತ್ತರದಿಂದ ಫೋಟೋ ಭೂಮಿಗೆ ರವಾನಿಸಿದೆ. 'ಹೋಪ್' ಫೋಟೋದಲ್ಲಿ ಹಲವು ವಿಶೇಷತೆ ಕಾಣಬಹುದಾಗಿದೆ. ಸೌರಮಂಡಲದಲ್ಲೇ ದೊಡ್ಡದಾದ ಜ್ವಾಲಮುಖಿ ಮಂಗಳನ ಮೇಲೆ ಇದ್ದು, ಜ್ವಾಲಮುಖಿ ಕೂಡ ಫೋಟೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇನ್ನುಳಿದಂತೆ ಮಂಗಳ ಗ್ರಹದ ಧೃವ ಪ್ರದೇಶ ಕೂಡ ಸ್ಪಷ್ಟ ಹಾಗೂ ಸುಂದರವಾಗಿ ಸೆರೆಯಾಗಿದೆ. ಮಂಗಳ ಗ್ರಹದ ವಾತಾವರಣ ಅಧ್ಯಯನಕ್ಕೆ ಇದು ಸಹಕಾರಿ ಎಂದು ಬಾಹ್ಯಾಕಾಶ ವಿಜ್ಞಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಯುಎಇ ಬಗ್ಗೆ ‘ಹೋಪ್’..!

ಯುಎಇ ಬಗ್ಗೆ ‘ಹೋಪ್’..!

ತನ್ನ ತೈಲ ಸಂಪತ್ತಿನಿಂದ ಜಗತ್ತಿನ ಮನೆಮಾತಾಗಿರುವ ಯುಎಇ ಇತ್ತೀಚಿನ ವರ್ಷಗಳಲ್ಲಿ ಭವಿಷ್ಯದ ಬಗ್ಗೆಯೂ ಯೋಚಿಸುತ್ತಿದೆ. ಇದೇ ಕಾರಣಕ್ಕೆ ಹಿಂದೆಂದೂ ನೀಡದಷ್ಟು ಮಹತ್ವವನ್ನು ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದೆ ಈ ದೇಶ. ತನ್ನ ಮೊಟ್ಟಮೊದಲ ಮಂಗಳ ಯೋಜನೆ 'ಹೋಪ್' ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಯುಎಇ, ಮಂಗಳ ಗ್ರಹದ ವಾತಾವರಣ ಅಧ್ಯಯನ ಹಾಗೂ ನೀರಿನ ಮೂಲಗಳ ಬಗ್ಗೆ ಅಧ್ಯಯನ ನಡೆಸಲಿದೆ. ಹಾಗೂ ತನ್ನ ಅಧ್ಯಯನದ ವರದಿಯನ್ನು ಹಂಚಿಕೊಳ್ಳುವುದಾಗಿ ಈಗಾಗಲೇ ಭರವಸೆಯನ್ನೂ ನೀಡಿದೆ ಯುಎಇ.

ಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರ

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳ ಗ್ರಹದ ಹಿಂದೆ ಬಿದ್ದಿರುವ ಇಡೀ ಜಗತ್ತು ನಿಬ್ಬೆರಗಾಗುವ ಸುದ್ದಿಯೊಂದನ್ನು ನಾಸಾ ನೀಡಿದೆ. ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ. ಕಳೆದ ಜುಲೈನಲ್ಲಿ 'ಪೆರ್‌ಸೆವೆರನ್ಸ್' ಉಡಾವಣೆ ಮಾಡಿದ್ದ ನಾಸಾ, ಇದೇ ತಿಂಗಳು ರೋವರ್‌ನ್ನು ಮಂಗಳನ ಮೇಲೆ ಇಳಿಸಲಿದೆ. ಮಂಗಳನ 'ಜೆಝೀರೋ' ಕುಳಿ ಮೇಲೆ ನಾಸಾ ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ ಮಂಗಳ ಗ್ರಹದ ಮಣ್ಣನ್ನು ಭೂಮಿಗೆ ತರಲು ತುದಿಗಾಲಲ್ಲಿ ನಿಂತಿದೆ ನಾಸಾ. ಇದಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ 'ಪೆರ್‌ಸೆವೆರನ್ಸ್' ಹೊಂದಿದೆ.

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ. ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!

English summary
UAE’s first ever Mars mission ‘HOPE’ Successfully entered the Mars orbit and sent some important photos of planet Mars surface.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X