ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ಪೂರ್ಣಿಮಾ ದಿನದಂದು ಗಮನ ಸೆಳೆದ ಟ್ವೀಟ್ಸ್

|
Google Oneindia Kannada News

ಆಷಾಢ ಶುದ್ಧ ಹುಣ್ಣಿಮೆಯ ದಿನವಾದ ಇಂದು ಗುರು ಪೂರ್ಣಿಮಾ ಹಬ್ಬವಾಗಿದ್ದು, ದೇಶದೆಲ್ಲೆಡೆ ಜಾತಿ, ಮತ, ಪಂಥಗಳ ಭೇದವಿಲ್ಲದೆ ಸಂಭ್ರಮಾಚರಣೆಯನ್ನು ಕಾಣಬಹುದು. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು 'ಗುರು' ಎನಿಸಿಕೊಳ್ಳುತ್ತಾನೆ. ವಿದ್ಯಾ ಸಂಸ್ಥೆಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಭೇಟಿ ಆಗಿ ಅವರಿಗೆ ಕಾಣಿಕೆಗಳನ್ನು ಅರ್ಪಿಸಿ ತಮ್ಮ ಕೃತಜ್ಞತೆಗಳನ್ನು ಸಲ್ಲಿಸುತ್ತಾರೆ. ಕೊರೊನಾವೈರಸ್ ದೆಸೆಯಿಂದ ಅನೇಕರು ವಿಡಿಯೋ ಕಾಲ್, ಟ್ವಿಟ್ಟರ್ ಮೆಸೇಜ್ ಗೆ ಮೊರೆ ಹೋಗಿದ್ದಾರೆ.

''ಗು" ಎಂದರೆ ಕತ್ತಲು ಅಥವಾ ಅಜ್ಞಾನ , "ರು" ಎಂದರೆ ಕತ್ತಲನ್ನು ತೊಲಗಿಸುವವನು ಎಂದರ್ಥ. ಅಜ್ಞಾನ, ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡುವವನು 'ಗುರು' ಎನಿಸಿಕೊಳ್ಳುತ್ತಾನೆ. ಮಹಾಭಾರತದ ಕರ್ತೃ ವೇದವ್ಯಾಸ ಮಹರ್ಷಿ ಜಯಂತಿ ದಿನವಾದ ಇಂದು ಗುರುಪೂರ್ಣಿಮೆಯಾಗಿ ಆಚರಿಸಲಾಗುತ್ತದೆ. ಕೇವಲ ವೈದಿಕ ಸಂಪ್ರದಾಯಕ್ಕಷ್ಟೇ ಮೀಸಲಾದ ಪರ್ವದಿನವಲ್ಲ ; ಜೈನ, ಬೌದ್ಧ ಮುಂತಾದ ಎಲ್ಲ ಪಂಥದವರೂ ಗುರು ಪೂರ್ಣಿಮೆಯನ್ನು ಆಚರಿಸುವುದುಂಟು. ಸಿದ್ಧಾರ್ಥನಾಗಿದ್ದವನು ಬುದ್ಧನಾಗಿ ಮೊದಲ ಧರ್ಮ ಪ್ರವಚನವನ್ನೂ ನೀಡಿದ ದಿನವೇ ಆಷಾಢಹುಣ್ಣಿಮೆ.

ಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರುಹೀಗಿದ್ದರು ನಮ್ಮ ಎಚ್ಚೆನ್ ಮೇಷ್ಟ್ರು

ಯಾರಿಂದಲೂ ಅಪಹರಿಸಲಾಗದ ಸಂಪತ್ತಾದ 'ವಿದ್ಯೆ' ಯನ್ನು ಧಾರೆ ಎರೆಯುವ ಸಮಾಜಕ್ಕೆ ಮಾದರಿ ವ್ಯಕ್ತಿಗಳನ್ನು ರೂಪಿಸುವ ಕಿಂಗ್ ಮೇಕರ್ ಗಳಾದ ಗುರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕರು ಟ್ವಿಟ್ಟರ್ ನಲ್ಲಿ ವಂದನೆ ಸಲ್ಲಿಸಿದ್ದಾರೆ...

ಸರೋದ್ ವಾದಕ ಅಮ್ಜದ್ ಅಲಿ ಖಾನ್

ಖ್ಯಾತ ಸರೋದ್ ವಾದಕ ಅಮ್ಜದ್ ಅಲಿ ಖಾನ್ ಅವರು ಗುರುಬ್ರಹ್ಮ ಗುರುವಿಷ್ಣು ಶ್ಲೋಕ ಪೋಸ್ಟ್ ಮಾಡಿ, ಗುರುಗಳ ಆಶೀರ್ವಾದದಿಂದ ಎಲ್ಲಾ ಸಾಧನೆ ಸಾಧ್ಯ, Happy Guru Purnima ಎಂದಿದ್ದಾರೆ.

ಉದ್ಯಮಿ ಆನಂದ್ ಮಹೀಂದ್ರಾ

ಭಾರತೀಯರ ಪ್ರಾಚೀನ ಸಂಸ್ಕೃತಿ, ಪರಂಪರೆಯ ಪ್ರತೀಕವಾಗಿದೆ. ಇಂದಿನ ಅನಿಶ್ಚಿತ ಜಗತ್ತಿನಲ್ಲಿ ಸರಿಯಾದ ಮಾರ್ಗದರ್ಶನ ನೀಡಬಲ್ಲ ಗುರುಗಳ ಅಗತ್ಯವಿದೆ. ಸಂಕಷ್ಟಕಾಲದಲ್ಲಿ ಎಲ್ಲರೂ ಗುರುಗಳಾಗುತ್ತಾರೆ ಎಂದು ಮಹೀಂದ್ರಾ ಸಂಸ್ಥೆ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಗುರು ಪರಂಪರೆಯನ್ನು ಸ್ಮರಿಸಿರುವ ವ್ಯಾಸಪೂರ್ಣಿಮೆಯ ಮಹತ್ವಗುರು ಪರಂಪರೆಯನ್ನು ಸ್ಮರಿಸಿರುವ ವ್ಯಾಸಪೂರ್ಣಿಮೆಯ ಮಹತ್ವ

ಪ್ರಧಾನಿ ನರೇಂದ್ರ ಮೋದಿ ಟ್ವೀಟ್

ಪ್ರಧಾನಿ ನರೇಂದ್ರ ಮೋದಿ ಅವರು ಗುರು ಪೂರ್ಣಿಮಾ ಸಂಭ್ರಮದ ದಿನದಂದು ದೇಶದ ಎಲ್ಲರಿಗೂ ಶುಭಾಶಯ ಎಂದಿದ್ದಾರೆ. ಜೀವನವನ್ನು ಸಾರ್ಥಕವೆನಿಸುವಂತೆ ಬಾಳುವುದನ್ನು ಕಲಿಸುವ ಗುರುಗಳನ್ನು ಸ್ಮರಿಸಲು ಸಿಗುವ ಯಾವುದೇ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಗುರು ಪೂರ್ಣಿಮಾ ದಿನದಂದು ಸ್ವದೇಶಿ ನಿರ್ಮಿತ ಸಾಮಾಜಿಕ ಜಾಲ ತಾಣ ಎಲಿಮೆಂಟ್ಸ್(Elyments) ಲೋಕಾರ್ಪಣೆ ಮಾಡಿದ್ದಾರೆ.

English summary
Guru Purnima is a festival dedicated to spiritual and academic teachers. Here are the selected tweets on the auspicious day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X