ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಂಬಾಡ್ ಸಿನಿಮಾದ ಬೆಚ್ಚಿಬೀಳುವ ದೃಶ್ಯಗಳು, ಚಪಾತಿಗಾಗಿ ಕಲೆಸುವ ಗೋಧಿಹಿಟ್ಟು

By ತೇಜಸ್ವಿನಿ ಹೆಗಡೆ
|
Google Oneindia Kannada News

ಅಮೆಜಾನ್ ಪ್ರೈಮ್ ನಲ್ಲಿ ತುಂಬಾಡ್ ಸಿನಿಮಾ ನೋಡಿದ ಕ್ಷಣದಿಂದ ಅದರ ಬಗ್ಗೆ ಬರೆಯಬೇಕು ಎಂಬ ತುಡಿತ. ಆದರೆ ಎಲ್ಲಿಂದ ಆರಂಭಿಸಬೇಕು, ಹೇಗೆ ಆರಂಭಿಸಬೇಕು ಎಂಬ ಗೊಂದಲ. ಆ ಸಿನಿಮಾದಲ್ಲಿ ಮಳೆ ಬೀಳದ ದೃಶ್ಯಗಳು ಎಷ್ಟಿರಬಹುದು ಅನ್ನೋ ಲೆಕ್ಕಾಚಾರ ಮನಸ್ಸಿನಲ್ಲಿ. ಇನ್ನು ಆರು ವರ್ಷಗಳ ಕಾಲ ಶ್ರಮಪಟ್ಟು ತೆಗೆದ ಸಿನಿಮಾ ಎಂಬುದೂ ಗೊತ್ತಾದ ಮೇಲೆ ಈ ಸಿನಿಮಾದ ಬಗ್ಗೆ ಬರೆಯಲೇಬೇಕು ಎನಿಸಿತು.

ಆದರೆ ಆ ಉದ್ದೇಶವನ್ನೇ ತೇಜಸ್ವಿನಿ ಹೆಗಡೆ ಅವರು ತಲೆಯಿಂದ ತೆಗೆಯುವಂತೆ ಮಾಡಿದರು. ಆ ಸಿನಿಮಾ ಬಗ್ಗೆ ಅವರು ಬರೆದದ್ದು ಅದ್ಭುತವಾಗಿದೆ ಎನಿಸಿ, ಅದನ್ನು ಯಥಾವತ್ ಇಲ್ಲಿ ಹಾಕುತ್ತಿದ್ದೇವೆ; ಅವರ ಒಪ್ಪಿಗೆಯನ್ನು ಪಡೆದು ಇಲ್ಲಿ ಹಾಕಲಾಗಿದೆ. ಅವರು ಕಥೆಯ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ, ಆಶಯ ತಿಳಿಸಿದ್ದಾರೆ. -ಶ್ರೀನಿವಾಸ

****

ಅವಸ್ಥೆ ಮಾರ್ರೆ... #Tumbbad ಚಿತ್ರವನ್ನು #Amazon_Prime ನಲ್ಲಿ ನೋಡಿದ್ಮೇಲಿಂದ.. ಚಪಾತಿಗೆ ಗೋಧಿ ಹಿಟ್ಟು ಕಲ್ಸೋಕೆ ಕೈಯೇ ಹೋಗ್ತಿಲ್ಲ. ನನ್ನ ಸುತ್ಲೂ ಗೋಧಿ ರಕ್ಷಾ ಕವಚ ಹಾಕ್ಕೊಬೇಕೇನೋ ಅನ್ನಿಸೋಕೆ ಶುರುವಾಗ್ಬಿಟ್ಟಿದೆ! ಸಾಮಾನ್ಯವಾಗಿ ನಾನು ಹಾವಿಂದೊಂದು ಫಿಲ್ಮ್ ಬಿಟ್ಟು ಬೇರೆ ಯಾವ ಹಾರರ್ ಮೂವಿಗೂ ಹೆದ್ರೊಲ್ಲ! (ಎಷ್ಟೇ ದೆವ್ವಗಳಿರ್ಲಿ.. ಮನುಷ್ಯನಿಗಿಂತ ದೊಡ್ಡ ದೆವ್ವ ಇಲ್ಲ ಅನ್ನೋ ಬಲವಾದ ನಂಬಿಕೆ ನಂದಾಗಿರೋದ್ರಿಂದ)

Tumbbad movie watching experience shared with readers

ಆದ್ರೆ ಈ ಚಿತ್ರದಲ್ಲಿ ಮಾತ್ರ ಒಂದೆರಡು ಸಲ ಗಟ್ಟಿ ಕಣ್ಮುಚ್ಚಿ ಚಿತ್ರ ಚೂರು ಮುಂದೆ ಹೋದ್ಮೇಲೆ ಆ ಪಾತ್ರ ಬದ್ಕಿದ್ಯೋ ಸತ್ತಿದ್ಯೋ ನೋಡ್ಕೊಂಡು ರಿವೈಂಡ್ ಮಾಡಿ ನೋಡಿದ್ದೇನೆ! ಹಾಂ, ಚಿತ್ರದ ನಡುವೆ ಶೋಲೆಯ ಪ್ರಸಿದ್ಧ ಡೈಲಾಗ್ "ಸೋಜಾ ವರ್ನಾ ಗಬ್ಬರ್ ಆಜಾಯೆಗಾ" ನೆನ್ಪಾಗಿದ್ದು ನಂಗೊಬ್ಳಿಗೇನಾ ಅಂತ ಡೌಟೂ ಕಾಡಿತು.

ಹೈಸ್ಕೂಲಿನಲ್ಲಿದ್ದಾಗ ಯಂಡಮೂರಿಯವರ "ತುಳಸಿ" ಮತ್ತು "ತುಳಸಿ ದಳ" ಕಾದಂಬರಿಗಳನ್ನೋದಿ, ಒರಿಸ್ಸಾದ ಬಿಸ್ತಾ ಗ್ರಾಮಕ್ಕೆ ಹೋಗ್ಲೇಬೇಕು ಅನ್ನಿಸಿ, ಅಪ್ಪನ ಹತ್ರ ಹಠ ಹಿಡಿದಿದ್ದೆ ಸ್ವಲ್ಪ ದಿವಸ. ನನ್ನ ಕಾಟ ತಾಳಲಾರ್ದೆ ಅಪ್ಪ ಹೋಗೋಣ ಬಿಡು, ಕರ್ಕೊಂಡು ಹೋಗ್ತೀನಿ ಕಾಲೇಜ್ ಎಲ್ಲಾ ಮುಗೀಲಿ ಅಂತ ಹೇಳಿದ್ರು. ನಾನೂ ಸುಮ್ನಾಗಿದ್ದೆ. ಆಮೇಲೆ ಮದುವೆ ಆಗಿ ಬೆಂಗಳೂರಿಗೆ ಬಂದು ನನ್ನದೇ ಬಸ್ತರ್ ಕಟ್ಟಿಕೊಂಡ ಮೇಲೆ ಬಿಸ್ತಾದ ಹುಚ್ಚೂ ಬಿಟ್ಟೋಯ್ತು.

Tumbbad movie watching experience shared with readers

ಈಗ ಮತ್ತೆ ನೆನ್ಪಾಗ್ತಿದೆ.. ಬಿಸ್ತಾದ ಜೊತೆಗೆ ತುಂಬಾಡಿನ ವಾಡೆಗೂ ಹೋಗ್ಬರಾಣ ಒಮ್ಮೆ ಎಂದು! ಆದ್ರೆ ಗಂಭೀರವಾಗಿ ನೋಡಿದ್ರೆ ಈ ಚಿತ್ರ ಬಹಳ ಚಿಂತನಶೀಲ ವಿಷಯವನ್ನು ನಮ್ಮ ಮುಂದೆ ಹರವಿಡುತ್ತದೆ. ಅಂತ್ಯ ಖುಷಿ ಕೊಡುತ್ತದೆ. ಚಿಕ್ಕಂದಿನಲ್ಲಿ ಕೇಳಿದ್ದ ಕಥೆ ನೆನಪಾಗುತ್ತದೆ. ಅದೇ ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆ! ಭೂಮಿಯನ್ನು, ಭೂಗರ್ಭವನ್ನು ನಾವು ದೌರ್ಜನ್ಯ ಮಾಡ್ತಾನೇ ಹೋದ್ರೆ ಮುಂದೊಂದು ದಿವ್ಸ ನಾವೂ ತುಂಬಾಡಿ ವಾಡೆಯೊಳಗೆ ಬಂದಿಯಾಗೋದು ನಿಶ್ಚಿತ!

ಈ ಚಿತ್ರದಲ್ಲಿ ನಟಿಸಿದವರಲ್ಲೆರೂ ನನಗಂತೂ ಹೊಸ ಮುಖ. ಆದರೆ ಎಂಥಾ ಅದ್ಭುತ ನಟನೆ! ಮನಸೂರೆಗೊಳ್ಳುವ ಛಾಯಾಗ್ರಹಣ. ಕಾಡುವ ಹಿನ್ನಲೆ ಸಂಗೀತ. ಬಹಳ ದಿವಸದ ನಂತರ ಮಾಮೂಲಿ ಹಾರರ್ ಫಿಲ್ಮ್ ಬಿಟ್ಟು ಭಿನ್ನವಾದದ್ದನ್ನು ನೋಡಿದೆ.

Tumbbad movie watching experience shared with readers

ಹಾಂ, ಹೆಸರೇ ಕೇಳಿರದಿದ್ದ ಈ ಚಿತ್ರದ ಕುರಿತು ಬರೆದು, ಆಸಕ್ತಿ ಹುಟ್ಟಿಸಿ, ನೋಡುವಂತೆ ಮಾಡಿದ ಸ್ನೇಹಿತರಾದ Shreenidhi DS ಮತ್ತು Arpana Hs ಅವರಿಗೆ ಧನ್ಯವಾದಗಳು.

(ಇವತ್ತು ರಾಮರಕ್ಷಾ ಸ್ತೋತ್ರವನ್ನು ಎರಡು ಸಲವಾದ್ರೂ ಹೇಳ್ಕೊಬೇಕಪ್ಪಾ )

English summary
Tumbbad movie recently making noise all over because of it's making, gripping screen play and story. Here is the review by Tejaswini Hegde
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X