• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಮ್ಮ ಸಮಾಧಿಯ ನಿರ್ಮಾಣಕ್ಕೆ ತಾವೇ ಅಡಿಗಲ್ಲು ಹಾಕಿದ್ದ ಸಿದ್ದಗಂಗಾಶ್ರೀಗಳು!

|
   Siddaganga Swamiji:ಡಾ ಶಿವಕುಮಾರ ಸ್ವಾಮೀಜಿಗಳ ಕ್ರಿಯಾ ಸಮಾಧಿ ಬಗೆಗಿನ ವಿವರಗಳು | Oneindia Kannada

   ಬೆಂಗಳೂರು, ಜನವರಿ 22: ತುಮಕೂರಿನ ಸಿದ್ದಗಂಗಾಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಸಮಾಧಿ ಸ್ಥಳವನ್ನು ಗುರುತಿಸಿ, ಸಮಾಧಿ ನಿರ್ಮಾಣ ಕಾರ್ಯಕ್ಕೆ ಅಡಿಗಲ್ಲು ಹಾಕಿದ್ದರು.

   ಸುಮಾರು 37ವರ್ಷಗಳ ಹಿಂದೆ ಆರಂಭವಾದ ಕ್ರಿಯಾ ಸಮಾಧಿ ಕಟ್ಟಡ ನಿರ್ಮಾಣ, ಇಂದು(ಜನವರಿ 22) ಪೂರ್ಣಗೊಳ್ಳಲಿದೆ. ಲಿಂಗಾಯತ ವೀರಶೈವ ಸಂಪ್ರದಾಯದಲ್ಲಿ ಸ್ವಾಮೀಜಿಗಳು, ಮಠಾಧೀಶರು ಲಿಂಗೈಕ್ಯರಾದ ಸಂದರ್ಭದಲ್ಲಿ ಕ್ರಿಯಾ ಸಮಾಧಿ ಸ್ಥಾಪಿಸುವುದು ಸಾಮಾನ್ಯ.

   In Pics: ಕೈಲಾಸಕ್ಕೆ ಹೊರಟರು ಶಿವ ಶರಣ ಶಿವಕುಮಾರ ಸ್ವಾಮಿ

   1930ರ ಜನವರಿ 16ರಂದು ಮರುಳಾಧ್ಯರು ಲಿಂಗೈಕ್ಯರಾದ ಬಳಿಕ ಸಿದ್ದಗಂಗಾ ಮಠ ಉತ್ತರಾಧಿಕಾರಿಯಾಗಿ, ಉದ್ದಾನ ಶಿವಯೋಗಿಗಳ ಆಶಯದಂತೆ ಮಠವನ್ನು ಕಟ್ಟಿ ಬೆಳೆಸಿ, ನಾಡಿನ ಅನೇಕರಿಗೆ ಬೆಳಕಾದವರು ಶಿವಕುಮಾರ ಸ್ವಾಮೀಜಿಗಳು.

   ಶಿವಕುಮಾರ ಸ್ವಾಮೀಜಿಗಳು ತಮ್ಮ ಉತ್ತರಾಧಿಕಾರಿ ಗುರುತಿಸುವ ಮೊದಲು ಸಮಾಧಿ ಸ್ಥಳವನ್ನು ಗುರುತಿಸಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. 1988ರಲ್ಲಿ ಸಿದ್ದಲಿಂಗ ಸ್ವಾಮಿಗಳು ಶಿಷ್ಯರಾದರು. 2011ರಲ್ಲಿ ಸಿದ್ದಗಂಗಾ ಮಠದ ಉತ್ತರಾಧಿಕಾರಿಯಾದರು.

   ಸಿದ್ದಗಂಗಾ LIVE: ರಾಜ್ಯಾದ್ಯಂತ ಹರಿಯುತ್ತಿದೆ ಕಣ್ಣೀರ ಕೋಡಿಸಿದ್ದಗಂಗಾ LIVE: ರಾಜ್ಯಾದ್ಯಂತ ಹರಿಯುತ್ತಿದೆ ಕಣ್ಣೀರ ಕೋಡಿ

   'ನಡೆದಾಡುವ ದೇವರು' ಶಿವಕುಮಾರ ಸ್ವಾಮೀಜಿಗಳು(111) ಸೋಮವಾರ ಬೆಳಗ್ಗೆ 11.44ರ ಸುಮಾರಿಗೆ ಇಹಲೋಕ ವ್ಯವಹಾರ ಮುಗಿಸಿ ಕಾಣದ ದೇವರ ಕಡೆಗೆ ತೆರಳಿದರು. ಮಂಗಳವಾರ ಸಂಜೆ 4 ಗಂಟೆ ನಂತರ ಅಂತಿಮ ವಿಧಿ ವಿಧಾನ ನೆರವೇರಲಿದೆ.

   ಕ್ರಿಯಾ ಕರ್ಮದ ಬಗ್ಗೆ ಉಯಿಲಿನಲ್ಲಿ ಉಲ್ಲೇಖ

   ಕ್ರಿಯಾ ಕರ್ಮದ ಬಗ್ಗೆ ಉಯಿಲಿನಲ್ಲಿ ಉಲ್ಲೇಖ

   ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮೀಜಿ ಕ್ರಿಯಾ ಸಮಾಧಿಗೆ 37 ವರ್ಷಗಳ ಹಿಂದೆಯೇ ಜಾಗ ನಿಗದಿ ಮಾಡಿದ ಸ್ಥಳದಲ್ಲಿ ಈಗ ಸಮಾಧಿ ನಿರ್ಮಾಣಗೊಂಡಿದೆ. ಇದೇ ಸಮಾಧಿ ಭವನದಲ್ಲಿ ಈಗಾಗಲೇ ಅಂತಿಮ ವಿಧಿ ವಿಧಾನ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

   ಮಧ್ಯಾಹ್ನ 3 ಗಂಟೆಯವರೆಗೆ ಪಾರ್ಥೀವ ಶರೀರ ದರ್ಶನಕ್ಕೆ ಗೋಸಲ ವೇದಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದ್ದು, ನಂತರ ಸಮಾಧಿ ಸ್ಥಳದ ಮೆರವಣಿಗೆ ನಡೆಯಲಿದೆ. ಮೆರವಣಿಗೆ ಬಳಿಕ ಶ್ರೀಗಳ ಅಪೇಕ್ಷೆಯಂತೆ ಕ್ರಿಯಾ ವಿಧಾನ ನಡೆಯಲಿದೆ. ಹಿಂದೆಯೇ ಶ್ರೀಗಳು ಕ್ರಿಯಾ ವಿಧಾನವನ್ನು ಬರೆದಿದ್ದು, ಅವರು ಬರೆದಿರುವ ಕ್ರಿಯಾ ಸಮಾಧಿ ಮಾಡಲಾಗುವುದು ಎಂದು ಸಿದ್ದಲಿಂಗ ಶ್ರೀಗಳು ತಿಳಿಸಿದ್ದಾರೆ.

   ಮಂಗಳವಾರ ಸಂಜೆ 4 ಗಂಟೆ ನಂತರ ಅಂತಿಮ ವಿಧಿ ವಿಧಾನ ನೆರವೇರಲಿದೆ. ಸೂರ್ಯಾಸ್ತದ ಸಮಯದೊಳಗೆ ವಿಧಿ ವಿಧಾನಗಳನ್ನು ಪೂರ್ಣಗೊಳಿಸಲಾಗುತ್ತದೆ.

   ಸಿದ್ದಗಂಗಾ ಶ್ರೀ ಅಸ್ತಂಗತ: ಅಂತಿಮ ದರ್ಶನಕ್ಕೆ 10 ಲಕ್ಷ ಜನರ ನಿರೀಕ್ಷೆಸಿದ್ದಗಂಗಾ ಶ್ರೀ ಅಸ್ತಂಗತ: ಅಂತಿಮ ದರ್ಶನಕ್ಕೆ 10 ಲಕ್ಷ ಜನರ ನಿರೀಕ್ಷೆ

   ಕ್ರಿಯಾ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ

   ಕ್ರಿಯಾ ಸಮಾಧಿಯಲ್ಲಿ ಅಂತ್ಯ ಸಂಸ್ಕಾರ

   ಸಮಾಧಿ ಭವನದಲ್ಲಿ ಪೂಜಾ ವಿಧಿ ವಿಧಾನಗಳು ಆರಂಭವಾಗಿದ್ದು, ಕ್ರಿಯಾ ಸಮಾಧಿಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಈಗಾಗಲೇ ಗದ್ದುಗೆ ಮಾದರಿಯನ್ನು ನಿರ್ಮಾಣ ಮಾಡಲಾಗಿದೆ. ಸದ್ಯ ಅದರಲ್ಲಿದ್ದ ಮರಳನ್ನು ಹೊರ ತೆಗೆದು ಅಂತಿಮ ಕಾರ್ಯಕ್ಕೆ ಸ್ವಚ್ಛಗೊಳಿಸಲಾಗಿದೆ. ಶ್ರೀಗಳ ಪಾರ್ಥೀವ ಶರೀರಕ್ಕೆ ಮಂಗಳ ಸ್ನಾನ ನಂತರ ಭಸ್ಮಾರಾಧನೆ ನಡೆಯಲಿದೆ. 5 ಗಂಟೆ ಸುಮಾರಿಗೆ ಐವತ್ತು ವಿಭೂತಿ ಗಟ್ಟಿಗಳನ್ನು ಬಳಸಲಾಗುವುದು. ಸಮಾಧಿಯಲ್ಲಿ ಶರೀರವನ್ನು ಸ್ಥಾಪಿಸಿದ ಬಳಿಕ ಬಿಲ್ವಪತ್ರೆ, ಭಸ್ಮ, ವಿಭೂತಿಗಳಿಂದ ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಈ ಸಂದರ್ಭದಲ್ಲಿ ಶಿವಸ್ತುತಿ, ರುದ್ರ ಪಠಣ ಮಾಡಲಾಗುತ್ತದೆ.

   ಆದಿಚುಂಚನಗಿರಿ ಮತ್ತು ಸಿದ್ದಗಂಗಾ ಮಠದ ನಡುವೆ ಉತ್ತಮ ಬಾಂಧವ್ಯ ಆದಿಚುಂಚನಗಿರಿ ಮತ್ತು ಸಿದ್ದಗಂಗಾ ಮಠದ ನಡುವೆ ಉತ್ತಮ ಬಾಂಧವ್ಯ

   ಸ್ವಾಮೀಜಿ ಜೀವಂತ ಸಮಾಧಿಗೆ ಬಯಸಿದ್ದರು.

   ಸ್ವಾಮೀಜಿ ಜೀವಂತ ಸಮಾಧಿಗೆ ಬಯಸಿದ್ದರು.

   ಜೀವಂತ ಸಮಾಧಿಯಾಗಲು ಸಿದ್ದಗಂಗಾ ಶ್ರೀಗಳು ಇಚ್ಛಿಸಿದ್ದರು. ಆದರೆ, ಕಾನೂನಿಗೆ ವಿರುದ್ಧವಾದುದು, ಸಮಾಜ ಒಪ್ಪುದಿಲ್ಲ, ಭಕ್ತರ ವಿರೋಧದ ಭಾವನೆ ಬಂದಿದ್ದರಿಂದ 37 ವರ್ಷಗಳ ಹಿಂದೆಯೇ ಗದ್ದುಗೆ ನಿರ್ಮಿಸಲು ಸೂಚಿಸಿದ್ದರು.ವೀರಶೈವ ಲಿಂಗಾಯತ ಪರಂಪರೆಯಲ್ಲಿ ಈ ರೀತಿ ಬದುಕಿದ್ದಾಗಲೇ ಸಮಾಧಿ ಸ್ಥಳ ಗುರುತಿಸಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಬಹುದಾಗಿದೆ. ಅಲ್ಲದೆ, ಅಂತಿಮ ವಿಧಿ ವಿಧಾನವನ್ನು ಶ್ರೀಗಳು ಬಯಸಿದಂತೆ ನಡೆಸಲು ಸಿದ್ದಗಂಗಾ ಮಠ ನಿರ್ಧರಿಸಿದ್ದಾರೆ. ಸಿದ್ದಲಿಂಗೇಶ್ವರ ಸ್ವಾಮಿ ಬೆಟ್ಟದ ಮುಂಭಾಗದ ಗದ್ದುಗೆಯಲ್ಲಿ ಹಾಲಿ ಮಠಾಧ್ಯಕ್ಷ ಸಿದ್ದಲಿಂಗಶ್ರೀಗಳ ನೇತೃತ್ವದಲ್ಲಿ ಎಲ್ಲಾ ಪೂಜೆ, ಕೈಂಕರ್ಯಗಳು ಮುಂಜಾನೆ 5 ರಿಂದ ಆರಂಭವಾಗಿವೆ. ಕ್ರಿಯಾ ಸಮಾಧಿ ಬಳಿಯ ವಿಧಿ ವಿಧಾನವನ್ನು ಆಗಮಿಕರು ನೆರವೇರಿಸಲಿದ್ದಾರೆ.

   ತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿತ್ರಿವಿಧ ದಾಸೋಹಿ ಶಿವಕುಮಾರ ಸ್ವಾಮೀಜಿಗಳ ಬದುಕಿನ ಹಾದಿ

   ಹತ್ತು ಹಲವು ಸ್ವಾಮೀಜಿಗಳ ನೇತೃತ್ವ

   ಹತ್ತು ಹಲವು ಸ್ವಾಮೀಜಿಗಳ ನೇತೃತ್ವ

   ಕನಕಪುರದ ಮುಮ್ಮಡಿ ಶ್ರೀಗಳು, ಸುತ್ತೂರು ಶ್ರೀಗಳು, ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳು, ಕಾಡುಸಿದ್ದೇಶ್ವರ ಮಠ ಕರಿವೃಷಭೇಂದ್ರ ಸ್ವಾಮಿ ಸೇರಿದಂತೆ 15 ರಿಂದ 20 ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದಾರೆ.
   * ಗೋಸಲ ಮಂಟಪ ವೇದಿಕೆಯಿಂದ ಕ್ರಿಯಾ ಸಮಾಧಿ ಭವನದ ತನಕ ಮೆರವಣಿಗೆ.
   * ಗದ್ದುಗೆ ಶುದ್ಧೀಕರಣ, ಕಲಶ ಪೂಜೆ, ಹೊಸ್ತಿಲ ಪೂಜೆ, ಅಷ್ಟದಿಕ್ಪಾಲಕರ ಪೂಜೆ, ಸಪ್ತಋಷಿಗಳ ಪೂಜೆ ನೆರವೇರಲಿದೆ.
   * ಸಿದ್ದಗಂಗಾಶ್ರೀಗಳ ಬಳಿ ಇದ್ದ ಬೆಳ್ಳಿ ಇಷ್ಟಲಿಂಗಕ್ಕೆ ಪೂಜೆ, ಅಭಿಷೇಕ, ರುದ್ರಪಠಣದ ಬಳಿಕ, ರುದ್ರಾಕ್ಷಿ ಪೀಠದಲ್ಲಿ ಸಿದ್ದಗಂಗಾಶ್ರೀಗಳನ್ನು ಕುಳ್ಳರಿಸಿ, ಮಂಗಲ ಸ್ನಾನ, ಅಭಿಶೇಕ, ಪೂಜೆ ಸಲ್ಲಿಸಲಾಗುತ್ತದೆ.
   * ಅಂತಿಮವಾಗಿ ಮಣ್ಣು, ಮರಳು, ಉಪ್ಪು ಮಿಶ್ರಿತ ಕ್ರಿಯಾಸಮಾಧಿಯಲ್ಲಿ ಪೂಜಿತ ಶರೀರವನ್ನು ಕುಳ್ಳರಿಸಿ, ಭಸ್ಮಾದಿ,ವಿಭೂತಿಗಳಿಂದ, ಬಿಲ್ವಪತ್ರೆಗಳಿಂದ ತುಂಬಲಾಗುತ್ತದೆ

   English summary
   Siddaganga Seer Shivakumara Swami's Kriya Samadhi construction at Old Siddaganga Mutt, Tumakuru started 37 years before. Shivakumara Swamiji himself instructed how to build a Gadduge(tomb) according to Virakta tradition.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X