ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವು ತಿನ್ನುವ ಅಳಿಲಿನ ಫೋಟೋ ವೈರಲ್; ನಿಜವೆಷ್ಟು, ಸುಳ್ಳೆಷ್ಟು?

By ಅನಿಲ್ ಆಚಾರ್
|
Google Oneindia Kannada News

ಒಂದು ಹಾವು ಹಾಗೂ ಅಳಿಲಿನ ಮಧ್ಯೆ ಮುಖಾಮುಖಿಯಾದರೆ ಯಾವುದು ಗತಿ ಕಾಣುತ್ತದೆ? ಅದರಲ್ಲೇನಿದೆ ಅನುಮಾನ, ಅಳಿಲಿನ ತಿಥಿಯೇ ಅಂತೀರಾ. ಇಲ್ಲ ನಿಮ್ಮ ಉತ್ತರ ತಪ್ಪು ಎನ್ನುವಂಥ ಘಟನೆ ಸಂಭವಿಸಿದೆ. ಇದೀಗ ಆ ಫೋಟೋ ಎಲ್ಲೆಲ್ಲೂ ವೈರಲ್. ಅಯ್ಯೋ ಇನ್ನೂ ನೀವು ನೋಡಿಲ್ವಾ?

ಅಳಿಲು ಹಾಗೂ ಹಾವಿನ ಫೋಟೋಗಳನ್ನು ಅಮೆರಿಕದ ನ್ಯಾಷನಲ್ ಪಾರ್ಕ್ ಸರ್ವೀಸ್ ನಿಂದ ಷೇರ್ ಮಾಡಿಕೊಳ್ಳಲಾಗಿದೆ ಎಂಬುದು ಹರಿದಾಡುತ್ತಿರುವ ಸುದ್ದಿ. ಈ ಫೋಟೋವನ್ನು ಗಡಾಲ್ಪೆ ಶಿಖರದ ನ್ಯಾಷನಲ್ ಪಾರ್ಕ್ ನಲ್ಲಿ ಸೆರೆ ಹಿಡಿದಿದ್ದಂತೆ. ಅಲ್ಲಿನ ಅಳಿಲುಗಳು ಸಾಧಾರಣವಾಗಿ ಸಸ್ಯವನ್ನೇ ಸೇವಿಸುತ್ತವೆ. ಹಣ್ಣು, ಒಣ ಹಣ್ಣು ಇತ್ಯಾದಿ ಹೀಗೆ.

ಆದರೆ, ನಿಮಗೆ ಅಚ್ಚರಿ ಆಗಬಹುದು ಹಕ್ಕಿಯ ಮೊಟ್ಟೆ, ಹಲ್ಲಿ ಹಾಗೂ ಹಾವನ್ನು ಕೂಡ ಅಳಿಲುಗಳು ತಿನ್ನುತ್ತವೆ ಎಂಬುದು ಗೊತ್ತಾ ಎಂದು ಬರೆದು ಫೋಟೋಗ್ರಾಫ್ ಅನ್ನು ಷೇರ್ ಮಾಡಲಾಗಿದೆ. ನೀವು ನೋಡುತ್ತಿರುವ ಫೋಟೋಗಳನ್ನು ಕ್ಲಿಕ್ಕಿಸಿದ ಕೆಲ ಸಮಯದಲ್ಲೇ ಹಾವನ್ನು ಇಡಿಯಾಗಿ ತಿಂದು, ಕೊನೆಯದಾಗಿ ಎರಡು ಇಂಚಷ್ಟೇ ಉಳಿಸಿತ್ತು ಎಂದು ಬರೆಯಲಾಗಿದೆ.

True or fake: Squirrel biting snake photo went viral

ಈ ಫೋಟೋವನ್ನು ಮೂರು ಸಾವಿರ ಬಾರಿ ಷೇರ್ ಮಾಡಿದ್ದು, ಏಳು ಸಾವಿರ ಪ್ರತಿಕ್ರಿಯೆಗಳು ಬಂದಿವೆ. "ಗ್ರೇಟ್ ನನಗೆ ಈಗ ಅಳಿಲುಗಳನ್ನು ಕಂಡರೂ ಭಯವಾಗುತ್ತದೆ" ಎಂದು ಒಬ್ಬರು ಅಭಿಪ್ರಾಯ ತಿಳಿಸಿದರೆ, "ಅಳಿಲುಗಳು ಹಾವನ್ನು ತಿನ್ನುವುದು ಟೆಕ್ಸಾಸ್ ನಲ್ಲಿ ಮಾತ್ರ" ಎಂದು ಮತ್ತೊಬ್ಬರು ಹಾಕಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ...ಆಸ್ಟ್ರೇಲಿಯಾದಲ್ಲಿ ಅಚ್ಚರಿ; ಮೂರು ಕಣ್ಣಿನ ಹಾವು ಪತ್ತೆ, ಆದರೆ...

ಆದರೆ, ಹಫಿಂಗ್ ಟನ್ ಪೋಸ್ಟ್ ಪ್ರಕಾರ, ಈ ಫೋಟೋ ಹತ್ತು ವರ್ಷದಷ್ಟು ಹಳೆಯದು. ಉದ್ಯಾನದ ರೇಂಜರ್ ವಿಲಿಯಂ ಲೆಗೆಟ್ ಸೆರೆ ಹಿಡಿದ ಫೋಟೀ ಇದು. ಈಚೆಗೆ ಆನ್ ಲೈನ್ ನಲ್ಲಿ ಷೇರ್ ಮಾಡಿದ್ದಾರೆ. ಹಾವನ್ನು ನೋಡಿದ ಮೇಲೆ ಸ್ವರಕ್ಷಣೆಗೆ ಹೀಗೆ ಮಾಡಿದೆ ಎಂದು ವಿವರಣೆ ಸಹ ಇದೆ.

English summary
True or fake: Squirrel biting snake photo went viral. Here is an interesting story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X