ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಹೊಸ ಅಲೆಯ ಆತಂಕ: ಕೊರೊನಾ 3ನೇ ರೂಪಾಂತರ ತಳಿ!

|
Google Oneindia Kannada News

ನವದೆಹಲಿ, ಏಪ್ರಿಲ್ 21: ಭಾರತದಲ್ಲಿ ಕೊರೊನಾವೈರಸ್ ಸೋಂಕಿನ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ವಿಶ್ವದಲ್ಲೇ ಅತಿಹೆಚ್ಚು ಸೋಂಕಿತ ಪ್ರಕರಣಗಳನ್ನು ದಾಖಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್ ಅನ್ನು ಹಿಂದಿಕ್ಕಿದ ಭಾರತ ಎರಡನೇ ಸ್ಥಾನಕ್ಕೇರಿದೆ.

ದೇಶದಲ್ಲಿ ಕೊವಿಡ್-19 ಸೋಂಕಿನ ಭೀತಿ ಹೆಚ್ಚುತ್ತಿರುವ ಈ ಹಂತದಲ್ಲಿ ಕೊರೊನಾವೈರಸ್ ಸೋಂಕಿನ ಮೂರನೇ ತಳಿ ಪತ್ತೆಯಾಗಿದೆ. ಭಾರತದ ನಾಲ್ಕು ರಾಜ್ಯಗಳಲ್ಲಿ B.1.617 ತಳಿಯ ರೋಗಾಣು ಸೋಂಕಿತರಲ್ಲಿ ಇರುವುದು ದೃಢಪಟ್ಟಿದೆ ಕೊರೊನಾವೈರಸ್ ಸೋಂಕಿನ ಮೂರು ತಳಿಗಳ ಪೈಕಿ ಎರಡು ತಳಿಗಳು ಮಹಾರಾಷ್ಟ್ರ, ನವದೆಹಲಿ, ಪಶ್ಚಿಮ ಬಂಗಾಳ ಮತ್ತು ಛತ್ತೀಸ್ ಗಢದಲ್ಲಿ ನಡೆಸಿದ ಮಾದರಿ ಪರೀಕ್ಷೆಯಲ್ಲಿ ಪತ್ತೆಯಾಗಿವೆ. ಇದರಿಂದ ಕೊವಿಡ್-19 ಸೋಂಕಿನ ಬಿಕ್ಕಿಟ್ಟು ಮತ್ತಷ್ಟು ಹೆಚ್ಚಾಗುವ ಆತಂಕ ಸೃಷ್ಟಿಯಾಗಿದೆ.

Infographics: ಕೊರೊನಾ ಎರಡನೇ ಅಲೆಗೂ ಮೊದಲೇ ಎಡವಿತಾ ಸರ್ಕಾರ? Infographics: ಕೊರೊನಾ ಎರಡನೇ ಅಲೆಗೂ ಮೊದಲೇ ಎಡವಿತಾ ಸರ್ಕಾರ?

ಭಾರತದಲ್ಲಿ ಪತ್ತೆಯಾಗಿರುವ ಎರಡು ಕೊರೊನಾವೈರಸ್ ಸೋಂಕಿನ ರೂಪಾಂತರ ರೋಗಾಣುಗಳಿಂದ ಆಗಿರುವ ಮೂರನೇ ತಳಿಯಿಂದ ಹೆಚ್ಚು ಅಪಾಯವಿದೆ ಎಂದು ಇತ್ತೀಚಿಗಷ್ಟೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಎಚ್ಚರಿಕೆ ನೀಡಿತ್ತು. ಅಲ್ಲದೇ, ಮೂರನೇ ರೂಪಾಂತರ ತಳಿಯು ಪಶ್ಚಿಮ ಬಂಗಾಳದಲ್ಲೇ ಅತಿಹೆಚ್ಚಾಗಿ ಕಂಡು ಬರುವ ಸಾಧ್ಯತೆಯಿದೆ ಎಂದು ಹೇಳಲಾಗಿತ್ತು.

ಕೊರೊನಾವೈರಸ್ ರೂಪಾಂತರ ತಳಿ?

ಕೊರೊನಾವೈರಸ್ ರೂಪಾಂತರ ತಳಿ?

ರೂಪಾಂತರ ತಳಿ ಎಂಬುದೇನೂ ವಿಶೇಷವಲ್ಲ. ಎಲ್ಲ ರೋಗಾಣುವಿನ ರೀತಿಯಲ್ಲಿ ಕೊರೊನಾವೈರಸ್ ಸೋಂಕಿನ ರೋಗಾಣುವನ್ನು ಹರಡುವ ಒಂದು ರೂಪಾಂತರಿ ಆಗಿರುತ್ತದೆ. ಇದರಿಂದ ಕೊರೊನಾ ರೋಗಾಣು ಮೊದಲಿನಂತೆ ಒಬ್ಬರಿಂದ ಮತ್ತೊಬ್ಬರಿಗೆ ಹರಡಲಿದ್ದು, ರೂಪಾಂತರ ತಳಿ ಮಾತ್ರ ಬದಲಾಗಿರುತ್ತದೆ. ಪುನರಾವರ್ತನೆ ಸಂದರ್ಭದಲ್ಲಿ ಕೊರೊನಾವೈರಸ್ ರೋಗಾಣು ತನ್ನ ಅನುವಂಶಿಕತೆಯ ರೂಪಾಂತರವಾಗುತ್ತಿರುತ್ತದೆ. ಈ ಅನುವಂಶಿಕತೆಯ ರೂಪಾಂತರದ ನಂತರದಲ್ಲಿ ವಿಭಿನ್ನ ಭೌತಿಕ ಗುಣಲಕ್ಷಣಗಳು ಕಾಣಿಸಿಕೊಂಡಲ್ಲಿ ಅದನ್ನು ಹೊಸ ತಳಿ ಎಂದು ಪರಿಗಣಿಸಲಾಗುತ್ತದೆ.

ರೂಪಾಂತರ ವೈರಸ್ ಮೊದಲಿಗಿಂತ ಅಪಾಯಕಾರಿಯಲ್ಲ

ರೂಪಾಂತರ ವೈರಸ್ ಮೊದಲಿಗಿಂತ ಅಪಾಯಕಾರಿಯಲ್ಲ

ಯಾವುದೇ ರೂಪಾಂತರ ರೋಗಾಣುಗಳು ಮೊದಲಿಗಿಂತ ಅಪಾಯಕಾರಿ ಆಗಿರುವುದಿಲ್ಲ. ಇದರ ಜೊತೆಗೆ ರೋಗಾಣುವಿನ ವರ್ತನೆಯಲ್ಲೂ ಅಷ್ಟಾಗಿ ಬದಲಾವಣೆ ಕಂಡು ಬರುವುದಿಲ್ಲ. ಕೆಲವೇ ಕೆಲವು ರೂಪಾಂತರ ವೈರಸ್ ಮನುಷ್ಯನ ಜೀವಕೋಶವನ್ನು ಪ್ರವೇಶಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ ಎಂದು ಬಿಬಿಸಿ ಹೇಳಿದೆ. ಮೂರು ರೂಪಾಂತರ ರೋಗಾಣುವಿನ ಸಮ್ಮಿಲನದಿಂದ ಹೊಸ ತಳಿಯು ಹುಟ್ಟಿಕೊಂಡಿದೆ. ಮುಂದಿನ ದಿನಗಳಲ್ಲಿ ಭಾರತವು ಈ ರೂಪಾಂತರ ತಳಿಯನ್ನು ಎದುರಿಸಬೇಕಾಗುತ್ತದೆ.

ಹೆಚ್ಚಿದ ಕೊವಿಡ್-19 ಸೋಂಕು ಹರಡುವಿಕೆ ವೇಗ

ಹೆಚ್ಚಿದ ಕೊವಿಡ್-19 ಸೋಂಕು ಹರಡುವಿಕೆ ವೇಗ

ಕೊರೊನಾವೈರಸ್ ಸೋಂಕು ಹರಡುವಿಕೆ ವೇಗ ಹೆಚ್ಚುವುದಕ್ಕೆ ಮೂರು ರೋಗಾಣುಗಳ ಪೈಕಿ D614G ರೂಪಾಂತರ ಪ್ರಮುಖ ಕಾರಣವಾಗಿದೆ. ಈ ರೂಪಾಂತರದಿಂದ ಸೋಂಕು ಅತಿವೇಗವಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. 614G ರೂಪಾಂತರವು ಮನುಷ್ಯ ಉಸಿರಾಟ ಕೋಶಗಳ ಮೇಲೆ ಪರಿಣಾಮ ಬೀರುವ ಶಕ್ತಿಯನ್ನು ಹೊಂದಿದೆ. ಇದರ ಜೊತೆ 614G ರೂಪಾಂತರ ಬಹುಬೇಗ ಸೋಂಕು ಹರಡುವ ಸಾಮರ್ಥ್ಯವನ್ನು ಹೊಂದಿದೆ.

ಕೊರೊನಾ ರೂಪಾಂತರದಿಂದ ಎದುರಾಗುತ್ತಾ ತೀವ್ರ ಕಾಯಿಲೆ?

ಕೊರೊನಾ ರೂಪಾಂತರದಿಂದ ಎದುರಾಗುತ್ತಾ ತೀವ್ರ ಕಾಯಿಲೆ?

ಕೊವಿಡ್-19 ಸೋಂಕಿನ ಇತರೆ ರೂಪಾಂತರ ತಳಿಗಳಿಗೆ ಹೋಲಿಕೆ ಮಾಡಿ ನೋಡಿದರೆ ಇಂಗ್ಲೆಂಡ್ ಮೂಲದ B.1.1.7 ತಳಿಯು ಹೆಚ್ಚು ಅಪಾಯಕಾರಿ ಆಗಿದೆ. ಈ ತಳಿಯ ಸೋಂಕಿತರಿಗೆ ಸಾವಿನ ಅಪಾಯ ಹೆಚ್ಚಾಗಿರುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೊರೊನಾವೈರಸ್ ಸೋಂಕಿನ ವಿವಿಧ ರೂಪಾಂತರ ತಳಿಗಳನ್ನು ಪತ್ತೆ ಮಾಡುವ ಉದ್ದೇಶದಿಂದ RT-PCR ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಯಾವುದೇ ರೂಪಾಂತರ ತಳಿಯಿದ್ದರೂ ಪತ್ತೆ ಮಾಡುವುದಕ್ಕೆ ಸಾಧ್ಯವಾಗುತ್ತದೆ.

ಕೊವಿಡ್-19 ಲಸಿಕೆ ಮೇಲಿನ ಪರಿಣಾಮ

ಕೊವಿಡ್-19 ಲಸಿಕೆ ಮೇಲಿನ ಪರಿಣಾಮ

ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವಿನ್ಯಾಸಗೊಳಿಸಲು ನೀಡಿರುವ ಕೊರೊನಾವೈರಸ್ ಲಸಿಕೆಯ ಸಾಮರ್ಥ್ಯವನ್ನು ತಗ್ಗಿಸಬಹುದು. ಎರಡೂ ಲಸಿಕೆಗಳು ಶ್ವಾಸಕೋಶ ಮತ್ತು ಉಸಿರಾಟ ವ್ಯವಸ್ಥೆಯ ಮೇಲೆ ದಾಳಿ ಮಾಡುವ ರೋಗಾಣುವನ್ನು ತಡೆಯುವ ಶಕ್ತಿಯನ್ನು ಹೊಂದಿರುತ್ತದೆ. ಲಸಿಕೆಗಳಿಂದ ಅಥವಾ ನೈಸರ್ಗಿಕವಾಗಿ ಉಂಟಾಗಿರುವ ರೋಗ ನಿರೋಧಕ ಶಕ್ತಿಯನ್ನು ತಪ್ಪಿಸಲು ಈ ರೂಪಾಂತರ ರೋಗಾಣುಗಳ ತಳಿಯು ಕಾರಣವಾಗಬಹುದು.

English summary
Triple Mutation Strain Detected in 4 Indian States: Why Mutant Strain is Dangerous & Needs Effective Monitoring?. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X