ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧುನಿಕ ಭಾರತ ನಿರ್ಮಾತೃ ಪಿ.ವಿ.ನರಸಿಂಹ ರಾವ್‌ಗೆ 100

|
Google Oneindia Kannada News

ರಾಜ್ಯಶಾಸ್ತ್ರಜ್ಞ, ವಾಗ್ಮಿ, ಬಹುಭಾಷಾ ಪಂಡಿತ, ಆರ್ಥಿಕ ತಜ್ಞ ಪಿ.ವಿ.ನರಸಿಂಹ ರಾವ್ ಬದುಕಿದ್ದರೆ ಇಂದಿಗೆ 100ನೇ ವರ್ಷದ ಹುಟ್ಟುಹಬ್ಬ ಆಚರಣೆ ಸಂಭ್ರಮದಿಂದ ಜರುಗುತ್ತಿತ್ತು. ಎಲ್ಲರೊಂದಿಗೂ ಎಲ್ಲಾ ಕಾಲಕ್ಕೂ ಚೆನ್ನಾಗಿದ್ದ ಅಜಾತ ಶತ್ರು ಎಂದೆನಿಸಿಕೊಳ್ಳಬಲ್ಲ ವ್ಯಕ್ತಿತ್ವ ಹೊಂದಿದ್ದ ಅಪರೂಪದ ರಾಜಕಾರಣಿ ಪಿವಿಎನ್. ಭಾರತದ ಪ್ರಥಮ ಪ್ರಧಾನಿ ನೆಹರು ಮನೆತನದ ಪ್ರಧಾನಿಗಳ ನಂತರ ಆಡಳಿತಾವಧಿಯ ಐದು ವರ್ಷಗಳನ್ನು ಪೂರೈಸಿದ ಮೊದಲ ಪ್ರಧಾನಿ ಎನ್ನುವುದು ಪಿವಿಎನ್ ಅಗ್ಗಳಿಕೆ.

ರಾಜಕೀಯ ಹಾಗೂ ಆರ್ಥಿಕ ಸುಧಾರಣೆಯ ತಜ್ಞ ಚಾಣಕ್ಯ, ಮಾರ್ಗದರ್ಶಿ ಎಂದು ಪಿವಿಎನ್‌ ಕರೆಸಿಕೊಂಡಿದ್ದರು. ರಾಜಕೀಯದ ಚದುರಂಗದಾಟದಲ್ಲಿ ಇಡಬಹುದಾದ ಎಲ್ಲಾ ನಡೆ ಇಟ್ಟರು. ತೆಲುಗುದೇಶಂ, ಶಿವಸೇನೆ, ಜನತಾದಳ ಮುಂತಾದ ಪ್ರಾದೇಶಿಕ ಪಕ್ಷಗಳನ್ನು ಒಡೆದು ಅಧಿಕಾರ ಉಳಿಸಿಕೊಳ್ಳಲು ಏನು ಮಾಡಬೇಕೋ ಆ ಕಾಲಕ್ಕೆ ಮಾಡಿದ್ದರು. ದಕ್ಷಿಣ ಭಾರತದ ಮೊದಲ ಪ್ರಧಾನಿ ಇಟ್ಟ ಹಲವು ನಡೆಗಳಿಗೆ ಎದುರಾಳಿಗಳು ಕೂಡಾ ಉತ್ತರ ಭಾರತದ ದಿಗ್ಗಜ ನಾಯಕರೇ ತಲೆದೂಗಿದ್ದರು.

ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?ಬಾಬ್ರಿ ಮಸೀದಿ ಧ್ವಂಸವಾದಾಗ ಅಂದಿನ ಪ್ರಧಾನಿ ಏನ್ಮಾಡ್ತಿದ್ರು?

ಹೊಸ ಆರ್ಥಿಕ ನೀತಿ ತಂದು ಭಾರತದ ಸುಧಾರಣೆಯತ್ತ ಕೊಂಡೊಯ್ಯಲು ಪ್ರಥಮ ಹೆಜ್ಜೆ ಇರಿಸಿದರು. ರಾವ್‌ ಮತ್ತು ಹಣಕಾಸು ಸಚಿವ ಮನಮೋಹನ್‌ ಸಿಂಗ್‌ ವಿದೇಶಿ ವಿನಿಮಯಕ್ಕೆ ಸಂಬಂಧಿಸಿದಂತೆ ಅನೇಕ ವಿವಾದಗಳನ್ನು ಸೃಷ್ಟಿಸಿದ್ದರು. ಆದರೆ, ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಇವೆಲ್ಲಾ ಸಾಧ್ಯವಾಗಿದ್ದು ರಾವ್ ದೂರದರ್ಶಿತ್ವ ನೀತಿಯಿಂದ ಮಾತ್ರ. 1991 ರಿಂದ 96 ರ ಅವಧಿಯಲ್ಲಿ ಹಾಕಿದ ಅಡಿಪಾಯದ ಮೇಲೆ ಭಾರತದ ಭವಿಷ್ಯ ನಿರ್ಧಾರವಾಗುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ದಿ ಇಲಾಖೆ ಅಸ್ತಿತ್ವಕ್ಕೆ ಬಂತು. ನವೋದಯ ವಿದ್ಯಾಲಯ ಯೋಜನೆ ರಾವ್‌ರ ಕೊಡುಗೆ.

ಹಗರಣ, ಕರಾಳ ಘಟನೆಗಳಿಗೆ ಸಾಕ್ಷಿ: ಪ್ರಧಾನಿ ಪಿವಿಎನ್ ಕಾಲದಲ್ಲೇ ವಿವಾದಾತ್ಮಕ ಬಾಬ್ರಿ ಮಸೀದಿ ನೆಲಸಮವಾಯಿತು. ಸ್ವತಃ ಪಿವಿಎನ್ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾದವು. ಕೆಲವು ಪ್ರಕರಣಗಳಲ್ಲಿ ಖುಲಾಸೆಗೊಂಡರು. ಜೆಎಂಎಂ ಸಂಸದರ ಲಂಚಗುಳಿತನ ಮತ್ತು ಲಖ್ಖುಭಾಯಿ ವಂಚನೆ ಪ್ರಕರಣ, ಸೆಂಟ್‌ಕಿಟ್ಸ್‌ ಪೋರ್ಜರಿ ಹಗರಣ, ಹವಾಲಾ ಹಗರಣ ಹೀಗೆ ಹಲವು ಸಂಕಟಗಳ ನಡುವೆ ಸರ್ಕಾರ ನಿಭಾಯಿಸಿದರು.

ವಾಜಪೇಯಿ ಮೆಚ್ಚಿದ ಸಾಹಿತಿ

ವಾಜಪೇಯಿ ಮೆಚ್ಚಿದ ಸಾಹಿತಿ

ಹಿಂದಿಯಲ್ಲಿ ಸಾಹಿತ್ಯ ರತ್ನ ಶಿಕ್ಷಣ ಪಡೆದಿದ್ದ ರಾವ್ ಅವರು ಸ್ಪ್ಯಾನಿಷ್‌ ಸೇರಿದಂತೆ ಬಹು ಭಾಷೆಯಲ್ಲಿ ಅವರು ಪ್ರಭುತ್ವ ಪಡೆದಿದ್ದರು. ರಾವ್ ಆತ್ಮಕಥನ ಇನ್ ಸೈಡರ್ ಕೃತಿ ಬಿಡುಗಡೆ ಮಾಡಿದ್ದು ಅಟಲ್ ಬಿಹಾರಿ ವಾಜಪೇಯಿ ಎಂಬುದು ವಿಶೇಷ.

ಅನೇಕ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಹೊಂದಿದ ವ್ಯಕ್ತಿಯಾಗಿದ್ದರು. ಸಂಗೀತ, ಸಿನಿಮಾ ಮತ್ತು ರಂಗಭೂಮಿಯನ್ನು ಬಹುವಾಗಿ ಇಷ್ಟಪಡುತ್ತಿದ್ದರು. ಭಾರತೀಯ ತತ್ತ್ವಶಾಸ್ತ್ರ ಮತ್ತು ಸಂಸ್ಕೃತಿಯಲ್ಲಿ ವಿಶೇಷ ಒಲವು ಹೊಂದಿದ್ದರು. ಕಾಲ್ಪನಿಕ ವಿಜ್ಞಾನ ಹಾಗೂ ರಾಜಕೀಯ ವಿಶ್ಲೇಷಣೆಗಳನ್ನು ಬರೆಯುತ್ತಿದ್ದರು. ಹಲವು ಭಾಷೆಗಳನ್ನು ತಿಳಿದಿದ್ದ ಬಹು ಭಾಷಾ ಪಂಡಿತರಾಗಿದ್ದರು. ತೆಲುಗು ಮತ್ತು ಹಿಂದಿಗಳಲ್ಲಿ ಕವನಗಳನ್ನು ಬರೆಯುತ್ತಿದ್ದ ಅವರಿಗೆ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇತ್ತು.

ಜ್ಞಾನಪೀಠದಿಂದ ಪ್ರಕಟಗೊಂಡ ದಿವಂಗತ ವಿಶ್ವನಾಥ ಸತ್ಯನಾರಾಯಣ ಅವರು ಪ್ರಸಿದ್ದ 'ವೆಯಿ ಪಡಗಳು' ತೆಲುಗು ಕಾದಂಬರಿಯನ್ನು ಹಿಂದಿಯಲ್ಲಿ 'ಸಹಸ್ರಫನ್' ಹೆಸರಿನಲ್ಲಿ ಪ್ರಕಟಿಸಿದರು ; ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ದಿವಂಗತ ಶ್ರೀ ಹರಿ ನಾರಾಯಣ ಅಪ್ಟೆ ಅವರ ಪ್ರಸಿದ್ದ ಮರಾಠಿ ಕಾದಂಬರಿಯನ್ನು 'ಪನ್ ಲಕ್ಷತ್ ಕೊನ್ ಘೇಟೊ'ವನ್ನು ತೆಲುಗಿನಲ್ಲಿ 'ಅಬಾಲ ಜೀವಿತಂ' ಹೆಸರಿನಲ್ಲಿ ಭಾಷಾಂತರಿಸಿದರು. ಅವರು ಇತರ ಜನಪ್ರಿಯ ಕಾದಂಬರಿಗಳು ಮತ್ತು ಶ್ರೇಷ್ಠ ಕೃತಿಗಳನ್ನು ಮರಾಠಿಯಿಂದ ತೆಲುಗಿಗೆ ಹಾಗೂ ತೆಲುಗಿನಿಂದ ಹಿಂದಿಗೆ ಭಾಷಾಂತರ ಮಾಡಿದ್ದಾರೆ. ಅವರ ಅನೇಕ ಲೇಖನಗಳು ಬಹುಶ: ಅವರ ಒಂದು ಕಾವ್ಯನಾಮದ ಮೂಲಕ ವಿವಿಧ ನಿಯತಕಾಲಿಕಗಳಲ್ಲಿ ಪ್ರಕಟವಾಗಿದೆ.

ವಿದ್ಯಾಭ್ಯಾಸ:

ವಿದ್ಯಾಭ್ಯಾಸ:

ಪಿ.ರಂಗರಾವ್ ಅವರ ಪುತ್ರರಾದ ಪಿ.ವಿ.ನರಸಿಂಹ ರಾವ್ ಅವರು ಜೂನ್ 28, 1921ರಲ್ಲಿ ಕರೀಂನಗರದ ವಂಗಾರ ಎಂಬ ಊರಲ್ಲಿ ಜನಿಸಿದರು. ಅವರು ಹೈದರಾಬಾದ್‌ನ ಓಸ್ಮಾನಿಯಾ ವಿಶ್ವವಿದ್ಯಾಲಯ, ಬಾಂಬೆ ವಿಶ್ವವಿದ್ಯಾಲಯ ಮತ್ತು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿ ಅಂದಿನ ಅವಿಭಜಿತ ಆಂಧ್ರದಲ್ಲಿ ನಿಜಾಮರ ಕಾಲದ ಕಾಲೇಜಿನಲ್ಲಿ ವಂದೇಮಾತರಂಗೆ ನಿರ್ಬಂಧ ಹೇರದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದರು. ಬಿಎಸ್ಸಿ, ಎಲ್‌ಎಲ್‌ಬಿ ಪದವಿ ಪಡೆದ ಪಿ.ವಿ.ನರಸಿಂಹ ರಾವ್ ಅವರಿಗೆ ಮೂವರು ಪುತ್ರರು ಮತ್ತು ಐವರು ಪುತ್ರಿಯರಿದ್ದಾರೆ. ಕೃಷಿ ಮತ್ತು ಓರ್ವ ವಕೀಲ ವೃತ್ತಿ ನಂತರ ರಾಜಕೀಯ ಪ್ರವೇಶಿಸಿ ಕೆಲವು ಮುಖ್ಯ ಖಾತೆಗಳನ್ನು ನಿರ್ವಹಿಸಿದರು.

ಹತ್ತು ಹಲವು ಹುದ್ದೆ ನಿಭಾಯಿಸಿದ್ದ ಪಿವಿಎನ್

ಹತ್ತು ಹಲವು ಹುದ್ದೆ ನಿಭಾಯಿಸಿದ್ದ ಪಿವಿಎನ್

ಆಂಧ್ರಪ್ರದೇಶ ಸರ್ಕಾರದಲ್ಲಿ 1962-64ರವರೆಗೆ ಕಾನೂನು ಮತ್ತು ವಾರ್ತಾ ಸಚಿವರು;
1964-67ರವರೆಗೆ ಕಾನೂನು ಮತ್ತು ದತ್ತಿಗಳ ಸಚಿವರು;
1967ರವರೆಗೆ ಆರೋಗ್ಯ ಮತ್ತು ಔಷಧಿ ಮತ್ತು 1968-71ರವರೆಗೆ ಶಿಕ್ಷಣ ಸಚಿವರಾಗಿದ್ದರು.
1971-73ರವರೆಗೆ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು;
1975-76ರವರೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ;
1968-74ರವರೆಗೆ ಆಂಧ್ರ ಪ್ರದೇಶದ ತೆಲುಗು ಅಕಾಡೆಮಿ ಅಧ್ಯಕ್ಷ;
1972ರಿಂದ ಮದ್ರಾಸ್ನ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಉಪಾಧ್ಯಕ್ಷ.
1957-77ರವರೆಗೆ ಆಂಧ್ರ ಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು;
1977-84ರವರೆಗೆ ಲೋಕಸಭಾ ಸದಸ್ಯರಾಗಿದ್ದರು ಹಾಗೂ 1984ರಲ್ಲಿ ಎಂಟನೆ ಲೋಕಸಭೆಗೆ ಚುನಾಯಿತರಾಗಿದ್ದರು.
1978-79ರಲ್ಲಿ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಅಧ್ಯಕ್ಷರಾಗಿ ಅವರು ಲಂಡನ್ ವಿಶ್ವವಿದ್ಯಾಲಯದ ಏಷ್ಯನ್ ಅಂಡ್ ಆಫ್ರಿಕನ್ ಸ್ಟಡೀಸ್ ನಿಂದ ಆಯೋಜಿಸಲಾಗಿದ್ದ ದಕ್ಷಿಣ ಏಷ್ಯಾ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರು.
ರಾವ್ ಅವರು ಆಂಧ್ರಪ್ರದೇಶ ಕೇಂದ್ರದ ಭಾರತೀಯ ವಿದ್ಯಾ ಭವನದ ಅಧ್ಯಕ್ಷರಾಗಿದ್ದರು.
ಜನವರಿ 14, 1980ರಿಂದ ಜುಲೈ 18, 1984ರವರೆಗೆ ವಿದೇಶಾಂಗ ವ್ಯವಹಾರ ಸಚಿವರಾಗಿದ್ದರು
ಜುಲೈ 19, 1984ರಿಂದ ಡಿಸೆಂಬರ್ 31, 1984ರವರೆಗೆ ಗೃಹ ಸಚಿವರಾಗಿದ್ದರು
ಡಿಸೆಂಬರ್ 31, 1984ರಿಂದ ಸೆಪ್ಟೆಂಬರ್ 25ರವರೆಗೆ ರಕ್ಷಣಾ ಸಚಿವರಾಗಿದ್ದರು.
ನಂತರ ಸೆಪ್ಟೆಂಬರ್ 25, 1985ರಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಅನುಭವಗಳನ್ನು ಯಶಸ್ವಿಯಾಗಿ ಸಂವಹನ ಮಾಡಿದರು

ಅನುಭವಗಳನ್ನು ಯಶಸ್ವಿಯಾಗಿ ಸಂವಹನ ಮಾಡಿದರು

ರಾಜಕೀಯ ವಿಷಯಗಳು ಮತ್ತು ಅದಕ್ಕೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಅವರು ಅಮೆರಿಕ ಮತ್ತು ಪಶ್ಚಿಮ ಜರ್ಮನಿಯ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ವಿದೇಶಾಂಗ ವ್ಯವಹಾರಗಳ ಸಚಿವರಾಗಿ 1974ರಲ್ಲಿ ಯು.ಕೆ, ಪಶ್ಚಿಮ ಜರ್ಮನಿ, ಸ್ವಿಟ್ಜರ್ಲೆಂಡ್, ಇಟಲಿ ಮತ್ತು ಈಜಿಪ್ಟ್ ನಲ್ಲಿ ವ್ಯಾಪಕ ಪ್ರವಾಸ ಕೈಗೊಂಡರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದ ವೇಳೆ ರಾವ್, ಅಂತಾರಾಷ್ಟ್ರೀಯ ರಾಜತಾಂತ್ರಿಕತೆಯ ಕ್ಷೇತ್ರಕ್ಕೆ ತಮ್ಮ ವಿದ್ವಾಂಸ ಪ್ರತಿಭೆ ಹಿನ್ನೆಲೆ ಹಾಗೂ ಸಮೃದ್ಧ ರಾಜಕೀಯ ಮತ್ತು ಅಡಳಿತಾತ್ಮಕ ಅನುಭವಗಳನ್ನು ಯಶಸ್ವಿಯಾಗಿ ಸಂವಹನ ಮಾಡಿದರು. ತಾವು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ 1980ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ತೃತೀಯ ಯೂನಿಡೋ ಸಮಾವೇಶದ ಅಧ್ಯಕ್ಷತೆ ವಹಿಸಿದರು.

1980ರ ಮಾರ್ಚ್ ನಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಗ್ರೂಪ್ ಆಫ್ 77ರ ಸಭೆಯ ಅಧ್ಯಕ್ಷತೆ ವಹಿಸಿದ್ದರು. 1981ರ ಫೆಬ್ರವರಿಯಲ್ಲಿ ನಡೆದ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಮಾವೇಶದಲ್ಲಿ ಅವರು ವಹಿಸಿದ ಪಾತ್ರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ರಾವ್ ಅವರ ಅಂತಾರಾಷ್ಟ್ರೀಯ ಆರ್ಥಿಕ ವಿಸಯಗಳಲ್ಲಿ ಅವರು ತೋರಿದ ವೈಯಕ್ತಿಕ ಆಸಕ್ತಿಗಳಿಂದ 1981ರ ಮೇ ತಿಂಗಳಲ್ಲಿ ಕ್ಯಾರಕಾಸ್ ನಲ್ಲಿ ನಡೆದ ಇಸಿಡಿಸಿ ಕುರಿತ ಗ್ರೂಪ್ ಆಫ್ 77 ಸಮಾವೇಶದಲ್ಲಿ ಭಾರತೀಯ ನಿಯೋಗದ ನೇತೃತ್ವ ವಹಿಸಲು ನೆರವಾಯಿತು.

ಗೃಹ ಸಚಿವ, ರಕ್ಷಣಾ ಸಚಿವರಾಗಿ ಪಿವಿಎನ್

ಗೃಹ ಸಚಿವ, ರಕ್ಷಣಾ ಸಚಿವರಾಗಿ ಪಿವಿಎನ್

1982 ಮತ್ತು 1983 ಭಾರತ ಮತ್ತು ಅದರ ವಿದೇಶಾಂಗ ನೀತಿಯಲ್ಲಿ ಯಶಸ್ವಿ ವರ್ಷ. ಕೊಲ್ಲಿ ಯುದ್ಧದ ನೆರಳಿನಲ್ಲಿ ಏಳನೇ ಶೃಂಗಸಭೆ ಆಯೋಜಿಸುವಂತೆ ಅಲಿಪ್ತ ರಾಷ್ಟ್ರಗಳ ಚಳವಳಿ ಭಾರತಕ್ಕೆ ಮನವಿ ಮಾಡಿತು. ಇದು ಭಾರತವು ಚಳವಳಿಯ ಅಧ್ಯಕ್ಷತೆ ವಹಿಸಲು ಹಾಗೂ ಶ್ರೀಮತಿ ಇಂದಿರಾ ಗಾಂಧಿ ಅವರು ಅದರ ಅಧ್ಯಕ್ಷರಾಗುವಂತೆ ಮಾಡಿತು.

1982ರಲ್ಲಿ ನವದೆಹಲಿ ಶೃಂಗಸಭೆ ಸಂದರ್ಭದಲ್ಲಿ ಅಲಿಪ್ತ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಗಳಿಗೆ ಪಿ.ವಿ.ನರಸಿಂಹರಾವ್ ಅಧ್ಯಕ್ಷತೆ ವಹಿಸಿದ್ದರು. ಅದೇ ವರ್ಷ ಇನ್ನೊಂದು ಶೃಂಗಸಭೆ ನಡೆಸುವಂತೆ ವಿಶ್ವಸಂಸ್ಥೆ ಸೂಚನೆ ಮೇರೆಗೆ ನಡೆದ ಸಮಾವೇಶದಲ್ಲೂ ಇವರು ಅಧ್ಯಕ್ಷರಾಗಿದ್ದು. ನ್ಯೂಯಾರ್ಕ್ ನಲ್ಲಿ ನಡೆದ ವಿಶ್ವ ವಿವಿಧ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥ ಸಮಾವೇಶದಲ್ಲೂ ರಾವ್ ಪ್ರಮುಖ ಪಾತ್ರ ವಹಿಸಿದ್ದರು.

ರಾವ್ ಅವರು 1983ರ ನವೆಂಬರ್ ನಲ್ಲಿ ಪಶ್ಚಿಮ ಏಷ್ಯಾ ದೇಶಗಳಿಗೆ ಭೇಟಿ ನೀಡಿದ ವಿಶೇಷ ಅಲಿಪ್ತ ನಿಯೋಗದ ಅಧ್ಯಕ್ಷರೂ ಆಗಿದ್ದರು. ಪ್ಯಾಲೈಸ್ಟೀನ್ ವಿಮೋಚನಾ ಸಂಸ್ಥೆಯ ಬಿಕ್ಕಟ್ಟು ಪರಿಹಾರಕ್ಕಾಗಿ ಈ ನಿಯೋಗ ಶ್ರಮಿಸಿತು. ರಾವ್ ಅವರು ನವದೆಹಲಿಯಲ್ಲಿ ಕಾಮನ್ವೆಲ್ತ್ ರಾಷ್ಟ್ರಗಳ ಸರ್ಕಾರಗಳ ಮುಖ್ಯಸ್ಥರ ಹಾಗೂ ಸೈಪ್ರಸ್ ಕುರಿತ ಸಭೆಯಿಂದ ರಚಿತವಾದ ಕ್ರಿಯಾ ಸಮೂಹದಲ್ಲೂ ಸಕ್ರಿಯವಾಗಿ ತೊಡಗಿದ್ದರು.

ವಿದೇಶಾಂಗ ವ್ಯವಹಾರಗಳ ಸಚಿವರಾಗಿ ರಾವ್ ಅವರು ಯುಎಸ್ಎ, ಯುಎಸ್ಎಸ್ಆರ್, ಪಾಕಿಸ್ತಾನ, ಬಾಂಗ್ಲಾದೇಶ, ಇರಾನ್, ವಿಯೆಟ್ನಾಂ ಮತ್ತು ಗುಯಾನ ಸೇರಿದಂತೆ ಜಂಟಿ ಆಯೋಗಗಳ ಸದಸ್ಯ ದೇಶವನ್ನು ಭಾರತದ ಪರವಾಗಿ ಅಧ್ಯಕ್ಷತೆ ವಹಿಸಿದ್ದರು.

ನರಸಿಂಹ ರಾವ್ ಅವರು ಜುಲೈ 19, 1984ರಂದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದರು. ನವೆಂಬರ್ 5, 1984ರಂದು ಯೋಜನಾ ಸಚಿವರ ಹೆಚ್ಚುವರಿ ಹೊಣೆಯೊಂದಿಗೆ ಅವರನ್ನು ಈ ಹುದ್ದೆಗೆ ಮರು ನೇಮಕ ಮಾಡಲಾಯಿತು. ಡಿಸೆಂಬರ್ 31, 1985 ರಿಂದ ಸೆಪ್ಟೆಂಬರ್ 25, 1985ರವರೆಗೆ ರಕ್ಷಣಾ ಸಚಿವರಾಗಿ ನೇಮಕಗೊಂಡರು. ಸೆಪ್ಟೆಂಬರ್ 25, 1985ರಂದು ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಂಡರು. (ಮಾಹಿತಿ ಕೃಪೆ: ಪಿಎಂಇಂಡಿಯಾ)

English summary
Tributes to PV Narasimha Rao on his 100th birth anniversary. India remembers PV Narsimha Rao's extensive contributions to national development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X