ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡುಕ್ಕಿ ಕಾಂಗ್ರೆಸ್ ಸಂಸದನ ಮೇಲಿದೆ 204 ಕ್ರಿಮಿನಲ್ ಕೇಸುಗಳು

|
Google Oneindia Kannada News

ನವದೆಹಲಿ, ಮೇ 25: ಕೇರಳದ ಇಡುಕ್ಕಿಯ ಕಾಂಗ್ರೆಸ್ ಸಂಸದ ಡೀನ್ ಕುರಿಯಾಕೋಸ್ ವಿರುದ್ಧ ಬರೋಬ್ಬರಿ 204 ಕ್ರಿಮಿನಲ್ ಕೇಸ್ ಗಳಿವೆ. ಕಳ್ಳತನ, ಕ್ರಿಮಿನಲ್ ಸಂಚು, ಕೊಲೆ ಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ನೀಡಿದೆ.

ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿರುವ ಅಂಕಿ ಅಂಶಗಳನ್ನು ಕಲೆ ಹಾಕಿ ಆಸ್ತಿ ವಿವರಗಳ, ಕ್ರಿಮಿನಲ್ ಕೇಸ್ ಗಳ ಲೆಕ್ಕವನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

17ನೇ ಲೋಕಸಭೆಗೆ ಆಯ್ಕೆಯಾಗಿರುವ ಅನೇಕ ಸಂಸದರ ವಿರುದ್ಧ ಅತ್ಯಾಚಾರ, ಕೊಲೆ, ಕೊಲೆ ಯತ್ನ, ಕಿಡ್ನಾಪ್, ಮಹಿಳೆ ವಿರುದ್ಧ ಕ್ರೈಂ ಇತ್ಯಾದಿ ಪ್ರಕರಣಗಳಿವೆ. ಐಪಿಸಿ ಸೆಕ್ಷನ್ 302, 376, 307, 364 ಎ ಅಲ್ಲದೆ, ಮಹಿಳೆಗೆ ಕಿರುಕುಳ ಐಪಿಸಿ ಸೆಕ್ಷನ್ 354, ಐಪಿಸಿ ಸೆಕ್ಷನ್ 498ಎ ಅನ್ವಯ ಹಲವರ ಮೇಲೆ ಕೇಸುಗಳು ದಾಖಲಾಗಿವೆ.

ಲೋಕಸಭೆ ಚುನಾವಣೆ 2019ರಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳ ಅಫಿಡವಿಟ್ ಪರಿಶೀಲಿಸಿದ್ದು, 233 (43%) ಸಂಸದರ ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ. 2014ರಲ್ಲಿ 542 ಮಂದಿ ಗೆದ್ದವರ ಪೈಕಿ 185 (34%) ವಿರುದ್ಧ ಕ್ರಿಮಿನಲ್ ಕೇಸ್ ಗಳಿತ್ತು. 2009ರಲ್ಲಿ 543 ವಿಜೇತರ ಪೈಕಿ 162(30%) ಮಂದಿ ವಿರುದ್ಧ ಕೇಸ್ ಗಳಿತ್ತು. 2009ಕ್ಕೆ ಹೋಲಿಸಿದರೆ ಕ್ರಿಮಿನಲ್ ಕೇಸ್ ವುಳ್ಳ ಸಂಸದರ ಸಂಖ್ಯೆ 44% ಅಧಿಕವಾಗಿದೆ.

ರೇಪ್ ಕೇಸ್ ಎದುರಿಸುತ್ತಿರುವವರು

ರೇಪ್ ಕೇಸ್ ಎದುರಿಸುತ್ತಿರುವವರು

2019ರ ಲೋಕಸಭೆ ಚುನಾವಣೆಯಲ್ಲಿ 159(29%) ವಿಜೇತ ಸಂಸದರ ವಿರುದ್ಧ ಅತ್ಯಾಚಾರ, ಕೊಲೆ, ಕೊಲೆ ಯತ್ನ, ಕಿಡ್ನಾಪ್, ಮಹಿಳೆ ವಿರುದ್ಧ ಕ್ರೈಂ..ಇತ್ಯಾದಿ ಪ್ರಕರಣಗಳಿವೆ. 2014ರಲ್ಲಿ 542 ಸಂಸದರ ಪೈಕಿ 112(21%) ವಿಜೇತರ ವಿರುದ್ಧ ಗುರುತರ ಕ್ರಿಮಿನಲ್ ಕೇಸ್ ಗಳು ದಾಖಲಾಗಿದ್ದವು.

2009ರಲ್ಲಿ 543 ವಿಜೇತರ ಪೈಕಿ 76(14%) ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ಗಳಿತ್ತು. 2009ಕ್ಕೆ ಹೋಲಿಸಿದರೆ 2019ರ ಅವಧಿಗೆ ಗುರುತರ ಕ್ರಿಮಿನಲ್ ಕೇಸ್ ಎದುರಿಸುವರ ಸಂಖ್ಯೆಯಲ್ಲಿ 109% ರಷ್ಟು ಹೆಚ್ಚಳ ಕಂಡು ಬಂದಿದೆ.

ದ್ವೇಷ ಭಾಷಣ ಎದುರಿಸುತ್ತಿರುವವರು

ದ್ವೇಷ ಭಾಷಣ ಎದುರಿಸುತ್ತಿರುವವರು

29 ವಿಜೇತರ ವಿರುದ್ಧ ದ್ವೇಷ ಭಾಷಣ ಕೇಸ್ ಗಳಿವೆ. ಬಿಜೆಪಿಯ 301ರ ಪೈಕಿ 116 ಮಂದಿ (39%), ಕಾಂಗ್ರೆಸ್ಸಿನ 51 ಮಂದಿ ಪೈಕಿ 29(57%). ಡಿಎಂಕೆಯ 23ರಲ್ಲಿ 10(43%), ಎಐಟಿಸಿ 22 ಮಂದಿ ಪೈಕಿ 9(41%), ಜೆಡಿಯು 16ರಲ್ಲಿ 13(81%) ವಿರುದ್ಧ ಕ್ರಿಮಿನಲ್ ಕೇಸ್ ಗಳಿವೆ.

ಇನ್ನಿತರ ಕ್ರಿಮಿನಲ್ ಕೇಸ್ ಹೊಂದಿರುವವರು

ಇನ್ನಿತರ ಕ್ರಿಮಿನಲ್ ಕೇಸ್ ಹೊಂದಿರುವವರು

ಬಿಜೆಪಿಯ 301ರ ಪೈಕಿ 87 ಮಂದಿ (29%), ಕಾಂಗ್ರೆಸ್ಸಿನ 51 ಮಂದಿ ಪೈಕಿ 19(37%). ಡಿಎಂಕೆಯ 23ರಲ್ಲಿ 6(26%), ಎಐಟಿಸಿ 22 ಮಂದಿ ಪೈಕಿ 4(18%), ಜೆಡಿಯು 16ರಲ್ಲಿ 8(50%) ವಿರುದ್ಧ ಪ್ರಮುಖ ಕ್ರಿಮಿನಲ್ ಕೇಸ್ ಗಳಿವೆ.

ಅತಿ ಹೆಚ್ಚು ಕ್ರಿಮಿನಲ್ ಕೇಸ್ ಹೊಂದಿರುವ ಸಂಸದ

ಅತಿ ಹೆಚ್ಚು ಕ್ರಿಮಿನಲ್ ಕೇಸ್ ಹೊಂದಿರುವ ಸಂಸದ

204 ಕ್ರಿಮಿನಲ್ ಕೇಸ್ ಎದುರಿಸುತ್ತಿರುವ ಇಡುಕ್ಕಿಯ ಡೀನ್ ಕುರಿಯಾಕೋಸ್ ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 4,98,493 ಮತ(54.2%)ಗಳನ್ನು ಗಳಿಸಿ ಜಯ ದಾಖಲಿಸಿದರೆ, ಸಮೀಪದ ಪ್ರತಿಸ್ಪರ್ಧಿ ಜೋಸ್ ಜಾರ್ಜ್ ಅವರು 3,27,440(35.6%) ಮತಗಳಿಸಿ ಸೋಲು ಕಂಡರು.

English summary
Dean Kuriakose, the Congress MP from Idukki constituency has declared 204 criminal cases against himself. These include cases including cases related to committing culpable homicide, house trespass, robbery, criminal intimidation etc says a report by the Association for Democratic Reforms.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X