• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊಡಗಿನ ಚೇಲಾವರದ ಜಲಧಾರೆಯನ್ನರಸುತ್ತಾ...

|

ಅದು ಮಳೆಗಾಲದ ದಿನವಾಗಿದ್ದರೂ ವರುಣ ಒಂದಷ್ಟು ಬಿಡುವು ನೀಡಿದ್ದ. ಹೀಗಾಗಿ ಮೋಡಗಳ ನಡುವೆ ಆಗೊಮ್ಮೆ ಈಗೊಮ್ಮೆ ಇಣುಕಿ ರವಿಯೂ ತುಂಟ ನೋಟ ಬೀರುತ್ತಿದ್ದನು.

ವರುಣನ ಮುನಿಸಿನಲ್ಲೂ ಇರ್ಪು ಜಲಧಾರೆಯ ಥಕಥೈ...

ಚೇಲಾವರ ಜಲಪಾತ ನೋಡಲು ಇದೇ ಸೂಕ್ತ ಕಾಲ ಎಂಬುದು ಮನದಟ್ಟಾಗಿತ್ತು. ಹೀಗಾಗಿ ನಾವು ಬಿಡುವು ಮಾಡಿಕೊಂಡು ಜಲಪಾತದತ್ತ ಮುಖ ಮಾಡಿಬಿಟ್ಟೆವು. ಇಷ್ಟಕ್ಕೂ ಮಳೆಗಾಲದಲ್ಲಿ ಜಲಪಾತಗಳನ್ನು ನೋಡುವುದೆಂದೆರೆ ಅದರ ಮಜಾವೇ ಬೇರೆ.

 ಚೇಲಾವರದತ್ತ ನಮ್ಮ ಪಯಣ

ಚೇಲಾವರದತ್ತ ನಮ್ಮ ಪಯಣ

ಕೊಡಗಿನ ನಾಪೋಕ್ಲು ಬಳಿಯಿರುವ ಚೇಲಾವರ ಜಲಪಾತ ನಮ್ಮ ಕಣ್ಣ ಮುಂದಿತ್ತು. ಹೀಗಾಗಿಯೇ ಅದರತ್ತ ತೆರಳುವ ಮನಸ್ಸು ಮಾಡಿದ್ದೆವು. ಸುಮಾರು ಮೂವತ್ತೆರಡು ಕಿ.ಮೀ. ದೂರವನ್ನು ಮಡಿಕೇರಿಯಿಂದ ಹೊರಟ ಖಾಸಗಿ ಬಸ್‌ನಲ್ಲೇ ಪ್ರಯಾಣಿಸಿ ಚೆಯ್ಯಂಡಾಣೆಯಲ್ಲಿಳಿದುಕೊಂಡು ಅಲ್ಲಿಂದ ಎರಡು ಕಿ.ಮೀ. ದೂರವಿರುವ ಚೇಲಾವರದತ್ತ ಹೆಜ್ಜೆ ಹಾಕತೊಡಗಿದೆವು. ಅಂಕುಡೊಂಕಾದ ರಸ್ತೆಯಲ್ಲಿ ನಡೆಯುತ್ತಾ ಸುತ್ತಲೂ ಕಾಣಸಿಗುವ ರಮಣೀಯ ದೃಶ್ಯಗಳನ್ನು ನೋಡುತ್ತಾ ಸಾಗಿದೆವು.

 ಕಾನನದ ನಡುವಿನ ತೊಂಗ್ ಕೊಲ್ಲಿ

ಕಾನನದ ನಡುವಿನ ತೊಂಗ್ ಕೊಲ್ಲಿ

ಸುತ್ತಲೂ ಪರ್ವತ ಶ್ರೇಣಿಗನ್ನೊಳಗೊಂಡ ದಟ್ಟಕಾನನದ ತೂಂಗ್ ‌ಕೊಲ್ಲಿ ತಲುಪಿದಾಗ ತುಸು ಸಮಾಧಾನವಾಗಿತ್ತು. ಇಲ್ಲಿಂದ ಎಡಬದಿಯ ಕಣಿವೆಯಲ್ಲಿ ಹೆಜ್ಜೆಹಾಕಿದಾಗ ಜಲಪಾತದ ಭೋರ್ಗರೆತ ಕಿವಿಗೆ ಬಡಿಯತೊಡಗಿತ್ತು. ಮುಂದೆ ಕಪ್ಪಗಿನ ಹೆಬ್ಬಂಡೆಯೊಂದರ ಮೇಲಿನಿಂದ ಧುಮುಕುವ ಜಲಧಾರೆ ಕಂಡಾಗ ಎಲ್ಲಿಲ್ಲದ ಸಂತೋಷವಾಗಿತ್ತು. ಇಲ್ಲಿನ ಕಾಫಿ ತೋಟದ ರಸ್ತೆಯಲ್ಲಿ ಸಾಗಿದ ನಾವು ಜಲಧಾರೆಯ ಸನಿಹಕ್ಕೆ ತಲುಪಿದ್ದೆವು.

ವೀಕೆಂಡ್ ಗೆ ಶಿವನಸಮುದ್ರದ ಗಗನಚುಕ್ಕಿ ಜಲಪಾತೋತ್ಸವದಲ್ಲಿ ಸಾಹಸ ಕ್ರೀಡೆ

 ಹಾಲು ಸುರಿದಂತೆ ಕಾಣುವ ಜಲಧಾರೆ

ಹಾಲು ಸುರಿದಂತೆ ಕಾಣುವ ಜಲಧಾರೆ

ತಡಿಯಂಡಮೋಳ್ ಪರ್ವತ ಶ್ರೇಣಿಯ ಚೋಮನ ಕುಂದುವಿನಿಂದ ಹರಿದು ಬರುವ ಸೋಮನ ನದಿಯಿಂದ ನಿರ್ಮಿತವಾಗಿರುವ ಜಲಧಾರೆಯನ್ನು ಏಮೆಪಾರೆ ಜಲಪಾತ ಎಂದು ಸ್ಥಳೀಯರು ಕರೆಯುತ್ತಾರೆ. ಬಹುಶಃ ಇಲ್ಲಿನ ಹೆಬ್ಬಂಡೆ ಮೇಲ್ನೋಟಕ್ಕೆ ಆಮೆಯಂತೆ ಕಂಡುಬರುವುದರಿಂದ ಒಟ್ಟಾಗಿ ಕೊಡವ ಭಾಷೆಯಲ್ಲಿ ಏಮೆಪಾರೆ ಎಂದು ಕರೆದಿರಬಹುದೇನೋ? ಹೆಬ್ಬಂಡೆ ಮೇಲೆ ಸುಮಾರು ನೂರು ಅಡಿಯಷ್ಟು ಎತ್ತರದಿಂದ ಹಾಲು ಸುರಿದಂತೆ ಕಾಣುವ ಈ ಜಲಧಾರೆಯನ್ನು ವೀಕ್ಷಿಸುವುದೇ ಮಜಾ.

ನೋಡುತ್ತಾ ನಿಂತವರಿಗೆ ಇಲ್ಲಿ ಮತ್ತೊಂದು ಜಲಪಾತವಿದೆ ಎಂದು ತಿಳಿದಾಗ ಅಚ್ಚರಿಯಾಗಿತ್ತು. ಅದನ್ನು ನೋಡುವ ತವಕದಿಂದ ಎಡಬದಿಯ ರಸ್ತೆಯಲ್ಲಿ ನಡೆಯತೊಡಗಿದೆವು. ಅಲ್ಲಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದವರೊಂದಿಗೆ ಅಪ್ಪಣೆ ಪಡೆದುಕೊಂಡು ತೋಟದೊಳಗೆ ಸಾಗಿದ್ದೆವು.

 ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂಥ ಜಲಪಾತ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂಥ ಜಲಪಾತ

ತೋಟದಲ್ಲಿದ್ದ ಜಿಗಣೆಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತಿದ್ದರೆ ಅವುಗಳನ್ನು ತಪ್ಪಿಸಿಕೊಂಡು ನಡೆಯುವುದು ತ್ರಾಸ ಎನಿಸುತ್ತಿತ್ತು. ಅಂತೂ ಸುಲಭವಾಗಿಯೇ ಜಲಪಾತದತ್ತ ತಲುಪಿದ್ದೆವು. ಇಗ್ಗುತಪ್ಪ ಬೆಟ್ಟದಿಂದ ಹರಿದು ಬರುವ ಬಲಿಯಟ್ರ ನದಿಯಿಂದ ನಿರ್ಮಿತವಾಗಿರುವ ಈ ಮಿನಿ ಜಲಪಾತ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವಂತಹದ್ದು. ಸುಮಾರು ಐವತ್ತು ಅಡಿಯಷ್ಟು ಎತ್ತರದಿಂದ ಧುಮುಕಿ ಮೂರು ಹಂತಗಳಲ್ಲಿ ತನ್ನ ಬೆಡಗನ್ನು ಪ್ರದರ್ಶಿಸುತ್ತಾ ನೋಡುಗರ ಮನಸೆಳೆಯುತ್ತದೆ. ಜಲಧಾರೆಯ ಸೊಬಗನ್ನು ಆಸ್ವಾದಿಸುತ್ತಾ ಕುಳಿತವರಿಗೆ ಸಮಯ ಸರಿದಿದ್ದೇ ತಿಳಿಯಲಿಲ್ಲ. ಜಲಧಾರೆಯ ಚಿತ್ರಗಳನ್ನು ಸೆರೆಹಿಡಿಕೊಂಡು, ಅಲ್ಲಿ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ಮನೆ ಕಡೆಗೆ ಹೊರಟೆವು.

English summary
Visiting to waterfalls is different experience. Madikeri's Chelavara waterfall near Napoklu, Kodagu is also a beautiful experience,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X