ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಹೊರಡುವ 5 ನಿಮಿಷ ಮುನ್ನವೂ ಟಿಕೆಟ್ ಲಭ್ಯ: ನಿಮಗೆ ತಿಳಿದಿರಬೇಕಾದ ಸಂಗತಿಗಳು

|
Google Oneindia Kannada News

ನವದೆಹಲಿ, ಅಕ್ಟೋಬರ್ 9: ಭಾರತೀಯ ರೈಲ್ವೆಯು ರೈಲು ಸಂಚಾರ ವ್ಯವಸ್ಥೆಯನ್ನು ಕೊರೊನಾ ವೈರಸ್ ಪೂರ್ವ ಸ್ಥಿತಿಗೆ ಮರಳಿ ತರುವ ಪ್ರಯತ್ನ ನಡೆಸುತ್ತಿದ್ದು, ಅಕ್ಟೋಬರ್ 10ರಿಂದ ಅನ್ವಯವಾಗುವಂತೆ ಕೆಲವು ಬದಲಾವಣೆಗಳನ್ನು ತರುತ್ತಿದೆ.

ಶನಿವಾರದಿಂದ ರೈಲು ನಿಲ್ದಾಣದಿಂದ ಹೊರಡುವ ಐದು ನಿಮಿಷ ಮುನ್ನ ರೈಲ್ವೆ ಸೀಟುಗಳು ಲಭ್ಯವಾಗಲಿದೆ. ಹೊರಡುವ ಸಮಯದ ಅರ್ಧ ಗಂಟೆ ಮುಂಚೆ ಎರಡನೆಯ ಟಿಕೆಟ್ ಮೀಸಲು ಪಟ್ಟಿಯನ್ನು ಸಿದ್ಧಪಡಿಸುವ ಕೋವಿಡ್ ಪೂರ್ವ ವ್ಯವಸ್ಥೆಯನ್ನು ಮರಳಿ ತರಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಏರ್‌ಪೋರ್ಟ್ ಮಾದರಿಯಲ್ಲಿ ರೈಲು ನಿಲ್ದಾಣಗಳಲ್ಲೂ ಅಭಿವೃದ್ಧಿ ಶುಲ್ಕಏರ್‌ಪೋರ್ಟ್ ಮಾದರಿಯಲ್ಲಿ ರೈಲು ನಿಲ್ದಾಣಗಳಲ್ಲೂ ಅಭಿವೃದ್ಧಿ ಶುಲ್ಕ

ಕೋವಿಡ್ ಪಿಡುಗು ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಹಿಂದೆ ಇದ್ದ ದೈನಂದಿನ ಪ್ರಯಾಣಿಕ ಟ್ರೈನುಗಳ ಸೇವೆ ಇನ್ನೂ ಆರಂಭವಾಗಿಲ್ಲ. ಆದರೆ ಕೋವಿಡ್ ಪೂರ್ವ ಇದ್ದ ಪದ್ಧತಿಗಳನ್ನು ವಾಪಸ್ ತರುವುದರತ್ತ ಭಾರತೀಯ ರೈಲ್ವೆ ಗಮನ ಹರಿಸಿದ್ದು, ಜತೆಗೆ ವಿಶೇಷ ರೈಲುಗಳ ಸಂಚಾರ ಸಹ ನಡೆಸುತ್ತಿದೆ.

ಹಬ್ಬಕ್ಕೆ ಬಂಪರ್: ಭಾರತೀಯ ರೈಲ್ವೆಯಿಂದ 200 ಹೊಸ ರೈಲು ಸಂಚಾರಹಬ್ಬಕ್ಕೆ ಬಂಪರ್: ಭಾರತೀಯ ರೈಲ್ವೆಯಿಂದ 200 ಹೊಸ ರೈಲು ಸಂಚಾರ

ಈ ನಡುವೆ ಅಮೇಜಾನ್ ಇಂಡಿಯಾ ಐಆರ್‌ಸಿಟಿಸಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಪ್ರಯಾಣಿಕ ರೈಲುಗಳ ಟಿಕೆಟ್ ಬುಕಿಂಗ್ ಅವಕಾಶ ನೀಡಲಿದೆ. ಸದ್ಯಕ್ಕೆ ಅಮೇಜಾನ್‌ನ ಮೊಬೈಲ್ ವೆಬ್‌ಸೈಟ್ ಮತ್ತು ಆಂಡ್ರಾಯ್ಡ್ ಆಪ್‌ಗಳಲ್ಲಿ ಮಾತ್ರ ಬುಕಿಂಗ್ ಸೌಲಭ್ಯ ಲಭ್ಯವಾಗುತ್ತಿದೆ. ಒನ್ ಕ್ಲಿಕ್ ಪಾವತಿ, ಕ್ಯಾಶ್ ಬ್ಯಾಕ್ ಆಫರ್ ಮುಂತಾದ ಸೌಲಭ್ಯಗಳನ್ನು ನೀಡಲಿದ್ದು, ಹೆಚ್ಚುವರಿ ಸೇವಾ ಶುಲ್ಕ ಇರುವುದಿಲ್ಲ ಎಂದು ತಿಳಿಸಿದೆ. ಮುಂದೆ ಓದಿ.

30 ನಿಮಿಷ ಮುಂಚೆ ಚಾರ್ಟ್ ಸಿದ್ಧ

30 ನಿಮಿಷ ಮುಂಚೆ ಚಾರ್ಟ್ ಸಿದ್ಧ

ನಿಲ್ದಾಣದಿಂದ ರೈಲುಗಳು ಹೊರಡುವ ನಿಗದಿತ ಸಮಯದ 30 ನಿಮಿಷ ಮುಂಚೆ ಎರಡನೆಯ ಮೀಸಲು ಚಾರ್ಟ್‌ಅನ್ನು ಸಿದ್ಧಪಡಿಸಲಾಗುತ್ತದೆ. ಇದು ಕೋವಿಡ್ ಸಮಸ್ಯೆ ಶುರುವಾಗುವ ಮುನ್ನ ಇದ್ದ ಪದ್ಧತಿಯಾಗಿತ್ತು. ಆದರೆ ಭಾರತೀಯ ರೈಲ್ವೆಯು ಕೊರೊನಾ ವೈರಸ್ ಸೋಂಕಿನ ಪಿಡುಗಿನ ನಡುವೆಯೇ ವಿಶೇಷ ಪ್ರಯಾಣಿಕ ರೈಲುಗಳ ಓಡಾಟ ಆರಂಭಿಸಿದ್ದಾಗ ರೈಲು ಹೊರಡುವ ನಿಗದಿತ ಸಮಯದ 2 ಗಂಟೆ ಮುಂಚೆ ಸೀಟು ಕಾಯ್ದಿರಿಸುವ ಎರಡನೆಯ ಚಾರ್ಟ್‌ಅನ್ನು ಸಿದ್ಧಪಡಿಸಲಾಗುತ್ತಿತ್ತು.

30-5 ನಿಮಿಷದ ಅವಧಿ

30-5 ನಿಮಿಷದ ಅವಧಿ

ಎರಡನೆಯ ಮೀಸಲು ಪಟ್ಟಿ ಸಿದ್ಧಪಡಿಸುವವರೆಗೂ ಟ್ರೈನ್ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ. ಅಕ್ಟೋಬರ್ 10ರಿಂದ ಈ ಚಾರ್ಟ್‌ಗಳನ್ನು ರೈಲು ಹೊರಡುವ 30 ರಿಂದ 5 ನಿಮಿಷದ ನಡುವೆ ಸಿದ್ಧಪಡಿಸಲಾಗುತ್ತದೆ. ಹೀಗಾಗಿ ಪ್ರಯಾಣಿಕರು ಈ ಸಮಯದಲ್ಲಿ ಟಿಕೆಟ್ ಬುಕ್ ಮಾಡಬಹುದು.

ರೈಲ್ವೆ ಅಭಿವೃದ್ಧಿಗೆ ಪ್ರಯಾಣಿಕರಿಂದಲೇ ಬಳಕೆ ದರ ವಸೂಲಿ, ಟಿಕೆಟ್ ಬೆಲೆ ಏರಿಕೆ ಸಾಧ್ಯತೆರೈಲ್ವೆ ಅಭಿವೃದ್ಧಿಗೆ ಪ್ರಯಾಣಿಕರಿಂದಲೇ ಬಳಕೆ ದರ ವಸೂಲಿ, ಟಿಕೆಟ್ ಬೆಲೆ ಏರಿಕೆ ಸಾಧ್ಯತೆ

ಸೀಟು ಖಾಲಿಯಾದರೆ ಬುಕಿಂಗ್ ಅವಕಾಶ

ಸೀಟು ಖಾಲಿಯಾದರೆ ಬುಕಿಂಗ್ ಅವಕಾಶ

ಟಿಕೆಟ್ ಮೀಸಲಿನ ಮೊದಲ ಚಾರ್ಟ್ ರೈಲು ಹೊರಡುವ ನಿಗದಿತ ಸಮಯದ ಕನಿಷ್ಠ 4 ಗಂಟೆ ಮುಂಚೆ ಸಿದ್ಧವಾಗಲಿದೆ. ರದ್ದತಿಗಳ ಕಾರಣದಿಂದ ಸೀಟು ಖಾಲಿಯಾದರೆ ಪ್ರಯಾಣಿಕರು ಎರಡನೆಯ ಚಾರ್ಟ್ ಸಿದ್ಧವಾಗುವವರೆಗೂ ಪಿಆರ್‌ಎಸ್ ಕೌಂಟರ್‌ಗಳ ಮೂಲಕ ಮತ್ತು ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಬಹುದು.

ರದ್ದುಮಾಡಿದ ಟಿಕೆಟ್ ಹಣ ವಾಪಸ್

ರದ್ದುಮಾಡಿದ ಟಿಕೆಟ್ ಹಣ ವಾಪಸ್

ಈ ಅವಧಿಯಲ್ಲಿ ಟಿಕೆಟ್‌ಗಳನ್ನು ರದ್ದು ಮಾಡಲು ಸಹ ಅವಕಾಶವಿದೆ. ಮರು ಪಾವತಿ ನಿಯಮಗಳ ಅಡಿಯಲ್ಲಿ ಟಿಕೆಟ್ ರದ್ದು ಮಾಡಿ, ಪಾವತಿಸಿದ ಹಣ ಮರಳಿ ಪಡೆಯಲು ಅವಕಾಶವಿದೆ.

ಆನ್‌ಲೈನ್ ಬುಕಿಂಗ್

ಆನ್‌ಲೈನ್ ಬುಕಿಂಗ್

ಕೋವಿಡ್ ಕಾರಣದಿಂದ ರೈಲ್ವೆ ಟಿಕೆಟ್ ಆನ್‌ಲೈನ್‌ನಲ್ಲಿ ಮಾತ್ರವೇ ಲಭ್ಯವಾಗುವಂತೆ ಸಮಯಗಳನ್ನು ಬದಲಾವಣೆ ಮಾಡಲಾಗಿತ್ತು. ನಿಲ್ದಾಣಗಳಲ್ಲಿ ಗುಂಪುಗೂಡುವಿಕೆಯನ್ನು ತಡೆಯಲು ಮತ್ತು ತೀರಾ ಅಗತ್ಯ ಸಂದರ್ಭದ ಹೊರತಾಗಿ ಜನರು ಪ್ರಯಾಣಿಸುವುದನ್ನು ತಡೆಯುವ ಗುರಿಯೊಂದಿಗೆ ರೈಲ್ವೆ ಇಲಾಖೆ ಈ ಕ್ರಮ ತೆಗೆದುಕೊಂಡಿತ್ತು.

ವಿಶೇಷ ರೈಲುಗಳ ಘೋಷಣೆ

ವಿಶೇಷ ರೈಲುಗಳ ಘೋಷಣೆ

ಕಳೆದ ಆರು ತಿಂಗಳಲ್ಲಿ ಪರಿಸ್ಥಿತಿ ಬಹಳ ಬದಲಾಗಿದೆ. ಲಾಕ್‌ಡೌನ್ ಮಾಡುವ ಬದಲು ಕೇಂದ್ರವು ಎಲ್ಲ ವಿಭಾಗಗಳನ್ನೂ ಮತ್ತೆ ತೆರೆಯುವ ಕೆಲಸ ನಡೆಸುತ್ತಿದೆ. ರೈಲ್ವೇ ಕೂಡ ಅನೇಕ ಹೊಸ ರೈಲುಗಳ ಸಂಚಾರ ಆರಂಭಿಸುತ್ತಿದೆ. ಹಬ್ಬದ ಅವಧಿ ಸಮೀಪಿಸುತ್ತಿದೆ. ಹೀಗಾಗಿ ರೈಲ್ವೆಯು ಈಗಾಗಲೇ 39 ಹೊಸ ವಿಶೇಷ ಜೋಡಿ ರೈಲುಗಳ ಸಂಚಾರವನ್ನು ಘೋಷಿಸಿದೆ. ವಿಶೇಷ ರೈಲುಗಳ ಸಂಚಾರದ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಆದರೆ ಅವು ಅಕ್ಟೋಬರ್ 15 ರಿಂದ ನವೆಂಬರ್ 30ರವರೆಗೆ ಓಡಾಟ ನಡೆಸಲಿವೆ.

English summary
Indian Railways has decided to restore the pre covid system of train booking. Train seats will be available even 5 minutes befire departure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X