• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಟ್ರಾಯ್ ನೀತಿ ಜಾರಿ, ಫೆ.01 ರಿಂದ ಟಿವಿ, ಡಿಟಿಎಚ್ ಬಂದ್ ಆಗುತ್ತಾ?

|

ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಫೆಬ್ರವರಿ 01ರಿಂದ ಹೊಸ ಕೇಬಲ್ ನೀತಿ ಜಾರಿಗೆ ತಂದಿದೆ. ಹೊಸ ನೀತಿಯ ಪ್ರಕಾರ, ಜನವರಿ 31ರ ವರೆಗೆ ನಿಮ್ಮ ಆಯ್ಕೆಯ ಚಾನೆಲ್ ಪ್ಯಾಕೇಜ್ ಅಳವಡಿಸಿಕೊಳ್ಳಲು ಕಾಲಾವಕಾಶ ನೀಡಲಾಗಿತ್ತು.

ಕೇಬಲ್ ಟಿವಿ ಮತ್ತು ಡಿಟಿಹೆಚ್ ದರದ ಮಾಹಿತಿಗಳನ್ನು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಫೆ.1ರ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಟ್ರಾಯ್ ಸ್ಪಷ್ಟಪಡಿಸಿತ್ತು.

ಡಿಟಿಎಚ್ ಸೇವಾ ಸಂಸ್ಥೆಗಲಾದ ಏರ್ ಟೆಲ್, ಡಿಶ್ ಟಿವಿ, ಹಾಥ್ವೇ, ಸಿಟಿ ಕೇಬಲ್ ಹಾಗೂ ಸ್ಥಳೀಯ ಕೇಬಲ್ ಆಪರೇಟರ್ ಗಳು ತಮ್ಮ ದರ ಪಟ್ಟಿಯನ್ನು ಈಗಾಗಲೇ ಚಂದಾದರರಿಗೆ ಪ್ರದರ್ಶಿಸತೊಡಗಿವೆ. ಪ್ರಸಾರಕಾರರು, ಡಿಟಿಎಚ್ ಆಪರೇಟರ್ ಗಳು ಮತ್ತು Multi System Operators(ಎಂಎಸ್ಒ)ಗಳ ಜತೆ ಟ್ರಾಯ್ ಅಧಿಕಾರಿಗಳು ಮಹತ್ವದ ಸಭೆ ನಡೆಸಿದ ಬಳಿಕ ದರಗಳನ್ನು ನಿಗದಿ ಮಾಡಲಾಗಿದೆ. ದರ ಪಟ್ಟಿ ಬಗ್ಗೆ ಯಾವುದಾದರೂ ಗೊಂದಲಗಳಿದ್ದರೆ 011-23237922 (ಎ.ಕೆ. ಭಾರಧ್ವಾಜ್​) ಮತ್ತು 011-23220209 (ಅರವಿಂದ್​ ಕುಮಾರ್​) ಇಲ್ಲವೇ ಇ- ಮೇಲ್​ advbcs-2@trai.gov.in ಅಥವಾ arvind@gov.in. ಗೆ ಸಂಪರ್ಕಿಸಬಹುದು

ಟ್ರಾಯ್ ನಲ್ಲಿ ಟಿವಿ ವಾಹಿನಿ ದರ ಪಟ್ಟಿ, ಕನ್ನಡ ಚಾನೆಲ್ ಆಯ್ಕೆ ಹೇಗೆ?

ಫೆ.1ರ ಗಡುವು ಮುಗಿದ ನಂತರ ಉಚಿತ ಚಾನೆಲ್ ಗಳನ್ನು ಹೊರತುಪಡಿಸಿ, ಇತರೆ ಚಾನೆಲ್ ಗಳು ಲಭ್ಯವಾಗುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಹೀಗಾಗಿ, ಫೆ.1ರಂದು ಟಿವಿ, ಡಿಟಿಎಚ್ ಬಂದ್ ಆಗುವ ನಿರೀಕ್ಷೆಯಿತ್ತು. ಆದರೆ, ಹಾಗೇನು ಆಗಿಲ್ಲ. ಎಂದಿನಂತೆ ಎಲ್ಲಾ ಚಾನೆಲ್ ಗಳು ಪ್ರಸಾರವಾಗುತ್ತಿವೆ. ಮುಂದೇನು?

ತಿಂಗಳ ಪ್ಯಾಕೇಜ್ :

ತಿಂಗಳ ಪ್ಯಾಕೇಜ್ :

ಇಲ್ಲಿ ತನಕ ಶೇಕಡಾ 70ರಷ್ಟು ಮಂದಿ ನೂತನ ವ್ಯವಸ್ಥೆಗೆ ಬದಲಾಗಿದ್ದಾರೆ ಎಂಬ ಮಾಹಿತಿಯಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಹೊಸ ವ್ಯವಸ್ಥೆಗೆ ಬದಲಾಗುವವರೆಗೂ ಇನ್ನೂ ಕೆಲ ದಿನಗಳ ಕಾಲ ಚಾನೆಲ್ ಗಳ ಸೇವೆಯನ್ನು ಮುಂದುವರೆಸುವ ನಿರೀಕ್ಷೆಯಿದೆ. ತಿಂಗಳ ಪ್ಯಾಕೇಜ್ ಹಾಕಿಸಿಕೊಂಡಿರುವ ಕೇಬಲ್ ಟಿವಿ ಹಾಗೂ ಡಿಟಿಎಚ್ ಗ್ರಾಹಕರು ತಿಂಗಳ ಅಂತ್ಯದ ತನಕ ಅಥವಾ ಮುಂದಿನ ಅಪ್ಡೇಟ್(ಹೊಸ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳುವ) ತನಕ ಎಂದಿನಂತೆ ಟಿವಿ ನೋಡುತ್ತಿರಬಹುದು.

ಏರ್ ಟೆಲ್ ಡಿಜಿಟಲ್ ಟಿವಿಯಲ್ಲಿ ಚಾನೆಲ್ ಆಯ್ಕೆ ವಿಧಾನ ಹೇಗೆ?

ಗ್ರಾಹಕರಿಗೆ ಹೇಗೆ ಗೊತ್ತಾಗಲಿದೆ

ಗ್ರಾಹಕರಿಗೆ ಹೇಗೆ ಗೊತ್ತಾಗಲಿದೆ

ಟ್ರಾಯ್ ನಿಯಮ, ಚಾನೆಲ್ ಆಯ್ಕೆ ಹಾಗೂ ಕೇಬಲ್ ಆಪರೇಟರ್, ಡಿಟಿಎಚ್ ಕಂಪನಿಗಳ ಅಫರ್ ಬಗ್ಗೆ ಚಾನೆಲ್ ನಂಬರ್ 999ರಲ್ಲಿ ಸಂಪೂರ್ಣ ಮಾಹಿತಿ ನೀಡಲಾಗುತ್ತಿದೆ. ಗ್ರಾಹಕರಿಗೆ ಎಸ್ಎಂಎಸ್ ಮೂಲಕ, ಪ್ರಾತ್ಯಕ್ಷಿಕೆ ವಿಡಿಯೋ, ಪಾಂಪ್ಲೆಟ್ ಮೂಲಕ ಕೂಡಾ ಮಾಹಿತಿ ನೀಡಲಾಗುತ್ತಿದೆ. ಈಗ ಹೊಸ ನಿಯಮದ ಪ್ರಕಾರ ಒಂದು ಚಾನೆಲ್ ಅಥವಾ ಚಾನೆಲ್ ಗಳ ಸಮೂಹಗಳಿರುವ ಪ್ಯಾಕೆಜ್ ಹಾಕಿಸಿಕೊಳ್ಳಬಹುದು.

ದೀರ್ಘಾವಧಿ ಪ್ಯಾಕೇಜ್ ವುಳ್ಳವರಿಗೆ ಕಷ್ಟ

ದೀರ್ಘಾವಧಿ ಪ್ಯಾಕೇಜ್ ವುಳ್ಳವರಿಗೆ ಕಷ್ಟ

ಪ್ರೀಪೇಯ್ಡ್ ಗ್ರಾಹಕರು ಹಾಗೂ ದೀರ್ಘಾವಧಿ (3, 6 ಹಾಗೂ 12 ತಿಂಗಳು) ಪ್ಯಾಕೇಜ್ ಹೊಂದಿರುವವರು ಏನು ಮಾಡಬೇಕು ಎಂಬ ಗೊಂದಲ ಮುಂದುವರೆದಿದೆ. ಡಿಟಿಎಚ್ ಆಪರೇಟರ್ ಗಳ ಜತೆ ಟ್ರಾಯ್ ಮಾತುಕತೆ ಮುಂದುವರೆದಿದ್ದು, ಈ ಬಗ್ಗೆ ಪ್ರಕಟಣೆ ಹೊರಡಿಸುವ ಸಾಧ್ಯತೆಯಿದೆ. ಯಾವುದಕ್ಕೂ ಟ್ರಾಯ್ ವೆಬ್ ಸೈಟ್ ನೋಡಿ ಅಥವಾ ನಿಮ್ಮ ಕೇಬಲ್ ಅಥವಾ ಡಿಟಿಎಚ್ ಆಪರೇಟರ್ ಸಂಪರ್ಕಿಸಿ ನಿಮ್ಮ ನೆಚ್ಚಿನ ಪ್ಯಾಕೇಜ್ ಹಾಕಿಸಿಕೊಳ್ಳಿ. ಹಳೆ ಪ್ಯಾಕೇಜ್ ಬದಲಾಯಿಸಿಕೊಳ್ಳಲು ಅವಕಾಶವನ್ನು ಕೆಲವು ಸಂಸ್ಥೆಗಳು ನೀಡಿವೆ.

ಗೊಂದಲ ಏನೇ ಇರಲಿ, 100 ಚಾನೆಲ್ ನೋಡಬಹುದು

ಗೊಂದಲ ಏನೇ ಇರಲಿ, 100 ಚಾನೆಲ್ ನೋಡಬಹುದು

ನೂರಾರು ಚಾನೆಲ್ ಉಚಿತವಿದೆ: ದೂರದರ್ಶನದ ಉಚಿತ 26 ಚಾನೆಲ್ ಸೇರಿದಂತೆ 100 ಚಾನೆಲ್(74 Free to Air) ಗಳನ್ನು ವೀಕ್ಷಿಸಬಹುದು. ಇದಕ್ಕಾಗಿ 130 ರೂ. ಶುಲ್ಕ ನಿಗದಿಪಡಿಸಲಾಗಿದ್ದು, ಇದರೊಂದಿಗೆ ಶೇ. 18 ರಷ್ಟು ಜಿ.ಎಸ್.ಟಿ. ಪಾವತಿಸಿ 154 ರೂ.ಗೆ 100 ಚಾನಲ್ ಗಳನ್ನು ಗ್ರಾಹಕರು ವೀಕ್ಷಿಸಬಹುದಾಗಿದೆ. HD ಚಾನೆಲ್ ಹೊರತು ಪಡಿಸಿ ಎಸ್ ಡಿ ಚಾನೆಲ್ ಗಳ 100ರ ಪ್ಯಾಕ್ ಗೆ 184ರು ಗಿಂತ ಅಧಿಕ ನೀಡಬೇಡಿ ಎಂದು ಟ್ರಾಯ್ ಸೂಚಿಸಿದೆ. ಪ್ರತಿ 25 ಉಚಿತ ಚಾನೆಲ್ ಗಳಿಗೆ ಜಿ.ಎಸ್.ಟಿ. ಸೇರಿ 25 ರೂ.ಪಾವತಿಸಬೇಕಿದೆ. ಪ್ರತಿಯೊಂದು ಚಾನೆಲ್ ಗೂ 1 ಪೈಸೆಯಿಂದ 19 ರೂ.ರವರೆಗೆ ದರ ನಿಗದಿಯಾಗಿದೆ ಎಂದು ಎಂದು ಭಾರತೀಯ ಟೆಲಿಕಾಂ ನಿಯಂತ್ರಣ ಸಂಸ್ಥೆ(ಟ್ರಾಯ್) ತಿಳಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
TRAI new rules for DTH and cable operators: Subscribers of DTH including Airtel Digital TV, Tata Sky, and Dish TV will need to select channels and packs before January 31. But will there be a blackout from February 1
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more