ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈರಲ್ ವಿಡಿಯೋ: ಹುಲಿ ರಸ್ತೆ ದಾಟಲು ವಾಹನ ನಿಲ್ಲಿಸಿದ ಪೊಲೀಸರು

|
Google Oneindia Kannada News

ಪ್ರಕೃತಿಯಲ್ಲಿ ಎಲ್ಲಾ ಜೀವಿಗಳಿಗೂ ಬದುಕಲು ಸಮಾನವಾದ ಹಕ್ಕಿದೆ. ಮನುಷ್ಯನನ್ನು ಹೊರತು ಪಡಿಸಿ ಇನ್ಯಾವ ಪ್ರಾಣಿಗಳೂ ಕೂಡ ಪರಿಸರವನ್ನು ಹಾಳು ಮಾಡುವುದಿಲ್ಲ. ಆದರೆ ಮನುಷ್ಯ ಮಾತ್ರ ಅಭಿವೃದ್ಧಿ ಅನ್ನುವ ಭ್ರಮೆಯಲ್ಲಿ ಪರಿಸರವನ್ನು ಹಾಳು ಮಾಡುತ್ತಲೇ ಇದ್ದಾನೆ. ಅರಣ್ಯದ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕಾಡು ಕಡಿಮೆಯಾದಂತೆ ಪ್ರಾಣಿಗಳು ನಗರಕ್ಕೆ ನುಗ್ಗಿ ದಾಂಧಲೆ ಮಾಡುವ ಪ್ರಕರಣಗಳು ವರದಿಯಾಗುತ್ತವೆ.

ನಾವು ಪ್ರಾಣಿಗಳ ಅಸ್ತಿತ್ವವನ್ನು ಗೌರವಿಸಬೇಕು, ಅವುಗಳ ಜೀವನಕ್ರಮಕ್ಕೆ ಹಾನಿ ಮಾಡಬಾರದು. ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹುಲಿಯೊಂದು ರಸ್ತೆ ದಾಟಲು ಸಹಾಯವಾಗುವಂತೆ ಟ್ರಾಫಿಕ್ ಪೊಲೀಸ್ ಒಬ್ಬರು ವಾಹನಗಳನ್ನು ತಡೆದಿದ್ದಾರೆ. ಟ್ರಾಫಿಕ್ ಪೊಲೀಸ್‌ ಕಾಳಜಿಗೆ ಈಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಕುದುರೆ ಸವಾರಿ ಮಾಡಿದ ಶ್ವಾನ: ಐಸ್‌ ಕ್ರೀಮ್ ಪೋಸ್ಟರ್ ನೆಕ್ಕಿದ ಬಡ ನಾಯಿಕುದುರೆ ಸವಾರಿ ಮಾಡಿದ ಶ್ವಾನ: ಐಸ್‌ ಕ್ರೀಮ್ ಪೋಸ್ಟರ್ ನೆಕ್ಕಿದ ಬಡ ನಾಯಿ

ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಹಂಚಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿ ಮತ್ತು ಅಲ್ಲಿ ಶಾಂತವಾಗಿದ್ದ ಜನರ ವರ್ತನೆಯನ್ನು ಅವರು ಶ್ಲಾಘಿಸಿದ್ದಾರೆ. "ಹುಲಿಗೆ ಮಾತ್ರ ಹಸಿರು ಸಂಕೇತ. ಈ ಸುಂದರ ಜನರು. ಅಜ್ಞಾತ ಸ್ಥಳ." ಎಂದು ವಿಡಿಯೋ ಜೊತೆ ಬರೆದಿದ್ದಾರೆ. ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಘಟನೆ ನಡೆದ ಸ್ಥಳದ ತಿಳಿದಿರಲಿಲ್ಲ, ಆದರೆ ಕೆಲವು ಬಳಕೆದಾರರು ಮಹಾರಾಷ್ಟ್ರದ ಚಂದ್ರಾಪುರದಲ್ಲಿ ಈ ಘಟನೆ ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.

ನೆಟ್ಟಿಗರಿಂದ ಪ್ರಶಂಸೆ; ಟ್ರಾಫಿಕ್ ಪೊಲೀಸರು ರಸ್ತೆಯ ಎರಡೂ ಬದಿಗಳಲ್ಲಿ ಪ್ರಯಾಣಿಕರನ್ನು ನಿಲ್ಲಿಸಿ, ಹುಲಿ ರಸ್ತೆ ದಾಟಲು ಅವಕಾಶ ಮಾಡಿಕೊಟ್ಟಿದ್ದಾರೆ. ಹುಲಿ ರಸ್ತೆ ದಾಟುವ ವೇಳೆ ಶಾಂತವಾಗಿರುವಂತೆ ಜನರಲ್ಲಿ ಮನವಿ ಮಾಡಿದ್ದಾರೆ. ಜನರು ವಾಹನಗಳಿಂದ ಹೊರಬಂದು ತಮ್ಮ ಫೋನ್‌ಗಳಲ್ಲಿ ದೃಶ್ಯದ ವೀಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಾರೆ. ಟ್ರಾಫಿಕ್ ಪೋಲೀಸ್ ಜನರಲ್ಲಿ ಶಾಂತವಾಗಿರುವಂತೆ ಮತ್ತು ಪ್ರಾಣಿಗಳಿಗೆ ಗಾಬರಿಯಾಗುವಂತೆ ವರ್ತಿಸಬೇಡಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ರಸ್ತೆ ದಾಟುತ್ತಿರುವ ಹುಲಿ ಶಾಂತವಾಗಿತ್ತು ಅದು ಕಾಡಿಗೆ ಹೋಗುವವರೆಗೂ ವಾಹನ ಸವಾರರು ತಾಳ್ಮೆಯಿಂದ ಕಾಯುತ್ತಿದ್ದರು.

Traffic Police Stop Vehicles To Help Tiger Cross The Road In Maharashtra

ಟ್ವಿಟರ್ ನಲ್ಲಿ ಹಂಚಿಕೊಂಡ ವಿಡಿಯೋ 1,88,900 ಬಾರಿ ವೀಕ್ಷಣೆಗೊಳಪಟ್ಟಿದೆ. 8700ಕ್ಕೂ ಅಧಿಕ ಜನ ಇದಕ್ಕೆ ಲೈಕ್ ಮಾಡಿದ್ದಾರೆ. ಸಾಕಷ್ಟು ಟ್ವಿಟರ್ ಬಳಕೆದಾರರು ಅಲ್ಲಿದ್ದ ಪೊಲೀಸರು ಮತ್ತು ಸಾರ್ವಜನಿಕರ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿಡಿಯೋ: ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯ ಮೇಲೆ ಹತ್ತಿದ ಗೂಳಿವಿಡಿಯೋ: ನಾಲ್ಕು ಅಂತಸ್ತಿನ ಕಟ್ಟಡದ ಮೇಲ್ಛಾವಣಿಯ ಮೇಲೆ ಹತ್ತಿದ ಗೂಳಿ

ಕಾಡು ಪ್ರಾಣಿಗಳು ಸುಲಭವಾಗಿ ಸಂಚರಿಸಲು ಹಸಿರು ಕಾರಿಡಾರ್ ಅಗತ್ಯವಿದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಹುಲಿ ಶಾಂತವಾಗಿ ರಸ್ತೆ ದಾಟಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿದ್ದಾರೆ.

English summary
Traffic police stop commuters at a signal on both sides of the road and ask them to remain calm as a tiger wants to cross the road. People stepped out of their vehicles to shoot videos of the sight on their phones. The incident took place at Maharashtra's Chandrapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X