ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳ ಗ್ರಹ ಮುಟ್ಟಲು ರೇಸ್; ಚೀನಾ, ಯುಎಇ, ಅಮೆರಿಕ ಕಾದಾಟ..!

|
Google Oneindia Kannada News

ಬ್ರಹ್ಮಾಂಡ ಅಂದುಕೊಂಡಷ್ಟು ಚಿಕ್ಕದಾಗಿಯೂ ಇಲ್ಲ, ಊಹೆಗೆ ನಿಲುಕದಷ್ಟು ದೊಡ್ಡದೂ ಅಲ್ಲ. ಸಂಶೋಧನೆ ಹಾಗೂ ಹುಡುಕಾಟ ಮಾತ್ರ ಮಾನವರ ಭವಿಷ್ಯ ನಿರ್ಧರಿಸಬಲ್ಲದು. ಅದರಲ್ಲೂ ಸದ್ಯದ ಪರಿಸ್ಥಿತಿಯಲ್ಲಿ ಹೊಸ ಗ್ರಹದ ಸಂಶೋಧನೆ ಅತ್ಯಗತ್ಯವಾಗಿದೆ. ಹೀಗಾಗಿಯೇ ಮಾನವ ಮಂಗಳ ಗ್ರಹದ ಹಿಂದೆ ಬಿದ್ದಿದ್ದಾನೆ.

ನಿಮಗೆ ಆಶ್ಚರ್ಯ ಎನಿಸಬಹುದು, ಫೆಬ್ರವರಿ ಒಂದೇ ತಿಂಗಳಲ್ಲಿ ಮಂಗಳನಿಗೆ ಸಂಬಂಧಪಟ್ಟ ಒಟ್ಟು 3 ಯೋಜನೆಗಳು ಅಂತಿಮ ಹಂತ ತಲುಪಲಿವೆ. ಈ ಪೈಕಿ ಯುಎಇ ನಿರ್ಮಿತ ಬಾಹ್ಯಾಕಾಶ ನೌಕೆ 'ಹೋಪ್' ನಿನ್ನೆಯಷ್ಟೇ ತನ್ನ ಗುರಿ ತಲುಪಿದೆ. ಮಂಗಳ ಗ್ರಹದ ಕಕ್ಷೆಗೆ ಯಶಸ್ವಿಯಾಗಿ ಸೇರ್ಪಡೆಗೊಂಡಿದೆ. ಇದಾದ ಬಳಿಕ ಚೀನಾ ಮತ್ತು ಅಮೆರಿಕದ ಮಹತ್ವದ ಯೋಜನೆಗಳು ಅಂತಿಮ ಘಟ್ಟ ತಲುಪಲಿವೆ.

ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!ಮಂಗಳ ಗ್ರಹದಲ್ಲಿ ನದಿ, ಕೆರೆ ಹಾಗೂ ಅಪಾರ ಪ್ರಮಾಣದ ಹಿಮ..!

ಇವೆಲ್ಲಾ ಕೆಲವೇ ದಿನಗಳ ಅಂತರದಲ್ಲಿ ನಡೆಯಲಿರುವ ಬಾಹ್ಯಾಕಾಶ ಕ್ಷೇತ್ರದ ಅಚ್ಚರಿಗಳು. ಅದರಲ್ಲೂ ನಾಸಾ ಯೋಜನೆ ಮಂಗಳ ಸಂಶೋಧನೆಯ ದಿಕ್ಕನ್ನೇ ಬದಲಿಸುವ ಗುರಿ ಹೊಂದಿರುವುದು ಜಗತ್ತಿನ ಗಮನ ಸೆಳೆಯುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಚಂದ್ರನ ಮೇಲೆ ಬಾವುಟ ಹಾರಿಸಿದ್ದ ಚೀನಾಗೆ ಮಂಗಳನ ಯೋಜನೆ ಕೂಡ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

 ಯುಎಇ ಬಗ್ಗೆ ‘ಹೋಪ್’..!

ಯುಎಇ ಬಗ್ಗೆ ‘ಹೋಪ್’..!

ತನ್ನ ತೈಲ ಸಂಪತ್ತಿನಿಂದ ಜಗತ್ತಿನ ಮನೆಮಾತಾಗಿರುವ ಯುಎಇ ಇತ್ತೀಚಿನ ವರ್ಷಗಳಲ್ಲಿ ಭವಿಷ್ಯದ ಬಗ್ಗೆಯೂ ಯೋಚಿಸುತ್ತಿದೆ. ಇದೇ ಕಾರಣಕ್ಕೆ ಹಿಂದೆಂದೂ ನೀಡದಷ್ಟು ಮಹತ್ವವನ್ನು ಬಾಹ್ಯಾಕಾಶ ಕ್ಷೇತ್ರಕ್ಕೆ ನೀಡಿದೆ ಈ ದೇಶ. ತನ್ನ ಮೊಟ್ಟಮೊದಲ ಮಂಗಳ ಯೋಜನೆ 'ಹೋಪ್' ಬಗ್ಗೆ ಸಾಕಷ್ಟು ನಿರೀಕ್ಷೆ ಹೊಂದಿರುವ ಯುಎಇ, ಮಂಗಳ ಗ್ರಹದ ವಾತಾವರಣ ಅಧ್ಯಯನ ಹಾಗೂ ನೀರಿನ ಮೂಲಗಳ ಬಗ್ಗೆ ಅಧ್ಯಯನ ನಡೆಸಲಿದೆ. ಹಾಗೂ ತನ್ನ ಅಧ್ಯಯನದ ವರದಿಯನ್ನು ಹಂಚಿಕೊಳ್ಳುವುದಾಗಿ ಈಗಾಗಲೇ ಭರವಸೆಯನ್ನೂ ನೀಡಿದೆ ಯುಎಇ.

 ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳನ ಮಣ್ಣು ತರಲಿದೆ ‘ನಾಸಾ’

ಮಂಗಳ ಗ್ರಹದ ಹಿಂದೆ ಬಿದ್ದಿರುವ ಇಡೀ ಜಗತ್ತು ನಿಬ್ಬೆರಗಾಗುವ ಸುದ್ದಿಯೊಂದನ್ನು ನಾಸಾ ನೀಡಿದೆ. ಮೊದಲ ಬಾರಿ ಮಂಗಳನ ಅಂಗಳಕ್ಕೆ ನುಗ್ಗಿ ಅಧ್ಯಯನ ನಡೆಸಿದ್ದ ಕೀರ್ತಿ ಹೊಂದಿರುವ ನಾಸಾ ಮತ್ತೊಂದು ಸವಾಲಿಗೆ ಸಿದ್ಧವಾಗಿದೆ. ಕಳೆದ ಜುಲೈನಲ್ಲಿ 'ಪೆರ್‌ಸೆವೆರನ್ಸ್' ಉಡಾವಣೆ ಮಾಡಿದ್ದ ನಾಸಾ, ಇದೇ ತಿಂಗಳು ರೋವರ್‌ನ್ನು ಮಂಗಳನ ಮೇಲೆ ಇಳಿಸಲಿದೆ. ಮಂಗಳನ 'ಜೆಝೀರೋ' ಕುಳಿ ಮೇಲೆ ನಾಸಾ ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ ಮಂಗಳ ಗ್ರಹದ ಮಣ್ಣನ್ನು ಭೂಮಿಗೆ ತರಲು ತುದಿಗಾಲಲ್ಲಿ ನಿಂತಿದೆ ನಾಸಾ. ಇದಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ 'ಪೆರ್‌ಸೆವೆರನ್ಸ್' ಹೊಂದಿದೆ.

ಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರಚೀನಾದ ಮಂಗಳ ನೌಕೆ ಕಳಿಸಿದ ಭೂಮಿ- ಚಂದ್ರನ ಚಿತ್ರ

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

ರೋವರ್‌ನಲ್ಲಿ 23 ಕ್ಯಾಮರಾ, 1 ಡ್ರಿಲ್ಲರ್..!

20 ಸಾವಿರ ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದೆ. ಮಂಗಳ ಗ್ರಹದ ಮೇಲೆ ಅತ್ಯುತ್ತಮವಾದ ಸಾಧನ ಬಳಸಿ ಅಧ್ಯಯನ ನಡೆಸುವುದಕ್ಕಾಗಿ ನಾಸಾ ವಿಶಿಷ್ಟವಾದ ರೋವರ್ ಸಿದ್ಧಪಡಿಸಿದೆ. 'ಪೆರ್‌ಸೆವೆರನ್ಸ್' ಎಂದು ರೋವರ್‌ಗೆ ನಾಮಕರಣ ಮಾಡಲಾಗಿದೆ. ಸದ್ಯ ಭೂಮಿ ಮೇಲೆ ಲಭ್ಯವಿರುವ ಅತ್ಯುತ್ತಮ ಟೆಕ್ನಾಲಜಿ ಬಳಸಿ ರೋವರ್‌ ತಯಾರಿಸಿದೆ ನಾಸಾ.

ರೋವರ್‌ನಲ್ಲಿ 23 ಕ್ಯಾಮರಾ ಅಳವಡಿಸಲಾಗಿದೆ. ಮಂಗಳನ ನೆಲ ಅಗೆಯಲು ಸಹಾಯಕವಾಗುವಂತೆ 1 ಡ್ರಿಲ್ಲರ್ ಕೂಡ ಇದೆ. ಈ ಡ್ರಿಲ್ಲರ್ ಸಹಾಯದಿಂದ 'ಪೆರ್‌ಸೆವೆರನ್ಸ್' ರೋವರ್ ಮಂಗಳನ ಬಂಡೆ ಹಾಗೂ ಮಣ್ಣು ಅಗೆಯಲಿದೆ. ಹೀಗೆ ಅಗೆಯುವ ಮಣ್ಣು ಮತ್ತು ಕಲ್ಲನ್ನ ಕೊಳವೆ ಆಕಾರದ ಕಂಟೇನರ್‌ಗೆ ತುಂಬಲಿದೆ. ನಂತರ ಕಂಟೇನರ್‌ಗಳನ್ನ ಅಲ್ಲೇ ಬಿಟ್ಟು ಮುಂದೆ ಸಾಗಲಿದೆ. ಹೀಗೆ 10 ವರ್ಷಗಳ ಕಾಲ ರೋವರ್ ಮಂಗಳ ಗ್ರಹವನ್ನು ಸುತ್ತು ಹಾಕುತ್ತಾ, ಜೀವಿಗಳಿಗಾಗಿ ಹುಡುಕಾಟ ನಡೆಸಲಿದೆ.

 2026ಕ್ಕೆ ಮತ್ತೊಂದು ರೋವರ್..!

2026ಕ್ಕೆ ಮತ್ತೊಂದು ರೋವರ್..!

ನಾಸಾ ಸಂಸ್ಥೆಯ 'ಪೆರ್‌ಸೆವೆರನ್ಸ್' ರೋವರ್ ಲ್ಯಾಂಡ್ ಆದ 5 ವರ್ಷಗಳ ನಂತರ ಅಂದರೆ 2026ಕ್ಕೆ ಮತ್ತೊಂದು ರೋವರ್ ಲ್ಯಾಂಡ್ ಆಗಲಿದೆ. ಈ ಬಾರಿ 'ಯೂರೋಪಿಯನ್ ಸ್ಪೇಸ್ ಏಜೆನ್ಸಿ' ಕಳುಹಿಸಿದ ಪುಟ್ಟ ರೋವರ್ ಮಂಗಳ ಗ್ರಹದ ಮೇಲೆ ಇಳಿಯಲಿದೆ. ನಂತರ 'ಪೆರ್‌ಸೆವೆರನ್ಸ್' ಬಿಟ್ಟುಹೋದ ಕೊಳವೆ ಆಕಾರದ ಕಂಟೇನರ್‌ಗಳನ್ನ ಬೇಟೆಯಾಡುವ ಯೂರೋಪಿಯನ್ ರೋವರ್, ತನ್ನೊಳಗೆ ಈ ಪುಟ್ಟ ಪುಟ್ಟ ಕಂಟೇನರ್‌ಗಳನ್ನ ತುಂಬಿಸಿಕೊಳ್ಳಲಿದೆ. ನಂತರ ಅವನ್ನೆಲ್ಲಾ ಒಟ್ಟುಗೂಡಿಸಿ ಮತ್ತೊಂದು ದೊಡ್ಡ ಕಂಟೇನರ್‌ಗೆ ಶಿಫ್ಟ್ ಮಾಡುತ್ತದೆ. ಕೊನೆಯದಾಗಿ ಮಣ್ಣು ತುಂಬಿರುವ ದೊಡ್ಡ ಕಂಟೇನರ್ ತೆಗೆದು ಭದ್ರವಾಗಿ ಪುಟಾಣಿ ರಾಕೇಟ್‌ಗೆ ವರ್ಗಾಯಿಸಲಿದೆ.

ಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್‌ ಫೋಟೊ ಬಿಡುಗಡೆ ಮಾಡಿದ ಇಸ್ರೋಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್‌ ಫೋಟೊ ಬಿಡುಗಡೆ ಮಾಡಿದ ಇಸ್ರೋ

ರಾಕೆಟ್ ಲಾಂಚ್ ಮಾಡಲಿದೆ ರೋವರ್

ರಾಕೆಟ್ ಲಾಂಚ್ ಮಾಡಲಿದೆ ರೋವರ್

ಇದು ಊಹೆಗೂ ನಿಲುಕದ ಅಚ್ಚರಿ. ರೋವರ್ ಮೂಲಕ ರಾಕೆಟ್ ಲಾಂಚ್ ಮಾಡುವ ಸಾಹಸಕ್ಕೆ ನಾಸಾ ಹಾಗೂ ಇಎಸ್‌ಎ ಕೈಹಾಕಿವೆ. ಮಂಗಳನ ಮಣ್ಣು ತುಂಬಿದ ಪುಟಾಣಿ ರಾಕೇಟ್ ಅನ್ನು 2026ರ ವೇಳೆಗೆ ಲಾಂಚ್ ಮಾಡಲಾಗುವುದು. ಈ ಕೆಲಸವನ್ನು ಯುರೋಪಿಯನ್ ರೋವರ್ ಮಾಡಲಿದೆ. ಹೀಗೆ ಪುಟಾಣಿ ರಾಕೆಟ್ ಲಾಂಚ್ ಮಾಡಲು ನಾಸಾ, ಇಎಸ್‌ಎ ಅತ್ಯುತ್ತಮ ತಂತ್ರಜ್ಞಾನ ಬಳಸಿಕೊಳ್ಳಲಿವೆ. ರಾಕೆಟ್ ಲಾಂಚರ್‌ಗೆ ಸ್ಫೋಟಕ ತುಂಬಿ ಬ್ಲಾಸ್ಟ್ ಮಾಡಲಾಗುವುದು. ಹೀಗೆ ಬ್ಲಾಸ್ಟ್ ಮಾಡಿ ಸೂಕ್ಷ್ಮವಾಗಿ ಪುಟಾಣಿ ರಾಕೆಟ್ ಅನ್ನ ಬಾಹ್ಯಾಕಾಶಕ್ಕೆ ಹಾರಿಸಲಾಗುವುದು. ಮಣ್ಣು ಹೊತ್ತು ಮಂಗಳನ ಬಾಹ್ಯಾಕಾಶದ ಕಡೆಗೆ ನುಗ್ಗುವ ರಾಕೆಟ್‌ಗೆ ಮಂಗಳ ಗ್ರಹದ ಕಕ್ಷೆಯಲ್ಲಿ ಸುತ್ತುವ ಯೂರೋಪ್‌ನ ಉಪಗ್ರಹವೇ ಟಾರ್ಗೆಟ್.

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಉಪಗ್ರಹಕ್ಕೆ ಸ್ಯಾಂಪಲ್ ಶಿಫ್ಟ್..!

ಕೊನೆಯದಾಗಿ ತನ್ನಲ್ಲಿರುವ ಎಲ್ಲಾ ಸ್ಯಾಂಪಲ್‌ಗಳನ್ನ ಈ ಪುಟಾಣಿ ರಾಕೆಟ್ ಯುರೋಪಿಯನ್ ಸ್ಪೇಸ್ ಏಜೆನ್ಸಿಗೆ ಸೇರಿದ ಸ್ಯಾಟಲೈಟ್‌ಗೆ ಶಿಫ್ಟ್ ಮಾಡಲಿದೆ. ಹೀಗೆ ಅಂಗಾರಕನ ಮಣ್ಣಿನ ಸ್ಯಾಂಪಲ್ ಹೊತ್ತು ಹೊರಡುವ ಉಪಗ್ರಹ 2032ರ ವೇಳೆಗೆ ಭೂಮಿಯನ್ನು ತಲುಪುವ ನಿರೀಕ್ಷೆ ಇದೆ. ಭೂಮಿಯ ಕಕ್ಷೆಯಲ್ಲಿ ಸುತ್ತುತ್ತಾ ಉತ್ತರ ಅಮೆರಿಕದ ಕಡೆಗೆ ಮಂಗಳನ ಕಲ್ಲು ಹಾಗೂ ಮಣ್ಣು ಇರುವ ಕಂಟೇನರ್ ಅನ್ನು ಉಪಗ್ರಹ ಎಸೆಯಲಿದೆ. ಹೀಗೆ ಭೂಮಿ ಮೇಲಿಂದ ಬೀಳುವ ಕಂಟೇನರ್ ಉತ್ತರ ಅಮೆರಿಕದಲ್ಲಿಯೇ ಬೀಳುವಂತೆ ಮಾಡಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿದೆ.

 12 ವರ್ಷ ಕಾಯಬೇಕು..!

12 ವರ್ಷ ಕಾಯಬೇಕು..!

ಇಷ್ಟೆಲ್ಲಾ ಸರ್ಕಸ್ ಮಾಡಿ ಮಂಗಳನ ಮಣ್ಣನ್ನು ಭೂಮಿಗೆ ತಂದ ನಂತರ ನಾಸಾ ಹಾಗೂ ಇಎಸ್‌ಎ ಒಟ್ಟಾಗಿ ಸಂಶೋಧನೆ ನಡೆಸಲಿವೆ. ಭೂಮಿಯಲ್ಲಿ 2032ರ ಹೊತ್ತಿಗೆ ಲಭ್ಯವಿರುವ ಅತ್ಯುತ್ತಮ ಲ್ಯಾಬ್ ಸಾಧನಗಳನ್ನು ಬಳಸಿ ಮಂಗಳನ ಮಣ್ಣಿನ ಸಂಶೋಧನೆ ನಡೆಸಲಾಗುವುದು. ಈ ಸಂಶೋಧನೆಗಾಗಿ ಹೊಸ ಸಾಧನ ಕಂಡುಹಿಡಿಯುವ ಪ್ಲ್ಯಾನ್ ಇದೆ. ಇದಿಷ್ಟನ್ನೂ ನೋಡಲು 12 ವರ್ಷ ಕಾಯಲೇಬೇಕು. ಮಂಗಳನ ಮಣ್ಣಿನ ಅಧ್ಯಯನದ ನಂತರ ವರದಿಗಾಗಿ ವಿಜ್ಞಾನಿಗಳು ಮತ್ತಷ್ಟು ವರ್ಷ ಕಾಯಬೇಕಿದೆ. ಒಟ್ಟಾರೆ ಹೇಳುವುದಾದರೆ ಈ ಯೋಜನೆ ಒಂದು ತಪಸ್ಸು. ಈ ತಪಸ್ಸಿನಲ್ಲಿ ನಾಸಾ ಹಾಗೂ ಇಎಸ್‌ಎ ಯಶಸ್ಸು ಕಾಣಲಿ ಎಂದು ಹಾರೈಸೋಣ.

English summary
Total 3 Mars missions will be at final stage in the month of February. UAE succeeded in their mission and America’s NASA & China waiting for nail biting moment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X