ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವೆಂಬರ್ ಕೊನೆ ವಾರದ ಒನ್ಇಂಡಿಯಾದ ಟ್ರೆಂಡಿಂಗ್ ಸುದ್ದಿಚಿತ್ರ

By Mahesh
|
Google Oneindia Kannada News

ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ನವೆಂಬರ್ 26 ರಿಂದ ಡಿಸೆಂಬರ್ 03ರ ತನಕದ ಅತಿ ಹೆಚ್ಚು ಓದಲ್ಪಟ್ಟ, ಚರ್ಚಿಸಲ್ಪಟ್ಟ ಸುದ್ದಿಗಳ ಸಂಗ್ರಹ ಇಲ್ಲಿದೆ.

ನವೆಂಬರ್ 3ನೇ ವಾರದ ಒನ್ಇಂಡಿಯಾದ ಟ್ರೆಂಡಿಂಗ್ ಸುದ್ದಿಚಿತ್ರನವೆಂಬರ್ 3ನೇ ವಾರದ ಒನ್ಇಂಡಿಯಾದ ಟ್ರೆಂಡಿಂಗ್ ಸುದ್ದಿಚಿತ್ರ

ಕರ್ನಾಟಕಕ್ಕೂ ತಟ್ಟಿದ ಓಖಿ ಚಂಡಮಾರುತ, ಬೆಳಗಾವಿಯ ಚಳಿಗಾಲದ ಅಧಿವೇಶನದ ನಂತರದ ರಾಜಕೀಯ ಬೆಳವಣಿಗೆಗಳು, ಹೈದರಾಬಾದಿಗೆ ಬಂದಿದ್ದ ಇವಾಂಕಾ ಟ್ರಂಪ್, ಕೆಪಿಎಸ್ಸಿ ಉದ್ಯೋಗ ಮಾಹಿತಿ, ಜಿಲ್ಲಾಸುದ್ದಿ, ಜ್ಯೋತಿಷ್ಯ, ಕ್ರೀಡೆ, ವಾಣಿಜ್ಯ ಸೇರಿದಂತೆ ದೇಶ -ವಿದೇಶದ ಸುದ್ದಿಗಳು ಇದರಲ್ಲಿ ಸೇರಿವೆ. ಎಂದಿನಂತೆ ನಮ್ಮನ್ನು ತಿದ್ದಿ ತೀಡುತ್ತಿರುವ ಓದುಗ ಮಹಾ ಪ್ರಭುಗಳಿಗೆ ನಮ್ಮ ತಂಡ ಆಭಾರಿಯಾಗಿದೆ.

ಕರ್ನಾಟಕಕ್ಕೂ ತಟ್ಟಿದ ಓಖಿ ಚಂಡಮಾರುತ

ಕರ್ನಾಟಕಕ್ಕೂ ತಟ್ಟಿದ ಓಖಿ ಚಂಡಮಾರುತ

ಗಾಳಿಯ ರಭಸಕ್ಕೆ ರುದ್ರ ನರ್ತನ ಆರಂಭಿಸಿದ ಮರದ ರೆಂಬೆ - ಕೊಂಬೆಗಳು, ಎಡಬಿಡದೆ ಸುರಿವ ಮಳೆ, ಏನಾಗಿಬಿಡುತ್ತದೋ ಎಂಬ ಆತಂಕದಲ್ಲೇ ಮನೆಯಿಂದ ಹೊರಗೇ ಬರದೆ ಮುದುಡಿ ಕುಳಿತ ಜನ, ರಸ್ತೆಯ ತುಂಬೆಲ್ಲ ಗಾಳಿ-ಮಳೆಯ ಭೋರ್ಗರೆತವಲ್ಲದೆ ಬೇರೆ ಸದ್ದಿಲ್ಲ... ಇದು ತಮಿಳುನಾಡಿನ ಚಿತ್ರ! ತಮಿಳು ನಾಡು ಮಾತ್ರವಲ್ಲ, ಕೇರಳದ ಹಲವೆಡೆಯೂ ಓಖಿ ಸದ್ದು ಮಾಡುತ್ತಿದೆ.

ಕೆಪಿಎಸ್ಸಿಯಲ್ಲಿ 1543 ಹುದ್ದೆಗಳ ನೇಮಕಾತಿ

ಕೆಪಿಎಸ್ಸಿಯಲ್ಲಿ 1543 ಹುದ್ದೆಗಳ ನೇಮಕಾತಿ

ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಗ್ರೂಪ್ ಸಿ ವೃಂದದ ತಾಂತ್ರಿಕ/ ತಾಂತ್ರಿಕೇತರ ಹುದ್ದೆಗಳ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಕೆಎಸ್ಆರ್‌ಪಿ ನೇಮಕಾತಿಗೆ ಅರ್ಜಿ ಹಾಕಿ

ಕೆಎಸ್ಆರ್‌ಪಿ ನೇಮಕಾತಿಗೆ ಅರ್ಜಿ ಹಾಕಿ

ವಿಶೇಷ ರಿಸರ್ವ್ ಪೊಲೀಸ್ ಕಾನ್ಸ್‌ಟೇಬಲ್ (ಪುರುಷ) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. 849 ಹುದ್ದೆಗಳಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 18, 2017.

ನಾಗಾ ಸಾಧುಗಳು ನುಡಿದ ಇನ್ನೊಂದು ಭವಿಷ್ಯ!

ನಾಗಾ ಸಾಧುಗಳು ನುಡಿದ ಇನ್ನೊಂದು ಭವಿಷ್ಯ!

ಇತ್ತೀಚಿನ ದಿನಗಳಲ್ಲಿ ಅಪರೂಪ ಎನ್ನುವಂತೆ ಶಿವನ ಆರಾಧಕರಾಗಿರುವ ನಾಗಸಾಧುಗಳು ಮುಂದಿನ ಆಗುಹೋಗುಗಳ ಬಗ್ಗೆ ಭವಿಷ್ಯ ನುಡಿಯಲಾರಂಭಿಸಿರುವುದು ವಿಶೇಷ. ಕಳೆದ ಒಂದು ತಿಂಗಳಲ್ಲಿ ನಾಗಸಾಧುಗಳು, ಕರ್ನಾಟಕ ಮುಂದಿನ ಚುನಾವಣಾ ಫಲಿತಾಂಶದ ಬಗ್ಗೆ ಮೂರು ಭವಿಷ್ಯ ನುಡಿದಿದ್ದಾರೆ.

ಇವಾಂಕಾರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದೆ ಅಮೆರಿಕ ಮಾಧ್ಯಮ!

ಇವಾಂಕಾರನ್ನು ಹಿಗ್ಗಾಮುಗ್ಗಾ ಥಳಿಸುತ್ತಿದೆ ಅಮೆರಿಕ ಮಾಧ್ಯಮ!

ಮೂರು ದಿನಗಳ ಜಾಗತಿಕ ಉದ್ಯಮಶೀಲತಾ ಶೃಂಗಸಭೆ (ಜಿಇಎಸ್) ಯಲ್ಲಿ ಭಾಗವಹಿಸುವುದಕ್ಕಾಗಿ ಹೈದರಾಬಾದಿಗೆ ಬಂದಿರುವ ಇವಾಂಕಾ ಟ್ರಂಪ್, ಈಗಾಗಲೇ ಭಾರತದಾದ್ಯಂತ ತಮ್ಮ ಹವಾ ಸೃಷ್ಟಿಸಿದ್ದಾರೆ. ಭಾರತೀಯ ಮಾಧ್ಯಮಗಳಂತೂ ಗ್ಲಾಮರ್ ಬೊಂಬೆ ಇವಾಂಕಾರಿಗೆ ನಿನ್ನೆ(ನ.28)ಯಿಡೀ ಸಾಕಷ್ಟು ಪ್ರಚಾರ ನೀಡಿವೆ.

ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!

ವಿವಾದದ ಹಳ್ಳದಲ್ಲಿ ತಾವೇ ಬಿದ್ದರಾ ರಾಹುಲ್ ಗಾಂಧಿ?!

ಕಾಂಗ್ರೆಸ್ ಅಧ್ಯಕ್ಷ ಪಟ್ಟಕ್ಕೇರಲಿರುವ ರಾಹುಲ್ ಗಾಂಧಿ, ತಾವೇ ಆಡಿದ ಮಾತುಗಳಿಂದ ಸಂಕಷ್ಟಕ್ಕೆ ಸಿಲುಕುತ್ತಿದ್ದಾರಾ? ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಮಯದಲ್ಲಿ ರಾಹುಲ್ ಗಾಂಧಿ ಆಡಿದ್ದ ಬಾಲಿಶ ಹೇಳಿಕೆಗಳನ್ನೇ ಇದೀಗ ಕೆದಕಿ, ಗುಜರಾತ್ ಚುನಾವಣೆಯ ಹೊತ್ತಲ್ಲಿ ಬಿಜೆಪಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆಯಾ?

ಎಫ್ ಡಿಎ ಹಾಗೂ ಎಸ್ ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

ಎಫ್ ಡಿಎ ಹಾಗೂ ಎಸ್ ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನ

ವಿವಿಧ ಇಲಾಖೆಗಳಲ್ಲಿ ಇರುವ ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳಿಗಾಗಿ ಕರ್ನಾಟಕ ಲೋಕಸೇವಾ ಆಯೋಗದಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 1058 ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿ

ಕತ್ತಿ, ಜಾರಕಿಹೊಳಿ, ಪಾಟೀಲ ಎಲ್ರೂ ತೆನೆ ಹೊರಲು ರೆಡಿ!

ಕತ್ತಿ, ಜಾರಕಿಹೊಳಿ, ಪಾಟೀಲ ಎಲ್ರೂ ತೆನೆ ಹೊರಲು ರೆಡಿ!

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಜೆಡಿಎಸ್ ಸೇರುವ ಸಾಧ್ಯತೆ ಬಗ್ಗೆ ಸುದ್ದಿ ಬಂದಿರುವ ಬೆನ್ನಲ್ಲೇ ಜೆಡಿಎಸ್ ತೊರೆದಿದ್ದ ಹಿರಿ ತಲೆಗಳು ಮತ್ತೆ ತೆನೆ ಹೊರಲು ಸಜ್ಜಾಗುತ್ತಿರುವ ಸುದ್ದಿ ತೂರಿ ಬಂದಿದೆ. ಸದ್ಯಕ್ಕೆ ಇದು ಗಾಸಿಪ್/ಗಾಳಿ ಸುದ್ದಿ ಕೆಟಗೆರಿಯಲ್ಲೇ ಇದೆ.

ಸಲ್ಲದ ಗಾಳಿ ಸುದ್ದಿಗಳಿಗೆ ಸೂಜಿ ಚುಚ್ಚಿದ ಅಂಬರೀಶ್

ಸಲ್ಲದ ಗಾಳಿ ಸುದ್ದಿಗಳಿಗೆ ಸೂಜಿ ಚುಚ್ಚಿದ ಅಂಬರೀಶ್

'ಮಾಜಿ ಸಂಸದೆರಮ್ಯಾ ಚುನಾವಣೆಗೆ ಸ್ಪರ್ಧಿಸಿದರೆ ಸ್ವಾಗತ. ಪಕ್ಷ ಟಿಕೆಟ್ ನೀಡಿದರೆ ನಾನು ಸ್ಪರ್ಧಿಸುತ್ತೇನೆ' ಎಂದು ಮಾಜಿ ವಸತಿ ಸಚಿವ, ಮಂಡ್ಯ ಶಾಸಕ ಅಂಬರೀಶ್ ಹೇಳಿದರು.

ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗೆ ತೆರೆ ಬಿತ್ತು!

ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗೆ ತೆರೆ ಬಿತ್ತು!

ಮಾಜಿ ವಸತಿ ಸಚಿವ, ಮಂಡ್ಯ ಕ್ಷೇತ್ರದ ಶಾಸಕ ಅಂಬರೀಶ್ ಜೆಡಿಎಸ್ ಸೇರುವ ಸುದ್ದಿಗಳಿಗೆ ತೆರೆ ಬಿದ್ದಿದೆ. ಸ್ವತಃ ಮಂಡ್ಯ ಜಿಲ್ಲಾ ಜೆಡಿಎಸ್ ನಾಯಕರು ಈ ಕುರಿತು ಸ್ಪಷ್ಟನೆಗಳನ್ನು ನೀಡಿದ್ದಾರೆ.

ಆಜಾನ್ ಮೊಳಗಿದಾಗ ಮೋದಿಯ ಮೌನ

ಆಜಾನ್ ಮೊಳಗಿದಾಗ ಮೋದಿಯ ಮೌನ

ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇದೀಗ ಆಜಾನ್ ಕಾರಣಕ್ಕೆ ಸುದ್ದಿಯಾಗಿದ್ದಾರೆ. ಗುಜರಾತಿನ ನವರಾಸಿಯಲ್ಲಿ ಚುನಾವಣಾ ಪ್ರಚಾರ ಸಭೆಯೊಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋದಿ, ಆಜಾನ್ (ಮುಸ್ಲಿಮರ ಪ್ರಾರ್ಥನೆ) ಕೇಳುತ್ತಿದ್ದಂತೆಯೇ ಮಾತನ್ನು ಅರ್ಧಕ್ಕೇ ನಿಲ್ಲಿಸಿ ಆಜಾನ್ ಮುಗಿಯುವವರೆಗೂ ಕಾದರು.

ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

ಹಿರಿಯ ಮುತ್ಸದ್ದಿ ಎಸ್ಸೆಂ ಕೃಷ್ಣ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?

85 ವರ್ಷ ವಸಂತ ಋತುಗಳನ್ನು ಕಂಡಿರುವ, ಕನ್ನಡ ನಾಡಿನ ಹಿರಿಯ ಮುತ್ಸದ್ದಿ, ಅಪಾರ ರಾಜಕೀಯ ಜ್ಞಾನವುಳ್ಳ ಎಸ್ಸೆಂ ಕೃಷ್ಣ ಅವರು ಈಗ ಎಲ್ಲಿದ್ದಾರೆ? ಭಾರತೀಯ ಜನತಾ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದಾರಾ? ಅಮಿತ್ ಶಾ ಅವರು ಹೇಳಿದಂತೆ, ಅವರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಳ್ಳುತ್ತಿದೆಯಾ?

ಲಿಲ್ಲಿ ದಾಖಲೆ ಮುರಿದ ಅಶ್ವಿನ್ ಕಾಲೆಳೆದ ಪತ್ನಿ ಪ್ರೀತಿ

ಲಿಲ್ಲಿ ದಾಖಲೆ ಮುರಿದ ಅಶ್ವಿನ್ ಕಾಲೆಳೆದ ಪತ್ನಿ ಪ್ರೀತಿ

ಪ್ರವಾಸಿ ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭರ್ಜರಿ ಪ್ರದರ್ಶನ ನೀಡಿದ್ದಲ್ಲದೆ, ಡೆನ್ನಿಸ್ ಲಿಲ್ಲಿ ಅವರ 300 ವಿಕೆಟ್ ಗಳ ದಾಖಲೆಯನ್ನು ಮುರಿದರು. ಸಂಭ್ರಮದಲ್ಲಿದ್ದ ಅಶ್ವಿನ್ ಅವರ ಕಾಲೆಳೆದ ಅವರ ಪತ್ನಿ ಟ್ವೀಟ್ ಮಾಡಿದ್ದು ಈಗ ಸಕತ್ ಚರ್ಚೆಯಲ್ಲಿದೆ.

ಸ್ತನದ ಆಕಾರ, ಬಣ್ಣ, ರಚನೆ ಆಧಾರದಲ್ಲಿ ಹೆಣ್ಣಿನ ಗುಣ-ಸ್ವಭಾವ

ಸ್ತನದ ಆಕಾರ, ಬಣ್ಣ, ರಚನೆ ಆಧಾರದಲ್ಲಿ ಹೆಣ್ಣಿನ ಗುಣ-ಸ್ವಭಾವ

ಈ ದಿನದ ಸಾಮುದ್ರಿಕಾ ಶಾಸ್ತ್ರದ ಲೇಖನ ಮಹಿಳೆಯರ ಸೌಂದರ್ಯ ಪ್ರತೀಕ ಸ್ತನದ ಆಕಾರದ ಆಧಾರದಲ್ಲಿ ಗುಣ-ಸ್ವಭಾವವನ್ನು ತಿಳಿಸಿಕೊಡುವಂಥದ್ದು. ಅಶ್ಲೀಲದ ಸೋಂಕಿಲ್ಲದೆ ಜ್ಯೋತಿಷ್ಯ ಶಾಸ್ತ್ರವನ್ನು ನಿಮ್ಮ ಗಮನಕ್ಕೆ ತರುವುದು ಈ ಲೇಖನದ ಉದ್ದೇಶ ಎಂಬುದನ್ನು ಆರಂಭದಲ್ಲೇ ಗಮನಕ್ಕೆ ತರುತ್ತಿದ್ದೇನೆ.

English summary
Top read trending stories of Last Week (Nov 26- Dec 03) on Oneindia Kannada are here. The list includes stories on Weekly Astrology, Naga Sadhu's prediction on HD Kumaraswamy, Jobs and Political developments and news across the globe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X