ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೆಂಪು ಅವರ 113ನೇ ಜನ್ಮದಿನ, ನೆಟ್ಟಿಗರ ಪ್ರತಿಕ್ರಿಯೆ ಹೀಗಿತ್ತು

By Manjunatha
|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ರಾಷ್ಟ್ರಕವಿ ಕುವೆಂಪು ಅವರ 113ನೇ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣ ಶುಭ ಹಾರೈಕೆಗಳ ಸುರಿಮಳೆಯನ್ನೇ ಸುರಿಸಿದೆ.

ರಾಷ್ಟ್ರಕವಿ ಕುವೆಂಪು ನಮ್ಮನ್ನಗಲಿ ದಶಕಗಳಾದರೂ ಅವರ ಅಕ್ಷರದ ಕಂಪು ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ಕನ್ನಡ ಜನತೆ ಕುವೆಂಪು ಅವರನ್ನು ಮರೆತಿಲ್ಲ ಎಂಬುದಕ್ಕೆ ಅವರ ಹುಟ್ಟುಹಬ್ಬದಂದು ಸಾಮಾಜಿಕ ಜಾಲತಾಣದಲ್ಲಿ ರಾಷ್ಟ್ರಕವಿಗೆ ವ್ಯಕ್ತವಾದ ಪ್ರೀತಿಯೇ ಸಾಕ್ಷಿ.

ರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ನಮನರಸಋಷಿ ಕುವೆಂಪುಗೆ ಗೂಗಲ್ ಡೂಡಲ್ ನಮನ

ಟ್ವಿಟರ್‌ನ ಟಾಪ್ 10 ಟ್ರೆಂಡಿಂಗ್‌ನಲ್ಲಿ #kuvempu ಬೆಳಗಿನಿಂದ ಸಂಜೆ ವರೆಗೂ ತನ್ನ ಸ್ಥಾನ ಕಾಯ್ದುಕೊಂಡಿತ್ತು. ಈ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಸಾವಿರಾರು ಜನರು ತಮ್ಮ ಮೆಚ್ಚಿನ ರಸಋಷಿಯನ್ನು ಮತ್ತೊಮ್ಮೆ ನೆನಪಿಸಿಕೊಂಡರು.

ಕುವೆಂಪು ಜನ್ಮದಿನದ ಅಂಗವಾಗಿ ಗೂಗಲ್ ಕೂಡ ಕುವೆಂಪು ಅವರ ಡೂಡಲ್ ಪ್ರಕಟಿಸಿ ಗೌರವ ಅರ್ಪಿಸಿದ್ದು, ನೆಟ್ಟಿಗರಿಗೆ ಮತ್ತೊಂದು ಹೆಮ್ಮೆಯ ವಿಷಯವಾಗಿ ಈ ಬಗ್ಗೆಯೂ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು ನೆಟ್ಟಿಗರು.

ತಮಿಳಿನಲ್ಲಿ ಕನ್ನಡ ಕಂಪು

ತಮಿಳಿನ ಝೀ ನ್ಯೂಸ್ ಚಾನೆಲ್ ತನ್ನ ಟ್ವಿಟರ್‌ನಲ್ಲಿ ಕುವೆಂಪು ಜನ್ಮ ದಿನದಂದು ಅವರನ್ನು ಗೌರವಿಸಿ, ಗೂಗಲ್ ಪ್ರಕಟಿಸಿರುವ ಕುವೆಂಪು ಡೂಡಲ್ ಕುರಿತು ಹಾಗೂ ಕುವೆಂಪು ಅವರ ಸಾಹಿತ್ಯ ಕುರಿತ ಲೇಖನ ಪ್ರಕಟಿಸಿದೆ.

ಅರಬ್ ದೇಶದಲ್ಲೂ ಕುವೆಂಪು ನೆನಪು

ಕತಾರ್ ನ ಪ್ರಮುಖ ಪತ್ರಿಕೆ ಅಲ್-ಜಜೀರಾ ಕೂಡಾ ಕನ್ನಡ ಮೇರು ಕವಿ ಕುವೆಂಪು ಅವರ ಬಗ್ಗೆ ಮಾಹಿತಿ ಒಳಗೊಂಡ ಲೇಖನವನ್ನು ಪ್ರಕಟಿಸಿದೆ. ಅಜ್-ಜಜೀರಾ ದಲ್ಲಿ ಪ್ರಕಟವಾದ ಲೇಖನದ ಅಂತರ್ಜಾಲ ಪ್ರತಿಯನ್ನು ಮೈಸೂರು ವಿವಿ ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.

ಪ್ರಮುಖ ನಾಯಕರಿಂದ ಸ್ಮರಣೆ

ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಟ್ವಿಟರ್ ಖಾತೆಯಲ್ಲಿ ಕುವೆಂಪು ಅವರನ್ನು ಸ್ಮರಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಯಡಿಯೂರಪ್ಪ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಕುವೆಂಪು ಅವರ ಜನ್ಮದಿನದಂದು ರಾಷ್ಟ್ರಕವಿಗೆ ಗೌರವ ಸಲ್ಲಿಸಿದ್ದಾರೆ.

ಈ ಕಾಲದ ಅತ್ಯುನ್ನತ ಕವಿ

ಮೇರು ಗಾಯಕ ಅನುಪ್ ಜಲೋಟಾ ಅವರು ಕುವೆಂಪು ಅವರ ಜನ್ಮ ದಿನದಂದು ಅವರನ್ನು ಸ್ಮರಿಸಿದ್ದು "ನಮ್ಮ ಕಾಲದ ಅತ್ಯುನ್ನತ ಕವಿ ಮತ್ತು ಜ್ಞಾನ ಪೀಠ ವಿಜೇತ ಕುವೆಂಪು ಅವರಿಗೆ ಗೌರವಗಳು' ಎಂದು ಬರೆದುಕೊಂಡಿದ್ದಾರೆ.

ಮೂಲ ಪ್ರತಿಯ ಚಿತ್ರ

ಸುನೀತಾ ಐಯರ್ ಎಂಬುವರು ಕುವೆಂಪು ಜನ್ಮ ದಿನದ ಅಂಗವಾಗಿ ಕುವೆಂಪು ಅವರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿಸಿಕೊಟ್ಟ ಕೃತಿ 'ರಾಮಾಯಣ ದರ್ಶನಂ'ನ ಮೂಲ ಪ್ರತಿ ಮುಖ ಪುಟದ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ತಿದ್ದಿ ತೀಡಿದ ಕನ್ನಡಿಗ

ಹಿಂದಿಯ 'ಆಜ್ ತಕ್' ಸುದ್ದಿ ವೆಬ್ ಸೈಟ್ ಕುವೆಂಪು ಅವರ ಜನ್ಮದಿನದ ಬದಲಿಗೆ ಇಂದು ಕುವೆಂಪು ಅವರ ತಿಥಿ ದಿನ ಎಂದು ತಪ್ಪಾಗಿ ಪ್ರಕಟಿಸಿರುವುದನ್ನು ಟ್ವಿಟರ್ ಹಂಚಿಕೊಂಡು ಆಜ್‌ತಕ್ ನ ತಪ್ಪು ತಿದ್ದಿಕೊಳ್ಳುವಂತೆ ಆಗ್ರಹಿಸಿದ್ದಾರೆ ವಿಜಯ್ ಮುತ್ತತ್ತಿ.

English summary
Today, Google Doodle celebrates the 113th birthday of Kannada novelist and poet, Kuppali Venkatappa Puttappa, known as Kuvempu. In social media also people remembered Kuvempu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X