ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಚೀನಾದ ಆಕಾಶದಲ್ಲಿ ಏಕಕಾಲಕ್ಕೆ 3 ಸೂರ್ಯಗಳ ಉದಯ!

|
Google Oneindia Kannada News

ಬೀಜಿಂಗ್, ಅಕ್ಟೋಬರ್.18: ಜಗತ್ತಿನ ಬಾಹ್ಯಾಕಾಶ ಸಂಶೋಧಕರ ಚಿತ್ತವನ್ನು ಸೆಳೆಯುವಂತಾ ವಿಸ್ಮಯವೊಂದು ಚೀನಾದಲ್ಲಿ ನಡೆದಿದೆ. ಬಾನಂಗಳದಲ್ಲಿ ಒಂದೇ ದಿನ, ಒಂದೇ ಸಮಯದಲ್ಲಿ ಮೂರು ಸೂರ್ಯ ಉದಯಿಸಿರುವುದು ಅಚ್ಚರಿ ಮೂಡಿಸುತ್ತಿದೆ.

ಇಡೀ ವಿಶ್ವದ ಗಮನ ಸೆಳೆದ ವಿದ್ಯಮಾನವನ್ನು ಮಿಥ್ಯ ಸೂರ್ಯ ಮತ್ತು ಸನ್ ಡಾಗ್ಸ್ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ರಷ್ಯಾದ ಗಡಿಗೆ ಹೊಂದಿಕೊಂಡಿರುವ ಮೊಹೆ ನಗರದಲ್ಲಿ ಇಂಥದೊಂದು ವಿಸ್ಮಯದ ಘಟನೆ ನಡೆದಿರುವ ಬಗ್ಗೆ ವರದಿಯಾಗಿದೆ.

ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?ಮಂಗಳನ ಮೇಲಿನ ಸೂರ್ಯಾಸ್ತ ದೃಶ್ಯ ಹೇಗಿರುತ್ತದೆ?

ಬೆಳಗ್ಗೆ 6.30ರಿಂದ 9.30ರ ವೇಳೆ ಆಗಸದಲ್ಲಿ ಏಕಕಾಲಕ್ಕೆ ಮೂರು ಸೂರ್ಯ ಉದಯಿಸಿದ್ದು, ಜನರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ವಿಚಿತ್ರ ಮತ್ತು ವಿಶೇಷ ವಿದ್ಯಮಾನದ ಹಿಂದಿನ ಕಾರಣವೇನು ಎಂಬುದಕ್ಕೆ ಬಾಹ್ಯಾಕಾಶ ಸಂಶೋಧಕರು ಈಗಾಗಲೇ ಉತ್ತರ ಕಂಡು ಕೊಂಡಿದ್ದಾರೆ.

ಮೂರು ಸೂರ್ಯ ಉದಯಿಸುವುದಕ್ಕೆ ಸಾಧ್ಯವೇ?

ಮೂರು ಸೂರ್ಯ ಉದಯಿಸುವುದಕ್ಕೆ ಸಾಧ್ಯವೇ?

ಬಾನಿನಲ್ಲಿ ಮೂಡುವ ಒಬ್ಬ ಸೂರ್ಯನ ತಾಪಮಾನವನ್ನು ತಡೆಯುವುದಕ್ಕೆ ಸಾಧ್ಯವಿಲ್ಲ. ಇಂಥ ಸಂದರ್ಭದಲ್ಲಿ ಮೂರು ಮೂರು ಸೂರ್ಯಗಳು ಉದಯಿಸಿರುವುದು ನಿಜವಾದಲ್ಲಿ ಜೀವನ ನಡೆಸುವುದು ಸಾಧ್ಯವೇ ಎಂಬುದು ಸಾಮಾನ್ಯ ಪ್ರಶ್ನೆ. ಇದಕ್ಕೆ ಬಾಹ್ಯಾಕಾಶ ಸಂಶೋಧಕರು ಉತ್ತರಿಸಿದ್ದಾರೆ. ಚೀನಾದಲ್ಲಿ ಕಾಣಿಸಿಕೊಂಡ ಮೂರು ಸೂರ್ಯನ ಹಿಂದೆ ಬೆಳಕಿನ ಮಾಯೆ ಅಡಗಿದೆ ಎಂದು ಹೇಳುತ್ತಿದ್ದಾರೆ.

ಚೀನಾದಲ್ಲಿ ಉದಯಿಸಿದ ಮಿಥ್ಯ ಸೂರ್ಯ

ಸೂರ್ಯನ ಬೆಳಕು ಮಂಜು ಗಡ್ಡೆಗಳ ಮೇಲೆ ಬಿದ್ದು ಪ್ರತಿಫಲಿಸಿದಾಗ ಆಕಾಶದ ಶುಭ್ರ ಮೋಡಗಳ ನಡುವೆ ಪ್ರಜ್ವಲಿಸುತ್ತವೆ. ಡಾಕ್ಸಿ ಯಾಂಗ್ಲಿಂಗ್ ಪ್ರಾಂತ್ಯದ ಮೊಹೆ ಪ್ರದೇಶವು ಹಿಮ ತುಂಬಿದ ಬೆಟ್ಟಗಳ ನಡುವೆ ಇರುವುದರಿಂದ ಇಂಥದೊಂದು ವಿಸ್ಮಯಕ್ಕೆ ಕಾರಣವಾಗಿದೆ ಎಂದಿದ್ದಾರೆ. ಚೀನಾದ ಹವಾಮಾನ ಇಲಾಖೆಯು ಮಿಥ್ಯ ಸೂರ್ಯನ ಚಿತ್ರವನ್ನು ವಿಡಿಯೋ ರೂಪದಲ್ಲಿ ಬಿಡುಗಡೆಗೊಳಿಸಿದೆ.

ಮಿಥ್ಯ ಚಂದ್ರದ ದರ್ಶನ ವಿರಳದಲ್ಲೇ ಅತಿವಿರಳ

ಮಿಥ್ಯ ಚಂದ್ರದ ದರ್ಶನ ವಿರಳದಲ್ಲೇ ಅತಿವಿರಳ

ಸೂರ್ಯನ ಎಡ ಮತ್ತು ಬಲಭಾಗಕ್ಕೆ ಪ್ರಕಾಶಮಾನವಾದ ಎರಡು ಮಿಥ್ಯ ಸೂರ್ಯಗಳು ಉದಯಸಿರುವುದನ್ನು ಸೆರೆ ಹಿಡಿಯಲಾಗಿದೆ. "ಇಂಥ ವಿದ್ಯಮಾನಗಳು ಸಂಭವಿಸುವ ಸಂದರ್ಭದಲ್ಲಿ ಮಿಥ್ಯಸೂರ್ಯ ಪ್ರಕಾಶಮಾನವಾಗಿ ಹೊಳೆಯಬಹುದು. ಕೆಲವು ಬಾರಿ ಕಾಮನಬಿಲ್ಲು ಬಣ್ಣಗಳನ್ನು ಹೊಮ್ಮಿಸಬಹುದು. ಅತಿ ವಿರಳ ಸಂದರ್ಭಗಳಲ್ಲಿ ಹಿಮದ ಬೆಟ್ಟಗಳಿರುವ ಪ್ರದೇಶಗಳಲ್ಲಿ ಹುಣ್ಣಿಮೆಯ ರಾತ್ರಿಯಂದು ಮಿಥ್ಯ ಚಂದ್ರನ ದರ್ಶನವೂ ಆಗುವ ಸಾಧ್ಯತೆಗಳಿರುತ್ತವೆ" ಎಂದು ಹವಾಮಾನ ತಜ್ಞ ಗ್ರಹಾಂ ಮಾಗ್ಡೆ ತಿಳಿಸಿದ್ದಾರೆ.

ಮನುಷ್ಯನಲ್ಲಿ ಅಚ್ಚರಿ ಮೂಡಿಸಿದ ಪ್ರಾಕೃತಿಕ ವಿದ್ಯಮಾನ

ಮನುಷ್ಯನಲ್ಲಿ ಅಚ್ಚರಿ ಮೂಡಿಸಿದ ಪ್ರಾಕೃತಿಕ ವಿದ್ಯಮಾನ

ಪ್ರಾಕೃತಿಕ ಬದಲಾವಣೆಗಳು ಮನುಷ್ಯನಲ್ಲಿ ಅಚ್ಚರಿ ಮೂಡಿಸುತ್ತಿರುವ ಘಟನೆ ಇದೇ ಮೊದಲೇನಲ್ಲ. ಈ ಹಿಂದೆ ಕೂಡಾ ಇಂಥ ವಿಚಿತ್ರ ವಿದ್ಯಮಾನಗಳಿಗೆ ಬಾನಂಗಳ ಸಾಕ್ಷಿಯಾದ ಉದಾಹರಣೆಗಳಿವೆ. ಕೊರೊನಾವೈರಸ್ ಸೋಂಕಿನಿಂದ ಜಗತ್ತಿನ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದತ್ತ ಬಹುತೇಕ ರಾಷ್ಟ್ರಗಳು ಬೆರಗು ಕಣ್ಣಿನಿಂದ ನೋಡುವಂತಾಗಿದೆ.

English summary
'Three Suns' Appeared In China's Mohe, Due To Rare Phenomenon, Viral Video Attract Scientists Attention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X