ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆನ್ನು ನೋವು ತಡೆಗೆ ಮೂರು ವ್ಯಾಯಾಮಗಳು

|
Google Oneindia Kannada News

ಬೆನ್ನು ನೋವು ಬಹಳಷ್ಟು ಮಂದಿಯನ್ನು ಕಾಡುವ ಸಮಸ್ಯೆ. ಇದು ಕುಳಿತು, ಬಗ್ಗಿ ಕೆಲಸ ಮಾಡುವವರಲ್ಲಿ, ದೈಹಿಕ ಶ್ರಮದ ಕೆಲಸ ಮಾಡದವರಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ರಾತ್ರಿ ಮಲಗುವಾಗ ಇಲ್ಲದ ಬೆನ್ನುನೋವು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಕಾಣಿಸಿಕೊಳ್ಳಬಹುದು. ಏನೂ ಕೆಲಸ ಮಾಡದೆ ಮನೆಯಲ್ಲಿ ಕುಳಿತು ಸಮಯ ಕಳೆಯುವವರಿಗೂ ಕಾಟ ಕೊಡಬಹುದು.

ಬೇಸಿಗೆ ಆರಂಭ; ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು ಬೇಸಿಗೆ ಆರಂಭ; ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳು

ಬೆನ್ನು ನೋವನ್ನು ಶಮನಗೊಳಿಸಲು ಫಿಜಿಯೋಥೆರಪಿ ಸೇರಿದಂತೆ ಹಲವು ವೈದ್ಯಕೀಯ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಬೆನ್ನು ನೋವು ಬಂದ ಬಳಿಕ ಚಿಕಿತ್ಸೆ ಪಡೆಯುವ ಬದಲು ಬಾರದಂತೆ ನೋಡಿಕೊಳ್ಳುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಬೆನ್ನು ನೋವು ತಡೆಗೆ ಅನುಕೂಲವಾಗುವಂತೆ ಕೆಲವು ವ್ಯಾಯಾಮಗಳನ್ನು ಮಾಡುವುದು ಒಳ್ಳೆಯ ಅಭ್ಯಾಸ ಎನ್ನುವುದು ತಿಳಿದವರ ಸಲಹೆಯಾಗಿದೆ.

Astrology Tips: ಮಾನಸಿಕ ಒತ್ತಡ ನಿವಾರಣೆಗೆ ಯಾವ ರಾಶಿಯವರು ಏನು ಮಾಡಬೇಕು?Astrology Tips: ಮಾನಸಿಕ ಒತ್ತಡ ನಿವಾರಣೆಗೆ ಯಾವ ರಾಶಿಯವರು ಏನು ಮಾಡಬೇಕು?

ಬೆನ್ನಿನ ಸ್ನಾಯು ದುರ್ಬಲವಾದರೆ ಬೆನ್ನು ನೋವು ಕಾಣಿಸುತ್ತದೆ. ಹೀಗಾಗಿ ಸ್ನಾಯುಗಳನ್ನು ಬಲಪಡಿಸುವ ಕೆಲಸವನ್ನು ವ್ಯಾಯಾಮದ ಮೂಲಕ ಮಾಡುವುದು ಅತಿ ಮುಖ್ಯವಾಗಿದೆ. ವೈದ್ಯರು ಶಿಫಾರಸ್ಸು ಮಾಡಿದ ಮೂರು ವ್ಯಾಯಾಮಗಳು ಮತ್ತು ಒಂದಷ್ಟು ಸಲಹೆಗಳು ಬಹುಶಃ ಬೆನ್ನು ನೋವಿನಿಂದ ಬಳಲುವವರಿಗೆ ಅಥವಾ ಬೆನ್ನು ನೋವು ಬಾರದಂತೆ ತಡೆಯುವವರಿಗೆ ಅನುಕೂಲವಾಗಲಿದೆ.

ಮೂರು ವ್ಯಾಯಾಮ ಮಾಡಿ ನೋಡಿ

ಮೂರು ವ್ಯಾಯಾಮ ಮಾಡಿ ನೋಡಿ

ವ್ಯಾಯಾಮದ ಬಗ್ಗೆ ಹೇಳುವುದಾದರೆ ಮೊದಲ ವ್ಯಾಯಾಮ ಹೀಗಿದೆ. ಅದು ಏನೆಂದರೆ? ಕಾಲುಗಳನ್ನು ನೇರವಾಗಿಸಿ ಅಂಗಾತ ಮಲಗಬೇಕು. ಕೈಗಳನ್ನು ಪಕ್ಕದಲ್ಲಿಟ್ಟುಕೊಳ್ಳಬೇಕು. ಆ ನಂತರ ಮಂಡಿಯನ್ನು ಮೇಲೆತ್ತುತ್ತಾ ನಿಧಾನವಾಗಿ ಎದೆಯ ಕಡೆಗೆ ತರಬೇಕು. ಹೀಗೆ ಹತ್ತು ಬಾರಿ ಮಾಡಬೇಕು.

ಎರಡನೆಯದರಲ್ಲಿ ಮಂಡಿಗಳನ್ನು ಮಡಚಿ, ಪಾದಗಳನ್ನು ನೆಲಕ್ಕೂರಬೇಕು ಆ ನಂತರ ಮಡಚಿದ ಟವೆಲ್ ಮೇಲೆ ತಲೆಯನ್ನಿಟ್ಟು ಅಂಗಾತವಾಗಿ ಮಲಗಿ ನಿಧಾನವಾಗಿ ಕೆಳಭಾಗವನ್ನು ಮೇಲಕ್ಕೆತ್ತಿ ಇಳಿಸಬೇಕು. ಹೀಗೆ ಕನಿಷ್ಟ ಹತ್ತು ಬಾರಿ ಮಾಡಬೇಕು.

ಈ ವ್ಯಾಯಾಮ ಮಾಡಿ

ಈ ವ್ಯಾಯಾಮ ಮಾಡಿ

ಮೂರನೆಯ ವ್ಯಾಯಾಮದಲ್ಲಿ ಕೈಗಳು ಪಕ್ಕಗಳಲ್ಲಿ ಸಡಿಲವಾಗಿ ನೇತಾಡುವಂತೆ ನೇರವಾಗಿ ನಿಂತುಕೊಳ್ಳಬೇಕು. ಆ ನಂತರ ಭುಜಗಳನ್ನು ಹಿಂದಕ್ಕೆ ಹಿಡಿಯಬೇಕು. ಬಳಿಕ ಸೊಂಟದಿಂದ ನಿಧಾನವಾಗಿ ಮುಂದೆ ಬಾಗುತ್ತಾ ತಲೆ ಮತ್ತು ಕೈಗಳು ಮುಂದಕ್ಕೆ ಬೀಳುವಂತೆ ಮಾಡುತ್ತಾ ಕಾಲುಬೆರಳುಗಳನ್ನು ಸ್ಪರ್ಶಿಸಬೇಕು. ಹೀಗೆ ಮಾಡುವಾಗ ಮಂಡಿಗಳು ಬಾಗದಂತೆ ನೋಡಿಕೊಳ್ಳಬೇಕು. ಇದನ್ನು ಕೂಡ ಹತ್ತು ಬಾರಿ ಮಾಡಬೇಕು.

ವ್ಯಾಯಾಮ ಕಷ್ಟವಾದರೂ ಪರಿಣಾಮ ಜಾಸ್ತಿ

ವ್ಯಾಯಾಮ ಕಷ್ಟವಾದರೂ ಪರಿಣಾಮ ಜಾಸ್ತಿ

ಈ ವ್ಯಾಯಾಮಗಳನ್ನು ಒಮ್ಮೆಗೆ ಮಾಡಲು ಕಷ್ಟವಾಗುತ್ತದೆ. ಆದ್ದರಿಂದ ಪ್ರತಿದಿನವೂ ಒಂದೊಂದೇ ಹೆಚ್ಚಿಸುತ್ತಾ ಹತ್ತಕ್ಕೆ ಬಂದು ನಿಲ್ಲಿಸಬಹುದು. ಬಳಿಕ ಪ್ರತಿದಿನವೂ ಒಂದೊಂದನ್ನು ಹತ್ತತ್ತು ಬಾರಿ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ.

ಇವತ್ತಿನ ಪರಿಸ್ಥಿತಿಯಲ್ಲಿ ಹೆಚ್ಚಿನವರು ಹಗುರವಾದ ಕೆಲಸಗಳನ್ನೇ ಮಾಡುತ್ತಿರುತ್ತಾರೆ. ಅಂತಹವರು ಕೆಲವೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಕಠಿಣ ಕೆಲಸಗಳನ್ನು ಮಾಡಿದಾಗ ಹಲವು ತೊಂದರೆಗಳನ್ನು ಎದುರಿಸುವುದು ಸಾಮಾನ್ಯ. ಆದ್ದರಿಂದ ಪ್ರತಿದಿನವೂ ಒಂದಲ್ಲ ಒಂದು ರೀತಿಯ ವ್ಯಾಯಾಮಗಳನ್ನು ಮಾಡುವ ಮೂಲಕ ದೇಹವನ್ನು ದಂಡಿಸಬೇಕು. ಒಂದಷ್ಟು ದೂರ ವಾಕಿಂಗ್ ಮಾಡುವುದು, ಯೋಗ, ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಇಲ್ಲದೆ ಹೋದರೆ ಕಾಯಿಲೆಗಳು ನಮ್ಮನ್ನು ಒಂದಲ್ಲ ಒಂದು ರೀತಿಯಲ್ಲಿ ಅಟ್ಟಿಸಿಕೊಂಡು ಬರುವುದರಲ್ಲಿ ಸಂದೇಹವಿಲ್ಲ.

ವಿಶ್ರಾಂತಿಯ ದೇಹಕ್ಕೆ ಕಾಯಿಲೆ ಹೆಚ್ಚು

ವಿಶ್ರಾಂತಿಯ ದೇಹಕ್ಕೆ ಕಾಯಿಲೆ ಹೆಚ್ಚು

ದೇಹಕ್ಕೆ ಆಗುವ ಪ್ರತಿಯೊಂದು ನೋವು ಕೂಡ ನರಕಯಾತನೆಯೇ ಅದರಲ್ಲೂ ದೀರ್ಘ ಕಾಲದ ನೋವುಗಳು ಮನುಷ್ಯನನ್ನು ಜೀವಂತವಾಗಿಯೇ ಸಾಯಿಸುತ್ತಿರುತ್ತದೆ. ಇವತ್ತು ನಾವು ಆರೋಗ್ಯವಾಗಿದ್ದರೆ ಸಾಕು ಎಂಬ ಸ್ಥಿತಿಗೆ ಬಂದು ತಲುಪಿದ್ದೇವೆ. ಇದಕ್ಕೆ ಕಾರಣವೂ ನಾವೇ ಎಂದರೆ ತಪ್ಪಾಗಲಾರದು. ನಾವೆಲ್ಲರೂ ಕೂಡ ದೇಹದಂಡಿಸಿ ದುಡಿಯದೆ ಹಗುರವಾಗಿರಬೇಕೆಂದು ಬಯಸುತ್ತೇವೆ. ವಾಹನಗಳು ಮನೆ ಬಾಗಿಲಲ್ಲೇ ಇರುವುದರಿಂದ ನಡಿಗೆ ಮರೆತಿದೆ ಹೀಗಾಗಿ ಸದಾ ವಿಶ್ರಾಂತಿಯಲ್ಲಿರುವ ದೇಹ ಕೆಲವು ಸಂದರ್ಭಗಳಲ್ಲಿ ಕಾಯಿಲೆಗಳನ್ನು ಬಹು ಬೇಗ ಆಹ್ವಾನಿಸಿ ಬಿಡುತ್ತದೆ. ಇದಾಗ ಬಾರದು ಎನ್ನುವುದಾದರೆ ನಾವು ಒಂದಿಷ್ಟು ದೇಹಕ್ಕೆ ಕೆಲಸ ಕೊಡಲೇ ಬೇಕು.

English summary
Back pain common health issue in these days. Here are the Three simple exercises to avoid pack pain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X