ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಬಂದರೂ ಕೊರೊನಾ ನಿಯಂತ್ರಣ ಸಾಧ್ಯವೇ ಇಲ್ಲ; WHO ಎಚ್ಚರಿಕೆ

|
Google Oneindia Kannada News

ವಿಶ್ವದಾದ್ಯಂತ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಹಲವು ಲಸಿಕೆಗಳು ಅಭಿವೃದ್ಧಿಗೊಂಡಿವೆ. ಇಕಷ್ಟು ಲಸಿಕೆಗಳು ಅಭಿವೃದ್ಧಿ ಹಂತದಲ್ಲಿವೆ. ಕೆಲವೇ ವಾರದಿಂದೀಚೆಗೆ ಬ್ರಿಟನ್, ಅಮೆರಿಕ, ಫ್ರಾನ್ಸ್, ಕೆನಡಾ, ಜರ್ಮನಿ, ಇಸ್ರೇಲ್, ನೆದರ್ ಲೆಂಡ್, ಇನ್ನಿತರ ದೇಶಗಳಲ್ಲಿ ಲಕ್ಷಾಂತರ ಜನರಿಗೆ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.

ಭಾರತದಲ್ಲಿಯೂ ಇದೇ ಜನವರಿ 16ರಿಂದ ಕೊರೊನಾ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಆರಂಭಗೊಳ್ಳುತ್ತಿದೆ. ಆದರೆ, ಈ ಸಾಮೂಹಿಕ ಲಸಿಕಾ ಕಾರ್ಯಕ್ರಮಗಳು ಕೊರೊನಾ ಸೋಂಕನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ...

"ಈ ವರ್ಷ ಕೊರೊನಾ ನಿಯಂತ್ರಣ ಕಷ್ಟ"

ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಈ ಎಚ್ಚರಿಕೆ ನೀಡಿದ್ದು, "ಹಲವು ದೇಶಗಳು ಸಾಮೂಹಿಕವಾಗಿ ಲಸಿಕೆಗಳನ್ನು ನೀಡಲು ಆರಂಭಿಸಿವೆ. ಆದರೆ ಈ ವರ್ಷ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತರುವುದು ಕಷ್ಟ ಸಾಧ್ಯವೇ" ಎಂದು ಹೇಳಿದ್ದಾರೆ. ಸೋಮವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್, "ದೇಶದ ಜನಸಂಖ್ಯೆಯ ಅಂಶವನ್ನು ಗಮನಿಸುವುದಾದರೆ, ಸಾಮಾಜಿಕ ಅಂತರವನ್ನು, ಇನ್ನಿತರೆ ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಸುಲಭದ ಮಾತಲ್ಲ. ಹೀಗಾಗಿ ಸೋಂಕಿನ ಪ್ರಕರಣಗಳು ನಿರಂತರವಾಗಿರುತ್ತವೆ" ಎಂದಿದ್ದಾರೆ.

ಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

"70% ಜನರಿಗೆ ಲಸಿಕೆ ನೀಡುವುದು ಸಾಧ್ಯವೇ?"

ಲಸಿಕೆಗಳು ಕೊರೊನಾ ವಿರುದ್ಧ ಹೋರಾಡಲು ಪ್ರಾರಂಭಿಸಿದರೂ 2021ರಲ್ಲಿ ಹೆಚ್ಚಿನ ಜನಸಂಖ್ಯೆಯನ್ನು ಕೊರೊನಾ ಸೋಂಕು ತಗುಲದಂತೆ ತಡೆಯಲು ಸಾಧ್ಯವಾಗುವುದಿಲ್ಲ. ಕೆಲವೇ ದೇಶಗಳಲ್ಲಿ ಕೊರೊನಾ ನಿಯಂತ್ರಣ ಸಾಧ್ಯವಾಗುತ್ತದೆಯಾದರೂ, ಎಲ್ಲಾ ದೇಶಗಳಲ್ಲಿಯೂ ಇದು ಸಾಧ್ಯವಿಲ್ಲ. ದೇಶದ ಜನರಿಗೆ ಕೊರೊನಾ ಸೋಂಕು ತಗುಲದಂತೆ ತಡೆಯಲು ದೇಶದಲ್ಲಿ 70% ಲಸಿಕೆ ನೀಡುವುದು ಅವಶ್ಯಕವಿದೆ. ಹಾಗಾದಾಗ ಅಲ್ಲಿ ಜನರನ್ನು ಸೋಂಕಿನಿಂದ ರಕ್ಷಿಸಲು ಸಾಧ್ಯ. ಆದರೆ ಕೊರೊನಾ ಅತ್ಯಂತ ಸಾಂಕ್ರಾಮಿಕ ಸ್ವರೂಪಕ್ಕೆ ತಿರುಗಿದ್ದರೆ ಈ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕಾಗುತ್ತದೆ ಎಂದಿದ್ದಾರೆ.

"ರೂಪಾಂತರಗಳು ಕಠಿಣ ಸವಾಲು ಒಡ್ಡಬಹುದು"

ಕೊರೊನಾ ಸೋಂಕಿನೊಂದಿಗೆ ಸೋಂಕಿನ ರೂಪಾಂತರಗಳೂ ಕಾಣಿಸಿಕೊಳ್ಳುತ್ತಿರುವುದು ಕಠಿಣ ಸವಾಲು ಒಡ್ಡುತ್ತವೆ. ರೂಪಾಂತರಗಳು ಈ ಕೊರೊನಾ ನಿಯಂತ್ರಣಕ್ಕೆ ದೇಶಗಳು ತೆಗೆದುಕೊಂಡ ಕ್ರಮಗಳನ್ನೂ ಬದಲಿಸಬಹುದು. ಈಗಿರುವ ಸೋಂಕಿಗೆ ಇನ್ನಷ್ಟು ಶಕ್ತಿ ಕೊಡಬಹುದು ಎಂದು ಎಚ್ಚರಿಕೆ ನೀಡಿದ್ದಾರೆ ಮತ್ತೊಬ್ಬ ವಿಜ್ಞಾನಿ ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕ ಬ್ರೂಸ್ ಐಲ್ವಾರ್ಡ್.

3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಉಚಿತ: ನರೇಂದ್ರ ಮೋದಿ3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ಉಚಿತ: ನರೇಂದ್ರ ಮೋದಿ

 ಬೇಸಿಗೆಯಲ್ಲಿ ಪ್ರಕರಣಗಳು ಇಳಿಯುವ ಸೂಚನೆ

ಬೇಸಿಗೆಯಲ್ಲಿ ಪ್ರಕರಣಗಳು ಇಳಿಯುವ ಸೂಚನೆ

ಇದೇ ಫೆಬ್ರುವರಿ ತಿಂಗಳಿನಿಂದ ಬಡ ರಾಷ್ಟ್ರಗಳಿಗೂ ಲಸಿಕೆಗಳನ್ನು ವಿತರಿಸುತ್ತಿದ್ದು, ಎಲ್ಲರಿಗೂ ಲಸಿಕೆ ಎಂಬ ಧ್ಯೇಯವನ್ನು ಪೂರೈಸಲು ಜಾಗತಿಕವಾಗಿ ಒಗ್ಗಟ್ಟಾಗಬೇಕಿದೆ ಎಂದು ಬ್ರೂಸ್ ಐಲ್ವಾರ್ಡ್ ತಿಳಿಸಿದ್ದಾರೆ. ಇದು ವಿಶ್ವಸಂಸ್ಥೆ ಒಂದರಿಂದಲೇ ಸಾಧ್ಯವಾಗುವುದಿಲ್ಲ. ಎಲ್ಲಾ ದೇಶಗಳು, ಲಸಿಕೆ ತಯಾರಕರು ಇದಕ್ಕೆ ಮನಸ್ಸು ಮಾಡಬೇಕು ಎಂದಿದ್ದಾರೆ. ಬೇಸಿಗೆ ಬರುತ್ತಿದ್ದಂತೆ ಹಲವು ದೇಶಗಳಲ್ಲಿ ಕೊರೊನಾ ಪ್ರಕರಣಗಳು ಇಳಿಯುವುದು ಸಾಧ್ಯವಿದೆ ಎಂದು ವಿಶ್ವ ಸಂಸ್ಥೆ ತಾಂತ್ರಿಕ ಮುಖ್ಯಸ್ಥ ಮಾರಿಯಾ ವ್ಯಾನ್ ಕೆರ್ಕೋವ್ ತಿಳಿಸಿದ್ದಾರೆ.

English summary
World Health Organization scientists warned that the mass vaccinations would not bring about herd immunity to the coronavirus in 2021
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X