ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರಪ್ರದೇಶದಲ್ಲಿ 11 ಗ್ರಾಮಗಳಲ್ಲಿ ಕೊನೆಯ ಬಾರಿ ಮತದಾನ

|
Google Oneindia Kannada News

ಲಕ್ನೋ ಜನವರಿ 19: ಉತ್ತರ ಪ್ರದೇಶದಲ್ಲಿ ಈ ಬಾರಿ 11 ಗ್ರಾಮಗಳ ಮತದಾರರು ಕೊನೆಯ ಬಾರಿಗೆ ತಮ್ಮ ಗ್ರಾಮದಲ್ಲಿ ಮತ ಚಲಾಯಿಸಲಿದ್ದಾರೆ. ಈ ಎಲ್ಲಾ ಗ್ರಾಮಗಳು ಸೋನಭದ್ರ ಜಿಲ್ಲೆಯಲ್ಲಿ ಬರುತ್ತವೆ. ಇದು ಕನ್ಹಾರ್ ನೀರಾವರಿ ಯೋಜನೆಯಿಂದಾಗಿ ಮುಳುಗಡೆ ಪ್ರದೇಶಕ್ಕೆ ಒಳಪಡುತ್ತದೆ. ಈ ಗ್ರಾಮಗಳ ಜನರು ಈಗ ತಮ್ಮ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ. ಅದಕ್ಕೂ ಮೊದಲು ಕೆಲವು ಬೇಡಿಕೆಗಳಿದ್ದು ಅವುಗಳ ಪೂರೈಕೆಗಾಗಿ, ತಮ್ಮ ಗ್ರಾಮದಲ್ಲೇ ತಮ್ಮ ಕೊನೆಯ ಮತವನ್ನು ತಮ್ಮ ಮುಂದಿನ ಭವಿಷ್ಯಕ್ಕಾಗಿ ಚಲಾಯಿಸಲು ಮನಸ್ಸು ಮಾಡಿದ್ದಾರೆ. ಮುಂದಿನ ಚುನಾವಣೆವರೆಗೂ ಜನ ಈ ಗ್ರಾಮ ಬಿಡುವುದಿಲ್ಲ ಎಂಬ ಕಾರಣಕ್ಕೆ ಮತ ಚಲಾಯಿಸುತ್ತಿದ್ದಾರೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಈ ದಿನಕ್ಕಾಗಿ ಕಾಯುತ್ತಿದ್ದಾರೆ ಮತದಾರರು

ಈ ದಿನಕ್ಕಾಗಿ ಕಾಯುತ್ತಿದ್ದಾರೆ ಮತದಾರರು

ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ದುಡ್ಡಿ (ಮೀಸಲು) ವಿಧಾನಸಭಾ ಕ್ಷೇತ್ರದ 11 ಗ್ರಾಮಗಳು ಈ ಚುನಾವಣೆಯಲ್ಲಿ ಕೊನೆಯ ಬಾರಿಗೆ ಮತ ಚಲಾಯಿಸಲಿವೆ. ಈ ಗ್ರಾಮಗಳ ಜನರು ಕಳೆದ 45 ವರ್ಷಗಳಿಂದ ಇದನ್ನು ನಿರೀಕ್ಷಿಸುತ್ತಿದ್ದರು. ಆದರೆ ಈಗ ಈ ಸಮಯ ಅವರ ಮುಂದೆ ಬಂದಿದೆ. ಮುಂದಿನ ಯಾವುದೇ ಚುನಾವಣೆಯಲ್ಲಿ ಈ ಎಲ್ಲಾ ಗ್ರಾಮಗಳ ಜನರಿಗೆ ಬೇರೆ ಸ್ಥಳಗಳಲ್ಲಿ ಮತ ಚಲಾಯಿಸಲು ಅವಕಾಶ ಸಿಗುತ್ತದೆ. ಆದರೆ, ಅವರು ತಮ್ಮ ಹಳ್ಳಿಯಲ್ಲಿ ತಮ್ಮ ಹಕ್ಕು ಚಲಾಯಿಸಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ ಈ ಪ್ರದೇಶದಲ್ಲಿ ಕನ್ಹಾರ್ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಈ ಯೋಜನೆಯು ಈ ವರ್ಷದ ಅಂತ್ಯದ ವೇಳೆಗೆ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ನೀರಾವರಿ ಯೋಜನೆ ಆರಂಭವಾದ ತಕ್ಷಣ ಸುಂದರಿ ಸೇರಿದಂತೆ ಉಳಿದ 10 ಗ್ರಾಮಗಳು ಸಂಪೂರ್ಣ ಜಲಾವೃತಗೊಳ್ಳಲಿವೆ.

1976 ರಿಂದ ಈ ಯೋಜನೆ ಸ್ಥಗಿತ

1976 ರಿಂದ ಈ ಯೋಜನೆ ಸ್ಥಗಿತ

1976ರಲ್ಲಿ ಕನ್ಹಾರ್ ನೀರಾವರಿ ಯೋಜನೆಗೆ ಶಂಕುಸ್ಥಾಪನೆಯಾದಾಗಿನಿಂದ ಇಲ್ಲಿನ ಜನರು ಈ ದಿನಕ್ಕಾಗಿ ಕಾಯುತ್ತಿದ್ದಾರೆ. ಸುಂದರಿ ಗ್ರಾಮದ ವಿಶ್ವನಾಥ ಖಾರವಾರ ಆಂಗ್ಲ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ ಅಲ್ಲಿನ ಜನ 'ಈ ಯೋಜನೆ ಆರಂಭಕ್ಕೆ ನಮ್ಮ ಜೀವನದ ಬಹುಪಾಲು ಸಮಯದಿಂದ ಕಾಯುತ್ತಿದ್ದೇವೆ. ಆದರೆ, ಇದರಿಂದ ನಮ್ಮ ಜಮೀನು ಪಡೆಯಲಾಗಿದೆ. ನಮ್ಮ ಜಮೀನಿಗೆ ಪ್ರತಿ ಕುಟುಂಬವು ತಮ್ಮ ಜಮೀನಿಗೆ ಬದಲಾಗಿ 7.11 ಲಕ್ಷ ರೂ. ಪರಿಹಾರ ಹೆಚ್ಚಳಕ್ಕೆ ಒತ್ತಾಯಿಸುತ್ತಿದೆ.

ಕಷ್ಟಗಳಿಂದ ಪಾರಾಗುವ ನಿರೀಕ್ಷೆ

ಕಷ್ಟಗಳಿಂದ ಪಾರಾಗುವ ನಿರೀಕ್ಷೆ

ಈ ಯೋಜನೆ ಆರಂಭವಾದಾಗಿನಿಂದಲೂ ಇಲ್ಲಿ ಆಣೆಕಟ್ಟು ನಿರ್ಮಾಣವಾಗಿ ನಮ್ಮ ಜಮೀನು ನಾವು ಬಿಟ್ಟುಕೊಡುವ ಯೋಚನೆ ನಮಗೆ ಕಾಡುತ್ತಿದೆ. ಆದರೆ ಇದಕ್ಕೆ ನಿರೀಕ್ಷಿತ ಪರಿಹಾರ ನೀಡಿದರೆ, ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಜನ ವಿನಂತಿಸುತ್ತಿದ್ದಾರೆ. ಕಾಮಗಾರಿ ಆರಂಭವಾದರೆ ಈ ಸ್ಥಳದಲಿಂದ ಜನ ಸ್ಥಳಾಂತರಗೊಳ್ಳಬೇಕು. ಈ ಸ್ಥಳದಿಂದ ಕೊನೆಯ ಬಾರಿಗೆ ಇಲ್ಲಿಯ ಜನ ಮತದಾನ ಮಾಡಲಿದ್ದಾರೆ. ಆದರೆ ಅದಕ್ಕೂ ಮುನ್ನ ಈ ಬಾರಿಯಾದರೂ ತಮ್ಮ ಜಮೀನಿಗೆ ಉತ್ತಮ ಪರಿಹಾರ ಸಿಗುವುದೇ ಎನ್ನುವ ನಿರೀಕ್ಷೆಯಿಂದ ಇಲ್ಲಿಯ ಜನ ಕಾಯುತ್ತಿದ್ದಾರೆ. ಸುಂದರಿ ಗ್ರಾಮದಂತೆಯೇ ಅಂತಿಮ ಚುನಾವಣೆ ಮುಂದಿರುವಾಗ ವಿಧಾನಸೌಧದ ಇನ್ನುಳಿದ 10 ಗ್ರಾಮಗಳ ಜನರ ಮನದಲ್ಲಿ ಇದೇ ರೀತಿಯ ತಳಮಳವಿದೆ. ಸುಗ್ವಾಮನ್ ಗ್ರಾಮದ ರಾಣಿ ದೇವಿ ಹೇಳುವಂತೆ, "ಈ ಚುನಾವಣೆಯ ನಂತರ, ಉತ್ತಮವಾದ ಬದಲಾವಣೆಯು ಸಂಭವಿಸುತ್ತದೆ. ನದಿಯು ನಮ್ಮ ಭೂಮಿಯಲ್ಲಿ ಹರಿಯುತ್ತದೆ. ನಾವೆಲ್ಲರೂ ಸೋನಭದ್ರದ ವಿವಿಧ ಭಾಗಗಳಲ್ಲಿ ಚದುರಿಹೋಗುತ್ತೇವೆ. ನಮ್ಮ ಉತ್ತಮ ಭವಿಷ್ಯಕ್ಕಾಗಿ ನಮ್ಮ ಗ್ರಾಮದಿಂದ ನಮ್ಮ ಕೊನೆಯ ಮತವನ್ನು ಚಲಾಯಿಸುತ್ತೇವೆ' ಎಂದಿದ್ದಾರೆ.

ಈಗ ಮತದಾರರ ಸಂಖ್ಯೆ ಹೆಚ್ಚಳ

ಈಗ ಮತದಾರರ ಸಂಖ್ಯೆ ಹೆಚ್ಚಳ

ಯುಪಿಯ 403 ವಿಧಾನಸಭಾ ಕ್ಷೇತ್ರದ 11 ಗ್ರಾಮಗಳಲ್ಲಿ ಒಟ್ಟು 25,000 ಮತದಾರರಿದ್ದಾರೆ. ಈಗ ಜನಸಂಖ್ಯೆಯು ಸುಮಾರು 50,000 ಆಗಿದೆ. ಈ ಗ್ರಾಮಗಳ ಜನರ ಪರವಾಗಿ ಕೊರ್ಚಿ ಗ್ರಾಮದ ಮಾಜಿ ಮುಖಂಡ ಗಂಭೀರ್ ಪ್ರಸಾದ್ ಅವರು ಚುನಾವಣಾ ಸಮಯದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜನರು ಸಂಪರ್ಕದಲ್ಲಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಪಕ್ಷಗಳು ನಮ್ಮ ಮಾತು ಕೇಳುತ್ತವೆ. ನಮಗಾಗಿ ಏನಾದರೂ ಮಾಡುವುದಾಗಿ ಭರವಸೆ ನೀಡುವವರಿಗೆ ನಾವು ಬೆಂಬಲ ನೀಡಲು ನಿರ್ಧರಿಸಿದ್ದೇವೆ. ಯೋಜನೆಗೆ ಅಗತ್ಯವಿರುವ ಶೇ.65ಕ್ಕೂ ಹೆಚ್ಚು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ನೀರಾವರಿ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ ಕೆಲವು ಗ್ರಾಮಸ್ಥರು ಸರ್ಕಾರದ ಷರತ್ತುಗಳನ್ನು ಒಪ್ಪಲು ನಿರಾಕರಿಸುತ್ತಿದ್ದಾರೆ.

ಭರವಸೆಯಿಂದಾಗಿಲ್ಲ ಯಾವ ಪ್ರಯೋಜನ

ಭರವಸೆಯಿಂದಾಗಿಲ್ಲ ಯಾವ ಪ್ರಯೋಜನ

ಸ್ಥಳಾಂತರಗೊಂಡ ಕುಟುಂಬದಿಂದ ಕನಿಷ್ಠ ಒಬ್ಬ ಸದಸ್ಯನಿಗೆ ದುಪ್ಪಟ್ಟು ಪರಿಹಾರ ಮತ್ತು ಉದ್ಯೋಗ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆ ಮತ್ತು ಪರ್ಯಾಯ ಸಾಗುವಳಿ ಭೂಮಿಯನ್ನು ಗ್ರಾಮಸ್ಥರು ಬಯಸುತ್ತಾರೆ ಎಂದು ಗಂಭೀರ ಪ್ರಸಾದ್ ಹೇಳುತ್ತಾರೆ. ಕನ್ಹಾರ್ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ, ಅದರ ಕಾರ್ಯಾರಂಭವು ಯುಪಿ, ಛತ್ತೀಸ್‌ಗಢ ಮತ್ತು ಜಾರ್ಖಂಡ್‌ನ ಹಲವು ಭಾಗಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆ ಆರಂಭವಾದಾಗ 27.75 ಕೋಟಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದು, ಈಗ 2000 ಕೋಟಿ ರೂ.ಗೆ ಏರಿಕೆಯಾಗಿದೆ. ಆದರೆ, ಇದರಿಂದ 35,000 ಹೆಕ್ಟೇರ್‌ಗೆ ನೀರಾವರಿ ನೀರು ಬರಲಿದ್ದು, 108 ಗ್ರಾಮಗಳಿಗೆ ಅನುಕೂಲವಾಗಲಿದೆ. ಆದರೆ, ಇದರಿಂದಾಗಿ ಸುಮಾರು 2,500 ಕುಟುಂಬಗಳು ಸ್ಥಳಾಂತರಗೊಳ್ಳಬೇಕಾಗುತ್ತದೆ.

Recommended Video

ಮೋದಿ ಭಾಷಣ ಸಿಕ್ಕಾಪಟ್ಟೆ ಟ್ರೋಲ್:ತಡಬಡಾಯಿಸಿದ ಮೋದಿ ಮಾಡಿದ್ದೇನು? | Oneindia Kannada

English summary
This time in Uttar Pradesh, voters of 11 villages will vote in their village for the last time. This will happen because his village will not be left till the next elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X