ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರದಲ್ಲಿ ಹಾವು ಪ್ರತ್ಯಕ್ಷ! ದೋಣಿ ಮೇಲೆ ನಿಂತ ವ್ಯಕ್ತಿ ಮಾಡಿದ್ದೇನು ಗೊತ್ತಾ..?

|
Google Oneindia Kannada News

ಹಾವು ಕಂಡರೆ ಯಾರಿಗೆ ಭಯವಿಲ್ಲ ಹೇಳಿ? ಅದ್ರಲ್ಲೂ ಕೆಲವರು ಹಾವಿನ ಹೆಸರು ಕೇಳಿದ್ರೂ ಸಾಕು ನಡುಗಿ ಹೋಗ್ತಾರೆ. ಇನ್ನೂ ಕೆಲವರು ಇರ್ತಾರೆ ಧೈರ್ಯ ಮಾಡಿ ಹಾವಿನ ಜೊತೆ ಆಟ ಆಡ್ತಾರೆ! ಅಂತಹದ್ದೇ ಒಬ್ಬ ವ್ಯಕ್ತಿಯ ವಿಡಿಯೋ ಈಗ ವೈರಲ್ ಆಗಿದೆ. ಆಸ್ಟ್ರೇಲಿಯಾದ ಯೂಟ್ಯೂಬರ್​ ಹಂಚಿಕೊಂಡ ವಿಡಿಯೋದಲ್ಲಿ ದೈತ್ಯ ಹಾವೊಂದು ಸಮುದ್ರದ ನಡುವೆ ದಿಢೀರ್ ಪ್ರತ್ಯಕ್ಷವಾಗುತ್ತದೆ. ನೋಡ ನೋಡುತ್ತಿದ್ದಂತೆ ಆ ದೈತ್ಯವಾದ ವಿಷಜಂತು ಬೋಟ್ ಬಳಿಯೇ ಬಂದುಬಿಡುತ್ತದೆ.

ಆದರೆ ಬೋಟ್‌ನಲ್ಲಿದ್ದ ವ್ಯಕ್ತಿ ಮಾತ್ರ ಭಯಪಡದೆ ಹಾವಿನ ಜೊತೆ ಸರಸವಾಡಿದ್ದಾನೆ. ಆಸಿಸ್​​ನ ಬ್ರೋಡಿ ಮಾಸ್​ ಎಂಬಾತ ಈ ವಿಡಿಯೋನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ಸದ್ದು ಮಾಡುತ್ತಿದೆ. ಸಮುದ್ರದ ಮಧ್ಯಭಾಗಕ್ಕೆ ಬೋಟ್ ಕೊಂಡೊಯ್ದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಬ್ರೋಡಿ ಮಾಸ್‌ಗೆ ಈ ಹಾವು ಕಂಡಿದೆ.

 This huge sea snake video now viral on internet

ಸಹಜವಾಗಿ ಹಾವುಗಳನ್ನ ಕಂಡರೆ ಜನ ಬೆಚ್ಚಿಬೀಳುತ್ತಾರೆ. ಬ್ರೋಡಿ ಮಾಸ್​ ಮಾತ್ರ 'ಹಾವು' ಕಂಡ ತಕ್ಷಣ ಅಲರ್ಟ್ ಆಗಿ, ವಿಡಿಯೋ ಮಾಡಿದ್ದಾನೆ. ಆರಾಮಾಗಿ ಈಜುತ್ತಾ ಬಂದ ಆ ಹಾವು ಬೋಟ್‌ನ ಬಳಿ ಒಂದು ವಿಸಿಟ್ ಹಾಕಿದ್ದು, ತಕ್ಷಣ ಅಲ್ಲಿಂದ ವಾಪಸ್ ಸಮುದ್ರದ ಒಳಗೆ ಮಾಯವಾಗಿದೆ.

ಪ್ರೇಯಸಿ ಹುಡುಕಿ ಬಂದಿತ್ತಾ..?
ಹಾವು ಬೋಟ್‌ ಬಳಿ ಬಂದಿದ್ದನ್ನು ಹಾಗೂ ಹಾವಿನ ವರ್ತನೆ ವರ್ಣಿಸಿರುವ ಬ್ರೋಡಿ, ಹಾವಿನ ಈ ವರ್ತನೆ ಅದರ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ಕಾಣುತ್ತೆ ಎಂದಿದ್ದಾನೆ. ಕುತೂಹಲದಿಂದ ಸಂಗಾತಿ ಸಿಗಬಹುದೆಂದು ಹಾವು ಬೋಟ್‌ ಬಳಿ ಬಂದಿದೆ ಎಂದಿದ್ದಾನೆ ಬ್ರೋಡಿ​. ಏಕೆಂದರೆ ಸಾಮಾನ್ಯವಾಗಿ ಈ ಹಾವುಗಳು ಮನುಷ್ಯರು ಅಥವಾ ಯಾವುದೇ ಅಪರಿಚಿತ ವಸ್ತು ಕಂಡರೆ ದೂರ ಸರಿಯುತ್ತವಂತೆ. ಆದರೆ ಸಮುದ್ರದ ನಡುವೆ ದಿಢೀರ್ ಪ್ರತ್ಯಕ್ಷ್ಯವಾಗಿದ್ದ ಹಾವು ಬೋಟ್‌ನ ಸಮೀಪವೇ ಓಡಿ ಬಂದಿದೆ. ಇದು ಹಾವು ಮೈಮರೆತಿದ್ದರ ಲಕ್ಷಣವಾಗಿದೆ, ಬಹುಶಃ ಇದು ಸಂತಾನೋತ್ಪತ್ತಿಗೆ ಚಡಪಡಿಸಿದೆ ಎಂದಿದ್ದಾನೆ ಬ್ರೋಡಿ ಮಾಸ್​.

ಸಮುದ್ರದ ಹಾವು ವಿಷಕಾರಿ
ನೆಲದ ಮೇಲೆ ಹರಿದಾಡುವ ಹಾವುಗಳಂತೆ ಸಮುದ್ರದಲ್ಲಿ ವಾಸಿಸುವ ಹಾವುಗಳು ಕೂಡ ವಿಷಕಾರಿ. ಈ ಪೈಕಿ ಬಹುತೇಕ ಹಾವುಗಳು ಕಚ್ಚಿದರೆ ಸಾಕು ಮನುಷ್ಯ ಉಳಿಯೋದೆ ಡೌಟ್. ನೂರಾರು ಜಾತಿಯ ಹಾವುಗಳನ್ನು ಸಮುದ್ರದಲ್ಲೂ ಕಾಣಬಹುದು. ಸಾಮಾನ್ಯವಾಗಿ ಸಮುದ್ರದ ಆಳದಲ್ಲೇ ಜೀವಿಸುವ ಸಮುದ್ರದ ಹಾವುಗಳು, ದಡಕ್ಕೆ ಬರುವುದು ಬಲು ಅಪರೂಪ. ಹೀಗೆ ಕೆಲವು ಹಾವುಗಳು ಬೋಟ್‌ ಬಳಿ ವಿಸಿಟ್ ಕೊಟ್ಟು ಪ್ರವಾಸಕ್ಕೆ ಬಂದವರಿಗೆ ಶಾಕ್ ಕೊಡುತ್ತವೆ. ಸಮುದ್ರದಲ್ಲಿ ಹುಳುಗಳು, ಸಣ್ಣಪುಟ್ಟ ಮೀನುಗಳೇ ಈ ಹಾವುಗಳಿಗೆ ಆಹಾರ.

ಲಕ್ಷ ಲಕ್ಷ ಜನ ಬಲಿ
ಪ್ರತಿವರ್ಷ ಸುಮಾರು 54 ಲಕ್ಷ ಜನರಿಗೆ ಹಾವುಗಳು ಕಚ್ಚುತ್ತವೆ. ಜಗತ್ತಿನಾದ್ಯಂತ ವಿಷಜಂತುಗಳ ಕಾಟಕ್ಕೆ ಬೆಚ್ಚಿ ಬೀಳದ ದೇಶವಿಲ್ಲ. ಆದ್ರೆ ಈ 54 ಲಕ್ಷ ಜನರಲ್ಲಿ 80 ಸಾವಿರದಿಂದ 1 ಲಕ್ಷ 40 ಸಾವಿರ ಜನ ಮೃತಪಡುತ್ತಾರೆ. ಹಾವುಗಳಿಗೆ ಕೃಷಿ ಕೆಲಸ ಮಾಡುವವರು ಹಾಗೂ ಮಕ್ಕಳೇ ಹೆಚ್ಚು ಟಾರ್ಗೆಟ್. ಅದ್ರಲ್ಲೂ ಪುಟ್ಟ ಮಕ್ಕಳ ದೇಹ ಚಿಕ್ಕದಾದ ಕಾರಣ ಹಾವುಗಳ ಹಲ್ಲಿಗೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ವಿಷಕಾರಿ ಹಾವುಗಳಿಂದ ಕಚ್ಚಿಸಿಕೊಂಡ ಮಕ್ಕಳಿಗೆ ಭವಿಷ್ಯದಲ್ಲೂ ವಿವಿಧ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ತಜ್ಞರು.

English summary
Australian youtuber films a huge sea snake, and that video trending on internet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X