ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

11 ವರ್ಷದ ಈ ತಮಿಳು ಹುಡುಗಿ ಬುದ್ಧಿಮತ್ತೆ ಐನ್ ಸ್ಟೀನ್ ಗಿಂತ ಹೆಚ್ಚು

By ಅನಿಲ್ ಆಚಾರ್
|
Google Oneindia Kannada News

ಬುದ್ಧಿಮತ್ತೆಯನ್ನು ಅಳೆಯುವ ಪರೀಕ್ಷೆಯಲ್ಲಿ ಹನ್ನೊಂದು ವರ್ಷದ ಈ ತಮಿಳು ಹುಡುಗಿ ಅತ್ಯಂತ ಹೆಚ್ಚು ಅಂಕ ಗಳಿಸಿದ್ದಾಳೆ. ಈಕೆ ಹೆಸರು ಹರಿಪ್ರಿಯಾ. ವಾಸ ಇರುವುದು ಯು.ಕೆ.ಯಲ್ಲಿ. ಹರಿಪ್ರಿಯಾಳ ಪರಿಚಯ ಆಷ್ಟಕ್ಕೇ ನಿಲ್ಲುವುದಿಲ್ಲ. ಜಗತ್ತಿನ ಖ್ಯಾತ ವಿಜ್ಞಾನಿಗಳ ಸಾಲಿನಲ್ಲಿ ನಿಲ್ಲಬಲ್ಲಂಥ ಕೀರ್ತಿ ಗಳಿಸಿದ್ದಾಳೆ.

ಬಿಬಿಸಿ ತಮಿಳು ಚಾನೆಲ್ ನಿಂದ ಆಕೆಯ ಸಂದರ್ಶನ ಮಾಡಲಾಗಿದೆ. ಹರಿಪ್ರಿಯಾ ಶಿಕ್ಷಣ ಮಾತ್ರವಲ್ಲ, ಬಹು ಭಾಷೆ ತಿಳಿದ, ನೃತ್ಯ, ಸಂಗೀತ, ಹಾಡುಗಾರಿಕೆ ಹಾಗೂ ಕ್ರೀಡೆ ಎಲ್ಲದರಲ್ಲೂ ಮುಂದಿದ್ದಾಳೆ. ಬುದ್ಧಿ ಮತ್ತೆ ಅಳೆಯುವ ಸಲುವಾಗಿ ನಾನಾ ಪರೀಕ್ಷೆಗಳನ್ನು ಮಾಡುತ್ತಾರೆ. ಇದು ದೇಶದಿಂದ ದೇಶಕ್ಕೆ ಅಥವ್ ಕಂಪೆನಿಯಿಂದ ಕಂಪೆನಿಗೆ ಬದಲಾಗುತ್ತದೆ.

IQ ಟೆಸ್ಟ್ ನಲ್ಲಿ ಐನ್ ಸ್ಟೈನ್‍ ರನ್ನು ಮೀರಿಸಿದ ಭಾರತೀಯ ಮೂಲದ ಬಾಲಕಿIQ ಟೆಸ್ಟ್ ನಲ್ಲಿ ಐನ್ ಸ್ಟೈನ್‍ ರನ್ನು ಮೀರಿಸಿದ ಭಾರತೀಯ ಮೂಲದ ಬಾಲಕಿ

ಎಷ್ಟು ಬೇಗ ಒಂದು ವಿಷಯವನ್ನು ಗ್ರಹಿಸುತ್ತಾರೋ ಎಂದು ಮಾತ್ರವಲ್ಲ, ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಮೆದುಳಿಗೆ ಎಷ್ಟಿದೆ ಎಂಬುದನ್ನೂ ಅಳೆಯಲಾಗುವುದು. ಬ್ರಿಟಿಷ್ ಮೆನ್ಸಾದಲ್ಲಿ ಇರುವ ಜಗತ್ತಿನ ಅತ್ಯಂತ ವಿಖ್ಯಾತ ಬೌದ್ಧಿಕ ಪ್ರಯೋಗಾಲಯದಲ್ಲಿ ನಡೆದ 'Cattel III B' ಪರೀಕ್ಷೆಯಲ್ಲಿ ಹರಿಪ್ರಿಯಾ ಭಾಗವಹಿಸಿದ್ದಳು.

This 11 year old Tamil girl IQ more than Albert Einstein

ಅದರಲ್ಲಿ ಅತ್ಯಂತ ಹೆಚ್ಚು ಅಂಕ 162 ಪಡೆದಿದ್ದಳು. ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಾದ ಆಲ್ಬರ್ಟ್ ಐನ್ ಸ್ಟೀನ್ ಹಾಗೂ ಸ್ಟೀಫನ್ ಹಾಕಿನ್ಸ್ ಗಿಂತ ಎರಡು ಅಂಕ ಹೆಚ್ಚು ಪಡೆದಿದ್ದಳು ಹರಿಪ್ರಿಯಾ. ಅದೇ ರೀತಿ, ಬ್ರಿಟಿಷ್ ಕಲ್ಚರ್ ಫೇರ್ ಸ್ಕೇಲ್, ಮೆನ್ಸಾ ಅವರು ಬುದ್ಧಿಮತ್ತೆಯನ್ನು ಅಳೆಯುವ ಮತ್ತೊಂದು ವಿಧಾನ. ಅದರಲ್ಲಿ ಕೂಡ ಅತಿ ಹೆಚ್ಚು, ಅಂದರೆ 140 ರೇಟಿಂಗ್ ಪಡೆದಿದ್ದಳು.

ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ! ಸ್ವಿಟ್ಜರ್ಲೆಂಡಲ್ಲಿ ನಾ ಕಂಡ ಐನ್ಸ್ಟೀನ್ ಎಂಬ ಕೌತುಕ!

ಸಮಸ್ಯೆ ಬಗೆಹರಿಸುವ ಕೌಶಲ
ಇನ್ನು ಹರಿಪ್ರಿಯಾಗೆ ಪೋಷಕರ ಬೆಂಬಲವೂ ಇದೆ. "ಕಳೆದ ವಾರ ಎರಡನೇ ಬಾರಿಗೆ ಬರೆದ ಪರೀಕ್ಷೆಯಲ್ಲಿ ಪೂರ್ತಿ ಅಂಕ ಪಡೆದುಕೊಂಡೆ" ಎಂದು ವಿವರಿಸುತ್ತಾಳೆ ಹರಿಪ್ರಿಯಾ. ಮೆನ್ಸಾ ಅವರ ಪ್ರಕಾರ, ಮಕ್ಕಳಿಗೆ ಇವುಗಳಲ್ಲಿ ಕೆಲವು ಅಥವಾ ಈ ಎಲ್ಲ ಗುಣಗಳು ಇದ್ದರೆ, ಅಂದರೆ ವೇಗವಾಗಿ ಕಲಿಕೆ, ದೊಡ್ಡ ಮಟ್ಟದ ಭಾಷಾ ಜ್ಞಾನ, ಕ್ರಿಯಾತ್ಮಕತೆ, ನಾಯಕತ್ವ ಗುಣ, ಸಮಸ್ಯೆ ಬಗೆಹರಿಸುವ ಕೌಶಲ ಇವೆಲ್ಲವೂ ಇರಬೇಕು.

This 11 year old Tamil girl IQ more than Albert Einstein

ಭಾರತದ ತಮಿಳುನಾಡಿನ ಕಾರೈಕುಡಿಯಲ್ಲಿ ಹುಟ್ಟಿರುವ ಹರಿಪ್ರಿಯಾಳ ತಂದೆ ರಾಧಾಕೃಷ್ಣ ಅವರು ಬ್ರಿಟನ್ ನಲ್ಲಿ ಭಾರತ ಮೂಲದ ತಂತ್ರಜ್ಞಾನ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ. "ಹರಿಪ್ರಿಯಾ ಅದ್ಭುತವಾದ ಪ್ರತಿಭೆ. ಅದು ನಮಗೆ ಕಾಣುತ್ತದೆ. ಭಾಷಾ ಜ್ಞಾನ, ಗಣಿತ, ವಿಜ್ಞಾನ, ಮೆನ್ಸಾದವರ ಫಿಲ್ಮ್ಸ್ ಗಳಿಂದ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಆ ಮೂಲಕ ಆಕೆ ದಾಖಲೆ ಮಾಡಿದ್ದಾಳೆ" ಎನ್ನುತ್ತಾರೆ ರಾಧಾಕೃಷ್ಣ.

ಮೆನ್ಸಾ ಆಯ್ಕೆಯಂತೆ ಅತಿ ಹೆಚ್ಚು ರೇಟಿಂಗ್ ಪಡೆಯುವ ಮೂಲಕ ಹರಿಪ್ರಿಯಾಗೆ ಆದನ್ನು ಇತರ ಗುಂಪಿನ ಬುದ್ಧಿವಂತ ಮಕ್ಕಳು, ವಯಸ್ಕರರ ಮೇಲೆ ಅನ್ವಯಿಸಲು ಆವಕಾಶ ದೊರೆಯಿತು. ಮೆನ್ಸಾ ಬುದ್ಧಿಮತ್ತೆ ಆಯ್ಕೆಯಲ್ಲಿ ತೊಂಬತ್ತೆಂಟು ಪರ್ಸೆಂಟ್ ಗೂ ಹೆಚ್ಚು ರೇಟಿಂಗ್ ಪಡೆಯುವವರಿಗೆ ಮಾತ್ರ ಸದಸ್ಯತ್ವ ನೀಡಲಾಗುತ್ತದೆ.

This 11 year old Tamil girl IQ more than Albert Einstein

ಉಳಿದ ವಿದ್ಯಾರ್ಥಿಗಳಿಗಿಂತ ಹೆಚ್ಚು ಅಂಕ
ತಮ್ಮ ಮಗಳ ಸಾಧನೆ ಬಗ್ಗೆ ತಾಯಿ ಕೃಷ್ಣಂಭಲಿ ಹೇಳುವ ಪ್ರಕಾರ, ನಾವಿಬ್ಬರೇ ಒಮ್ಮೆ ಬೆಂಗಳೂರಿಗೆ ಹೋಗಿದ್ದೆವು. ಆಗ ಶಾಲೆಯ ಅರ್ಧ ವಾರ್ಷಿಕ ಪರೀಕ್ಷೆ ಬರೆದಳು ಹರಿಪ್ರಿಯಾ. ಅದರಲ್ಲಿ ಇತರ ವಿದ್ಯಾರ್ಥಿಗಳಿಗಿಂತ ಅತ್ಯುತ್ತಮವಾಗಿ ಪರೀಕ್ಷೆ ಬರೆದಳು. ಇಂಗ್ಲಿಷ್ ನಲ್ಲೂ ಯಾವ ಸಮಸ್ಯೆ ಆಗಲಿಲ್ಲ ಎನ್ನುತ್ತಾರೆ.

ತನ್ನದೇ ವಯಸ್ಸಿನ ಇತರ ವಿದ್ಯಾರ್ಥಿಗಳ ಜತೆ ಹೋಲಿಸಿದರೆ ಏನು ವ್ಯತ್ಯಾಸ ಎಂದು ಕೇಳಿದರೆ, ಆರನೇ ಗ್ರೇಡ್ ಓದುತ್ತಿರುವ ಹರಿಪ್ರಿಯಾ ತನ್ನ ಅನುಕೂಲಕ್ಕೆ ತಕ್ಕಂತೆ ಸಮಯ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾಳೆ. ಶಾಲೆಯಲ್ಲಿ ಮೊದಲ ಸ್ಥಾನ ಪಡೆಯಲು ಸಮಯ ತೀರಾ ಕಡಿಮೆ ಇದೆಯಂತೆ. ಈ ರೀತಿ ಆಯ್ಕೆ ಮಧ್ಯೆ ಹೊಯ್ದಾಟ ಇರುತ್ತದೆ. ಆದರೆ ಅದರಿಂದ ಉದ್ವಿಗ್ನತೆ ಇಲ್ಲ ಎನ್ನುತ್ತಾಳೆ ಹರಿಪ್ರಿಯಾ.

This 11 year old Tamil girl IQ more than Albert Einstein

ಇವೆಲ್ಲದರ ಜತೆಗೆ ತಮಿಳು ಭಾಷೆ, ಕರ್ನಾಟಕ ಸಂಗೀತ, ಸಂಗೀತ, ಭರತನಾಟ್ಯ ಕಲಿಯುತ್ತಿದ್ದಾಳೆ ಹರಿಪ್ರಿಯಾ. ಯುರೋಪ್ ನ ಎಂಬತ್ನಾಲ್ಕು ದೇಶಗಳ ವ್ಯಾಪ್ತಿಯಲ್ಲಿ ನಡೆಸುವ ತಮಿಳು ಭಾಷೆ ಪರೀಕ್ಷೆಯಲ್ಲಿ ಪ್ರಾವೀಣ್ಯತೆ ಪಡೆದಿದ್ದಾಳೆ. ಇದರ ಜತೆಗೆ ಬ್ಯಾಸ್ಕೆಟ್ ಬಾಲ್, ಹಾಕಿ ಹಾಗೂ ಕ್ರಿಕೆಟ್ ನಂಥ ಕ್ರೀಡೆಯಲ್ಲಿ ಆಕೆ ತೊಡಗಿಕೊಂಡಿದ್ದಾಳೆ.

ಬ್ರಿಟಿಷ್ ಗುಪ್ತಚರ ಇಲಾಖೆ ಸೇರಬೇಕು
ನಾನು ಮಗುವಾಗಿದ್ದಾಗ ವೈದ್ಯೆ ಆಗಬೇಕು ಅಂದುಕೊಂಡಿದ್ದೆ. ಆ ನಂತರ ಶಿಕ್ಷಕಿ ಅಥವಾ ಅಂತರಿಕ್ಷ ಯಾನಿ ಹೀಗೆಲ್ಲ ಅಂದುಕೊಳ್ಳುತ್ತಿದ್ದೆ. ಈಗ ಗೂಢಚಾರ ಪುಸ್ತಕಗಳನ್ನು ಬಹಳ ಓದುತ್ತೇನೆ. ಆದ್ದರಿಂದ ಬ್ರಿಟಿಷ್ ಗುಪ್ತಚರ ಇಲಾಖೆಗೆ ಸೇರಬೇಕು ಎಂದು ಈಗ ಅಂದುಕೊಳ್ತೀನಿ. ಭವಿಷ್ಯದಲ್ಲಿ ಅದು ಬದಲಾಗಬಹುದು ಎನ್ನುತ್ತಾಳೆ ಹರಿಪ್ರಿಯಾ.

ಬ್ರಿಟನ್ ನಲ್ಲಿ ಇನ್ನೇನು ಹರಿಪ್ರಿಯಾಳ ವೀಸಾ ಅವಧಿ ಮುಗಿಯುತ್ತಿದೆ. ಅಷ್ಟೇ ಅಲ್ಲ, ರಾಧಾಕೃಷ್ಣನ್ ಅವರ ಐದು ವರ್ಷದ ವೀಸಾ ಅವಧಿ ಆಗಸ್ಟ್ ನಲ್ಲಿ ಮುಗಿಯಲಿದೆ ಎಂಬ ಚಿಂತೆ ಅವರದು. ಇನ್ನು ಬ್ರಿಟನ್ ನಲ್ಲಿನ ರಾಜಕೀಯ ಅಸ್ಥಿರತೆ ಕೂಡ ಗೊಂದಲದಲ್ಲಿ ಸಿಲುಕಿಸಿದೆ. ಆದರೆ ಇವೆಲ್ಲದರ ಹೊರತಾಗಿಯೂ ಹರಿಪ್ರಿಯಾಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ಇಚ್ಛೆ ಅವರದು. ಇನ್ನು ನಾಲ್ಕು ವರ್ಷದ ಮತ್ತೊಬ್ಬ ಮಗ ಜಗದೀಶ್ ಇನ್ನೂ ಬುದ್ಧಿಮತ್ತೆ ಕೌಶಲ ಆರಿಸಿಕೊಂಡಿಲ್ಲ ಎನ್ನುತ್ತಾರೆ.

English summary
Haripriya, 11 year old girl, basically from Tamil Nadu. She currently residing at UK. Her Intelligence Quotient more than Albert Einstein and Stephen Hawkins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X