ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿಯಿಂದ ಬದಲಾಗಲಿವೆ ಈ 5 ಪ್ರಮುಖ ನಿಯಮಗಳು

|
Google Oneindia Kannada News

ಬೆಂಗಳೂರು, ಜನವರಿ 28: ಫೆಬ್ರವರಿ ತಿಂಗಳಿನಿಂದ ಅನೇಕ ನಿಯಮಾವಳಿಗಳಲ್ಲಿ ಬದಲಾವಣೆಗಳಾಗಲಿವೆ. ಇವು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಬಹುಮುಖ್ಯ ಪರಿಣಾಮ ಬೀರಲಿವೆ. ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿನ ಏರಿಳಿತ, ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಯಲ್ಲಿ ಬದಲಾವಣೆಗಳು ಈಗಾಗಲೇ ಜನರ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಅದು ಮುಂದಿನ ತಿಂಗಳು ಕೂಡ ಮುಂದುವರಿಯುವ ಸಾಧ್ಯತೆ ಇದೆ.

ಇದರ ಜತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ವಾಹನಗಳಿಗೆ ಕಡ್ಡಾಯ ಫಾಸ್ಟ್ಯಾಗ್ ನಿಯಮ ಜಾರಿ, ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಎಟಿಎಂ ನಗದು ವಿತ್‌ಡ್ರಾವಲ್ ನಿಯಮದ ಬದಲಾವಣೆಯಂತಹ ಕ್ರಮಗಳು ಜಾರಿಯಾಗಲಿವೆ.

ವಾಹನ ಸವಾರರಿಗೆ ಗುಡ್‌ನ್ಯೂಸ್: ಫಾಸ್ಟ್‌ಟ್ಯಾಗ್‌ ಡೆಡ್‌ಲೈನ್ ವಿಸ್ತರಣೆ, ಫೆಬ್ರವರಿ 15ರವರೆಗೆ ಅವಕಾಶವಾಹನ ಸವಾರರಿಗೆ ಗುಡ್‌ನ್ಯೂಸ್: ಫಾಸ್ಟ್‌ಟ್ಯಾಗ್‌ ಡೆಡ್‌ಲೈನ್ ವಿಸ್ತರಣೆ, ಫೆಬ್ರವರಿ 15ರವರೆಗೆ ಅವಕಾಶ

ಮುಖ್ಯವಾಗಿ ದೇಶದ ಆರ್ಥಿಕತೆಗೆ ಸಂಬಂಧಿಸಿದ ಬಹುತೇಕ ವಲಯಗಳಲ್ಲಿ ಬಹುದೊಡ್ಡ ಬದಲಾವಣೆಯನ್ನು ನಿರೀಕ್ಷಿಸಲಾಗಿದೆ. ಏಕೆಂದರೆ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಲಿದ್ದಾರೆ. ದೇಶದ ಆರ್ಥಿಕತೆಗೆ ಚೇತರಿಕೆ ನೀಡುವ, ಹೊಸ ತೆರಿಗೆಗಳ ಜಾರಿ, ಹಳೆಯ ತೆರಿಗೆಗಳ ಕಡಿತ, ವಿವಿಧ ವಲಯಗಳಿಗೆ ಉತ್ತೇಜನ-ಅನುದಾನ ಘೋಷಣೆ ಸೇರಿದಂತೆ ವಿವಿಧ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ. ಫೆಬ್ರವರಿಯಲ್ಲಿ ಉಂಟಾಗಲಿರುವ ಐದು ಮಹತ್ವದ ಬದಲಾವಣೆಗಳ ವಿವರ ಇಲ್ಲಿದೆ. ಮುಂದೆ ಓದಿ.

ಇಪಿಎಫ್‌ಒ ಜೀವನ ಪ್ರಮಾಣಪತ್ರ

ಇಪಿಎಫ್‌ಒ ಜೀವನ ಪ್ರಮಾಣಪತ್ರ

ಕೋವಿಡ್-19 ಸಾಂಕ್ರಾಮಿಕ ಮತ್ತು ಕೊರೊನಾ ವೈರಸ್ ಕಾರಣದಿಂದ ವೃದ್ಧರು ಸಂಕಷ್ಟಕ್ಕೆ ಒಳಗಾಗುವುದನ್ನು ತಪ್ಪಿಸಲು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ), ಇಪಿಎಸ್ 1995ರ ಅಡಿ ಪಿಂಚಣಿ ಡ್ರಾ ಮಾಡಿಕೊಳ್ಳುವ ಪಿಂಚಣಿದಾರರು ಮತ್ತು 2021ರ ಫೆ. 28ರವರೆಗೆ ಯಾವುದೇ ತಿಂಗಳಲ್ಲಿ ಜೀವನ ಪ್ರಮಾಣಪತ್ರ ಅಂತ್ಯಗೊಳ್ಳುವವರ ಸಮಯದ ಮಿತಿಯನ್ನು ಫೆ. 28ರವರೆಗೂ ವಿಸ್ತರಿಸಿದೆ.

ವಾಹನಗಳಿಗೆ ಫಾಸ್ಟ್ಯಾಗ್

ವಾಹನಗಳಿಗೆ ಫಾಸ್ಟ್ಯಾಗ್

ದೇಶದ ಎಲ್ಲ ವಾಹನಗಳಲ್ಲಿಯು ಫಾಸ್ಟ್ಯಾಗ್ ಅಳವಡಿಸುವುದು ಫೆ. 15ರಿಂದ ಕಡ್ಡಾಯವಾಗಲಿದೆ. ಜನವರಿ 1ರಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸುವುದಾಗಿ ಕೇಂದ್ರ ಸಾರಿಗೆ ಮತ್ತು ಹೈವೇ ಸಚಿವಾಲಯ ಹೇಳಿತ್ತು. 2017ರ ಡಿ. 1ಕ್ಕೂ ಮೊದಲು ಮಾರಾಟವಾದ ಎಲ್ಲ 'ಎಂ' (ಪ್ರಯಾಣಿಕರನ್ನು ಕರೆದೊಯ್ಯುವ ಬಳಕೆಯ ಕನಿಷ್ಠ ನಾಲ್ಕು ಚಕ್ರದ ವಾಹನಗಳು) ವಿಭಾಗ ಮತ್ತು 'ಎನ್' (ಸರಕು ಸಾಗಣೆ ಹಾಗೂ ಪ್ರಯಾಣಿಕರನ್ನು ಕೊಂಡೊಯ್ಯುವ ಕನಿಷ್ಠ ನಾಲ್ಕು ಚಕ್ರದ ವಾಹನ) ವಿಭಾಗದ ವಾಹನಗಳಿಗೆ ಕಡ್ಡಾಯ ಫಾಸ್ಟ್ಯಾಗ್ ಈಗಾಗಲೇ ಜಾರಿಯಾಗಿದೆ. ಫೆ. 15ರವರೆಗೂ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳಲ್ಲಿ ನಗದು ವ್ಯವಸ್ಥೆ ಅಸ್ತಿತ್ವದಲ್ಲಿ ಇರಲಿದೆ.

2021ರಿಂದ ಎಲ್‌ಪಿಜಿ ಸಿಲಿಂಡರ್ ದರ ವಾರಕ್ಕೊಮ್ಮೆ ಪರಿಷ್ಕರಣೆ?2021ರಿಂದ ಎಲ್‌ಪಿಜಿ ಸಿಲಿಂಡರ್ ದರ ವಾರಕ್ಕೊಮ್ಮೆ ಪರಿಷ್ಕರಣೆ?

ಪಿಎನ್‌ಬಿ ಎಟಿಎಂ ನಿಯಮ

ಪಿಎನ್‌ಬಿ ಎಟಿಎಂ ನಿಯಮ

ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (ಪಿಎನ್‌ಬಿ) ಗ್ರಾಹಕರು ಫೆ. 1ರಿಂದ ಹೊಸ ನಿಯಮವನ್ನು ಪಾಲಿಸಬೇಕಾಗಲಿದೆ. ಎಟಿಎಂಗಳಲ್ಲಿನ ವಂಚನೆಗಳನ್ನು ತಡೆಗಟ್ಟಲು ಫೆ. 1ರಿಂದ ಇಎಂವಿಯೇತರ ಎಟಿಎಂ ಯಂತ್ರಗಳಿಂದ ವ್ಯವಹಾರ ಮಾಡುವುದರ ಮೇಲೆ ನಿಬಂಧನೆಗಳನ್ನು ವಿಧಿಸುವುದಾಗಿ ಪಿಎನ್‌ಬಿ ಘೋಷಿಸಿದೆ. ಇಎಂವಿಯೇತರ ಎಟಿಎಂ ಯಂತ್ರಗಳಲ್ಲಿ ವ್ಯವಹಾರ ಪ್ರಕ್ರಿಯೆ ವೇಳೆ ಎಟಿಎಂಗಳು ಕಾರ್ಡ್‌ಅನ್ನು ಹಿಡಿದಿಟ್ಟುಕೊಳ್ಳುವುದಿಲ್ಲ. ಇಎಂವಿ ಎಟಿಎಂಗಳಲ್ಲಿ ವ್ಯವಹಾರ ಸಮಯದಲ್ಲಿ ಕಾರ್ಡ್‌ಅನ್ನು ಹಿಡಿದಿಟ್ಟುಕೊಂಡು ಚಿಪ್‌ನಲ್ಲಿ ದತ್ತಾಂಶಗಳನ್ನು ಓದಲಿದೆ.

ಅಡುಗೆ ಅನಿಲ ಸಿಲಿಂಡರ್

ಅಡುಗೆ ಅನಿಲ ಸಿಲಿಂಡರ್

ಪ್ರತಿ ತಿಂಗಳ ಮೊದಲ ದಿನವೂ ತೈಲ ಮಾರುಕಟ್ಟೆ ಕಂಪೆನಿಗಳು ಅಡುಗೆ ಅನಿಲ ಸಿಲಿಂಡರ್‌ಗಳ ದರವನ್ನು ಪರಿಷ್ಕರಿಸುತ್ತವೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗೆ ಅನುಗುಣವಾಗಿ ಬದಲಾಗುತ್ತದೆ. ಈ ಬಾರಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸತತವಾಗಿ ಹೆಚ್ಚುತ್ತಿದ್ದು, ಲೀಟರ್‌ಗೆ ನೂರರ ಗಡಿ ಸಮೀಪಿಸಿದೆ. ಹೀಗಾಗಿ ಎಲ್‌ಪಿಜಿ ಬೆಲೆಯಲ್ಲಿ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ.

ಬಜೆಟ್‌ 2021: ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಬಜೆಟ್‌ 2021: ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ

2021ರ ಬಜೆಟ್ ಘೋಷಣೆಗಳು

2021ರ ಬಜೆಟ್ ಘೋಷಣೆಗಳು

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆ. 1ರಂದು ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಜ. 29ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ದೇಶದ ಆರ್ಥಿಕ-ಆರೋಗ್ಯ-ರಕ್ಷಣಾ ವಲಯಗಳನ್ನು ಪ್ರಧಾನವಾಗಿ ಗಮನದಲ್ಲಿಟ್ಟುಕೊಂಡು ಅನೇಕ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ವಿವಿಧ ವಸ್ತುಗಳ ಬೆಲೆ ಏರಿಳಿಕೆ ಸಂಭವವಿದೆ. ಹೀಗಾಗಿ ಬಜೆಟ್ ಬಳಿಕ ದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ಬದುಕು ಬದಲಾಗಲಿದೆ.

English summary
These rules changing from February 2021 are impacting your everyday life. Explained in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X