ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಎಚ್ಚರಿಕೆಯ ಘಂಟೆ ಡೆಲ್ಟಾವನ್ನೂ ಮೀರಿದ ಈ ಹೊಸ ಕೋವಿಡ್‌ ರೂಪಾಂತರಗಳು

|
Google Oneindia Kannada News

ಚಿಕಾಗೋ, ಸೆಪ್ಟೆಂಬರ್‌, 09: ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರ ವಿಶ್ವಕ್ಕೆ ದೊಡ್ಡ ಅಪಾಯವನ್ನು ಉಂಟು ಮಾಡಿರುವ ನಡುವೆಯೇ ಈಗ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರವು ಕೂಡಾ ಸೃಷ್ಟಿಯಾಗಿದೆ. SARS-CoV-2 ವೈರಸ್ ರೂಪಾಂತರಗೊಳ್ಳುತ್ತಿದ್ದು ಈಗ ಗ್ರೀಕ್ ವರ್ಣಮಾಲೆಯ ರೂಪಾಂತರಗಳನ್ನು ಹುಟ್ಟುಹಾಕಿದೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಕೋವಿಡ್‌ಗೆ ಕಾರಣವಾಗುವ ಕೊರೊನಾ ವೈರಸ್‌ನ ಹೊಸ ರೂಪಾಂತರಗಳನ್ನು ಪತ್ತೆಹಚ್ಚಿ ಅದಕ್ಕೆ ಹೊಸ ಹೆಸರು ಇಟ್ಟಿದೆ. ಇನ್ನು ಕೂಡಾ ವಿಶ್ವದಲ್ಲಿ ಡೆಲ್ಟಾ ಕೊರೊನಾ ವೈರಸ್‌ ರೂಪಾಂತರಗಳು ಕಡಿಮೆಯಾಗಿಲ್ಲ. ವಿಜ್ಞಾನಿಗಳು ಈ ಡೆಲ್ಟಾ ರೂಪಾಂತರಗಳ ಬಗ್ಗೆ ಇನ್ನೂ ಕೂಡಾ ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಹಾಗೆಯೇ ಡೆಲ್ಟಾ ರೂಪಾಂತರದ ಸ್ಥಳವನ್ನು ತುಂಬಲು ಸಿದ್ದವಾಗುತ್ತಿರುವ ಬೇರೆ ಹೊಸ ರೂಪಾಂತರಗಳ ಬಗ್ಗೆಯೂ ಸಂಶೋಧನೆ ನಡೆಸುತ್ತಿದ್ದಾರೆ.

ಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆಎಲ್ಲಾ ಕೋವಿಡ್‌ ರೂಪಾಂತರದಿಂದ ರಕ್ಷಿಸಬಲ್ಲ SARS2-38 ಪ್ರತಿಕಾಯ ಪತ್ತೆ

ಇನ್ನು ಕಳೆದ ತಿಂಗಳು "ಕೊರೊನಾ ವೈರಸ್‌ ಸೋಂಕಿನ ಮೂರನೇ ಅಲೆಯ ಭೀತಿ ಮಧ್ಯೆ 2022 ರಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರವೊಂದು ಕಾಣಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಎಚ್ಚರಿಕೆ ನೀಡಿರುವ ತಜ್ಞರು, ಈ ಕೊರೊನಾ ವೈರಸ್‌ನ ಹೊಸ ರೂಪಾಂತರವು ಅತೀ ದೊಡ್ಡ ರೂಪಾಂತರವಾಗಲಿದೆ," ಎಂದು ಹೇಳಿದ್ದರು.

 ಇನ್ನೂ ಕಡಿಮೆಯಾಗಿಲ್ಲ ಡೆಲ್ಟಾ ರೂಪಾಂತರದ ಪ್ರಭಾವ

ಇನ್ನೂ ಕಡಿಮೆಯಾಗಿಲ್ಲ ಡೆಲ್ಟಾ ರೂಪಾಂತರದ ಪ್ರಭಾವ

ಭಾರತದಲ್ಲಿ ಮೊದಲು ಕೊರೊನಾ ವೈರಸ್‌ ಸೋಂಕಿನ ಡೆಲ್ಟಾ ರೂಪಾಂತರ ಕಾಣಿಸಿಕೊಂಡಿದೆ. ಈ ರೂಪಾಂತರವು ವಿಶ್ವದಲ್ಲೇ ಭಾರೀ ಆತಂಕವನ್ನು ಸೃಷ್ಟಿ ಮಾಡಿತ್ತು. ಹಲವಾರು ದೇಶಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ಅಲೆಯ ಸೃಷ್ಟಿಗೆ ಡೆಲ್ಟಾ ರೂಪಾಂತರವು ಕಾರಣವಾಗಿತ್ತು. ಇದು ಹಲವಾರು ದೇಶಗಳಲ್ಲಿ ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ಪಡೆಯದ ಜನರ ಮೇಲೆ ಹೆಚ್ಚಾಗಿ ದಾಳಿ ನಡೆಸಿದೆ. ಇದಕ್ಕೂ ಮುಂಚಿನ ಕೊರೊನಾ ವೈರಸ್‌ ರೂಪಾಂತರಕ್ಕಿಂತ ಹೆಚ್ಚಾಗಿ ಈ ಡೆಲ್ಟಾ ರೂಪಾಂತರವು ಪರಿಣಾಮವನ್ನು ಉಂಟು ಮಾಡಿದೆ. ಈ ರೂಪಾಂತರವು ಸೋಂಕಿನ ವಿರುದ್ದ ಲಸಿಕೆಯನ್ನು ಪಡೆದವರಲ್ಲೂ ಕಾಣಿಸಿಕೊಂಡಿದೆ. ವಿಶ್ವ ಆರೋಗ್ಯ ಸಂಸ್ಥೆಯು ಡೆಲ್ಟಾ ಕೊರೊನಾ ರೂಪಾಂತರವನ್ನು ಕಾಳಜಿಯ ರೂಪಾಂತರವೆಂದು ಘೋಷಣೆ ಮಾಡಿದೆ. ಈ ಡೆಲ್ಟಾ ರೂಪಾಂತರವು ಅಧಿಕವಾಗಿ, ಹೆಚ್ಚು ವಿಸ್ತಾರವಾಗಿ ಹರಡುತ್ತದೆ ಎಂಬ ಕಾರಣದಿಂದಾಗಿ ವಿಶ್ವ ಆರೋಗ್ಯ ಸಂಸ್ಥೆ ಈ ರೂಪಾಂತರವನ್ನು ಅಧಿಕ ಕಾಳಜಿಯ ರೂಪಾಂತರ ಎಂದು ಹೇಳಿದೆ. ಹಾಗೆಯೇ ಈ ಡೆಲ್ಟಾ ರೂಪಾಂತರವು ಹೆಚ್ಚು ಗಂಭೀರವಾದ ಪರಿಣಾಮವನ್ನು ಉಂಟು ಮಾಡಿದ್ದು, ಚಿಕಿತ್ಸೆ ಹಾಗೂ ಲಸಿಕೆಯ ಪ್ರಭಾವವನ್ನೂ ಕೂಡಾ ತಗ್ಗಿಸಿದೆ.

ಸ್ಯಾನ್ ಡಿಯಾಗೋದಲ್ಲಿ ಲಾ ಜೊಲ್ಲಾ ಇನ್ಸ್ಟಿಟ್ಯೂಟ್ ಫಾರ್ ಇಮ್ಯುನಾಲಜಿ ಸೂಕ್ಷ್ಮರೋಗಾಣು ಶಾಸ್ತ್ರಜ್ಞ, ಶೇನ್‌ ಕ್ರೂಟಿ ಪ್ರಕಾರ, "ಹೆಚ್ಚು ಹರಡುವಿಕೆಯು ಈ ಡೆಲ್ಟಾ ರೂಪಾಂತರದ ಸೂಪರ್‌ ಪವರ್‌ ಆಗಿದೆ," ಎಂದು ಹೇಳಿದ್ದಾರೆ. ಮೂಲ ಕೊರೊನಾ ವೈರಸ್‌ಗಿಂತ ಡೆಲ್ಟಾ ರೂಪಾಂತರವು ಭಾರೀ ಪ್ರವಾವಶಾಲಿಯಾಗಿದೆ. ಡೆಲ್ಟಾ ಕೊರೊನಾ ವೈರಸ್‌ ಸೋಂಕಿಗೆ ಒಳಗಾದವರು ಸುಮಾರು 1,260 ಪಟ್ಟು ಅಧಿಕ ವೈರಸ್‌ ಅನ್ನು ತಮ್ಮ ಮೂಗಿನಲ್ಲಿ ಹೊಂದಿರುತ್ತಾರೆ ಎಂದು ಚೀನಾದ ಸಂಶೋಧಕರು ಹೇಳುತ್ತಾರೆ. ಡೆಲ್ಟಾ ಸೋಂಕಿಗೆ ಒಳಗಾದ ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಸಾಂಕ್ರಾಮಿಕವು ಲಸಿಕೆ ಹಾಕಿಸದವರಿಗೆ ಇರುವಷ್ಟೇ ಇರುತ್ತದೆ ಎಂದು ಕೆಲವು ಯುಎಸ್ ಸಂಶೋಧನೆಗಳು ಹೇಳುತ್ತದೆ. ಆದರೆ ಹೆಚ್ಚಿನ ಸಂಶೋಧನೆಯ ಅಗತ್ಯವಿದೆ. ಮೂಲ ಕೊರೊನಾ ವೈರಸ್‌ ಇದ್ದವರಲ್ಲಿ ಕೋವಿಡ್‌ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳಲು ಸುಮಾರು ಏಳು ದಿನಗಳು ಬೇಕಾಗುತ್ತದೆ. ಆದರೆ ಡೆಲ್ಟಾ ರೂಪಾಂತರವಿದ್ದರೆ ಎರಡು-ಮೂರು ದಿನಗಳಲ್ಲೇ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಎಂದು ತಜ್ಞರು ಹೇಳುತ್ತಾರೆ.

 ಕ್ಷೀಣಿಸುತ್ತಿದೆ ಮೇಲೆ ಲ್ಯಾಂಬ್ಡಾ ಪ್ರಭಾವ

ಕ್ಷೀಣಿಸುತ್ತಿದೆ ಮೇಲೆ ಲ್ಯಾಂಬ್ಡಾ ಪ್ರಭಾವ

ಈ ಹಿಂದೆ ಕೊರೊನಾ ವೈರಸ್‌ ಸೋಂಕಿನ ಲ್ಯಾಂಬ್ಡಾ ರೂಪಾಂತರವು ಸಂಭಾವ್ಯ ಹೊಸ ಬೆದರಿಕೆಯಾಗಿ ಅಧಿಕ ಗಮನ ಸೆಳೆದಿತ್ತು. ಆದರೆ ಪೆರುವಿನಲ್ಲಿ ಡಿಸೆಂಬರ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ ಸೋಂಕಿನ ಈ ರೂಪಾಂತರವು ಈಗ ಕಡಿಮೆಯಾಗುತ್ತಿದೆ. ಆದರೆ ಜುಲೈನಲ್ಲಿ ಹೆಚ್ಚಳವಾಗಿದ್ದ ಈ ಲಾಂಬ್ಡಾ ಕೊರೊನಾ ವೈರಸ್ ರೂಪಾಂತರವು ಕಳೆದ ನಾಲ್ಕು ವಾರಗಳಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಕಡಿಮೆಯಾಗಿದೆ ಎಂದು ಕೊರೊನಾ ವೈರಸ್‌ ಸೋಂಕಿನ ರೂಪಾಂತರಗಳ ಬಗ್ಗೆ ಸಂಶೋಧನಯನ್ನು ನಡೆಸುವ ಜಿಐಎಸ್‌ಎಐಡಿ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಲಾಂಬ್ಡಾ ಕೊರೊನಾ ವೈರಸ್‌ ರೂಪಾಂತರವನ್ನು ಆಸಕ್ತಿಯ ರೂಪಾಂತರ ಎಂದು ಘೋಷಣೆ ಮಾಡಿತ್ತು. ಇದು ಹರಡುವ ಸಂದರ್ಭದಲ್ಲಿ ಬದಲಾಗಿ ರೂಪಾಂತರಗಳನ್ನು ಸೃಷ್ಟಿ ಮಾಡುತ್ತದೆ ಅಥವಾ ಹೆಚ್ಚು ತೀವ್ರವಾದ ರೋಗವನ್ನು ಉಂಟುಮಾಡುತ್ತದೆ ಎಂದು ಶಂಕಿಸಲಾದ ಕಾರಣ ಈ ರೂಪಾಂತರವನ್ನು ವಿಶ್ವ ಆರೋಗ್ಯ ಸಂಸ್ಥೆಯು ಆಸಕ್ತಿಯ ರೂಪಾಂತರ ಎಂದು ಘೋಷಣೆ ಮಾಡಿತ್ತು. ಆದರೆ ಈ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಇದು ಲಸಿಕೆ-ಪ್ರೇರಿತ ಪ್ರತಿಕಾಯಗಳನ್ನು ಪ್ರತಿರೋಧಿಸುವ ರೂಪಾಂತರಗಳನ್ನು ಹೊಂದಿದೆ ಎಂದು ಪ್ರಯೋಗಾಲಯ ಅಧ್ಯಯನಗಳು ಹೇಳುತ್ತದೆ.

ದೇಶದಲ್ಲಿ ಕೋವಿಡ್‌ ಲಸಿಕೆಯ ಪ್ರಥಮ ಡೋಸ್‌ ನೀಡಿಕೆ ಅಕ್ಟೋಬರ್‌‌ನಲ್ಲಿ ಸಂಪೂರ್ಣ ಸಾಧ್ಯತೆದೇಶದಲ್ಲಿ ಕೋವಿಡ್‌ ಲಸಿಕೆಯ ಪ್ರಥಮ ಡೋಸ್‌ ನೀಡಿಕೆ ಅಕ್ಟೋಬರ್‌‌ನಲ್ಲಿ ಸಂಪೂರ್ಣ ಸಾಧ್ಯತೆ

 ಮು: ಏನಿದು ಹೊಸ ರೂಪಾಂತರ?

ಮು: ಏನಿದು ಹೊಸ ರೂಪಾಂತರ?

"ಮು" ಎಂಬುವುದು ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರವಾಗಿದ್ದು ಇದನ್ನು B.1.621 ಎಂದು ಕರೆಯಲಾಗುತ್ತದೆ. ಜನವರಿಯಲ್ಲಿ ಈ ರೂಪಾಂತರವು ಕೊಲಾಂಬಿಯಾದಲ್ಲಿ ಕಂಡು ಬಂದಿದೆ. ಆಗಸ್ಟ್‌ 30 ರಷ್ಟು ಡಬ್ಲ್ಯುಎಚ್‌ಒ ಇದನ್ನು ಆಸಕ್ತಿಯ ರೂಪಾಂತರವೆಂದು ಘೋಷಣೆ ಮಾಡಿದೆ. ಹಲವಾರು ರೂಪಾಂತರಗಳ ಸೃಷ್ಟಿ ಕಾರಣದಿಂದಾಗಿ ಈ ರೂಪಾಂತರವನ್ನು ಡಬ್ಲ್ಯುಎಚ್‌ಒ ಆಸಕ್ತಿಯ ರೂಪಾಂತರವೆಂದು ಘೋಷಿಸಿದೆ. ಹಾಗೆಯೇ ಇದಕ್ಕೆ ಗ್ರೀಕ್‌ನ ಹೆಸರನ್ನು ಇಟ್ಟಿದೆ. ಕೊರೊನಾ ವೈರಸ್‌ ಸೋಂಕಿನ "ಮು" ರೂಪಾಂತರವು ಹಲವಾರು ರೂಪಾಂತರಗಳನ್ನು ಸೃಷ್ಟಿ ಮಾಡಿದೆ. E484K, N501Y and D614G ಕೂಡಾ ಈ ರೂಪಾಂತರದ ರೂಪಾಂತರವಾಗಿದೆ. ಈ ರೂಪಾಂತರಗಳು ಅಧಿಕ ಹರಡುತ್ತದೆ ಹಾಗೂ ರೋಗನಿರೋಧಕ ರಕ್ಷಣೆಯನ್ನು ಕುಂಠಿತ ಮಾಡುತ್ತದೆ. ಕಳೆದ ವಾರ ಪ್ರಕಟವಾದ ಡಬ್ಲ್ಯುಎಚ್‌ಒ ಬುಲೆಟಿನ್ ಪ್ರಕಾರ, ಮು ದಕ್ಷಿಣ ಅಮೆರಿಕಾ ಮತ್ತು ಯುರೋಪ್‌ನಲ್ಲಿ ತೀವ್ರ ಅಧಿಕವಾಗಿ ಹರಡಿದೆ. ಆದರೆ ಜಾಗತಿಕವಾಗಿ ಈ "ಮು" ರೂಪಾಂತರದ ಅನುವಂಶಿಕತೆಯು ಶೇಕಡ 0.1 ಕ್ಕಿಂತ ಕಡಿಮೆಯಾಗಿದೆ. ಕೊಲಂಬಿಯಾದಲ್ಲಿ ಶೇಕಡ 39ಹ ಹಾಗೂ ಈಕ್ವೆಡಾರ್‌ನಲ್ಲಿ ಶೇಕಡ 13 ರಷ್ಟು "ಮು" ರೂಪಾಂತರವು ಕಾಣಿಸಿಕೊಂಡಿದೆ. ದಕ್ಷಿಣ ಅಮೆರಿಕಾದಲ್ಲಿ ಡೆಲ್ಟಾ ರೂಪಾಂತರದ ಜೊತೆಗೆ ಈ ಮು ರೂಪಾಂತರವು ಕೂಡಾ ಪತ್ತೆಯಾಗಿದೆ. ತನ್ನ ಪ್ರಸರಣವನ್ನು ಈ ರೂಪಾಂತರ ಮುಂದುವರಿಸಿದೆ ಎಂದು ಜಾಗತಿಕ ಆರೋಗ್ಯ ಸಂಸ್ಥೆ ಹೇಳುತ್ತದೆ. ಡಬ್ಲ್ಯುಎಚ್‌ಒನ ಹೊಸ ರೋಗಗಳ ಪತ್ತೆ ಘಟಕದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್, "ಈ ರೂಪಾಂತರದ ಹರಡುವಿಕೆಯು ಜಾಗತಿಕವಾಗಿ ಕಡಿಮೆಯಾಗುತ್ತಿದೆ. ಆದರೆ ಇದನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ," ಎಂದು ತಿಳಿಸಿದ್ದಾರೆ. ಇನ್ನು ಕಳೆದ ವಾರ ಪತ್ರಿಕಾಗೋಷ್ಠಿಯಲ್ಲಿ, ಶ್ವೇತಭವನದ ಮುಖ್ಯ ವೈದ್ಯಕೀಯ ಸಲಹೆಗಾರ ಡಾ. ಆಂಟನಿ ಫೌಸಿ ಮಾತನಾಡಿ, "ಮು ರೂಪಾಂತರದ ಬಗ್ಗೆ ಯುಎಸ್ ಅಧಿಕಾರಿಗಳು ಗಮನ ಹರಿಸುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ಮು ಒಂದು ತಕ್ಷಣದ ಬೆದರಿಕೆ ಎಂದು ಅಧಿಕಾರಿಗಳು ಪರಿಗಣಿಸಿಲ್ಲ," ಎಂದು ಹೇಳಿದ್ದಾರೆ.

Covid-22: ಡೆಲ್ಟಾಗಿಂತ ಅಪಾಯಕಾರಿ ಹೊಸ ಕೊರೊನಾ ರೂಪಾಂತರ: ತಜ್ಞರ ಎಚ್ಚರಿಕೆCovid-22: ಡೆಲ್ಟಾಗಿಂತ ಅಪಾಯಕಾರಿ ಹೊಸ ಕೊರೊನಾ ರೂಪಾಂತರ: ತಜ್ಞರ ಎಚ್ಚರಿಕೆ

 ಇನ್ನು ಹೆಚ್ಚು ರೂಪಾಂತರಗಳು ಸೃಷ್ಟಿಯಾಗಲಿದೆಯೇ?

ಇನ್ನು ಹೆಚ್ಚು ರೂಪಾಂತರಗಳು ಸೃಷ್ಟಿಯಾಗಲಿದೆಯೇ?

ಕೊರೊನಾ ವೈರಸ್‌ನ ರೂಪಾಂತರಗಳು ಹೆಚ್ಚಾಗಿ ಹರಡಲು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆ ಪಡೆಯದ ಜನರು ಸಹಕಾರಿಯಾಗುತ್ತಾರೆ. ಆದ್ದರಿಂದ ಎಲ್ಲಾ ಫಲಾನುಭವಿಗಳು ಕೊರೊನಾ ವೈರಸ್‌ ಸೋಂಕಿನ ವಿರುದ್ದ ಲಸಿಕೆಯನ್ನು ಪಡೆಯುವುದು ಅತ್ಯಗತ್ಯ ಎಂದು ತಜ್ಞರು ಹೇಳುತ್ತಾರೆ. ಕೆಲವೇ ಜನರು ಲಸಿಕೆ ಹಾಕಿದ ಬಡ ರಾಷ್ಟ್ರಗಳ ಜನಸಂಖ್ಯೆಯ ನಡುವೆ ಈ ಕೊರೊನಾ ವೈರಸ್‌ ಸೋಂಕಿ ನ ರೂಪಾಂತರಗಳು ಅಧಿಕ ಪ್ರಭಾವ ಬೀರದಂತೆ ಎಲ್ಲಾ ಪ್ರಯತ್ನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ. ತೀವ್ರವಾದ ರೋಗ ಲಕ್ಷಣಗಳನ್ನು ಹಾಗೂ ಕೋವಿಡ್‌ನಿಂದ ಉಂಟಾಗುವ ಸಾವನ್ನು ಕೊರೊನಾ ವೈರಸ್‌ ವಿರುದ್ದವಾಗಿ ಪಡೆಯಲಾಗುವ ಲಸಿಕೆಗಳು ತಡೆಯುತ್ತದೆ ಆದರೂ ನಮಗೆ ಸೋಂಕು ಬಾರದಂತೆ ಸಂಪೂರ್ಣವಾಗಿ ತಡೆಯುವುದಿಲ್ಲ. ನಾವು ಕೊರೊನಾ ವಿರುದ್ದ ಲಸಿಕೆಯನ್ನು ಪಡೆದಿದ್ದರೂ ಕೂಡಾ ನಮಗೆ ಸೋಂಕು ಕಾಣಿಸಿಕೊಳ್ಳುತ್ತದೆ. ಈ ಲಸಿಕೆ ಹಾಕಿದ ಜನರು ಸಣ್ಣ, ಏರೋಸೊಲೈಸ್ಡ್ ಹನಿಗಳ ಮೂಲಕ ರೋಗವನ್ನು ಹರಡಬಹುದು ಎಂದು ಹೇಳಲಾಗಿದೆ. SARS-CoV-2 ಅನ್ನು ಸೋಲಿಸಲು ಪರಿಣಾಮಕಾರಿಯಾದ ಲಸಿಕೆಯ ಅವಶ್ಯಕತೆ ಇದೆ. ಪ್ರಸರಣವನ್ನು ಕೂಡಾ ತಡೆಯುವ ಲಸಿಕೆ ಬೇಕಾಗಿದೆ ಎಂದು ಮೇಯೊ ಕ್ಲಿನಿಕ್‌ನ ಲಸಿಕೆ ಅಭಿವೃದ್ದಿ ಪಡಿಸುವ ಡಾ. ಗ್ರೆಗೊರಿ ಪೋಲ್ಯಾಂಡ್‌ ಹೇಳುತ್ತಾರೆ. ಪೋಲೆಂಡ್ ಮತ್ತು ಇತರ ತಜ್ಞರು ಹೇಳುವಂತೆ, ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕಿನ ಹೊಸ ರೂಪಾಂತರಗಳು ಸೃಷ್ಟಿಯಾಗುತ್ತಲೇ ಇರುತ್ತದೆ.

(ಒನ್‌ ಇಂಡಿಯಾ ಸುದ್ದಿ)

English summary
Beyond Delta, These New COVID-19 Variants Are Causing Global Alarm. What is Mu? Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X