ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಪಾಹ್' ಹರಡದಂತೆ ಎಚ್ಚರವಹಿಸುವುದೇ ಮೊದಲ ಚಿಕಿತ್ಸೆ

By ವಿದ್ಯಾ ಜಗದೀಶನ್
|
Google Oneindia Kannada News

ಬೆಂಗಳೂರು, ಮೇ 23 : ನಿಪಾಹ್ ವೈರಸ್ ದೇಶಾದ್ಯಂತ ಜನರಲ್ಲಿ ಆತಂಕ ಉಂಟು ಮಾಡಿದೆ. ನಿಪಾಹ್ ಹಲವಾರು ರೋಗಳನ್ನು ಉಂಟು ಮಾಡುವ ವೈರೆಸ್ ಆಗಿದೆ. ಪ್ರಾಣಿಗಳಿಂದ ಜನರಿಗೆ ಹರಡುವ ರೋಗ ಪ್ರಾಣಿಗಳು, ಮನಷ್ಯರ ಜೀವಕ್ಕೆ ಸಂಚಕಾರ ತರುತ್ತದೆ.

1998ರಲ್ಲಿ ಮೊದಲ ಬಾರಿಗೆ ನಿಪಾಹ್ ವೈರಸ್‌ ಅನ್ನು ಮಲೆಷೀಯಾದಲ್ಲಿ ಪತ್ತೆ ಹಚ್ಚಲಾಯಿತು. ಹಂದಿ ಸಾಕುವ ರೈತರಲ್ಲಿ ಮೊದಲ ಬಾರಿಗೆ ಮೆದಳು ಜ್ವರ ಕಾಣಿಸಿಕೊಂಡಾಗ ವೈರಸ್ ಪತ್ತೆಯಾಯಿತು. ಹಂದಿಗಳು ರೋಗ ಹರಡುವ ಮಧ್ಯವರ್ತಿಗಳಾಗಿದ್ದರು.

ನಿಪಾಹ್ ವೈರಸ್ ಎಫೆಕ್ಟ್: ಹಣ್ಣು, ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ!ನಿಪಾಹ್ ವೈರಸ್ ಎಫೆಕ್ಟ್: ಹಣ್ಣು, ಮಾಂಸ ವ್ಯಾಪಾರದಲ್ಲಿ ಭಾರೀ ಕುಸಿತ!

2004ರಲ್ಲಿ ಬಾಂಗ್ಲಾದೇಶದಲ್ಲಿ ವೈರಸ್ ಪತ್ತೆಯಾಯಿತು. ಬಾವಲಿಗಳು ಕಚ್ಚಿ ಬಿಟ್ಟ ಖರ್ಜೂರ ಸೇವಿಸಿದ ಜನರಲ್ಲಿ ವೈರಸ್ ಪತ್ತೆಯಾಯಿತು. ನಿಪಾಹ್ ವೈರಸ್‌ ಹರಡಿ ಆಗುವ ಪ್ರಾಣ ಹಾನಿ ತಡೆಯಲು ಇದುವರೆಗೂ ಸೂಕ್ತವಾದ ಚಿಕಿತ್ಸೆ ಇಲ್ಲ.

nipah-virus

ನಿಪಾಹ್ ವೈರಸ್‌ ದಾಳಿಗೆ ತುತ್ತಾದ ರೋಗಿಗೆ ಇಂತಹ ಲಕ್ಷಣಗಳು ಮೊದಲು ಕಾಣಿಸಿಕೊಳ್ಳುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಜ್ವರ, ತಲೆನೋವು, ಸ್ನಾಯು ಸೆಳೆತ, ವಾಂತಿ, ಹೊಟ್ಟೆನೋವು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.

ಸಾಯುವ ಮುನ್ನ ನರ್ಸ್ ಲಿನಿ ಹೇಳಿದ ಮಾತುಗಳೇನು!?ಸಾಯುವ ಮುನ್ನ ನರ್ಸ್ ಲಿನಿ ಹೇಳಿದ ಮಾತುಗಳೇನು!?

ವೈರಸ್ ದಾಳಿಗೆ ತುತ್ತಾದ ರೋಗಿಯ ಮೆದುಳಿಗೆ ರಕ್ತ ಚಲನೆಗೆ ಅಡ್ಡಿಯಾದರೆ 24 ರಿಂದ 48 ಗಂಟೆಯಲ್ಲಿ ಆತ ಕೋಮಾ ಸ್ಥಿತಿಗೆ ತಲುಪುವ ಸಾಧ್ಯತೆ ಇದೆ. ಬಾವಲಿಗಳಿಂದಾಗಿ ಮನುಷ್ಯರಿಗೆ ವೈರಸ್ ಹರಡಲಿದೆ.

ಹಂದಿಗಳಿಂದ ಸಹ ವೈರಸ್ ಮನುಷ್ಯರಿಗೆ ಸುಲಭವಾಗಿ ಹರಡಲಿದೆ. ಬರಿಗೈಯಲ್ಲಿ ವೈರಸ್ ದಾಳಿಗೆ ತುತ್ತಾದ ಹಂದಿಗಳ ಮಾಂಸ ಮುಟ್ಟುವುದರಿಂದ, ಹಂದಿಗಳ ಮಾಂಸ ಸೇವನೆ ಮಾಡುವುದರಿಂದ ಸುಲಭವಾಗಿ ವೈರಸ್ ಹರಡಲಿದೆ. ವೈರಸ್ ದಾಳಿಗೆ ತುತ್ತಾದ ವ್ಯಕ್ತಿಯ ಜೊತೆ ಇರುವ ಕುಟುಂಬ ಸದಸ್ಯರಿಗೂ ವೈರಸ್ ಸುಲಭವಾಗಿ ಹಬ್ಬುವ ಸಾಧ್ಯತೆ ಇದೆ.

ನಿಪಾಹ್ ವೈರಸ್ ಎಂದರೇನು? ಮಾರಣಾಂತಿಕ ಜ್ವರದ ಕುರಿತು ಮಾಹಿತಿನಿಪಾಹ್ ವೈರಸ್ ಎಂದರೇನು? ಮಾರಣಾಂತಿಕ ಜ್ವರದ ಕುರಿತು ಮಾಹಿತಿ

ಸುರಕ್ಷತಾ ಕ್ರಮಗಳು : ನಿಪಾಹ್ ವೈರಸ್ ಹರಡದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳು ಇಲ್ಲಿವೆ

* ಬಾವಲಿ ಕಚ್ಚಿದ, ಮೂತ್ರ ಲೇಪಿತ ಆಹಾರವನ್ನು ಸೇವಿಸದಿರುವುದು
* ಖರ್ಜೂರ, ತೆಂಗಿನ ಮರದ ಬಳಿ ತೆರೆದಿರುವ ನೀರು, ಜ್ಯೂಸ್ ಸೇವಿಸಬೇಡಿ
* ವೈರಸ್ ದಾಳಿಗೆ ತುತ್ತಾದ ರೋಗಿಯಿಂದ ಅಂತರ ಕಾಪಾಡಿ
* ಸಾರ್ವಜನಿಕ ಸ್ಥಳಕ್ಕೆ ಹೋಗಿ ಬಂದ ಬಳಿಕ ಕೈಗಳನ್ನು ಚೆನ್ನಾಗಿ ತೊಳೆಯಿರಿ
* ಸೋಂಕು ಪೀಡಿತ ವ್ಯಕ್ತಿಯ ಜೊತೆ ದೈಹಿಕ ಸಂಪರ್ಕ ಬೆಳೆಸದಿರಿ
* ರೋಗಿ ಬಳಸಿದ ಬಟ್ಟೆ, ಶೌಚಾಲಯವನ್ನು ಬಳಕೆ ಮಾಡಬೇಡಿ
* ರೋಗಿಗೆ ಚಿಕಿತ್ಸೆ ನೀಡುವಾಗ ಗ್ಲೌಸ್, ಮಾಸ್ಕ್ ಧರಿಸಿ

ನಿಪಾಹ್ ದಾಳಿ ತಡೆಯಲು ಯಾವುದೇ ಚಿಕಿತ್ಸೆ ಇಲ್ಲ. ವೈರಸ್ ಹರಡದಂತೆ ಎಚ್ಚರ ವಹಿಸುವುದು ಮಾತ್ರ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ. 'Prevention is better than cure' ಹಂದಿ ಮತ್ತು ಹಂದಿ ಮಾಂಸ ಮಾರಾಟದಿಂದ ದೂರವಿರಿ.

ಸ್ವಚ್ಚವಾಗಿ ಕೈಗಳನ್ನು ತೊಳೆದುಕೊಳ್ಳಿ, ಹಣ್ಣುಗಳನ್ನು ಸ್ವಚ್ಚಗೊಳಿಸದೇ ತಿನ್ನುವುದುನ್ನು ನಿಲ್ಲಿಸಿ, ಮನೆಯಲ್ಲಿಯೇ ಉತ್ತಮ ಆಹಾರಗಳನ್ನು ಸಿದ್ಧಪಡಿಸಿ ಬಿಸಿಯಾಗಿ ತಿನ್ನಿ. ಸಾರ್ವಜನಿಕ ಸ್ಥಳದಲ್ಲಿ ಓಡಾಡುವಾ ಮಾಸ್ಕ್ ಧರಿಸಿ. ರೋಗ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಲೇಖನ
Dr. Vidya Jagadeesan
Consultant - Infectious Diseases
Columbia Asia Hospital, Whitefield

English summary
Nipah Virus infection is a newly emerging zoonotic disease causing severe illness and high fatality in animals and humans.Nipah virus was initially discovered when it caused an outbreak of brain fever among pig farmers in Malaysia in 1998. There is no effective treatment available for Nipah virus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X