ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯ ನಿಮಗೆಷ್ಟು ಗೊತ್ತು? ಚೆಂದದ ಚಿತ್ರದ ಜೊತೆ ಕುತೂಹಲದ ಸಂಗತಿ

|
Google Oneindia Kannada News

ಸೂರ್ಯ, ಆದಿತ್ಯ, ರವಿ,ದಿನಕರ, ದಿವಾಕರ, ದ್ಯುಮಣಿ, ಭಾಸ್ಕರ, ಅಹಸ್ಕರ, ವಿಭಾಕರ, ಅರ್ಕ , ಪ್ರಭಾಕರ ಮುಂತಾಗಿ ನೂರಾರು ಹೆಸರುಗಳಿಂದ ಕರೆಸಿಕೊಳ್ಳುವವ ಸೂರ್ಯ.

ಭೂಮಿಕೇಂದ್ರ ವ್ಯವಸ್ಥೆ ಸುಳ್ಳು, ಸೌರಕೇಂದ್ರ ವ್ಯವಸ್ಥೆಯೇ ಸತ್ಯ ಎಂಬುದು ಸಾಬೀತಾದ ಮೇಲೆ ಸೂರ್ಯನನ್ನು ನೋಡುವ ದೃಷ್ಟಿಕೋನವೇ ಬದಲಾಗಿದೆ. ಜಗತ್ತಿನ ಪ್ರತಿ ಆಗುಹೋಗಿಗೂ ಪ್ರತ್ಯಕ್ಷ ಸಾಕ್ಷಿಯಾದವನು ಸೂರ್ಯ. ಅಂಥ ಸೂರ್ಯನ ಕುರಿತು ಸಾಕಷ್ಟು ಕುತೂಹಲಕಾರಿ ಸಂಗತಿಗಳಿವೆ.

ಇಂದು 'ರಥಸಪ್ತಮಿ': ಸೂರ್ಯನ ಹಬ್ಬದ ಮಹತ್ವಇಂದು 'ರಥಸಪ್ತಮಿ': ಸೂರ್ಯನ ಹಬ್ಬದ ಮಹತ್ವ

ರಥಸಪ್ತಮಿಯ ಶುಭ ದಿನದಂದು ಸೂರ್ಯನ ಕುರಿತ ಒಂದಷ್ಟು ವಿಶಿಷ್ಟ ಮಾಹಿತಿ, ಜೊತೆಗೆ ಕಣ್ಣು ಕೋರೈಸುವ ಚಿತ್ರಗಳು ಇಲ್ಲಿವೆ. ಚಿತ್ರಕೃಪೆ: ಪಿಟಿಐ

15 ದಶಲಕ್ಷ ಸೆಲ್ಷಿಯಸ್ ಉಷ್ಣಾಂಶ!

15 ದಶಲಕ್ಷ ಸೆಲ್ಷಿಯಸ್ ಉಷ್ಣಾಂಶ!

ನಾವಿಲ್ಲಿ ತಾಪಮಾನ 35 ಡಿಗ್ರಿ ತಲುಪಿದರೆ ಉಸ್ಸಪ್ಪಾ ಎಂದು ಕೈ ಬೀಸಿಕೊಂಡು ಕೂರುತ್ತೇವೆ. ಆದರೆ ಸೂರ್ಯನ ಉಷ್ಣಾಂಶ ಎಷ್ಟು ಎಂದು ಕೇಳಿದರೆ ಹೌಹಾರುತ್ತೀರಾ. ಸೂರ್ಯ ತಾಪಮಾನ ಗರಿಷ್ಟ 15 ದಶಲಕ್ಷ ಡಿಗ್ರಿ ಸೆಲ್ಶಿಯಸ್ ವರೆಗೂ ತಲುಪುತ್ತದೆಯಂತೆ!

ಸೂರ್ಯನ ವಯಸ್ಸೆಷ್ಟು?

ಸೂರ್ಯನ ವಯಸ್ಸೆಷ್ಟು?

ಸುಟ್ಟುಬಿಡುವ ಈ ಸೂರ್ಯನ ವಯಸ್ಸೆಷ್ಟು? ಒಂದು ದಿನವೂ ರಜೆಯಿಲ್ಲದೆ, ಜಗವನ್ನು ಬೆಳಗುವ ತನ್ನ ಕಾಯಕವನ್ನು ನಡೆಸಿಕೊಂಡು ಹೋಗುತ್ತಿರುವ ಸೂರ್ಯ 4.6 ಶಸತಕೋಟಿ ವರ್ಷ ವಯಸ್ಸಿನವನು ಎಂದರೆ ನಂಬುತ್ತೀರಾ..?

ದಿನಕರನ ಬಣ್ಣ ಯಾವುದು?

ದಿನಕರನ ಬಣ್ಣ ಯಾವುದು?

ಸೂರ್ಯ ಎಲ್ಲ ಬಣ್ಣಗಳ ಮಿಶ್ರಣ. ಎಲ್ಲ ಬಣ್ಣಗಳೂ ಸೇರಿ ನಮ್ಮ ಕಣ್ಣಿಗೆ ಆತ ಬಿಳಿ ಬಣ್ಣದಲ್ಲಿ ಗೋಚರಿಸುತ್ತಾನೆ. ಸೂರ್ಯನೊಳಗಿರುವುದು ಹೈಡ್ರೋಜನ್ ಮತ್ತು ಹೀಲಿಯಂ.

ಸೂರ್ಯನೊಳಗೆ ಒಂದು ದಶಲಕ್ಷ ಭೂಮಿ!

ಸೂರ್ಯನೊಳಗೆ ಒಂದು ದಶಲಕ್ಷ ಭೂಮಿ!

ಭೂಮಿಗೆ ಅತ್ಯಂತ ಹತ್ತಿರವಿರುವ ನಕ್ಷತ್ರವಾದ ಸೂರ್ಯ ಎಷ್ಟು ವಿಶಾಲವಾಗಿದ್ದಾನೆಂದರೆ ಅವನಲ್ಲಿ ಒಂದು ದಶಲಕ್ಷ ಭೂಮಿಯನ್ನು ಕೂರಿಸಬಹುದಂತೆ!

ಸೂರ್ಯ ಭೂಮಿಗಿಂತ 109 ಪಟ್ಟು ದೊಡ್ಡವ

ಸೂರ್ಯ ಭೂಮಿಗಿಂತ 109 ಪಟ್ಟು ದೊಡ್ಡವ

ಸೂರ್ಯ ಗಾತ್ರದಲ್ಲಿ ಭೂಮಿಗಿಂತ 109 ಪಟ್ಟು ದೊಡ್ಡವನಂತೆ! ಸೌರವ್ಯೂಹದ ಸುಮಾರು ಶೇ.99.86 ಭಾಗ ಸೂರ್ಯನೇ ಇದ್ದಾನೆ!

ರುದ್ರ ರಮಣೀಯ ಸೂರ್ಯ

ರುದ್ರ ರಮಣೀಯ ಸೂರ್ಯ

ಬೆಂಕಿಯುಗುಳುವ ಸೂರ್ಯ ಉದಯಿಸುವಾಗ, ಮುಳಲುಗುವಾಗ ಕಾಣುವ ರಮಣೀಯತೆ ಬಣ್ಣನೆಗೆ ನಿಲುಕದ್ದು. ರಥಸಪ್ತಮಿಯ ಶುಭದಿನದಂದು ಸೂರ್ಯನ ಕೆಲವು ಮನಮೋಹಕ ಚಿತ್ರಗಳು ಇಲ್ಲಿವೆ. ಅಂತಾರಾಷ್ಟ್ರೀಯ ಯೋಗದಿನದಂದು ಅಲಹಾಬಾದಿನ ಸಂಗಮದಲ್ಲಿ ಕಂಡ ಈ ದೃಶ್ಯ ನೋಡಿ...

ತಂಬೂರಿ ಮೀಟುವ ಯುವಕನಿಗೆ ಸೂರ್ಯನ ಕಚಗುಳಿ

ತಂಬೂರಿ ಮೀಟುವ ಯುವಕನಿಗೆ ಸೂರ್ಯನ ಕಚಗುಳಿ

ರಾಜಸ್ಥಾನದ ಪುಷ್ಕರದಲ್ಲಿ ಒಂಟೆಯ ಬಂಡಿಯೊಡನೆ ಕುಳಿತು ತಂಬೂರಿ ಮೀಟುತ್ತಿರುವ ಯುವಕನೊಬ್ಬನಿಗೆ ಸೂರ್ಯ ಕಚಗುಳಿ ನೀಡುತ್ತಿರುವ ಸುಂದರ ದೃಶ್ಯ.

ಕದ್ದು ಕೇಳುವ ಕಳ್ಳ!

ಕದ್ದು ಕೇಳುವ ಕಳ್ಳ!

ಕಾನ್ಸಾಸ್ ನಲ್ಲಿ ಇಬ್ಬರು ಪ್ರೇಮಿಗಳು ಮಾತನಾಡುತ್ತಿರುವುದನ್ನು ಕದ್ದು ಕೇಳಿಸುತ್ತಿರುವ ಕಳ್ಳನಾಗಿದ್ದಾನಿಲ್ಲಿ ದಿವಾಕರ!

ಅಪ್ಪ-ಮಗನ ಪ್ರೇಮ

ಅಪ್ಪ-ಮಗನ ಪ್ರೇಮ

ಚೆನ್ನೈನ ಮರೀನಾ ಬೀಚಿನಲ್ಲಿ ತಂದೆ-ಮಗುವಿನ ಪ್ರೇಮಕ್ಕೆ ಸಾಕ್ಷಿಯಾದ ಸೂರ್ಯ.

ಶಿಮ್ಲಾದಲ್ಲಿ ಎಲ್ಲೆಲ್ಲೂ ಮಂಜು ಮುಸುಕಿದ ವಾತಾವರಣದಲ್ಲಿ ತನಗೂ ಚಳಿಯಾಗುತ್ತಿದೆ ಎಂಬಂತೆ ಮೂಡಲೋ, ಬೇಡವೋ ಎಂದು ಅನುಮಾನಿಸುತ್ತಿರುವ ಸೂರ್ಯ.

ಸೂರ್ಯನ ಕ್ಯಾನ್ವಾಸ್ ಮೇಲೆ ಬಾನಾಡಿಯ ಚಿತ್ರ

ಸೂರ್ಯನ ಕ್ಯಾನ್ವಾಸ್ ಮೇಲೆ ಬಾನಾಡಿಯ ಚಿತ್ರ

ಸೂರ್ಯ ಎಂಬ ಸುಂದರ ಕ್ಯಾನ್ವಾಸ್ ಮೇಲೆ ಹಾರಾಡುತ್ತಿರುವ ಬಾನಾಡಿಗಳು ತಾವೇ ಚಿತ್ರವಾಗಿದ್ದು ಹೀಗೆ. ಈ ದೃಶ್ಯ ಕಂಡುಬಂದಿದ್ದು ಜರ್ಮನಿಯ ಸ್ಟ್ರಾಸ್ ಫರ್ಟ್ ನಲ್ಲಿ.

English summary
The Sun is the star at the center of the Solar System. Here are some lesser known facts about 4.6 billion years old Sun during Rathasapthami festival. And we are giving some most attractive pictures of the Sun here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X