ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ತಯಾರಿಕೆಯಲ್ಲಿ ಪ್ರಾಣಿಗಳ ಸೀರಂ ಪಾತ್ರವೇನು?

|
Google Oneindia Kannada News

ನವದೆಹಲಿ, ಜೂನ್ 18: ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೊರೊನಾ ಲಸಿಕೆ ಅಭಿಯಾನ ಮುಂದುವರೆದಿದೆ.

ಆದರೆ, ಈ ಮಧ್ಯೆ ಜನರ ಮಧ್ಯೆ ಹಲವು ಮಿಥ್ಯಗಳು ಹರಿದಾಡುತ್ತಿವೆ. ಈ ಕುರಿತು ಸರ್ಕಾರ ಕೂಡ ಕಾಲ-ಕಾಲಕ್ಕೆ ಹೇಳಿಕೆ ನೀಡುವ ಮೂಲಕ ಪರಿಹರಿಸುವಲ್ಲಿ ತೊಡಗಿದೆ.

ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 'ನವಜಾತ ಕರುವಿನ ರಕ್ತ' ಬಳಕೆ!?ಕೊವ್ಯಾಕ್ಸಿನ್ ಲಸಿಕೆ ಉತ್ಪಾದನೆಯಲ್ಲಿ 'ನವಜಾತ ಕರುವಿನ ರಕ್ತ' ಬಳಕೆ!?

ಇದೆ ಸರಣಿಯಲ್ಲಿ ಇದೀಗ ಕೊರೊನಾ ವಿರುದ್ಧ ಹೋರಾಡುವ ವ್ಯಾಕ್ಸಿನ್ ಆಗಿರುವ ಕೊವ್ಯಾಕ್ಸಿನ್‌ನಲ್ಲಿ ಹಸು ಕರುವಿನ ಸೀರಂ ಬಳಸಲಾಗುತ್ತದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತಿದ್ದು, ಈ ಕುರಿತು ಸರ್ಕಾರ ಸ್ಪಷ್ಟನೆ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ ನಲ್ಲಿ ವಿಷಯಗಳನ್ನು ತಿರುಚಲಾಗಿದೆ ಎಂದು ಹೇಳಿದೆ.

ಡಿಪ್ತೀರಿಯಾದಲ್ಲಿ ಆಂಟಿಬಾಡಿ ಸಪ್ಲಿಮೆಂಟ್‌ಗೆ ಕುದುರೆಯ ಸೀರಂ ಬಳಕೆ ಮಾಡಲಾಗುತ್ತದೆ.

 ಹಲವು ದಶಕಗಳಿಂದ ನಡೆಯುತ್ತಿದೆ ಈ ತಂತ್ರಜ್ಞಾನ

ಹಲವು ದಶಕಗಳಿಂದ ನಡೆಯುತ್ತಿದೆ ಈ ತಂತ್ರಜ್ಞಾನ

'ಲಸಿಕೆಗಳ ಉತ್ಪಾದನೆಗೆ ಸಹಾಯ ಮಾಡುವ ಜೀವಕೋಶದ ಜೀವನವನ್ನು ಸ್ಥಾಪಿಸಲು ವೆರೋ ಕೋಶಗಳನ್ನು ಬಳಸಲಾಗುತ್ತದೆ. ಈ ತಂತ್ರಜ್ಞಾನವನ್ನು ದಶಕಗಳಿಂದ ಪೋಲಿಯೊ, ರೇಬೀಸ್ ಮತ್ತು ಇನ್ಫ್ಲುಯೆನ್ಸದ ಲಸಿಕೆಗಳಲ್ಲಿ ಬಳಸಲಾಗುತ್ತದೆ' ಎಂದು PIB ಹೇಳಿದೆ.

 ವೆರೋ ಕೋಶಗಳನ್ನು ಸ್ವಚ್ಛಗೊಳಿಸಲಾಗುತ್ತದೆ

ವೆರೋ ಕೋಶಗಳನ್ನು ಸ್ವಚ್ಛಗೊಳಿಸಲಾಗುತ್ತದೆ

ಈ ಕುರಿತು ಮುಂದೆ ಹೇಳಿಕೆ ನೀಡಿರುವ PIB, 'ವೆರೋ ಕೋಶಗಳ ವೃದ್ಧಿಯ ಬಳಿಕ ಅವುಗಳನ್ನು ಕರುವಿನ ಸೀರಂನಿಂದ ಮುಕ್ತಗೊಳಿಸಲಾಗುತ್ತದೆ. ಇದಕ್ಕಾಗಿ ಅವುಗಳನ್ನು ಹಲವು ಬಾರಿ ನೀರು ಹಾಗೂ ಕೆಮಿಕಲ್ ನಿಂದ ತೊಳೆಯಲಾಗುತ್ತದೆ.

 ಕೊವ್ಯಾಕ್ಸಿನ್‌ನಲ್ಲಿ ಕರುವಿನ ಸೀರಂ ಬಳಕೆ ಇಲ್ಲ

ಕೊವ್ಯಾಕ್ಸಿನ್‌ನಲ್ಲಿ ಕರುವಿನ ಸೀರಂ ಬಳಕೆ ಇಲ್ಲ

PIB ಜಾರಿಗೊಳಿಸಿರುವ ಹೇಳಿಕೆಯಲ್ಲಿ 'ಕೊವ್ಯಾಕ್ಸಿನ್ ಸಂರಚನೆಗೆಮಾಧ್ಯಮ ಸಂಬಂಧಿಸಿದ ಕೆಲ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳಲ್ಲಿ ವ್ಯಾಕ್ಸಿನ್ ನಲ್ಲಿ ಹಸುವಿನ ಕರುವಿನ ಸೀರಮ್ ಇರುತ್ತದೆ ಎನ್ನಲಾಗಿದೆ. ಇದು ಸರಿಯಲ್ಲ ಹಾಗೂ ಇದರಲ್ಲಿ ತಥ್ಯಗಳನ್ನು ತಿರುಚಿ ಪ್ರಸ್ತುತಪಡಿಸಲಾಗಿದೆ' ಎನ್ನಲಾಗಿದೆ .

 ಕೇವಲ ವೆರೋ ಕೋಶಗಳ ಬೆಳವಣಿಗೆಗೆ ಮಾತ್ರ ಬಳಸಲಾಗುತ್ತದೆ

ಕೇವಲ ವೆರೋ ಕೋಶಗಳ ಬೆಳವಣಿಗೆಗೆ ಮಾತ್ರ ಬಳಸಲಾಗುತ್ತದೆ

'ಕೇವಲ ವೆರೋ ಕೋಶಗಳ ತಯಾರಿಕೆ ಅಥವಾ ಬೆಳವಣಿಗೆಗೆ ಮಾತ್ರ ಕರುವಿನ ಸೀರಮ್ ಅನ್ನು ಬಳಸಲಾಗುತ್ತದೆ. ವಿವಿಧ ರೀತಿಯ ಗೋವಿನ ಮತ್ತು ಇತರ ಪ್ರಾಣಿ ಸೀರಮ್‌ಗಳು ವೆರೋ ಕೋಶಗಳ ಬೆಳವಣಿಗೆಗೆ ಜಾಗತಿಕವಾಗಿ ಬಳಸುವ ಪ್ರಮಾಣಿತ ಸಂವರ್ಧನೆಯ ಘಟಕಗಳಾಗಿವೆ' ಎಂದು ಸರ್ಕಾರ ಹೇಳಿದೆ.

English summary
The government on Wednesday issued a clarification stating that Covaxin, the Covid-19 vaccine developed by Hyderabad-based Bharat Biotech, did not contain the serum of a newborn calf.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X