ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈತ 2019ರ ಲೋಕಸಭೆ ಚುನಾವಣೆಯ ಅತಿ ಶ್ರೀಮಂತ ಅಭ್ಯರ್ಥಿ

|
Google Oneindia Kannada News

ನವದೆಹಲಿ, ಮೇ 14: ಲೋಕಸಭೆ ಚುನಾವಣೆ 2019ರಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಾಗ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿರುವ ಅಂಕಿ ಅಂಶಗಳನ್ನು ಕಲೆ ಹಾಕಿ ಆಸ್ತಿ ವಿವರಗಳ ಲೆಕ್ಕವನ್ನು ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ರಿಫಾರ್ಮ್ಸ್(ಎಡಿಆರ್) ವರದಿ ಮಾಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಎಡಿಆರ್ ನೀಡಿರುವ ವರದಿ ಪ್ರಕಾರ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿ ಬಿಹಾರದಲ್ಲಿದ್ದಾರೆ. ಬಿಹಾರ ಪಕ್ಷೇತರ ಅಭ್ಯರ್ಥಿ ರಮೇಶ್ ಕುಮಾರ್ ಶರ್ಮ ಅವರ ಆಸ್ತಿ ಮೌಲ್ಯ 11,07,58,33,190 ರು ಎಂದು ವರದಿ ಹೇಳಿದೆ.

ಸಿಂಧಿಯಾ ಆಸ್ತಿ: 2014ರಲ್ಲಿ 33 ಕೋಟಿ ರು, 2019ರಲ್ಲಿ 374 ಕೋಟಿ ಸಿಂಧಿಯಾ ಆಸ್ತಿ: 2014ರಲ್ಲಿ 33 ಕೋಟಿ ರು, 2019ರಲ್ಲಿ 374 ಕೋಟಿ

ಪಾಟಲೀಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ರಮೇಶ್ ಆಸ್ತಿ 1,107 ಕೋಟಿ ರು, ಚರಾಸ್ತಿ ಮೌಲ್ಯ 7,08,33,190 ರು ಹಾಗೂ ಸ್ಥಿರಾಸ್ತಿ ಮೌಲ್ಯ 11,00,50,00,000 ರು. ಮಿಕ್ಕಂತೆ ಅತಿ ಶ್ರೀಮಂತ ಅಭ್ಯರ್ಥಿಗಳ ವಿವರ ಮುಂದಿದೆ...

ಎರಡನೇ ಸ್ಥಾನದಲ್ಲಿ ತೆಲಂಗಾಣದ ಕಾಂಗ್ರೆಸ್ ಅಭ್ಯರ್ಥಿ

ಎರಡನೇ ಸ್ಥಾನದಲ್ಲಿ ತೆಲಂಗಾಣದ ಕಾಂಗ್ರೆಸ್ ಅಭ್ಯರ್ಥಿ

ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ತೆಲಂಗಾಣದ ಕಾಂಗ್ರೆಸ್ ಅಭ್ಯರ್ಥಿ ಇದ್ದಾರೆ. ಚೆವೆಲ್ಲಾ ಕ್ಷೇತ್ರದಿಂದ ಸ್ಪರ್ಧಿಸಿರುವ ಕೊಂಡಾ ವಿಶ್ವೇಶ್ವರ ರೆಡ್ಡಿ ಅವರ ಆಸ್ತಿ ಮೌಲ್ಯ 895 ಕೋಟಿ ರು(8,95,01,79,170 ರು). ಇವರ ಚರಾಸ್ತಿ ಮೌಲ್ಯ:8,56,38,18,170. ಇವರ ಸ್ಥಿರಾಸ್ತಿ ಮೌಲ್ಯ : 8,56,38,18,770 ರು.

ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ

ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ

ಮೂರನೇ ಸ್ಥಾನದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಅಭ್ಯರ್ಥಿ ನಕುಲ್ ನಾಥ್ ಇದ್ದಾರೆ. ಮುಖ್ಯಮಂತ್ರಿ ಕಮಲ್ ನಾಥ್ ಅವರ ಪುತ್ರ ನಕುಲ್ ನಾಥ್ ಅವರು ಛಿಂದ್ವಾರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ಇವರ ಆಸ್ತಿ ಮೌಲ್ಯ 6,60,19,46,757 ರು ( 660 ಕೋಟಿ ರು). ಚರಾಸ್ತಿ : 6,18,41,72,757 ರು ಹಾಗೂ ಸ್ಥಿರಾಸ್ತಿ : 41,77,74,000ರು.

ಕರ್ನಾಟಕದ ಸಿರಿವಂತ ಅಭ್ಯರ್ಥಿ

ಕರ್ನಾಟಕದ ಸಿರಿವಂತ ಅಭ್ಯರ್ಥಿ

ಕರ್ನಾಟಕದ ಸಿರಿವಂತ ಅಭ್ಯರ್ಥಿಗಳ ಪೈಕಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ 338.89 ಕೋಟಿ ರು ಆಸ್ತಿ ಹೊಂದಿದ್ದಾರೆ.ಡಿ.ಕೆ.ಸುರೇಶ್ ಅವರ ಚರಾಸ್ತಿ 33.06 ಕೋಟಿ ಮೌಲ್ಯದ್ದಾಗಿದೆ. ಅವರ ಸ್ಥಿರಾಸ್ತಿ ಬರೋಬ್ಬರಿ 305.59 ಕೋಟಿ ಇದೆ. ಅವರ ಮೇಲೆ ಇರುವ ಸಾಲ ಹಾಗೂ ಪಡೆದಿರುವ ಮುಂಗಡ 51.93 ಕೋಟಿ ಇದೆ. ಅವರ ಈ ವರ್ಷದ ಆದಾಯವನ್ನು ಸೇರಿಸಿ ಸುರೇಶ್ ಅವರ ಒಟ್ಟು ಆಸ್ತಿಯ ಮೌಲ್ಯ 342.65 ಕೋಟಿ ಆಗುತ್ತದೆ.

ಡಿಕೆ ಸುರೇಶ್ ಆಸ್ತಿ ಸಂಪೂರ್ವ ವಿವರಡಿಕೆ ಸುರೇಶ್ ಆಸ್ತಿ ಸಂಪೂರ್ವ ವಿವರ

100 ಕೋಟಿ ರು ಗೂ ಆಸ್ತಿ ಅನೇಕರು ಹೊಂದಿದ್ದಾರೆ

100 ಕೋಟಿ ರು ಗೂ ಆಸ್ತಿ ಅನೇಕರು ಹೊಂದಿದ್ದಾರೆ

ತಮಿಳುನಾಡಿನ ಮಯಿಲದುಥುರೈ ಕ್ಷೇತ್ರದಿಂದ ಸ್ಪರ್ಧಿಸಿರುವ ವಸಂತ್ ಕುಮಾರ್ ಹಾಗೂ ರಾಜ ಎನ್ ತಲಾ 100 ಕೋಟಿ ಆಸ್ತಿ ಹೊಂದಿದ್ದಾರೆ. ಕೇರಳದ ವಯನಾಡು ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಶ್ರೀಜಿತ್ ಪಿ. ಆರ್ 120 ಕೋಟಿ ರು ಆಸ್ತಿ ಹೊಂದಿದ್ದಾರೆ.

English summary
Valued at Rs 1,107 crore, this independent candidate contesting the polls from Bihar is the richest candidate in the Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X