ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವ ಭಾರತದ ನಿರ್ಮಾರ್ತೃಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇಸ್ರೋ

|
Google Oneindia Kannada News

ನವದೆಹಲಿ, ಆಗಸ್ಟ್ 11: ಬಾಹ್ಯಾಕಾಶ ಕ್ಷೇತ್ರದಲ್ಲಿ ಜಗತ್ತಿನ ಗಮನ ಸೆಳೆದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2020ರ ಇಸವಿಯಲ್ಲಿ ಅನೇಕ ಪ್ರಮುಖ ಯೋಜನೆಗಳನ್ನು ಹೊಂದಿದೆ. ಬಿಡುವಿಲ್ಲದಷ್ಟು ಉಡಾವಣಾ ಯೋಜನೆಗಳು ಇಸ್ರೋ ಮುಂದೆ ಇದೆ.

ಚಂದ್ರಯಾನ 2 ಯೋಜನೆ ಭಾಗಶಃ ಯಶಸ್ವಿಯಾದ ಬೆನ್ನಲ್ಲೇ ಭಾರತ ಮೂರನೆಯ ಚಂದ್ರಯಾನ ಯೋಜನೆಗೆ ಸಿದ್ಧತೆ ನಡೆಸಿದೆ. ಇದೂ ಕೂಡ ಒಂದು ಲ್ಯಾಂಡರ್, ರೋವರ್ ಮತ್ತು ಈ ಹಿಂದಿನ ಚಂದ್ರಯಾನ ನೌಕೆಯಂತೆಯೇ ಒಂದು ನೋದಕ ಘಟಕವನ್ನು ಒಳಗೊಂಡಿರಲಿದೆ. ಸುಮಾರು 250 ಕೋಟಿ ರೂ ವೆಚ್ಚದಲ್ಲಿ ಈ ಯೋಜನೆ ನಡೆಸಲಾಗುವುದು ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದರು. ಅಂದಹಾಗೆ, ಚಂದ್ರಯಾನ 3ರ ಉಡಾವಣೆ 2021ರ ಬಳಿಕವೇ ನಡೆಯಲಿದೆ.

ಚಂದ್ರಯಾನ-2 ಯೋಜನೆ ರೋವರ್ ಇನ್ನೂ ಜೀವಂತ: ಚೆನ್ನೈ ಟೆಕ್ಕಿಚಂದ್ರಯಾನ-2 ಯೋಜನೆ ರೋವರ್ ಇನ್ನೂ ಜೀವಂತ: ಚೆನ್ನೈ ಟೆಕ್ಕಿ

ಚಂದ್ರಯಾನ-3ಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿತ್ತು. ಅದಕ್ಕೆ ಸಂಬಂಧಿಸಿದ ಇತರೆ ಕಾರ್ಯಗಳು ಸಹ ನಡೆಯುತ್ತಿವೆ. ಇದರ ಜತೆಗೆ ಎರಡನೆಯ ಬಾಹ್ಯಾಕಾಶ ಉಡಾವಣಾ ಕೇಂದ್ರದ ನಿರ್ಮಾಣ ಪ್ರಕ್ರಿಯೆಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ತಮಿಳುನಾಡಿನ ತೂತುಕುಡಿಯಲ್ಲಿ ಇದು ಸ್ಥಾಪನೆಯಾಗಲಿದೆ. ಈ ವರ್ಷದ ಅಂತ್ಯಕ್ಕೆ ಭಾರತದ ಮೊದಲ ಮಾನವ ಸಹಿತ ನೌಕೆ 'ಗಗನಯಾನ್' ಯೋಜನೆ ನೆರವೇರಬೇಕಿತ್ತು. ಅದು ಮುಂದಿನ ವರ್ಷಕ್ಕೆ ಹೋಗಿದೆ.ಈ ಯೋಜನೆಗೆ ನಾಲ್ವರು ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದ್ದು, ಅವರಿಗೆ ಜನವರಿಯಿಂದ ತರಬೇತಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಕೂಡ ಲ್ಯಾಂಡರ್ ಮತ್ತು ರೋವರ್ ಇರಲಿದೆ. ಮುಂದೆ ಓದಿ.

ವಿದ್ಯಾರ್ಥಿಗಳಿಗೆ ತರಬೇತಿ

ವಿದ್ಯಾರ್ಥಿಗಳಿಗೆ ತರಬೇತಿ

ಇಸ್ರೋದಿಂದ ಉಡಾವಣೆ ಮಾಡುವ ನೌಕೆಗಳ ಸಂಖ್ಯೆ ಹೆಚ್ಚಿಸಲು ಅನುಕೂಲವಾಗುವಂತೆ ಎರಡನೆಯ ವಾಹಕ ಕಟ್ಟಡವನ್ನು ಉದ್ಘಾಟಿಸಲಾಗಿದೆ. ಈ ಮೂಲಕ ಇಸ್ರೋ ವಿವಿಧ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿದೆ. ಹೈಸ್ಕೂಲಿನ ವಿದ್ಯಾರ್ಥಿಗಳನ್ನು ಇಸ್ರೋಗೆ ಕರೆಸಿಕೊಂಡು ಅವರಿಗೆ ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತು ಎರಡು ವಾರಗಳ ತರಬೇತಿ ನೀಡಲಾಗುತ್ತಿದೆ. ಹಾಗೆಯೇ ಪಿಎಸ್‌ಎಲ್‌ವಿಯನ್ನು ನಮ್ಮ ಉದ್ಯಮವೇ ತಯಾರಿಸುವ ಮಹತ್ವದ ಯೋಜನೆಗೂ ಚಾಲನೆ ಕೊಡಲಾಗಿದೆ.

ಆರ್ಬಿಟರ್ ಯಶಸ್ವಿ ಕಾರ್ಯ

ಆರ್ಬಿಟರ್ ಯಶಸ್ವಿ ಕಾರ್ಯ

2019ರಲ್ಲಿ ಇಸ್ರೋ ಸಾಕಷ್ಟು ಗಮನಾರ್ಹ ಮತ್ತು ಪ್ರಶಂಸಾರ್ಹ ಕಾರ್ಯಗಳನ್ನು ನೆರವೇರಿಸಿದೆ. ಚಂದ್ರಯಾನ 2ರಲ್ಲಿ ಮಹತ್ವದ ಪ್ರಗತಿ ಸಾಧಿಸಿತ್ತು. ಚಂದ್ರಯಾನ ನೌಕೆಯ ಸುಗಮ ಸ್ಪರ್ಶ ಸಾಧ್ಯವಾಗದೆ ಲ್ಯಾಂಡರ್ ಪತ್ತೆಯಾಗದೆ ಹೋದರೂ ಆರ್ಬಿಟರ್ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಮುಂದಿನ ಏಳು ವರ್ಷಗಳವರೆಗೆ ಅದು ಅಗತ್ಯ ದತ್ತಾಂಶಗಳನ್ನು ರವಾನಿಸಲಿದೆ.

ಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್‌ ಫೋಟೊ ಬಿಡುಗಡೆ ಮಾಡಿದ ಇಸ್ರೋಮಂಗಳ ಗ್ರಹದ ಅತಿದೊಡ್ಡ ಚಂದ್ರನಾದ ಫೋಬೊಸ್‌ ಫೋಟೊ ಬಿಡುಗಡೆ ಮಾಡಿದ ಇಸ್ರೋ

ದಕ್ಷಿಣ ಧ್ರುವದತ್ತ ಹೊರಟಿದ್ದ ವಿಕ್ರಂ ಲ್ಯಾಂಡರ್

ದಕ್ಷಿಣ ಧ್ರುವದತ್ತ ಹೊರಟಿದ್ದ ವಿಕ್ರಂ ಲ್ಯಾಂಡರ್

ಚಂದ್ರಯಾನ-2ರ ನಿರ್ವಹಣೆಯ ಅನುಭವದಿಂದಾಗಿ ಚಂದ್ರಯಾನ 3ರ ಯೋಜನಾ ವೆಚ್ಚವನ್ನು ಕಡಿಮೆ ಮಾಡಲು ಸಾಧ್ಯವಾಗಿದೆ. ಚಂದ್ರಯಾನ 2 ಚಂದ್ರನಲ್ಲಿಗೆ ನೌಕೆಯನ್ನು ಇಳಿಸುವ ಭಾರತದ ಮೊದಲ ಪ್ರಯತ್ನವಾಗಿತ್ತು. ಜತೆಗೆ ಇದುವರೆಗೂ ಯಾವ ದೇಶವೂ ಪ್ರಯತ್ನಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಲು ಮುಂದಾಗಿತ್ತು. ಆದರೆ ವಿಕ್ರಂ ಲ್ಯಾಂಡರ್ ಆ ಪ್ರದೇಶಕ್ಕೆ ಅಪ್ಪಳಿಸಿದ್ದರಿಂದ ಸಂಪರ್ಕ ತಪ್ಪಿತ್ತು. ಚಂದ್ರಯಾನ 3ರಲ್ಲಿ ಲ್ಯಾಂಡರ್ ಯಾವ ದಿಕ್ಕಿನಲ್ಲಿ ಸಾಗಲಿದೆ ಎನ್ನುವುದನ್ನು ಇಸ್ರೋ ಇನ್ನೂ ತಿಳಿಸಿಲ್ಲ.

13 ಯೋಜನೆಗಳು ಸಿದ್ಧ

13 ಯೋಜನೆಗಳು ಸಿದ್ಧ

ಈ ಹಣಕಾಸು ವರ್ಷದಲ್ಲಿ ಇಸ್ರೋ 13 ಯೋಜನೆಗಳನ್ನು ಸಿದ್ಧಪಡಿಸಿತ್ತು. 2020ರ ಒಳಗೆ ಆರು ಉಡಾವಣಾ ವಾಹನ ಯೋಜನೆಗಳು ಮತ್ತು ಏಳು ಉಪಗ್ರಹ ಯೋಜನೆಗಳನ್ನು ಆಯೋಜಿಸಿದೆ. ರಿಸ್ಯಾಟ್-2ಬಿಆರ್1, ರಿಸ್ಯಾಟ್-2ಬಿಆರ್2 ರೇಡಾರ್ ಇಮೇಜಿಂಗ್ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇವುಗಳಲ್ಲದೆ ಇನ್ನೂ ಅನೇಕ ಯೋಜನೆಗಳನ್ನು ಇಸ್ರೋ ಹಮ್ಮಿಕೊಂಡಿದೆ. ಕೊರೊನಾ ವೈರಸ್ ಸಂಕಷ್ಟದ ಕಾರಣದಿಂದ ಇಸ್ರೋದ ಚಟುವಟಿಕೆಗಳಿಗೆ ಹಿನ್ನಡೆಯಾಗಿದೆ. ಹೀಗಾಗಿ 2020ರ ಕೆಲವು ಯೋಜನೆಗಳು ಮುಂದೂಡುವ ಸಾಧ್ಯತೆ ಇವೆ.

ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ:ಶಿವನ್ಗಗನಯಾನ, ಚಂದ್ರಯಾನ ಸೇರಿ 10 ಬಾಹ್ಯಾಕಾಶ ಯೋಜನೆಗಳಿಗೆ ತಡೆ:ಶಿವನ್

English summary
The Makers Of New India 2020: ISRO has major projects including Chandrayaan 3 and Gaganyaan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X