ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕನೀತಿ ಸಮೀಕ್ಷೆ: ಯುವ ಮತದಾರರಿಗೆ ಬಿಜೆಪಿಯೇ ನೆಚ್ಚಿನ ಪಕ್ಷ

|
Google Oneindia Kannada News

ನವದೆಹಲಿ, ಮೇ 30: ನರೇಂದ್ರ ಮೋದಿ ಸರ್ಕಾರ ಭರ್ಜರಿ ಗೆಲುವಿನೊಂದಿಗೆ ಸತತ ಎರಡನೆಯ ಬಾರಿಗೆ ಅಧಿಕಾರ ಹಿಡಿದಿರುವುದರಲ್ಲಿ ಯುವ ಜನಾಂಗದ ಪಾತ್ರ ದೊಡ್ಡಮಟ್ಟದಲ್ಲಿದೆ. ಹಿಂದೂಯೇತರ ಸಮುದಾಯಗಳಲ್ಲಿ ಎಲ್ಲ ಜಾತಿ ವರ್ಗಗಳಲ್ಲಿನ ಜನರಲ್ಲಿ ಬಿಜೆಪಿ ಪ್ರಭಾವ ದಟ್ಟವಾಗಿ ಬೀರಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇಲ್ಲಿ ನಿರ್ಣಾಯಕವಾಗಿತ್ತು.

2014ರಿಂದಲೂ ಯುವಮತದಾರರು ಮುಖ್ಯವಾಗಿ ಬಿಜೆಪಿಯ ಪ್ರಬಲ ಬೆಂಬಲಿಗರಾಗಿದ್ದಾರೆ. ಈ ಸಮುದಾಯವನ್ನೇ ಬಿಜೆಪಿ ಗುರಿಯಾಗಿರಿಸಿಕೊಂಡು ಚುನಾವಣೆಗೆ ಇಳಿದಿತ್ತು. ಲೋಕಸಭೆ ಚುನಾವಣೆಗೂ ಮುನ್ನ ಯುವಜನರನ್ನು ಸೆಳೆಯುವ ಕೆಲವು ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಒಂದೇ ವೇದಿಕೆಯಲ್ಲಿ ಜನರನ್ನು ಸಂಪರ್ಕಿಸಿ ಎನ್‌ಡಿಎ ಸರ್ಕಾರದ ಜನಪ್ರಿಯ ನೀತಿಗಳನ್ನು ಚರ್ಚಿಸುವ ಮತ್ತು ಜಾಹೀರಾತು ನೀಡುವ 'ಮೋದಿಯೊಂದಿಗೆ ಯುವಜನರು' ಎಂಬ ಡಿಜಿಟಲ್ ಪ್ರಚಾರ ನಡೆಸಲಾಗಿತ್ತು.

ಬಿಜೆಪಿ ಮಾತ್ರವಲ್ಲ, ಬೇರೆ ಪಕ್ಷದವರಿಗೂ ಮೋದಿಯೇ ಪ್ರಧಾನಿಯಾಗಬೇಕೆಂಬ ಆಸೆ! ಬಿಜೆಪಿ ಮಾತ್ರವಲ್ಲ, ಬೇರೆ ಪಕ್ಷದವರಿಗೂ ಮೋದಿಯೇ ಪ್ರಧಾನಿಯಾಗಬೇಕೆಂಬ ಆಸೆ!

ಬಿಜೆಪಿಯ ಯುವ ಘಟಕ, ಭಾರತೀಯ ಜನತಾ ಯುವ ಮೋರ್ಚಾ, 'ಮೋದಿ ಯುವ ಶಕ್ತಿ' ಕ್ಯಾಂಪೇನ್ ಆರಂಭಿಸಿದ್ದರು. ಕಾಲೇಜು ವಿದ್ಯಾರ್ಥಿಗಳ ನಡುವೆ ಬಿಜೆಪಿಯ ಯೋಜನೆಗಳನ್ನು ಜನಪ್ರಿಯಗೊಳಿಸಲು ಇದನ್ನು ಬಳಸಿಕೊಳ್ಳಲಾಗಿತ್ತು. ಯುವಜನರನ್ನು ಸೆಳೆಯುವ ಎಲ್ಲ ಪ್ರಯತ್ನಗಳೂ ಬಹುತೇಕ ಸಫಲವಾಗಿದ್ದವು.

ದಿ ಹಿಂದೂ ಸಿಎಸ್‌ಡಿಎಸ್- ಲೋಕನೀತಿ ನಡೆಸಿದ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಯುವಜನರು ವಹಿಸಿದ ನಿರ್ಣಾಯಕ ಪಾತ್ರದ ಮಾಹಿತಿ ದೊರಕಿದೆ.

ವಿವಿಧ ವಯೋಮಾನದವರ ಮತ

ವಿವಿಧ ವಯೋಮಾನದವರ ಮತ

ಈ ಬಾರಿ ಮತ ಚಲಾಯಿಸಿದ ಯುವಜನರಲ್ಲಿ ಹೆಚ್ಚಿನವರ ಮೊದಲ ಆಯ್ಕೆ ಬಿಜೆಪಿಯಾಗಿತ್ತು. 18-22 ವರ್ಷ ವಯೋಮಾನದ ಶೇ 41ರಷ್ಟು ಮಂದಿ ಬಿಜೆಪಿಗೆ ಮತಹಾಕಿದ್ದಾರೆ. ಇದು ಕಳೆದ ಚುನಾವಣೆಗಿಂತ ಶೇ 4ರಷ್ಟು ಅಧಿಕ. ಆದರೆ, ಇತರೆ ವಯೋಮಾನದವರಿಂದ ಬಿಜೆಪಿ ಗಳಿಸಿದ ಮತಗಳಿಗೆ ಹೋಲಿಸಿದರೆ ಇದರ ಶೇಕಡಾವಾರು ಪ್ರಮಾಣ ಕಡಿಮೆ. 23-27ರ ವಯೋಮಾನದ ಯುವಜನರಲ್ಲಿ ಶೇ 40ರಷ್ಟು ಮಂದಿ ಬಿಜೆಪಿಗೆ ಮತ ಚಲಾಯಿಸಿದ್ದು, ಕಳೆದ ಸಾಲಿಗಿಂತ ಶೇ 8ರಷ್ಟು ಹೆಚ್ಚಾಗಿದೆ. 2014ಕ್ಕೆ ಹೋಲಿಸಿದರೆ 18-22ರ ವಯೋಮಾನದವರಲ್ಲಿ ಕಾಂಗ್ರೆಸ್ ಗಳಿಸಿದ ಮತ ಹಂಚಿಕೆ ಪ್ರಮಾಣದಲ್ಲಿ ಶೇ 3ರಷ್ಟು (ಒಟ್ಟು ಶೇ 20) ಹೆಚ್ಚಳವಾಗಿದೆ. ಯುವ ಮಹಿಳಾ ಮತದಾರರೂ ಹೆಚ್ಚು ಬಿಜೆಪಿ ಪರ ಮತ ಚಲಾಯಿಸಿದ್ದಾರೆ.

28-35 ವಯೋಮಾನದ ಶೇ 39 (ಕಳೆದ ಸಾಲಿಗಿಂತ ಶೇ +6) ಮಂದಿ, 36-45ರ ವಯೋಮಾನದ ಶೇ 37 (+7), 46-55 ವಯೋಮಾನದ ಶೇ 36 (+6) ಮತ್ತು 56ಕ್ಕಿಂತ ಅಧಿಕ ವಯೋಮಾನದ ಶೇ 35 (+7)ರಷ್ಟು ಮತಗಳು ಬಿಜೆಪಿಗೆ ಸಿಕ್ಕಿವೆ.

ಸಮುದಾಯ ಆಧಾರಿತ ಯುವಜನರ ಮತಗಳು

ಸಮುದಾಯ ಆಧಾರಿತ ಯುವಜನರ ಮತಗಳು

ಶೇ 53ರಷ್ಟು ಮೇಲ್ವರ್ಗದ ಯುವಜನರು 2014ರ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದರೆ, ಪ್ರಸ್ತುತ ಶೇ 56 ಮಂದಿ ಬಿಜೆಪಿಯನ್ನು ಆಯ್ದುಕೊಂಡಿದ್ದಾರೆ. ಒಬಿಸಿ ಮೇಲ್ವರ್ಗದ ಯುವಜನರಲ್ಲಿ ಶೇ 45ರಷ್ಟು ಮಂದಿ ಬಿಜೆಪಿ ಪರ ಒಲವು ತೋರಿದ್ದು, ಕಳೆದ ಚುನಾವಣೆಗಿಂತ ಶೇ 9ರಷ್ಟು ಏರಿಕೆಯಾಗಿದೆ. ಕೆಳವರ್ಗದ ಒಬಿಸಿಯಲ್ಲಿ ಕಳೆದ ವರ್ಷ ಶೇ 44 ಇದ್ದದ್ದು, ಶೇ 58ಕ್ಕೆ ಏರಿಕೆಯಾಗಿದೆ. ದಲಿತ ಯುವಕರು ಶೇ 35ರಷ್ಟು (2014-ಶೇ 28), ಆದಿವಾಸಿ ಯುವಜನತೆ ಶೇ 46 (2014-37%), ಮುಸ್ಲಿಂ ಯುವಕರು ಶೇ 7 (2014-8%), ಇತರೆ ಧಾರ್ಮಿಕ ಅಲ್ಪಸಂಖ್ಯಾತ ಯುವಜನರು ಶೇ 11 (2014-22%) ಮತ ಚಲಾಯಿಸಿದ್ದಾರೆ. ಶೇ 40ರಷ್ಟು ಗ್ರಾಮೀಣ ಯುವಜನರು ಬಿಜೆಪಿಗೆ ಮತ ಹಾಕಿದ್ದಾರೆ. ಕಳೆದ ಬಾರಿ ಈ ಪ್ರಮಾಣ ಶೇ 34ರಷ್ಟಿತ್ತು. ಪಟ್ಟಣಗಳ ಯುವಜನರು ಶೇ 44 (2014-35%) ಮತ್ತು ನಗರದಲ್ಲಿ ಯುವಜನರು ಶೇ 38 (2014-24%) ಮತ ಚಲಾಯಿಸಿದ್ದಾರೆ.

ಚುನಾವಣೋತ್ತರ ಸಮೀಕ್ಷೆ: ಒಡಿಶಾದಲ್ಲಿ ಮೋದಿ ಅಲೆಗೆ ಅಡ್ಡಿಯಾದ ಪಟ್ನಾಯಕ್ ಚಂಡಮಾರುತಚುನಾವಣೋತ್ತರ ಸಮೀಕ್ಷೆ: ಒಡಿಶಾದಲ್ಲಿ ಮೋದಿ ಅಲೆಗೆ ಅಡ್ಡಿಯಾದ ಪಟ್ನಾಯಕ್ ಚಂಡಮಾರುತ

ಪಕ್ಷ-ಅಭ್ಯರ್ಥಿ-ಪ್ರಧಾನಿ ಅಭ್ಯರ್ಥಿ

ಪಕ್ಷ-ಅಭ್ಯರ್ಥಿ-ಪ್ರಧಾನಿ ಅಭ್ಯರ್ಥಿ

ಬಿಜೆಪಿಗೆ ಮತ ಹಾಕಿದ ಯುವಜನರಲ್ಲಿ ಎಷ್ಟು ಮಂದಿ ಪಕ್ಷ, ಅಭ್ಯರ್ಥಿ ಹಾಗೂ ಪ್ರಧಾನಿ ಅಭ್ಯರ್ಥಿಯನ್ನು ನೋಡಿ ಮತ ಚಲಾಯಿಸಿದ್ದಾರೆ ಎನ್ನುವುದು ಕುತೂಹಲಕಾರಿ. 18-25 ವರ್ಷದವರಲ್ಲಿ ಶೇ 36ರಷ್ಟು ಮಂದಿ ಬಿಜೆಪಿ ಪಕ್ಷವನ್ನು ಗಮನದಲ್ಲಿಟ್ಟು ಮತ ಹಾಕಿದ್ದರೆ, ಶೇ 28 ಮಂದಿ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಇನ್ನು ಶೇ 33ರಷ್ಟು ಮಂದಿ ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರಿಗಾಗಿ ಮತ ಚಲಾಯಿಸಿದ್ದಾರೆ.

18-22 ವರ್ಷ ವಯೋಮಾನದ ಮೊದಲ ಮತದಾರರಲ್ಲಿ ಶೇ 33ರಷ್ಟು ಮಂದಿ ಬಿಜೆಪಿಗಾಗಿ ಮತ ಚಲಾಯಿಸಿದ್ದರೆ, ಶೇ 30ರಷ್ಟು ಮಂದಿ ಅಭ್ಯರ್ಥಿ ಹಾಗೂ ಶೇ 35ರಷ್ಟು ಮಂದಿ ಪ್ರಧಾನಿಗಾಗಿ ಬಿಜೆಪಿಗೆ ಮತ ಹಾಕಿದ್ದಾರೆ. ಎಲ್ಲ ಮತದಾರರ ಪ್ರಮಾಣದಲ್ಲಿ ಶೇ 44ರಷ್ಟು ಮಂದಿ ಪಕ್ಷಕ್ಕೆ, ಶೇ 32 ಅಭ್ಯರ್ಥಿ ಹಾಗೂ ಶೇ 17ರಷ್ಟು ಮಂದಿ ಪ್ರಧಾನಿ ಅಭ್ಯರ್ಥಿಗಾಗಿ ಮತ ಹಾಕಿದ್ದಾರೆ.

ಮೋದಿ ವರ್ಚಸ್ಸಿನ ಪ್ರಭಾವ

ಮೋದಿ ವರ್ಚಸ್ಸಿನ ಪ್ರಭಾವ

ಯುವಜನರಲ್ಲಿ ಹೆಚ್ಚಿನವರು ಬಿಜೆಪಿಗೆ ಮತ ಹಾಕಲು ಪ್ರಧಾನಿ ಮೋದಿ ಅವರ ವರ್ಚಸ್ಸು ಪ್ರಧಾನ ಕಾರ್ಯ ನಿರ್ವಹಿಸಿದೆ. ಮೋದಿ ಅವರು ಪ್ರಧಾನಿ ಅಭ್ಯರ್ಥಿ ಆಗಿರದೆ ಇದ್ದಿದ್ದರೆ ಬೇರೆ ಪಕ್ಷಕ್ಕೆ ಮತ ಹಾಕುತ್ತಿದ್ದೆ ಎಂದು 18-22 ವರ್ಷ ವಯಸ್ಸಿನ ಮೊದಲ ಬಾರಿಗೆ ಮತ ಚಲಾಯಿಸಿದ ಮತದಾರರಲ್ಲಿ ಶೇ 33ರಷ್ಟು ಮಂದಿ ಹೇಳಿದ್ದಾರೆ. ಶೇ 49ರಷ್ಟು ಮಂದಿಗೆ ಅದೇನೂ ಮುಖ್ಯವಾಗಿರಲಿಲ್ಲ ಎನಿಸಿದೆ. 18-25 ವರ್ಷದೊಳಗಿನ ಬಿಜೆಪಿ ಮತದಾರರಲ್ಲಿ ಶೇ 32ರಷ್ಟು ಜನರಿಗೆ ಮೋದಿ ಪ್ರಧಾನಿ ಅಭ್ಯರ್ಥಿಯಾಗಿರದೆ ಇದ್ದರೆ ಬೇರೆಯವರಿಗೆ ಮತ ಹಾಕುವ ಉದ್ದೇಶವಿತ್ತು. ಶೇ 50ರಷ್ಟು ಜನರಿಗೆ ಇದರಲ್ಲಿ ಅಂತಹ ವ್ಯತ್ಯಾಸವೇನೂ ಕಂಡಿಲ್ಲ.

ಕರ್ನಾಟಕ, ಹರಿಯಾಣ, ರಾಜಸ್ಥಾನ, ಉತ್ತರಾಖಂಡ, ಮಹಾರಾಷ್ಟ್ರ, ಮಧ್ಯಪ್ರದೇಶಗಳಲ್ಲಿ ಯುವಜನರಲ್ಲಿ ಮೋದಿ ಅವರ ಪ್ರಭಾವದ ಸರಾಸರಿ ಅಧಿಕ. ವಿಶೇಷವೆಂದರೆ ಪ್ರಾದೇಶಿಕ ಪಕ್ಷ ಪ್ರಾಬಲ್ಯವಿರುವ ದಕ್ಷಿಣದ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿಯೂ ಯುವಜನರಲ್ಲಿ ಪ್ರಧಾನಿಯಾಗಿ ಮೋದಿ ಅವರೆ ಬೇಕು ಎಂದು ಅಭಿಪ್ರಾಯವಿತ್ತು.

1998ರಿಂದ 2014ರ ತನಕ ಸಂಸತ್ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?1998ರಿಂದ 2014ರ ತನಕ ಸಂಸತ್ ಚುನಾವಣೆಯಲ್ಲಿ ಸಮೀಕ್ಷೆಗಳು ಹೇಳಿದ್ದೇನು, ಫಲಿತಾಂಶ ಬಂದಿದ್ದೇನು?

ನಿರುದ್ಯೋಗ ಮರೆಮಾಚಿದ ರಾಷ್ಟ್ರೀಯತೆ

ನಿರುದ್ಯೋಗ ಮರೆಮಾಚಿದ ರಾಷ್ಟ್ರೀಯತೆ

ಪಾಕಿಸ್ತಾನದ ಮೇಲಿನ ದಾಳಿ ಬಗ್ಗೆ ಕೇಳದೆ ನಿರುದ್ಯೋಗವನ್ನು ಗಂಭೀರ ಸಮಸ್ಯೆ ಎಂದು ಭಾವಿಸಿದ ಶೇ 30ರಷ್ಟು ಯುವ ಮತದಾರರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. ಶೇ 37ರಷ್ಟು ಯುವ ಮತದಾರರು ಬಾಲಕೋಟ್ ದಾಳಿಯ ಬಗ್ಗೆ ಕೇಳಿದ್ದರೂ ನಿರುದ್ಯೋಗವನ್ನು ಗಂಭೀರ ಸಮಸ್ಯೆ ಎಂದು ಪರಿಗಣಿಸಿದ್ದಾರೆ.

ಪಾಕಿಸ್ತಾನದ ಮೇಲಿನ ವೈಮಾನಿಕ ದಾಳಿಯ ಬಗ್ಗೆ ಕೇಳದೆ, ನಿರುದ್ಯೋಗ ಗಂಭೀರ ಸಮಸ್ಯೆ ಇರಬಹುದು ಎಂದು ಪರಿಗಣಿಸಿದ ಯುವಜನರಲ್ಲಿ ಶೇ 32ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದಾರೆ. ಇನ್ನು ವೈಮಾನಿಕ ದಾಳಿ ಬಗ್ಗೆ ಕೇಳಿರುವ ಹಾಗೂ ನಿರುದ್ಯೋಗವನ್ನು ಗಂಭೀರ ಸಮಸ್ಯೆ ಇರಬಹುದು ಎಂದು ಪರಿಗಣಿಸಿರುವವರಲ್ಲಿ ಶೇ 50ರಷ್ಟು ಮಂದಿ ಬಿಜೆಪಿಗೆ ಮತ ಹಾಕಿದ್ದಾರೆ.

English summary
A post poll survey by The Hindu CSDS-Lokniti found that, BJP is the most preferable party for young voters in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X