ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಪಿ ಚುನಾವಣೆ: ಬಿಜೆಪಿಯ ದೌರ್ಬಲ್ಯವನ್ನು ಬಳಸಿಕೊಂಡ ಅಖಿಲೇಶ್

|
Google Oneindia Kannada News

ಲಕ್ನೋ ಜನವರಿ 13: 2017 ರ ಯುಪಿ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ 2022 ಚುನಾವಣೆಯಲ್ಲಿ ಅನಿರೀಕ್ಷಿತ ಬದಲಾವಣೆಗಳಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಏಕೆಂದರೆ ರಾಜೀಯದಲ್ಲಾಗುತ್ತಿರುವ ಬದಲಾವಣೆಗಳನ್ನು ಗಮನಿಸಿದರೆ ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವಿನ ಪೈಪೋಟಿ ತೀವ್ರಗೊಂಡಿದೆ. ಈವರೆಗೆ ಬಿಜೆಪಿ ಪ್ರಬಲ ಪಕ್ಷ ಎಂದು ಪರಿಗಣಿಸಲಾಗುತ್ತಿತ್ತಾದರೂ ಸದ್ಯ ಇದು ಸುಳ್ಳಾಗುವ ಅನುಮಾನಗಳು ದಟ್ಟವಾಗಿವೆ. ಕಳೆದ ಕೆಲ ತಿಗಳುಗಳಿಂದಲೂ ಅಖಿಲೇಖ್ ಉತ್ತರಪ್ರದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಶತಾಯಗತಾಯ ಪ್ರಯತ್ನದಲ್ಲಿದ್ದಾರೆ.

ಯುಪಿ ಚುನಾವಣೆ: ಪ್ರಧಾನಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆಯುಪಿ ಚುನಾವಣೆ: ಪ್ರಧಾನಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಸಮಿತಿ ಸಭೆ

ಅವರೆಲ್ಲಾ ಪ್ರಯತ್ನಗಳು ಇಂದು ಗೋಚರಿಸುತ್ತಿವೆ. ಸಣ್ಣ ಪಕ್ಷಘಲ ನಡುವಿನ ಮೈತ್ರಿ ಅಖಿಲೇಶ್‌ಗೆ ಗೆಲುವಿನ ಬಲ ತುಂಬಿವೆ. ಜೊತೆಗೆ ಬಿಜೆಪಿ ತೊರೆದ ನಾಯಕರು ಎಸ್‌ಪಿ ಪಕ್ಷದೊಂದಿಗೆ ಕೈ ಜೋಡಿಸುತ್ತಿದ್ದಾರೆ. ಜೊತೆಗೆ ಜಾತಿಗಳಲ್ಲಿ OBC ಸಮುದಾಯಗಳ ಹೊಸ ಹಂಬಲವಿದೆ. ಈ ಪುನರಾವರ್ತನೆಯ ತೀವ್ರತೆಯು ಯುಪಿ ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುತ್ತದೆ. ಬಿಜೆಪಿಯಿಂದ ಸ್ವಾಮಿ ಪ್ರಸಾದ್ ಮೌರ್ಯ ಮತ್ತು ದಾರಾ ಸಿಂಗ್ ಚೌಹಾಣ್ ಅವರ ರಾಜೀನಾಮೆ ಮತ್ತು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ ಗೆಲುವಿನ ವಾತಾವರಣವನ್ನು ನಿರ್ಮಾಣ ಮಾಡಿವೆ.

ಯುಪಿ ಚುನಾವಣೆ 2022: ಸಮೀಕ್ಷೆ ಪ್ರಕಾರ ಬಿಜೆಪಿಗೆ ಗೆಲುವಾದರೂ ಸ್ಥಾನಗಳಲ್ಲಿ ಕುಸಿತಯುಪಿ ಚುನಾವಣೆ 2022: ಸಮೀಕ್ಷೆ ಪ್ರಕಾರ ಬಿಜೆಪಿಗೆ ಗೆಲುವಾದರೂ ಸ್ಥಾನಗಳಲ್ಲಿ ಕುಸಿತ

ಸುದೀರ್ಘ ಕಾಲ ಪಳಗಿದ ನಾಯಕ

ಸುದೀರ್ಘ ಕಾಲ ಪಳಗಿದ ನಾಯಕ

ಸ್ವಾಮಿ ಪ್ರಸಾದ್ ಮೌರ್ಯ ಯುಪಿ ರಾಜಕೀಯದಲ್ಲಿ ಸಾಮಾನ್ಯ ಜಾತಿ ನಾಯಕನಲ್ಲ. ಅವರು ಬಿಎಸ್‌ಪಿಯಲ್ಲಿ ಸುದೀರ್ಘ ಕಾಲ ಪಳಗಿದವರು. ಮಾಯಾವತಿಯ ಪ್ರಮುಖ ತಂಡದ ಭಾಗವಾಗಿದ್ದರು. ಆದರೆ 2012 ಮತ್ತು 2014 ರಲ್ಲಿ ಮಾಯಾವತಿಯವರ ಸೋಲಿನ ನಂತರ ಅವರು 2017 ರ ರಾಜ್ಯ ಚುನಾವಣೆಯ ಮುನ್ನಾ ಬಿಜೆಪಿಗೆ ತೆರಳಿದರು. ಆಗ ಬಿಜೆಪಿ ಅದ್ಭುತ ವಿಜಯವನ್ನು ಗಳಿಸಿತು. ಸ್ವಾಮಿ ಪ್ರಸಾದ್ ಮೌರ್ಯ ಅವರಿಗೆ ಕ್ಯಾಬಿನೆಟ್ ಹುದ್ದೆಯನ್ನು ನೀಡಲಾಯಿತು. ಬಿಜೆಪಿಗೆ ನಿಷ್ಠಾವಂತರಾಗಿದ್ದ ಮೌರ್ಯ ಅವರು ಮೌರ್ಯ ಸಮುದಾಯಕ್ಕೆ ಸೇರಿದವರು. ರಾಜ್ಯದ ಮೂರನೇ ಅತಿ ದೊಡ್ಡ OBC ಸಮುದಾಯಕ್ಕೆ (ಯಾದವರು ಮತ್ತು ಕುರ್ಮಿಗಳು) ಸೇರಿದವರು.ಇದು ದೇಶದ ಒಟ್ಟು ಜನಸಂಖ್ಯೆಯ 8% ರಷ್ಟು ಮತದಾರರನ್ನು ಹೊಂದಿದೆ.

ಸ್ವಾಮಿ ಪ್ರಸಾದ್ ಮೌರ್ಯ ಅವರು ಪೂರ್ವ ಯುಪಿಯ ಕುಶಿನಗರ ಜಿಲ್ಲೆಯ ಪದ್ರೌನಾ ಕ್ಷೇತ್ರದ ಶಾಸಕರಾಗಿದ್ದಾರೆ. ಅವನ ಜಾತಿಯ ಮೇಲೆ ಅವನ ಪ್ರಭಾವವು ರಾಯಬರೇಲಿ, ಉಂಚಹಾರ್, ಷಹಜಹಾನ್‌ಪುರ ಮತ್ತು ಬದಯುನ್ ಜಿಲ್ಲೆಗಳ ಸುತ್ತಲೂ ವ್ಯಾಪಿಸಿದೆ. ಯುಪಿಯ 403 ಸ್ಥಾನಗಳಲ್ಲಿ 100 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮೌರ್ಯರು ಗಣನೀಯ ಅಸ್ತಿತ್ವವನ್ನು ಹೊಂದಿದ್ದಾರೆಂದು ಊಹಿಸಲಾಗಿದೆ. ಆದ್ದರಿಂದ ಈ ಸಮುದಾಯವು ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತನ್ನದೇ ಆದ ಪಕ್ಷವನ್ನು ರಚಿಸಿಕೊಂಡಿರುವುದು ಆಶ್ಚರ್ಯವೇನಿಲ್ಲ. ಸದ್ಯ ಸ್ವಾಮಿ ಪ್ರಸಾದ್ ಮೌರ್ಯ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಮೈತ್ರಿ ಮಾಡಿಕೊಂಡಿರುವುದು ಗೆಲುವಿನ ಹಾದಿ ಸುಗಮವಾಗಿದೆ.

ನೋನಿಯಾ ಸಮುದಾಯದ ದೊಡ್ಡ ನಾಯಕ

ನೋನಿಯಾ ಸಮುದಾಯದ ದೊಡ್ಡ ನಾಯಕ

ಸ್ವಾಮಿ ಪ್ರಸಾದ್ ಮೌರ್ಯ ಅವರಂತೆ ಯುಪಿಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ದಾರಾ ಸಿಂಗ್ ಚೌಹಾಣ್ ಕೂಡ ಒಬಿಸಿಗೆ ಸೇರಿದವರು. ಅವರು ಓಬಿಸಿಗಳಲ್ಲಿ ಅತ್ಯಂತ ಹಿಂದುಳಿದವರು ಮತ್ತು ಪೂರ್ವ ಯುಪಿಯಲ್ಲಿ ಜನಸಂಖ್ಯೆಯ 3% ರಷ್ಟಿರುವ ನೋನಿಯಾ ಜಾತಿಯಿಂದ ಬಂದವರು. ಈ ಸಮುದಾಯವು ವಾರಣಾಸಿ, ಚಂದೌಲಿ ಮತ್ತು ಮಿರ್ಜಾಪುರದ ಸುತ್ತಮುತ್ತ ಹರಡಿದೆ. ಹಿಂದೆ ನೋನಿಯಾಗಳನ್ನು ಕೇಂದ್ರೀಕರಿಸುವ ಪೃಥ್ವಿರಾಜ್ ಜನಶಕ್ತಿ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಹೊಂದಿತ್ತು. ದಾರಾ ಸಿಂಗ್ ಸಮುದಾಯದ ದೊಡ್ಡ ನಾಯಕರಾಗಿದ್ದಾರೆ.

ಪಶ್ಚಿಮ ಯುಪಿಯಲ್ಲಿ ಅತ್ಯಂತ ಶಕ್ತಿಶಾಲಿ ಸಮುದಾಯ

ಪಶ್ಚಿಮ ಯುಪಿಯಲ್ಲಿ ಅತ್ಯಂತ ಶಕ್ತಿಶಾಲಿ ಸಮುದಾಯ

ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಮೈತ್ರಿ ಮೊದಲು ಅಖಿಲೇಶ್ ಯಾದವ್ ಇತರ ಎರಡು ಪ್ರಬಲ ಜಾತಿಗಳೊಂದಿಗೆ ಬಹಳ ಮುಖ್ಯವಾದ ಚುನಾವಣಾ ಒಪ್ಪಂದಗಳನ್ನು ಮಾಡಿಕೊಂಡರು. 2017 ರಲ್ಲಿ ಪಶ್ಚಿಮ ಯುಪಿಯಲ್ಲಿ ಜಾಟ್ ಸಮುದಾಯವು ಬಿಜೆಪಿಯನ್ನು ಪೂರ್ಣ ಹೃದಯದಿಂದ ಬೆಂಬಲಿಸಿತ್ತು. ಜಾಟ್ ಸಮುದಾಯವು ಜನಸಂಖ್ಯೆಯ ಕೇವಲ 2% ರಷ್ಟಿದ್ದರೂ, ಐತಿಹಾಸಿಕ ಕಾರಣಗಳು ಮತ್ತು ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ನಿಲುವು, ಪಶ್ಚಿಮ ಯುಪಿ, ರಾಜಸ್ಥಾನ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಭಾರಿ ಅಸ್ತಿತ್ವವನ್ನು ಹೊಂದಿರುವ ಅತ್ಯಂತ ಶಕ್ತಿಶಾಲಿ ಸಮುದಾಯವಾಗಿದೆ. ರೈತರ ಚಳವಳಿಯು ಅವರನ್ನು ಬಿಜೆಪಿಯೊಂದಿಗೆ ಯುದ್ಧದ ಹಾದಿಯಲ್ಲಿ ಇರಿಸಿತು. ಅಖಿಲೇಶ್ ಯಾದವ್ ಅವರು ಕಳೆದ ರಾಜ್ಯ ಚುನಾವಣೆಯಲ್ಲೂ ಜಾಟ್ ಸಮುದಾಯದ ಪಾಲುದಾರರಾಗಿದ್ದರು. ಹೀಗಾಗಿ ಜಾಟ್ ಸಮುದಾಯ ಯಾದವ್ ಅವರಿಗಿದೆ ಎನ್ನುವುದು ಸುಳ್ಳಲ್ಲ.

ಪೂರ್ವ ಯುಪಿಯಲ್ಲಿ ಮಹತ್ವದ ಪಾತ್ರ

ಪೂರ್ವ ಯುಪಿಯಲ್ಲಿ ಮಹತ್ವದ ಪಾತ್ರ

ರಾಜ್‌ಭರ್ ಯುಪಿಯಲ್ಲಿನ ಮತ್ತೊಂದು ಪ್ರಬಲ ಒಬಿಸಿ ಸಮುದಾಯವಾಗಿದ್ದು, ಪೂರ್ವ ಯುಪಿಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಅಲ್ಲಿ ಇದು ಜನಸಂಖ್ಯೆಯ ಸರಿಸುಮಾರು 15% ರಿಂದ 20% ರಷ್ಟಿದೆ ಎಂದು ನಂಬಲಾಗಿದೆ. ಚುನಾವಣೆಯ ಅಂಕಗಣಿತದಲ್ಲಿ ಜಾತಿ ಮತ್ತು ಉಪಜಾತಿಯೇ ಅತ್ಯಂತ ದೊಡ್ಡ ನಿರ್ಣಾಯಕ ಅಂಶವಾಗಿರುವ ಸಮಾಜದಲ್ಲಿ, ಇವು ಬೃಹತ್ ಸಂಖ್ಯೆಗಳಾಗಿವೆ ಮತ್ತು ಯಾವುದೇ ಪಕ್ಷ ಅಥವಾ ನಾಯಕ ಅವರನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಓಂ ಪ್ರಕಾಶ್ ರಾಜ್‌ಭರ್ ರಾಜ್ಯ ರಾಜಕೀಯದಲ್ಲಿ ಪ್ರಮುಖರಾಗಿ ಹೊರಹೊಮ್ಮಿದ್ದಾರೆ. ಅವರ ಪಕ್ಷವಾದ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷವು ಈ ಪ್ರದೇಶದಲ್ಲಿ ಹೆಚ್ಚು ಪ್ರಚಾರ ಪಡೆದಿದೆ. 2017 ರಲ್ಲಿ, ಅವರು ಬಿಜೆಪಿಯಲ್ಲಿದ್ದರು, ಯೋಗಿ ಆದಿತ್ಯನಾಥ್ ಅವರ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವರಾದರು.

ಮೂರು ತಿಂಗಳ ಹಿಂದೆ ಅಖಿಲೇಶ್ ಯಾದವ್ ಬಳಿಗೆ ತೆರಳಿದ ಅವರು ಮಾತುಕತೆ ಬಳಿಕ ಸುಹೇಲ್ ಬಿಜೆಪಿ ತೊರೆದು ಎಸ್‌ಪಿಯೊಂದಿಗೆ ಮೈತ್ರಿ ಮಾಡಿಕೊಂಡರು. ಭೀಮ್ ರಾಜ್‌ಭರ್‌ನ ಭಾರತೀಯ ಸುಹೇಲ್‌ದೇವ್ ಜನತಾ ಪಕ್ಷ ಮತ್ತು ಬಾಬು ಲಾಲ್ ರಾಜ್‌ಭರ್ ಅವರ ಶೋಷಿತ್ ಸಮಾಜ ಪಕ್ಷ ಎರಡೂ ಎಸ್‌ಪಿ ಸೇರಿಕೊಂಡಿವೆ. ಆದರೆ ಇವು ಓಂ ಪ್ರಕಾಶ್ ರಾಜ್‌ಭರ್‌ಗೆ ಸಮಾನವಾದ ಗೌರವ ಮತ್ತು ಪ್ರಭಾವವನ್ನು ಹೊಂದಿಲ್ಲ. ಇವೆರಡರ ಜೊತೆಗೆ ಬಿಜೆಪಿಯು ಕೆಲವು ತಿಂಗಳ ಹಿಂದೆ ಏಳು ಸಣ್ಣ ಜಾತಿ ಆಧಾರಿತ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿತ್ತು.

ಸಣ್ಣ ಪಕ್ಷಗಳ ಮೈತ್ರಿ

ಸಣ್ಣ ಪಕ್ಷಗಳ ಮೈತ್ರಿ

ಜಾತಿಗಳು ಮತ್ತು ಉಪ-ಜಾತಿಗಳ ನಡುವೆ ಸ್ಥಳೀಯ ಪ್ರಭಾವವನ್ನು ಹೊಂದಿರುವ ಸಣ್ಣ ಪಕ್ಷಗಳು ಬಿಜೆಪಿ ತೊರೆದಿವೆ. ಆದರೆ ಇದು ಹೆಚ್ಚು ಶಕ್ತಿಶಾಲಿ OBC ಗಳ ವಿರುದ್ಧ ಸಣ್ಣ ಮತ್ತು ದುರ್ಬಲ OBC ಗುಂಪುಗಳ ಹೋರಾಟವಾಗಿದೆ. ಸಣ್ಣ ಜಾತಿಗಳನ್ನು ಮೀಸಲಾತಿ ಕೋಟಾದಲ್ಲಿ ಮೂಲೆಗುಂಪು ಮಾಡಲಾಗಿದೆ. ಮೇಲ್ಜಾತಿ ಬ್ರಾಹ್ಮಣರು ಮತ್ತು ಠಾಕೂರರಂತೆ, ಒಬಿಸಿಗಳೊಳಗಿನ ಯಾದವರು ಮತ್ತು ದಲಿತರೊಳಗಿನ ಜಾತವರು ತಮ್ಮ ಚುನಾವಣಾ ಲಾಭಕ್ಕಾಗಿ ದುರ್ಬಲ ಜಾತಿಗಳನ್ನು ಬಳಸಿಕೊಳ್ಳುವ ಆರೋಪಗಳಿವೆ. ಆದ್ದರಿಂದ ಸಣ್ಣ ಜಾತಿಗಳು ತಮ್ಮದೇ ಆದ ಪಕ್ಷಗಳನ್ನು ರಚಿಸಿಕೊಂಡಿವೆ.

2017 ರಲ್ಲಿ ಅಖಿಲೇಶ್ ಯಾದವ್ ಸೋಲಿಗೆ

2017 ರಲ್ಲಿ ಅಖಿಲೇಶ್ ಯಾದವ್ ಸೋಲಿಗೆ

2017 ರಲ್ಲಿ ಅಖಿಲೇಶ್ ಯಾದವ್ ಸೋಲಿಗೆ ಒಂದು ಪ್ರಮುಖ ಕಾರಣವೆಂದರೆ ಅವರು ಹಿಂದುಳಿದ ಜಾತಿಗಳ ವಿರೋಧಿ ಎಂಬ ಹೇಳಿಕೆ. ಬಿಜೆಪಿಯು ಯಾದವೇತರ ಸಮುದಾಯಗಳಿಗೆ ಇದನ್ನು ಯಶಸ್ವಿಯಾಗಿ ಮನವರಿಕೆ ಮಾಡಿತು. ಅದನ್ನು ಬದಲಾಯಿಸಲು ಅಖಿಲೇಶ್ ಯಾದವ್ ಶ್ರಮಿಸುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕೇಶವ್ ಪ್ರಸಾದ್ ಮೌರ್ಯ ಅವರಿಗಿಂತ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು ಎಂದು ಒಬಿಸಿಗಳು ನಿರಾಸೆಗೊಂಡರು. ಯೋಗಿ ಚುಕ್ಕಾಣಿ ಹಿಡಿದರೆ, ಒಬಿಸಿಗಳನ್ನು ಮರಳಿ ಗೆಲ್ಲುವುದು ಕಷ್ಟ ಎಂದು ಮೋದಿ ಮತ್ತು ಶಾ ಅರಿತುಕೊಂಡರು ಮತ್ತು ಅವರನ್ನು ಬದಲಾಯಿಸಲು ಪ್ರಯತ್ನಿಸಿದರು, ಆದರೆ ಅವರಿಗೆ ಆರ್‌ಎಸ್‌ಎಸ್‌ನ ಬೆಂಬಲವಿತ್ತು. ಹೀಗಾಗಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಒಬಿಸಿ ಮತ ಪಡೆಯುವುದು ಬಿಜೆಪಿಗೆ ಕಷ್ಟ ಸಾಧ್ಯವಾಗಿದೆ.

English summary
The 2022 election is more likely to have unexpected changes compared to the 2017 UP Assembly elections. The rivalry between the BJP and the Socialist Party has intensified due to changes in politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X