ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ- ಚೀನಾ ಬಿಕ್ಕಟ್ಟು: ನಿಮ್ಮ ಅಭಿಪ್ರಾಯಕ್ಕೆ ಇಲ್ಲಿದೆ ವೇದಿಕೆ

|
Google Oneindia Kannada News

ನವದೆಹಲಿ ಜೂನ್ 18: 'ಹಿಂದಿ- ಚೀನಿ ಭಾಯಿ ಭಾಯಿ' ಎನ್ನುತ್ತಿದ್ದ ಕಾಲ ಕಳೆದು ಹೋಗಿದೆ. ಭಾರತ- ಚೀನಾ ಗಡಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿದೆ. 20 ಸೈನಿಕರನ್ನು ಭಾರತ ಈಗಾಗಲೇ ಕಳೆದುಕೊಂಡಿದೆ.

Recommended Video

ಪಾಕಿಸ್ತಾನದ ಆರಂಭಿಕ ಆಟಗಾರನಿಗೆ ರೋಹಿತ್ ಶರ್ಮ ರೋಲ್ ಮಾಡೆಲ್ | Rohit Sharma | Oneindia Kannada

ಕೊರೊನಾದಂತಹ ಆರೋಗ್ಯ ಸಮಸ್ಯೆ ಬಾಧಿಸುತ್ತಿರುವ ಸಮಯದಲ್ಲಿ ಇಂತಹದೊಂದು ಯುದ್ಧದ ಸನ್ನಿವೇಶ ಯಾರಿಗೂ ಬೇಕಾಗಿರಲಿಲ್ಲ. ಆದರೆ ಚೀನಾ ಇಡುತ್ತಿರುವ ಆಕ್ರಮಣಕಾರಿ ಹೆಜ್ಜೆಗಳು ಏಷಿಯಾದ ಎರಡು ಬಲಿಷ್ಠ ರಾಷ್ಟ್ರಗಳ ನಡುವೆ ಬಿಕ್ಕಟ್ಟಿನ ವಾತಾವರಣ ಸೃಷ್ಟಿಸಿದೆ.

ಸಹಜವಾಗಿಯೇ, ದೇಶದ ಒಳಗೆ ಚೀನಾ ವಸ್ತುಗಳ ಬಗ್ಗೆ, ಚೀನಾ ಭಾರತದಲ್ಲಿ ಹೂಡಿಕೆ ಮಾಡಿರುವ ಕುರಿತು ಚರ್ಚೆಗಳು ನಡೆಯುತ್ತಿದೆ. ಚೀನಾ ವಸ್ತುಗಳನ್ನು ನಿಷೇಧಿಸಿ ಎಂಬ ಕೂಗು ಎದ್ದಿದೆ. ಕೇಂದ್ರ ಸರಕಾರ ಈ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ.

Tell Us How Should India Deal With China

ನಮಗೆ ಬೇಕೋ ಬೇಡವೋ ಇವತ್ತು ಚೀನಾ ವಸ್ತುಗಳ ನಿತ್ಯ ಬದುಕಿನ ಭಾಗ ಆಗಿ ಹೋಗಿದೆ. 2014ರಿಂದ ಈಚೆಗೆ ಭಾರತದಲ್ಲಿ ಚೀನಾದ ಹೂಡಿಕೆ ದೊಡ್ಡ ಮಟ್ಟದಲ್ಲಿ ಹೆಚ್ಚಿದೆ. ಯಾವ ಕ್ಷೇತ್ರವನ್ನೂ ಬಿಡದಷ್ಟು ಚೀನಾ ಆವರಿಸಿಕೊಂಡಿದೆ. ಹಾಗಾದರೆ, ಇವೆಲ್ಲವನ್ನೂ ಗಮನಿಸುತ್ತಿರುವ ನಿಮಗೆ ಏನನ್ನಿಸುತ್ತಿದೆ?

ನಿಮ್ಮ ಕೈಲಿರುವ ಮೊಬೈಲ್‌ ಯಾವುದು? ಒಂದು ವೇಳೆ ಚೀನಾ ವಸ್ತುಗಳನ್ನು ನಿಷೇಧಿಸಿದರೆ ನಿಮ್ಮ ಬದುಕಿನ ಮೇಲಾಗುವ ಪರಿಣಾಮಗಳೇನು? ಹೀಗೆ, ಚೀನಾ-ಭಾರತ ವಿಷಯ ಕುರಿತು ನಿಮ್ಮ ಮಾತುಗಳಿಗೆ ಒನ್ ಇಂಡಿಯಾ ಕನ್ನಡ ವೇದಿಕೆ ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ನಿಮ್ಮ ಬರಹಗಳನ್ನು ನಮಗೆ ತಲುಪಿಸಿ, ಅವು ನಿಮ್ಮ ನೆಚ್ಚಿನ ವೆಬ್‌ತಾಣದಲ್ಲಿ ಪ್ರಕಟಗೊಳ್ಳುತ್ತವೆ. [email protected]ಗೆ ಕನಿಷ್ಟ 200 ಪದಗಳಲ್ಲಿ ನಿಮ್ಮ ಅಭಿಪ್ರಾಯ ಬರೆದು ಕಳುಹಿಸಿ, ಕಾಯುತ್ತಿದ್ದೇವೆ.

English summary
Let that fervour of patriotism not be lost and we are now giving you the opportunity to share your thoughts and feelings for our great nation. You could also let us know on how we should deal with a situation such as this and what is the best way to respond to China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X