ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಲಿಪ್ರಾಂಪ್ಟರ್‌ ದೋಷ: ಮೋದಿ ಭಾಷಣ ಸಿಕ್ಕಾಪಟ್ಟೆ ಟ್ರೋಲ್‌

|
Google Oneindia Kannada News

ನವದೆಹಲಿ, ಜನವರಿ 18: ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುವ ವೇಳೆ ಉಂಟಾದ ಕೆಲವು ಅಡಚಣೆಗಳು ಈಗ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿಶ್ವ ಆರ್ಥಿಕ ವೇದಿಕೆಯಲ್ಲಿ ಸೋಮವಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಟೆಲಿಪ್ರಾಂಪ್ಟರ್‌ ಕೈಕೊಟ್ಟಿದ್ದು, ಇದರಿಂದಾಗಿ ಪ್ರಧಾನಿ ಮೋದಿ ಒಮ್ಮೆ ಕಕ್ಕಾಬಿಕ್ಕಿ ಆಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಹಲವಾರು ಮಂದಿ ವ್ಯಂಗ್ಯವಾಡಿದ್ದಾರೆ.

ಪ್ರಧಾನಿ ಮೋದಿ ಆಯಸ್ಸು ವೃದ್ಧಿಗಾಗಿ 200ಕ್ಕೂ ಅಧಿಕ ಪುರೋಹಿತರಿಂದ ಮೃತ್ಯುಂಜಯ ಯಾಗಪ್ರಧಾನಿ ಮೋದಿ ಆಯಸ್ಸು ವೃದ್ಧಿಗಾಗಿ 200ಕ್ಕೂ ಅಧಿಕ ಪುರೋಹಿತರಿಂದ ಮೃತ್ಯುಂಜಯ ಯಾಗ

ಟೆಲಿಪ್ರಾಪ್ಟರ್‌ ಕೈಕೊಟ್ಟ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣದ ವೇಳೆ ಪದೇ ಪದೇ ಎಡಭಾಗಕ್ಕೆ ನೋಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಂಡು ಬಂದಿದೆ. ಬಳಿಕ ವಿಶ್ವ ಆರ್ಥಿಕ ವೇದಿಕೆಯ ಕಾರ್ಯನಿರ್ವಾಹಕ ಅಧ್ಯಕ್ಷ ಕ್ಲಾಸ್ ಶ್ವಾಬ್‌ ಅವರಲ್ಲಿ ಪ್ರಧಾನಿ ಮೋದಿ ಧ್ವನಿ ಸರಿಯಾಗಿ ಕೇಳಿಸುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.

"ಭಾರತದಲ್ಲಿ ಹೂಡಿಕೆಗೆ ಇದು ಸಕಾಲ": ದಾವೋಸ್‌ನಲ್ಲಿ ಮೋದಿ ಭಾಷಣ

ಬಳಿಕ ಟೆಲಿಪ್ರಾಂಪ್ಟರ್‌ ಸರಿಪಡಿಸಿಕೊಂಡ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣವನ್ನು ಮುಂದುವರಿಸಿದ್ದಾರೆ. ಈ ನಡುವೆ ಕೆಲ ಹೊತ್ತು ಪ್ರಧಾನಿ ಮೋದಿ ಮೌನವಾಗಿದ್ದು, ಈ ವಿಡಿಯೋ ಟೀಕೆಗೆ ಹಾಗೂ ಟ್ರೋಲ್‌ಗೆ ಒಳಗಾಗಿದೆ. ಮಹಾನ್‌ ವಾಗ್ಮಿಯಾದ ಪ್ರಧಾನಿ ಮೋದಿಯನ್ನು ವಿರೋಧ ಪಕ್ಷದವರು ಸೇರಿದಂತೆ ನೆಟ್ಟಿಗರು ಕಾಲೆಳೆದಿದ್ದಾರೆ.

Teleprompter Glitch?: PM Modi Gets Trolled Over WEF Speech

"ಭಾರತವು ಮನುಕುಲಕ್ಕೆ ಭರವಸೆ ಎಂಬ ಗುಚ್ಛವನ್ನು ನೀಡಿದೆ. ಇದರಲ್ಲಿ ಭಾರತೀಯರು ಪ್ರಜಾಪ್ರಭುತ್ವದಲ್ಲಿ ಅಚಲ ವಿಶ್ವಾಸವನ್ನು ಇರಿಸಿದ್ದಾರೆ. ಈ ಗುಚ್ಛದಲ್ಲಿ 21ನೇ ಶತಮಾನವನ್ನು ಮುನ್ನಡೆಸುತ್ತಿರುವ ತಂತ್ರಜ್ಞಾನವಿದೆ. ಈ ಗುಚ್ಛದಲ್ಲಿ ನಮ್ಮ ಭಾರತೀಯರ ಚಿಂತನೆ ಮತ್ತು ಪ್ರತಿಭೆಯಿದೆ. ಇದು..." ಎನ್ನುತ್ತಿದ್ದಂತೆ ಟೆಲಿಪ್ರಾಂಪ್ಟರ್‌ ಕೈಕೊಟ್ಟಿದೆ. ಆಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಡಬದಿಯ ಟೆಲಿಪ್ರಾಂಪ್ಟರ್‌ ಅನ್ನು ಒಮ್ಮೆ ನೋಡಿ ಗಲಿಬಿಲಿಗೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್‌ ಆಗಿದೆ. ಬಹಳ ಮಹತ್ವದ ಕಾರ್ಯಕ್ರಮವಾದ ಕಾರಣ ಇಲ್ಲಿ ಸಮಸ್ಯೆ ಉಂಟಾಗಿರುವುದು ಪ್ರಧಾನಿ ಮೋದಿಯನ್ನು ಮುಜುಗರಕ್ಕೆ ಒಳಪಡಿಸಿದೆ ಎಂದು ಕೆಲ ನೆಟ್ಟಿಗರು ಉಲ್ಲೇಖ ಮಾಡಿದರೆ, ಇನ್ನು ಕೆಲವರು ಅಷ್ಟು ದೊಡ್ಡ ವಾಗ್ಮಿ ಹೀಗೆ ಕಕ್ಕಾಬಿಕ್ಕಿ ಆಗುವುದೇ ಎಂದು ವ್ಯಂಗ್ಯವಾಡಿದ್ದಾರೆ.

2017 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಗೆದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ, ಮೋದಿ ಅವರು "ಟೆಲಿಪ್ರಾಂಪ್ಟರ್ ಆಪರೇಟರ್" ಅನ್ನು ಗುರಿಯಾಗಿಸಬಹುದು ಎಂದು ಆರೋಪಿಸಿದ್ದಾರೆ. "ಟೆಲಿಪ್ರಾಂಪ್ಟರ್ ಆಪರೇಟರ್ ಬಗ್ಗೆ ಚಿಂತಿತನಾಗಿದ್ದೇನೆ. ಮೋದಿ ಅವರ ಮೇಲೆ ಎಷ್ಟು ಸೇಡು ತೀರಿಸಿಕೊಳ್ಳಬಹುದು ಎಂದು ನಮಗೆಲ್ಲರಿಗೂ ತಿಳಿದಿದೆ. ವಿಶೇಷವಾಗಿ ಅವನ ಸ್ವಂತ ಅಸಮರ್ಪಕತೆಗಳನ್ನು ಬಹಿರಂಗಪಡಿಸಿದಾಗ ಎಷ್ಟು ಕೋಪಗೊಳ್ಳಬಹುದು ಎಂದು ನಾವೆಲ್ಲರೂ ತಿಳಿದಿದ್ದೇವೆ," ಎಂದಿದ್ದಾರೆ.

ರಾಹುಲ್‌ ಗಾಂಧಿ ವ್ಯಂಗ್ಯ

ಈ ಬಗ್ಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ, "ಟೆಲಿಪ್ರಾಂಪ್ಟರ್ ಕೂಡ ಇಂತಹ ಸುಳ್ಳುಗಳನ್ನು ಸಹಿಸಲು ಸಾಧ್ಯವಿಲ್ಲ," ಎಂದು ಹೇಳಿದ್ದಾರೆ. ಈ ಹಿಂದೆ ಮೋದಿ ಮಾಡಿದ್ದ ಭಾಷಣಗಳನ್ನು ರಾಹುಲ್‌ ಗಾಂಧಿ ಹಲವಾರು ಬಾರಿ ವ್ಯಂಗ್ಯ ಮಾಡಿದ್ದಾರೆ. 2019 ರ ಲೋಕಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ, ಮೋದಿ ಅವರು "ಟೆಲಿಪ್ರಾಂಪ್ಟರ್ ಅನ್ನು ನೋಡುವ ಮೂಲಕ ಮಾತನಾಡುತ್ತಾರೆ ಮತ್ತು ಅವರ ಭಾಷಣವನ್ನು ಹಿಂದಿನಿಂದ ನಿಯಂತ್ರಕ ನಿಯಂತ್ರಿಸುತ್ತಾರೆ," ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಹಲವಾರು ಕಾಂಗ್ರೆಸ್-ಸಂಬಂಧಿತ ಹ್ಯಾಂಡಲ್‌ಗಳು ಈ ಭಾಷಣವನ್ನು ವ್ಯಂಗ್ಯ ಮಾಡಿದೆ. ಅಧಿಕೃತ ಕಾಂಗ್ರೆಸ್ ಟ್ವಿಟರ್ ಹ್ಯಾಂಡಲ್, "ನಮ್ಮನ್ನು ಟೆಲಿಪ್ರಾಂಪ್ಟರ್‌ ದರೋಡೆ ಮಾಡಿದ್ದೇವೆ," ಎಂದು ಹೇಳಿಕೊಂಡಿದೆ. ಟೆಲಿಪ್ರಾಂಪ್ಟರ್ ಪಿಎಂ ಎಂಬ ಹ್ಯಾಶ್‌ಟ್ಯಾಗ್ ಅನ್ನು ಬಳಸಿದೆ. ಘಟನೆಯ ಬಗ್ಗೆ ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ವ್ಯಂಗ್ಯವಾಡಿದ್ದಾರೆ. "ತನಿಖಾ ಆಯೋಗವನ್ನು ರಚಿಸಬೇಕು, ಅಂತಾರಾಷ್ಟ್ರೀಯ ಪಿತೂರಿಯ ಕೋನವನ್ನು ತನಿಖೆ ಮಾಡಬೇಕು," ಎಂದು ಟ್ವೀಟ್‌ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

Recommended Video

IPLನಲ್ಲಿ ಈ ನೂತನ ತಂಡದ captain Hardik Pandya | Oneindia Kannada

English summary
Teleprompter glitch?: PM Modi gets trolled over WEF speech.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X