ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಿಷ್ಠ ಆಭರಣ, ಸುಂಕಮುಕ್ತವಿಲ್ಲ: ಟಾಟಾ ಗ್ರೂಪ್ ಸ್ವಾಧೀನದ ಬಳಿಕ ಏರ್‌ಇಂಡಿಯಾದಲ್ಲಿ ಏನೇನು ಬದಲಾವಣೆ?

|
Google Oneindia Kannada News

ನವದೆಹಲಿ, ಫೆಬ್ರವರಿ 15: ಸರ್ಕಾರದ ಸ್ವಾಮ್ಯದಲ್ಲಿದ್ದ ಭಾರತದ ಪ್ರತಿಷ್ಠಿತ ಏರ್ ಇಂಡಿಯಾ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸಲಾಗಿದೆ. ಟಾಟಾ ಗ್ರೂಪ್ ಕಂಪನಿಯ ಎನ್ ಚಂದ್ರಶೇಖರನ್ ಕಂಪನಿ ಅಧಿಕೃತವಾಗಿ ಟಾಟಾ ಗ್ರೂಪ್ ಸುಪರ್ದಿಗೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ನಡೆಸಿದ್ದಾರೆ.

ಏರ್ ಇಂಡಿಯಾದ ಸಿಇಒ ಆಗಿ ಟರ್ಕಿ ಏರ್‌ಲೈನ್ಸ್‌ನ ಮಾಜಿ ಅಧ್ಯಕ್ಷ ಇಲ್ಕೆರ್ ಐಚಿ ಅವರನ್ನು ಟಾಟಾ ಸನ್ಸ್ ಸೋಮವಾರ ನೇಮಕ ಮಾಡಿದೆ. ವಿಶೇಷ ಆಹ್ವಾನಿತರಾಗಿ ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಆಗಮಿಸಿದ್ದು, ಇಲ್ಕೆರ್ ಐಚಿ ಅವರ ಉಮೇದುವಾರಿಕೆಯನ್ನು ಪರಿಗಣಿಸಲು ಏರ್ ಇಂಡಿಯಾ ಮಂಡಳಿಯು ಸೋಮವಾರ ಮಧ್ಯಾಹ್ನ ಸಭೆ ಸೇರಿತ್ತು. ಸಭೆಯಲ್ಲಿ ಚರ್ಚೆ ನಡೆಸಿದ ಬಳಿಕ ಮಂಡಳಿಯು ಏರ್ ಇಂಡಿಯಾದ ಸಿಇಒ ಮತ್ತು ಎಂಡಿ ಆಗಿ ಇಲ್ಕೆರ್ ಐಚಿ ಅವರ ನೇಮಕವನ್ನು ಅನುಮೋದಿಸಿದೆ.

 ವಿಮಾನಯಾನಕ್ಕೂ ಮುನ್ನ weight ಚೆಕ್‌: ಏರ್‌ಇಂಡಿಯಾ ಸಿಬ್ಬಂದಿಗಳಿಂದ ಆಕ್ಷೇಪ ವಿಮಾನಯಾನಕ್ಕೂ ಮುನ್ನ weight ಚೆಕ್‌: ಏರ್‌ಇಂಡಿಯಾ ಸಿಬ್ಬಂದಿಗಳಿಂದ ಆಕ್ಷೇಪ

ಈ ನಡುವೆ ಟಾಟಾ ಗ್ರೂಪ್ ಏರ್‌ಲೈನ್ ತನ್ನ ಸಿಬ್ಬಂದಿಗಳಿಗೆ ಹೊಸ ಬದಲಾವಣೆಗಳನ್ನು ಪರಿಚಯಿಸಲು ಮುಂದಾಗಿದೆ. ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ/Body mass index) ಮತ್ತು ವಿಮಾನಗಳನ್ನು ಪ್ರಾರಂಭಿಸುವ ಮೊದಲು ಕ್ಯಾಬಿನ್ ಸಿಬ್ಬಂದಿಯ ತೂಕ ತಪಾಸಣೆಯನ್ನು ಕಡ್ಡಾಯಗೊಳಿಸುವ ಬಗ್ಗೆಯೂ ಈ ಹಿಂದೆ ಚರ್ಚೆಗಳು ನಡೆದಿದೆ. ಇದಕ್ಕೆ ಭಾರೀ ವಿರೋಧವೂ ಕೂಡಾ ವ್ಯಕ್ತವಾಗಿದೆ. ಏರ್‌ ಇಂಡಿಯಾ ತನ್ನ ಕ್ಯಾಬಿನ್ ಸಿಬ್ಬಂದಿಗಳಿಗಾಗಿ ಯಾವೆಲ್ಲಾ ಮಾರ್ಗಸೂಚಿಯನ್ನು ತರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ.....

ಏರ್‌ ಇಂಡಿಯಾದ ಸಿಇಒ ಆಗಿ ಇಲ್ಕರ್ ಐಚಿ ನೇಮಕಏರ್‌ ಇಂಡಿಯಾದ ಸಿಇಒ ಆಗಿ ಇಲ್ಕರ್ ಐಚಿ ನೇಮಕ

 ಕ್ಯಾಬಿನ್ ಸಿಬ್ಬಂದಿಗಾಗಿ ಹೊಸ SOP

ಕ್ಯಾಬಿನ್ ಸಿಬ್ಬಂದಿಗಾಗಿ ಹೊಸ SOP

ಕ್ಯಾಬಿನ್ ಸಿಬ್ಬಂದಿಗಳು ಕನಿಷ್ಠ ಆಭರಣಗಳನ್ನು ಧರಿಸುವುದು ಮತ್ತು ಪಾನೀಯಗಳನ್ನು ಸೇವಿಸುವುದನ್ನು ಅಥವಾ ಆಹಾರವನ್ನು ಸೇವಿಸುವುದನ್ನು ತಪ್ಪಿಸುವುದನ್ನು ಸೇರಿದಂತೆ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳ ಹೊಸ ಪಟ್ಟಿಯನ್ನು ಭಾನುವಾರ, ಏರ್ ಇಂಡಿಯಾದ ವಿಮಾನಯಾನ ಸೇವೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ವಸುಧಾ ಚಂದ್ನಾ ಬಿಡುಗಡೆ ಮಾಡಿದ್ದಾರೆ. ಕ್ಯಾಬಿನ್ ಸಿಬ್ಬಂದಿಗಳು ಏನೆಲ್ಲಾ ಮಾಡಬೇಕು ಹಾಗೂ ಮಾಡಬಾರದು ಎಂಬ ಸಂಪೂರ್ಣ ಪಟ್ಟಿ ಇಲ್ಲಿದೆ:

* ಭದ್ರತಾ ತಪಾಸಣೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಸಿಬ್ಬಂದಿ 'ಕನಿಷ್ಠ' ಆಭರಣಗಳನ್ನು ಧರಿಸಬೇಕು ಮತ್ತು ವಲಸೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಸುಂಕ-ಮುಕ್ತ ಶಾಪ್‌ಗಳಿಗೆ ಭೇಟಿ ನೀಡುವುದನ್ನು ತಡೆಯಬೇಕು.
* ಒಮ್ಮೆ ವಿಮಾನದ ಒಳಗೆ ಪ್ರವೇಶ ಮಾಡಿದರೆ ಸಿಬ್ಬಂದಿಯು ಪಿಪಿಇ ಕಿಟ್‌ಗಳನ್ನು ಮಾತ್ರ ಧರಿಸಬೇಕು ಮತ್ತು ನಿಗದಿತ ಸಮಯದೊಳಗೆ ಅಥವಾ ಮುಂಚಿತವಾಗಿ ಕಡ್ಡಾಯ ತಪಾಸಣೆಗಳನ್ನು ಪೂರ್ಣಗೊಳಿಸಬೇಕು
* ಕಡ್ಡಾಯವಾಗಿ ಪೂರ್ವ ವಿಮಾನ ಪ್ರಯಾಣ ತಪಾಸಣೆಗೆ ಒಳಗಾಗಬೇಕು ವಿಮಾನ ಮೇಲ್ವಿಚಾರಕರು ನಿಗದಿತ ಸಮಯದ ಮೊದಲು ಅಥವಾ ಸರಿಯಾದ ಸಮಯಕ್ಕೆ ಸಿಬ್ಬಂದಿ ವಿಮಾನ ಪ್ರವೇಶಿಸಲು ಮಾತ್ರ ಅವಕಾಶ ನೀಡಬೇಕು.
* ಪ್ರಯಾಣಿಕರು ವಿಮಾನ ಹತ್ತುವ ಮೊದಲು ಅಥವಾ ಸಮಯದಲ್ಲಿ, ಸಿಬ್ಬಂದಿ ಆಹಾರ ಅಥವಾ ಪಾನೀಯಗಳನ್ನು ಸೇವಿಸುವುದನ್ನು ತಪ್ಪಿಸಬೇಕು.
* ಪ್ರಯಾಣಿಕರು ವಿಮಾನ ಹತ್ತುವ ಪ್ರಕ್ರಿಯೆ ಮುಗಿದ ನಂತರ ವಿಮಾನದ ಬಾಗಿಲನ್ನು ಮುಚ್ಚಲು ಯಾವುದೇ ವಿಳಂಬವಾಗಿಲ್ಲ ಎಂದು ಬೋರ್ಡ್ ಸಿಬ್ಬಂದಿ ಖಚಿತಪಡಿಸಿಕೊಳ್ಳಬೇಕು.
* ತಮ್ಮ ಚೆಕ್-ಇನ್ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ, ಸಿಬ್ಬಂದಿ ಎಂಸಿಒ ಅಂದರೆ ಚಲನೆ ನಿಯಂತ್ರಣ ಕಚೇರಿಗೆ ಹೋಗಬೇಕು
* ಎಂಸಿಒಗಳಲ್ಲಿ ಫ್ಲೈಟ್ ಕಮಾಂಡರ್ ಆಗಮನಕ್ಕಾಗಿ ಸಿಬ್ಬಂದಿ ಕಾಯಬಾರದು ಮತ್ತು ಬದಲಿಗೆ ಸಮಯಕ್ಕೆ ಸರಿಯಾಗಿ ವಿಮಾನ ಇರುವ ಸ್ಥಳಕ್ಕೆ ತೆರಳಬೇಕು

 ಇತರ ಬದಲಾವಣೆಗಳು ಯಾವುದು?

ಇತರ ಬದಲಾವಣೆಗಳು ಯಾವುದು?

ಪ್ರಯಾಣಿಕರ ಉತ್ತಮ ಅನುಭವವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, ಟಾಟಾಗಳು ಇತರ ಮಾರ್ಪಾಡುಗಳನ್ನು ಸಹ ಪರಿಚಯಿಸಿದವು. ಇತರೆ ಕ್ರಮಗಳ ಪೈಕಿ ಸಿಬ್ಬಂದಿ ಸದಸ್ಯರು ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಬೇಕು. ಅಂದವಾಗಿ ಕಾಣಿಸಿಕೊಳ್ಳಬೇಕು. ವಿಮಾನ ನಿಲ್ದಾಣದಲ್ಲಿ ಸಿಬ್ಬಂದಿಗಳ ಮೇಕಪ್‌ ಮೊದಲಾದವುಗಳ ಪರೀಕ್ಷೆಯನ್ನು ಮಾಡಲಾಗುತ್ತದೆ. ಕೆಲವು ವಿಮಾನಗಳಲ್ಲಿ ಪ್ರಯಾಣಿಕರಿಗೆ ವರ್ಧಿತ ಊಟದ ಸೇವೆಯನ್ನು ಪರಿಚಯಿಸಲಾಗಿದೆ. ಈ ಸೇವೆಯನ್ನು ಹಂತ ಹಂತವಾಗಿ ಎಲ್ಲಾ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಕರಿಗೆ ವಿಸ್ತರಿಸುವ ಸಾಧ್ಯತೆ ಇದೆ. ಸದ್ಯ ನಾಲ್ಕು ವಿಮಾನಗಳಲ್ಲಿ ಈ ವರ್ಧಿತ ಊಟದ ಸೇವೆಗಳು ಇದೆ. AI864 (ಮುಂಬೈ-ದೆಹಲಿ), AI687 (ಮುಂಬೈ-ದೆಹಲಿ), AI945 (ಮುಂಬೈ-ಅಬುಧಾಬಿ) ಮತ್ತು AI639 (ಮುಂಬೈ-ಬೆಂಗಳೂರು) ರಲ್ಲಿ ಊಟದ ಸೇವೆ ಇದೆ. ಅಲ್ಲದೆ, ಏರ್ ಇಂಡಿಯಾ ಅಧಿಕಾರಿಯ ಪ್ರಕಾರ, ರತನ್ ಟಾಟಾ ಅವರ ಧ್ವನಿಮುದ್ರಿತ ಸಂದೇಶವನ್ನು ಎಲ್ಲಾ ಏರ್ ಇಂಡಿಯಾ ವಿಮಾನಗಳಲ್ಲಿ ಪ್ಲೇ ಮಾಡಲಾಗುತ್ತದೆ.

‘ವಿಂಗ್ಸ್ ಆಫ್ ಚೇಂಜ್’ ಅಭಿಯಾನ

ಇದಕ್ಕೂ ಮೊದಲು, ಟಾಟಾ ಸಮೂಹವು ತನ್ನ ಹೊಸ ಸಾಮಾಜಿಕ ಮಾಧ್ಯಮ ಅಭಿಯಾನ 'ವಿಂಗ್ಸ್ ಆಫ್ ಚೇಂಜ್' ಅನ್ನು ಪ್ರಾರಂಭಿಸಿತು. "ಬ್ರ್ಯಾಂಡ್‌ನ 'ವಿಂಗ್ಸ್ ಆಫ್ ಚೇಂಜ್' ಎಂಬ ಅಭಿಯಾನವು ಹೀಗೆ ಹೇಳುತ್ತದೆ, 'ನೀವು ಹೇಳುತ್ತಿರುವುದನ್ನು ನಾವು ಕೇಳಿದ್ದೇವೆ ಮತ್ತು ನೀವು ಕೇಳಿದ್ದನ್ನು ನಿಮಗೆ ನೀಡಲು ಎದುರು ನೋಡುತ್ತಿದ್ದೇವೆ. ಇಂದು ನಾವು ನಮ್ಮ ಬದ್ಧತೆಯನ್ನು ಮಾಡುತ್ತಿದ್ದೇವೆ. ಭವಿಷ್ಯದಲ್ಲಿ, ನಾವು ರಾಷ್ಟ್ರದ ರೆಕ್ಕೆಗಳಾಗಿದ್ದೇವೆ, ಈಗ ನಾವು ಅದರ ಭವಿಷ್ಯಕ್ಕಾಗಿ ರೆಕ್ಕೆಗಳಾಗುತ್ತೇವೆ," ಎಂದು ತಿಳಿಸಿದೆ.

 ಏರ್‌ಇಂಡಿಯಾವನ್ನು ಮರಳಿ ಪಡೆದ ಟಾಟಾ

ಏರ್‌ಇಂಡಿಯಾವನ್ನು ಮರಳಿ ಪಡೆದ ಟಾಟಾ

1932 ಅ.15ರಂದು ಟಾಟಾ ಸನ್ಸ್‌ ಉದ್ಯಮಿ ಜೆಆರ್‌ಡಿ ಟಾಟಾ ಅವರು ಟಾಟಾ ಏರ್‌ಲೈನ್ಸ್‌ ಸ್ಥಾಪಿಸಿದ್ದರು. ಭಾರತದ ಮೊಟ್ಟಮೊದಲ ವಿಮಾನಯಾನ ಕಂಪನಿಯದು. ಟಾಟಾ ಅವರು ಸ್ವತಃ ಕರಾಚಿಯಿಂದ ಮುಂಬೈವರೆಗೆ ವಿಮಾನ ಹಾರಾಟ ನಡೆಸಿ ದೇಶದ ಮೊಟ್ಟಮೊದಲ ಪೈಲಟ್‌ ಎಂಬ ಹೆಗ್ಗಳಿಕೆಯನ್ನೂ ಪಡೆದಿದ್ದರು. ನಂತರ ಮದ್ರಾಸ್‌ಗೆ ವಿಮಾನಯಾನ ಆರಂಭಿಸಲಾಯಿತು. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್‌ನ ಸೇವೆಯನ್ನು ಬ್ರಿಟಿಷ್‌ ಸರ್ಕಾರ ಯುದ್ಧ ಸಂಬಂಧಿ ಚಟುವಟಿಕೆಗಳಿಗೆ ಬಳಸಿಕೊಂಡಿತು. ನಂತರ ಮಹಾಯುದ್ಧ ಮುಗಿದ ಮೇಲೆ ಟಾಟಾ ಏರ್‌ಲೈನ್ಸ್‌ ಮತ್ತೆ ವಾಣಿಜ್ಯ ಸೇವೆ ಆರಂಭಿಸಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಭಾರತ ಸರ್ಕಾರ ತನ್ನದೇ ವಿಮಾನಯಾನ ಕಂಪನಿಯೊಂದು ಇರಬೇಕು ಎಂಬ ದೃಷ್ಟಿಯಿಂದ ಟಾಟಾ ಏರ್‌ಲೈನ್ಸ್‌ನ ಶೇ.49ರಷ್ಟುಷೇರುಗಳನ್ನು ಖರೀದಿಸಿತು. ಆಗ ಅದಕ್ಕೆ 'ಏರ್‌ ಇಂಡಿಯಾ ಇಂಟರ್‌ನ್ಯಾಷನಲ್‌' ಎಂದು ನಾಮಕರಣ ಮಾಡಲಾಯಿತು. 90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಭಾರತೀಯ ಹುಡುಗಿಗೆ ಮನಸೋತು ಸಪ್ತಪದಿ ತುಳಿಯಲು ಸಜ್ಜಾದ ಗ್ಲೆನ್ ಮ್ಯಾಕ್ಸ್ವೆಲ್ | Oneindia Kannada

English summary
Tata Group Revamps Air India: Minimal jewellery, no duty-free: Air India rings in changes for staff after Tata Group takeover. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X