ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿಸಿಎಂ ಪಳನಿಸ್ವಾಮಿ, ಎಎಂಎಂಕೆ ದಿನಕರನ್ ಚರಾಸ್ತಿ ಏರಿಕೆ

|
Google Oneindia Kannada News

ಚೆನ್ನೈ, ಮಾರ್ಚ್ 16: ತಮಿಳುನಾಡಿನ ಪ್ರಮುಖ ರಾಜಕಾರಣಿಗಳಾದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಡಿಸಿಎಂ ಓ ಪನ್ನೀರ್ ಸೆಲ್ವಂ, ಉದಯನಿಧಿ ಸ್ಟಾಲಿನ್, ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಸೇರಿದಂತೆ 980ಕ್ಕೂ ಅಧಿಕ ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗದ ವೆಬ್ ತಾಣದಲ್ಲಿ ಮಾಹಿತಿ ಸಿಗುತ್ತಿದೆ.

ಪ್ರಮುಖ ರಾಜಕಾರಣಿಗಳ ಪೈಕಿ ತಮಿಳುನಾಡು ಉಪ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಹಾಗೂ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರಿಬ್ಬರ ಚರಾಸ್ತಿ ಮೌಲ್ಯ ಏರಿಕೆ ಕಂಡಿದೆ. 2016ರಲ್ಲಿ 33.20ಲಕ್ಷ ರು ಹೊಂದಿದ್ದ ಓಪಿಎಸ್ ಈಗ 61.19 ಲಕ್ಷ ರು ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಥೇಣಿ ಜಿಲ್ಲೆಯ ಬೋದಿನಾಯಕ್ಕಾನರ್ ಕ್ಷೇತ್ರದಿಂದ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆ ಬಯಸಿದ್ದಾರೆ.

ಚುನಾವಣಾ ಕಣಕ್ಕೆ ಧುಮುಕಿದ ನಟ ಕಮಲ್ ಆಸ್ತಿ ಎಷ್ಟಿದೆ?ಚುನಾವಣಾ ಕಣಕ್ಕೆ ಧುಮುಕಿದ ನಟ ಕಮಲ್ ಆಸ್ತಿ ಎಷ್ಟಿದೆ?

ಮೂರು ನಾಲ್ಕು ಚಕ್ರದ ವಾಹನ, ಉಪ ಮುಖ್ಯಮಂತ್ರಿಯಾಗಿ ಸಿಗುವ ಸಂಬಳವೇ ಆದಾಯ ಮೂಲ, ಪತ್ನಿ ಕೃಷಿಕರಾಗಿದ್ದು, ಆದಾಯಕ್ಕೆ ಅದು ಮೂಲ ಎಂದು ತೋರಿಸಿದ್ದಾರೆ. 65,55,411 ರು ಸಾಲ ಹೊಂದಿದ್ದಾರೆ. ಓಪಿಎಸ್ ಪತ್ನಿ ಚರಾಸ್ತಿ 4.57 ಕೋಟಿ ರು ನಷ್ಟು ಹೊಂದಿದ್ದಾರೆ.

Tamil Nadu: Movable assets of Dy Chief Minister O Panneerselvam, AMMKs Dhinakaran go up

ಟಿಟಿವಿ ದಿನಕರನ್ ಆಸ್ತಿ ಮೌಲ್ಯ: ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ (ಎಎಂಎಂಕೆ) ಮುಖಂಡ ಟಿಟಿವಿ ದಿನಕರನ್ ರಾಧಕೃಷ್ಣನ್ ನಗರ(ಆರ್ ಕೆ ) ಉಪ ಚುನಾವಣೆಯಲ್ಲಿ ಡಿಸೆಂಬರ್ 2017ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಜಯ ದಾಖಲಿಸಿದ್ದರು. ಈ ಬಾರಿ ತೂತ್ತುಕುಡಿ(tuticorin) ಜಿಲ್ಲೆಯ ಕೋವಿಲ್‌ಪಟ್ಟಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ದಿನಕರನ್ ಚರಾಸ್ತಿ 57.44 ಲಕ್ಷ ರು ಇದೆ. ಫೆರಾ ಕಾಯ್ದೆ ಉಲ್ಲಂಘನೆ ದಂಡ ರೂಪದಲ್ಲಿ ಸರ್ಕಾರಕ್ಕೆ 28 ಲಕ್ಷ ಬಾಕಿ ಪಾವತಿ ಬಗ್ಗೆ ಉಲ್ಲೇಖಿಸಿದ್ದಾರೆ. 14.25 ಲಕ್ಷ ಸಾಲ ಹೊಂದಿದ್ದಾರೆ.

ದಿನಕರನ್ ಪತ್ನಿ ಚರಾಸ್ತಿ 7.66 ಕೋಟಿ ರು ಹಾಗೂ ಸ್ಥಿರಾಸ್ತಿ 2.43 ಕೋಟಿ ರು ಹೊಂದಿದ್ದು, 5.82 ಕೋಟಿ ರು ಸಾಲ ಹೊಂದಿದ್ದಾರೆ.

English summary
Tamil Nadu Deputy Chief Minister O Panneerselvam has declared total assets valued at Rs 61.19 lakh, up from the Rs 33.20 lakh in 2016, according to his election affidavit submitted.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X