ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೈಮ್ಸ್ ನೌ ಸಮೀಕ್ಷೆ: ಕೇರಳ, ತಮಿಳುನಾಡು, ಅಸ್ಸಾಂ ಯಾರ ಪಾಲು?

|
Google Oneindia Kannada News

ಪಂಚ ರಾಜ್ಯಗಳ ಚುನಾವಣೆ ಇಂದಷ್ಟೆ ಮುಗಿದಿದ್ದು ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಹಲವಾರು ಸಂಸ್ಥೆಗಳು, ಮಾಧ್ಯಮಗಳು ಪಂಚರಾಜ್ಯಗಳ ಚುನಾವಣಾ ಸಮೀಕ್ಷೆ ನೀಡಿವೆ.

ಟೈಮ್ಸ್ ನೌ ಹಾಗೂ ಸಿವೋಟರ್ ಜಂಟಿಯಾಗಿ ಚುನಾವಣಾ ಸಮೀಕ್ಷೆ ನೀಡಿದ್ದು, ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯೇ ಮತ್ತೆ ಅಧಿಕಾರ ಹಿಡಿಯಲಿದೆ ಎಂದಿದೆ.

Exit polls ಸಮಗ್ರ ಪುಟ: ಐದು ರಾಜ್ಯಗಳ ಭವಿಷ್ಯ ತಿಳಿಯಲು ಕ್ಲಿಕ್ ಮಾಡಿExit polls ಸಮಗ್ರ ಪುಟ: ಐದು ರಾಜ್ಯಗಳ ಭವಿಷ್ಯ ತಿಳಿಯಲು ಕ್ಲಿಕ್ ಮಾಡಿ

ಸಮೀಕ್ಷೆ ವರದಿಯಂತೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷಗಳು 115 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಇನ್ನು ಮಮತಾ ನೇತೃತ್ವದ ಟಿಎಂಸಿ ಹಾಗೂ ಮಿತ್ರ ಪಕ್ಷಗಳು 158 ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ಅಲ್ಪ ಬಹುಮತದೊಂದಿಗೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಪಶ್ಚಿಮ ಬಂಗಾಳದ ಇತರೆ ಎಡಪಕ್ಷಗಳು 19 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿವೆ.

ಕೇರಳಕ್ಕೆ ಮತ್ತೆ ಪಿಣರಾಯಿ ವಿಜಯನ್

ಕೇರಳಕ್ಕೆ ಮತ್ತೆ ಪಿಣರಾಯಿ ವಿಜಯನ್

ಕೇರಳ ರಾಜ್ಯದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟವು 75 ಸ್ಥಾನಗಳಲ್ಲಿ ಜಯಗಳಿಸಿದರೆ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟವು 65 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಬಿಜೆಪಿ ಒಂದು ಸ್ಥಾನದಲ್ಲಿ ಗೆಲುವು ಸಾಧಿಸಲಿದೆ. ಕೇರಳದಲ್ಲಿ 140 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು 71 ಮ್ಯಾಜಿಕ್ ಸಂಖ್ಯೆಯಾಗಿದೆ.

 ತಮಿಳನಾಡಿನಲ್ಲಿ ಆಡಳಿತ ವಿರೋಧಿ ಅಲೆ

ತಮಿಳನಾಡಿನಲ್ಲಿ ಆಡಳಿತ ವಿರೋಧಿ ಅಲೆ

ಇನ್ನು ತಮಿಳುನಾಡಿನಲ್ಲಿ ಆಡಿತಾರೂಢ ಎಐಎಡಿಎಂಕೆ ಪಕ್ಷವು ಹೀನಾಯ ಸೋಲು ಕಂಡು ಸ್ಟ್ಯಾನಿಲ್ ನೇತೃತ್ವದ ಡಿಎಂಕೆ ಪಕ್ಷ ಭಾರಿ ಬಹುಮತದೊಂದಿಗೆ ಆಯ್ಕೆ ಆಗಲಿದೆ ಎನ್ನುತ್ತಿದೆ ಸಮೀಕ್ಷೆ. ಆಡಿತಾರೂಢ ಎಐಎಡಿಎಂಕೆ ಪಕ್ಷವು 64 ಸ್ಥಾನಗಳಲ್ಲಿ ಗೆಲ್ಲಲಿದ್ದರೆ ಡಿಎಂಕೆ ಪಕ್ಷವು 166 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಿದೆ ಸಮೀಕ್ಷೆ.

ಅಸ್ಸಾಂನಲ್ಲಿ ಬಿಜೆಪಿಗೆ ಅತ್ಯಲ್ಪ ಬಹುಮತ

ಅಸ್ಸಾಂನಲ್ಲಿ ಬಿಜೆಪಿಗೆ ಅತ್ಯಲ್ಪ ಬಹುಮತ

ಅಸ್ಸಾಂ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟಕ್ಕೆ ಅತ್ಯಲ್ಪ ಬಹುಮತವಷ್ಟೆ ಬರುತ್ತದೆ ಎಂದಿದೆ ಟೈಮ್ಸ್ ನೌ-ಸಿವೋಟರ್ ಸಮೀಕ್ಷೆ. ಬಿಜೆಪಿ ಮೈತ್ರಿಕೂಟವು 65 ಕ್ಷೇತ್ರಗಳಲ್ಲಿ ಜಯಗಳಿಸಿದರೆ ಕಾಂಗ್ರೆಸ್ ಮೈತ್ರಿಕೂಟವು 59 ಕ್ಷೇತ್ರಗಳಲ್ಲಿ ಜಯಗಳಿಸಲಿದೆ. ಎಜೆಪಿ ಒಂದೂ ಸ್ಥಾನ ಗೆಲ್ಲುತ್ತಿಲ್ಲ ಇತರರು ಎರಡು ಸ್ಥಾನಗಳನ್ನು ಗೆಲ್ಲಲಿದ್ದಾರೆ. 126 ವಿಧಾನಸಭಾ ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಮ್ಯಾಜಿಕ್ ಸಂಖ್ಯೆ 64.

ಪುದುಚೆರಿಯಲ್ಲಿ ಬಿಜೆಪಿ ಜಯಭೇರಿ

ಪುದುಚೆರಿಯಲ್ಲಿ ಬಿಜೆಪಿ ಜಯಭೇರಿ

ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೆರಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದಿದೆ ಸಮೀಕ್ಷೆ. ಪುದುಚೆರಿಯ ಒಟ್ಟು 30 ಕ್ಷೇತ್ರಗಳಲ್ಲಿ 21 ಕ್ಷೇತ್ರಗಲ್ಲಿ ಬಿಜೆಪಿ ಮೈತ್ರಿಕೂಟ ಜಯಭೇರಿ ಭಾರಿಸಲಿದೆ. ಕಾಂಗ್ರೆಸ್ ಮೈತ್ರಿಕೂಟವು 8 ಸ್ಥಾನಗಳಲ್ಲಿ ಜಯಗಳಿಸಲಿದೆ. ಇತರೆ ಒಂದು ಕ್ಷೇತ್ರದಲ್ಲಿ ಗೆಲ್ಲಲಿದ್ದಾರೆ ಎಂದಿದೆ ಸಮೀಕ್ಷೆ.

English summary
Check out Tamil Nadu, Kerala, Assam, West Bengal , Puduchery Assembly Elections Times Now-C Voter Opinion and Exit Poll Results 2021 in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X