ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲಸ ಬಿಟ್ಟು, ಮೀನು ಮಾರಿ ತಿಂಗಳಿಗೆ 1 ಲಕ್ಷ ದುಡಿಯುತ್ತಿದ್ದಾನೆ ಈ ಇಂಜಿನಿಯರ್

|
Google Oneindia Kannada News

ಕರೂರು, ಮಾರ್ಚ್ 19: ಇಂಜಿನಿಯರ್ ಓದಿ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುಬೇಕು, ವಿದೇಶಕ್ಕೆ ಹೋಗಬೇಕು ಎಂಬ ಆಸೆ ಅನೇಕರಿಗೆ ಇರುತ್ತದೆ. ಆದರೆ, ಇಲ್ಲೊಬ್ಬ ಹುಡುಗ ಇಂಜಿನಿಯರ್ ಓದಿ ಮೀನು ಮಾರುತ್ತಿದ್ದಾನೆ. ಈ ಕೆಲಸದಿಂದ ಆತ ತಿಂಗಳಿಗೆ 1 ಲಕ್ಷ ಸಂಪಾದನೆ ಮಾಡುತ್ತಿದ್ದಾನೆ.

ಈ ರೀತಿ ತನ್ನ ಜೀವನದಲ್ಲಿ ವಿಭಿನ್ನ ಗುರಿ ಇಟ್ಟುಕೊಂಡು ಸಾಗುತ್ತಿರುವ ಹುಡುಗ ಮೋಹನ್ ಕುಮಾರ್. ಈತ ತಮಿಳುನಾಡಿನ ಕರೂರು ನಿವಾಸಿ. ತನ್ನ ಸ್ನೇಹಿತರಂತೆ ಇಂಜಿನಿಯರ್ ಮುಗಿಸಿದ ಈ ಹುಡುಗ ಖಾಸಗಿ ಕಾಲೇಜಿನಲ್ಲಿ ಉಪಾದ್ಯಾಯ ಆಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಇದ್ದಕ್ಕಿದ್ದ ಹಾಗೆ ಒಂದು ದಿನ ಆ ಕೆಲಸವನ್ನು ಬಿಟ್ಟು ಮೀನು ಮಾರಲು ಶುರು ಮಾಡುತ್ತಾನೆ.

ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!ಮಾಡುವ ಕೆಲಸ ನೂರಾರಿದೆ, ಸಾಗುವ ಹಾದಿ ದೂರವಿದೆ!

ಹೀಗೆ, ತನ್ನ ಜೀವನದ ಹಾದಿ ಬದಲಿಸಿದ ಹುಡುಗ ತನ್ನ ಗುರಿ ಮುಟ್ಟುವ ಓಟದಲ್ಲಿ ಸಾಗುತ್ತಿದ್ದಾನೆ. ಈ ಹಾದಿಯಲ್ಲಿ ಗೆದ್ದು ತೋರಿಸಿದ್ದಾನೆ.

ಕೆಲಸ ಬಿಟ್ಟು ಮೀನು ಮಾರಾಟ

ಕೆಲಸ ಬಿಟ್ಟು ಮೀನು ಮಾರಾಟ

ಮೋಹನ್ ಕುಮಾರ್ 27 ವರ್ಷದ ತಮಿಳುನಾಡಿನ ಹುಡುಗ. ಆತನ ತಂದೆ ಪಳನಿವೇಲ್, ತಾಯಿ ಸೆಲ್ವರಾಣಿ ಗಾಂಧಿಗ್ರಾಮಂ ನಲ್ಲಿ ಸ್ವತಃ ಅಂಗಡಿ ಇಟ್ಟುಕೊಂಡಿರುತ್ತಾರೆ. ಮೋಹನ್ ಮೆಕಾನಿಕಲ್ ಇಂಜಿನಿಯರ್ ಮುಗಿಸಿ, ತನ್ನ ಊರಿನ ಒಂದು ಕಾಲೇಜಿನಲ್ಲಿ ಉಪಾದ್ಯಾಯನಾಗಿ ಕೆಲಸ ಮಾಡುತ್ತಿರುತ್ತಾನೆ. ಆದರೆ, ಒಂದು ದಿನ ತನ್ನ ಕೆಲಸ ಬಿಟ್ಟು ಕುಟುಂಬದ ವ್ಯಾಪಾರವನ್ನು ಮುನ್ನೆಡೆಸಿಕೊಂಡು ಹೋಗುವ ನಿರ್ಧಾರ ಮಾಡುತ್ತಾನೆ.

ತಾಯಿಯ ಅನಾರೋಗ್ಯ

ತಾಯಿಯ ಅನಾರೋಗ್ಯ

ಕಾಲೇಜು ಮುಗಿಸಿ ಮೋಹನ್ ದಿನ ತಮ್ಮ ಅಂಗಡಿಗೆ ಹೋಗುತ್ತಿರುತ್ತಾನೆ. ಒಮ್ಮೆ ತಾಯಿಯ ಅನಾರೋಗ್ಯದಿಂದ ಅಂಗಡಿಯನ್ನೇ ಮುಚ್ಚಬೇಕಾಗುತ್ತದೆ. ಮೊದಲಿನಿಂದ ಮೀನು ಮಾರಾಟದ ಬಗ್ಗೆ ಆಸಕ್ತಿ ಹೊಂದಿದ್ದ, ಆ ಯುವಕ ಅಂಗಡಿಯನ್ನು ಮುನ್ನೆಡೆಸಿಕೊಂಡು ಹೋಗಲು ತೀರ್ಮಾನ ಮಾಡುತ್ತಾನೆ. ಕಾಲೇಜು ಲೆಕ್ಟುರರ್ ಮೀನು ವ್ಯಾಪಾರ ಶುರು ಮಾಡಿಕೊಳ್ಳುತ್ತಾರೆ.

ಎರಡೇ ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಅಧಿಕಾರಿಎರಡೇ ವರ್ಷದಲ್ಲಿ 25 ಕಿರು ಅರಣ್ಯ ಸೃಷ್ಟಿಸಿದ ಅಧಿಕಾರಿ

ಗೇಲಿ ಮಾಡಿದ್ದ ಅಕ್ಕ ಪಕ್ಕದವರು

ಗೇಲಿ ಮಾಡಿದ್ದ ಅಕ್ಕ ಪಕ್ಕದವರು

ಮೋಹನ್ ಸಂಬಳ ಬರುವ ಕೆಲಸ ಬಿಟ್ಟು ಮೀನಿನ ವ್ಯಾಪಾರ ಮಾಡುತ್ತೇನೆ ಎಂದಾಗ ಕುಟುಂಬದವರಿಗೂ ಅದು ಇಷ್ಟ ಆಗುವುದಿಲ್ಲ. ಅಕ್ಕ ಪಕ್ಕದವರು ಗೇಲಿ ಮಾಡುತ್ತಾರೆ. ಸ್ನೇಹಿತರು ಅವನ ಸಹಾಯಕ್ಕೆ ಬರುವುದಿಲ್ಲ. ಆದರೆ, ದಿನೇಶ್ವರ್ ಹಾಗೂ ಕಾರ್ತಿಕ್ ಎಂಬ ಇಬ್ಬರು ಗೆಳೆಯರು ಮೋಹನ್ ಜೊತೆ ನಿಲ್ಲುತ್ತಾರೆ. ಕೊನೆಗೆ ಮೋಹನ್ ಶ್ರಮಕ್ಕೆ ಫಲ ಸಿಗುವ ಕಾಲ ಬರುತ್ತದೆ.

ಮುಂದಿನ ಗುರಿ

ಮುಂದಿನ ಗುರಿ

ಮೋಹನ್ ಮೀನನ್ನು ಬೇಯಿಸಿ ಮಾರಾಟ ಮಾಡುವುದರ ಜೊತೆಗೆ ಹಸಿ ಮೀನಿನ ಮಾರಾಟ ಮಾಡುತ್ತಾರೆ. ಸದ್ಯಕ್ಕೆ 2 ರಿಂದ 3 ಟನ್ ಮೀನನ್ನು ಮಾರಾಟ ಮಾಡುತ್ತಾನೆ. 10 ಟನ್ ಮೀನನ್ನು ಸಂಗ್ರಹ ಘಟಕ ಮಾಡುವುದು ನನ್ನ ಮುಂದಿನ ಗುರಿ ಎಂದು ಮೋಹನ್ ತಿಳಿಸಿದ್ದಾರೆ. ಮೋಹನ್ ಜೀವನ ಈ ಸಾಧನೆಯನ್ನು ಇಂಗ್ಲೀಷ್ ಪತ್ರಿಕೆಯೊಂದು ವರದಿ ಮಾಡಿದೆ. ಆದರೆ, ಮೋಹನ್ ಫೋಟೋವನ್ನು ಬಹಿರಂಗಪಡಿಸಿಲ್ಲ.

English summary
Motivation Story: Mohan Kumar a tamil nadu engineer quits job to sell fish and earns Rs 1 lakh a month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X