ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣಾ ಕಣಕ್ಕೆ ಧುಮುಕಿದ ನಟ ಕಮಲ್ ಆಸ್ತಿ ಎಷ್ಟಿದೆ?

|
Google Oneindia Kannada News

ಕೊಯಮತ್ತೂರು, ಮಾರ್ಚ್ 16: ತಮಿಳುನಾಡು ವಿಧಾನಸಭೆ ಚುನಾವಣೆ ಮೂಲಕ ಸಕ್ರಿಯ ರಾಜಕಾರಣಕ್ಕೆ ನಟ ಕಮಲ್ ಹಾಸನ್ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಕೊಯಮತ್ತೂರು ದಕ್ಷಿಣ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಮಲ್ ಅವರು ನಾಮಪತ್ರ ಸಲ್ಲಿಸಿದ್ದು, ಆಸ್ತಿ ವಿವರಗಳು ಲಭ್ಯವಾಗಿವೆ.

ಕಮಲ್ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಮಕ್ಕಳ್ ನೀತಿ ಮೈಯಂ ಪಕ್ಷದ ಅತ್ಯಂತ ಶ್ರೀಮಂತ ಅಭ್ಯರ್ಥಿ ಎನಿಸಿಕೊಂಡಿದ್ದಾರೆ. ಕಮಲ್ ಹಾಸನ್ ಒಟ್ಟಾರೆ 176.9 ಕೋಟಿ ರು ಆಸ್ತಿ ಹೊಂದಿದ್ದಾರೆ. ಇದರಲ್ಲಿ ಚರಾಸ್ತಿ 45 ಕೋಟಿ ರು ಹಾಗೂ ಸ್ಥಿರಾಸ್ತಿ 131.8 ಕೋಟಿ ರು ಇದೆ.

ಪತ್ನಿ ಮಕ್ಕಳ ಬಗ್ಗೆ ಉಲ್ಲೇಖವಿಲ್ಲ:
ಕಮಲ್ ಹಾಸನ್ ಅವರು ಬಹುಪತ್ನಿವಲ್ಲಭ ಎನಿಸಿಕೊಂಡರೂ ಸಾರಿಕಾ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದಾರೆ. ಮೊದಲ ಪತ್ನಿ ವಾಣಿ ಗಣಪತಿ ನಿಧನರಾಗಿದ್ದಾರೆ. ನಟಿ ಗೌತಮಿ ಜೊತೆ ಸಹಬಾಳ್ವೆ ನಡೆಸಿದ್ದರು. ಸದ್ಯ ತಮ್ಮೊಂದಿಗೆ ಯಾರು ಅವಲಂಬಿತರಿಲ್ಲ ಎಂದಿದ್ದಾರೆ. ಸಾರಿಕಾರಿಂದ ಪಡೆದ ಶ್ರುತಿ ಹಾಸನ್, ಅಕ್ಷರ ಹಾಸನ್ ಕೂಡಾ ಅವಲಂಬಿತರಲ್ಲ ಎಂದು ಉಲ್ಲೇಖಿಸಿದ್ದಾರೆ.

Tamil Nadu Election 2021: Kamal Haasan richest candidate of MNM

ಎಂಎನ್ಎಂ ನಂ.2 ಎನಿಸಿಕೊಂಡಿರುವ ಉಪಾಧ್ಯಕ್ಷ, ವೆನಿಲ್ಲಾ ಬೆಳೆ ರಫ್ತು ಉದ್ಯಮಿ ಆರ್ ಮಹೇಂದ್ರನ್ ಅವರು ಎರಡನೇ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಮಹೇಂದ್ರನ್ ಒಟ್ಟು 160 ಕೋಟಿ ರು ಗಳಿಕೆ ಹೊಂದಿದ್ದಾರೆ. ಅವರ ಅವಲಂಬಿತರು 18 ಕೋಟಿ ಹೊಂದಿದ್ದಾರೆ. ಇದನ್ನುಸೇರಿಸಿದರೆ ಕಮಲ್ ಆಸ್ತಿ ಮೊತ್ತವನ್ನು ದಾಟಬಹುದು.

ಮಿಕ್ಕಂತೆ ತಮಿಳುನಾಡಿನ ಪ್ರಮುಖ ರಾಜಕಾರಣಿಗಳಾದ ಸಿಎಂ ಎಡಪ್ಪಾಡಿ ಪಳನಿಸ್ವಾಮಿ, ಡಿಎಂಕೆ ಅಧ್ಯಕ್ಷ ಸ್ಟಾಲಿನ್, ಡಿಸಿಎಂ ಓ ಪನ್ನೀರ್ ಸೆಲ್ವಂ, ಉದಯನಿಧಿ ಸ್ಟಾಲಿನ್, ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಸೇರಿದಂತೆ ಸೋಮವಾರದ ಅಂತ್ಯಕ್ಕೆ 980ಕ್ಕೂ ಅಧಿಕ ಮಂದಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಆಯೋಗದ ವೆಬ್ ತಾಣದಲ್ಲಿ ಮಾಹಿತಿ ಸಿಗುತ್ತಿದೆ.

English summary
Tamil Nadu Election 2021: Kamal Haasan richest candidate of MNM followed by its Vice president.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X