ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ABP-C Voter Opinion Poll: ತಮಿಳುನಾಡಿನಲ್ಲಿ ಯುಪಿಎಗೆ ಮತ್ತೆ ಅಧಿಕಾರ

|
Google Oneindia Kannada News

ನವದೆಹಲಿ, ಜನವರಿ 18: ತಮಿಳುನಾಡಿನಲ್ಲಿ ಏಪ್ರಿಲ್-ಮೇ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಪ್ರಸಕ್ತ ವಿಧಾನಸಭೆಯ ಅವಧಿಯು ಮೇ ತಿಂಗಳಲ್ಲಿ ಅಂತ್ಯಗೊಳ್ಳಲಿದ್ದು, ಎಐಎಡಿಎಂಕೆ ಸರ್ಕಾರಕ್ಕೆ ಅಗ್ನಿ ಪರೀಕ್ಷೆಯಾಗಿದೆ. ಡಿಎಂಕೆ ನೇತೃತ್ವದ ಯುಪಿಎ ಮತ್ತು ಎಐಎಡಿಎಂಕೆ ನೇತೃತ್ವದ ಎನ್‌ಡಿಎ ನಡುವೆ ನೇರ ಪೈಪೋಟಿ ಇರಲಿದೆ.

ಒಟ್ಟು 232 ವಿಧಾನಸಭೆ ಕ್ಷೇತ್ರಗಳು ತಮಿಳುನಾಡಿನಲ್ಲಿವೆ. 2016ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಎಐಎಡಿಎಂಕೆ ದಿಗ್ವಿಜಯ ಸಾಧಿಸಿತ್ತು. ಆಗ ಜೆ. ಜಯಲಲಿತಾ ನೇತೃತ್ವದಲ್ಲಿ ಅದು ಚುನಾವಣೆಯನ್ನು ಎದುರಿಸಿತ್ತು. 1984ರ ಬಳಿಕ ಎರಡನೆಯ ಅವಧಿಗೆ ಆಯ್ಕೆಯಾದ ಮೊದಲ ಆಡಳಿತ ಪಕ್ಷ ಎಂಬ ಹೆಗ್ಗಳಿಕೆಗೆ ಅದು ಪಾತ್ರವಾಗಿತ್ತು. ಆದರೆ ಆಡಳಿತದ ನಡುವೆಯೇ ಮುಖ್ಯಮಂತ್ರಿ ಜೆ. ಜಯಲಲಿತಾ ನಿಧನರಾಗಿದ್ದರಿಂದ ಸಾಕಷ್ಟು ರಾಜಕೀಯ ಪಲ್ಲಟಗಳು ಉಂಟಾಗಿದ್ದವು.

ತಮಿಳುನಾಡಿನಲ್ಲಿ ರಜನಿಕಾಂತ್ ಅಭಿಮಾನಿಗಳು ಯಾವ ಪಕ್ಷ ಸೇರುತ್ತಾರೆ?ತಮಿಳುನಾಡಿನಲ್ಲಿ ರಜನಿಕಾಂತ್ ಅಭಿಮಾನಿಗಳು ಯಾವ ಪಕ್ಷ ಸೇರುತ್ತಾರೆ?

ಇದೇ ಮೊದಲ ಬಾರಿಗೆ ಎಐಎಡಿಎಂಕೆ ಜಯಲಲಿತಾ ಅವರಿಲ್ಲದೆ ಚುನಾವಣೆ ಎದುರಿಸುತ್ತಿದೆ. ಅತ್ತ ಸ್ಟಾಲಿನ್ ನೇತೃತ್ವದ ಡಿಎಂಕೆ ಕೂಡ ಕರುಣಾನಿಧಿ ಅವರ ಮಾರ್ಗದರ್ಶನ ಇಲ್ಲದೆ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದೆ. ಹೀಗಾಗಿ ಈ ಬಾರಿಯ ವಿಧಾನಸಭೆ ಚುನಾವಣೆ ಕುತೂಹಲ ಹೆಚ್ಚಿಸಿದೆ.

ಮತ್ತೆ ಮತ್ತೆ ನೋವು ಕೊಡಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಮನವಿಮತ್ತೆ ಮತ್ತೆ ನೋವು ಕೊಡಬೇಡಿ: ಅಭಿಮಾನಿಗಳಿಗೆ ರಜನಿಕಾಂತ್ ಮನವಿ

ಎಬಿಪಿ-ಸಿ ವೋಟರ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಜನರ ಅಭಿಪ್ರಾಯ ಹೇಗಿದೆ ಎನ್ನುವುದು ಬಹಿರಂಗವಾಗಿದೆ. ಮುಂದೆ ಓದಿ.

ಯಾರಿಗೆ ಎಷ್ಟು ಮತಗಳು?

ಯಾರಿಗೆ ಎಷ್ಟು ಮತಗಳು?

ಯುಪಿಎ: 158-166

ಎನ್‌ಡಿಎ: 60-68

ಎಂಎನ್ಎಂ: 0-4

ಎಎಂಎಂಕೆ: 2-6

ಇತರೆ: 0-4

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?

ಮೋದಿ ಕಾರ್ಯವೈಖರಿ ಎಷ್ಟು ತೃಪ್ತಿಕರ?

ತುಂಬಾ ತೃಪ್ತಿಕರ: 13%

ತೃಪ್ತಿಕರ: 35%

ಅತೃಪ್ತಿಕರ: 44%

ಹೇಳಲು ಅಸಾಧ್ಯ: 08%

ಶಸ್ತ್ರಚಿಕಿತ್ಸೆಗೆ ಚುನಾವಣಾ ಪ್ರಚಾರದಿಂದ ಬಿಡುವು ಪಡೆದ ಕಮಲ ಹಾಸನ್ಶಸ್ತ್ರಚಿಕಿತ್ಸೆಗೆ ಚುನಾವಣಾ ಪ್ರಚಾರದಿಂದ ಬಿಡುವು ಪಡೆದ ಕಮಲ ಹಾಸನ್

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?

ಕೇಂದ್ರ ಸರ್ಕಾರದ ಆಡಳಿತ ಸಮಾಧಾನಕರವೇ?

ತುಂಬಾ ತೃಪ್ತಿಕರ: 11%

ತೃಪ್ತಿಕರ: 32%

ಅತೃಪ್ತಿಕರ: 44%

ಹೇಳಲು ಅಸಾಧ್ಯ: 13%

2016ರ ಚುನಾವಣೆ ಫಲಿತಾಂಶ

2016ರ ಚುನಾವಣೆ ಫಲಿತಾಂಶ

ಕಾಂಗ್ರೆಸ್: 8

ಎಐಎಡಿಎಂಕೆ: 134

ಡಿಎಂಕೆ: 89

ಐಯುಎಂಎಲ್: 1

English summary
Kerala Assembly Election 2021: ABP News and C Voter Opinion Poll has predicted DMK leaded UPA will win.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X