ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವ ಭಯದಲ್ಲಿ ದೇಶಬಿಟ್ಟು ಅಧ್ಯಕ್ಷನೇ ಎಸ್ಕೇಪ್! ಅರಮನೆ ತಾಲಿಬಾನ್ ಪಾಲು!

|
Google Oneindia Kannada News

ಜಗತ್ತಿನ 'ಸೂಪರ್ ಪವರ್' ಪಟ್ಟಕ್ಕಾಗಿ ತಿಕ್ಕಾಟ ಮತ್ತು ಕಿತ್ತಾಟ ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಅದರ ಒಂದು ರಿಫ್ಲೆಕ್ಷನ್ ಅಫ್ಘಾನಿಸ್ತಾನ ಹಾಗೂ ತಾಲಿಬಾನ್ ಎನ್ನಬಹುದು. ಅಮೆರಿಕ ತನ್ನ ಮಾನ ಉಳಿಸಿಕೊಳ್ಳುವ ನೆಪದಲ್ಲಿ, ಅಫ್ಘಾನ್ ಮೇಲೆ ದಂಡೆತ್ತಿ ಬಂದು 20 ವರ್ಷ ಕಳೆಯುವುದರ ಒಳಗೆ ಓಡೋಡಿ ಹೋಗಿದೆ. ಸಾಕಪ್ಪ ಇವರ ಸಹವಾಸ ಎಂಬಂತೆ ಬೆನ್ನು ತೋರಿಸಿದ್ದಾನೆ 'ದಡ್ಡಣ್ಣ' ಅಲ್ಲಲ್ಲ 'ದೊಡ್ಡಣ್ಣ'.

Recommended Video

ಈ ರಾಷ್ಟ್ರಗಳು ತಾಲಿಬಾನ್ ಗೆ ಸಾಥ್ ಕೊಡೋಕೆ ರೆಡೀ ಅಂತೆ! | Taliban Captures Afghanistan | Oneindia Kannada

ಅಷ್ಟಕ್ಕೂ ಅಮೆರಿಕ ಮಾಡಿದ ಸಣ್ಣ ಎಡವಟ್ಟು ಇವತ್ತು ಅಫ್ಘಾನ್‌ನ ಘೋರ ಸ್ಥಿತಿಗೆ ತಳ್ಳಿದೆ. ಸ್ವತಃ ಅಫ್ಘಾನಿಸ್ತಾನ್ ಅಧ್ಯಕ್ಷ ಅಶ್ರಫ್ ಘನಿ ಹೇಳದೆ-ಕೇಳದೆ, ಜೀವ ಭಯದಲ್ಲೇ ತನ್ನ ಅಧ್ಯಕ್ಷೀಯ ಅರಮನೆ ಬಿಟ್ಟು ಎಸ್ಕೇಪ್ ಆಗಿದ್ದಾರೆ. ಆದ್ರೆ ಘನಿ ಓಡಿ ಹೋಗಿದ್ದು ಎಲ್ಲಿಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇಂತಹ ಹೊತ್ತಲ್ಲೇ ತಾಲಿಬಾನ್ ಯಾವ ಎದುರಾಳಿಯೂ ಇಲ್ಲದೆ, ನೇರವಾಗಿ ಮತ್ತು ಸುಲಭವಾಗಿ ಅಶ್ರಫ್ ಘನಿ ಇದ್ದ ಅಫ್ಘಾನ್‌ನ ಅಧ್ಯಕ್ಷರ ಅರಮನೆ ಸೇರಿದೆ. ಇಲ್ಲಿಗೆ 21ನೇ ಶತಮಾನ ಮರೆಯಲಾಗ ಮತ್ತೊಂದು ಮಹಾಘಟನೆಗೆ ಅಫ್ಘಾನಿಸ್ತಾನ ಸಾಕ್ಷಿಯಾಗಿದೆ.

Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!? Video: ತಾಲಿಬಾನ್ ಉಗ್ರರಿಗೆ ಬೆದರಿ ವಿಮಾನ ಹತ್ತೋದು ಹೀಗಾ!?

ಪ್ರಜೆಗಳನ್ನು ಅನಾಥರಾಗಿಸಿದ ಅಧ್ಯಕ್ಷ

ಪ್ರಜೆಗಳನ್ನು ಅನಾಥರಾಗಿಸಿದ ಅಧ್ಯಕ್ಷ

ತಾಲಿಬಾನ್ ಪಡೆಗಳ ಮುಖ್ಯಸ್ಥರು ರಾಜಧಾನಿ ಕಾಬೂಲ್ ಪ್ರವೇಶ ಮಾಡುತ್ತಿದ್ದಂತೆ, ಘನಿ ಓಡಿ ಹೋಗಲು ಎಲ್ಲಾ ತಯಾರಿ ಮಾಡಿಕೊಂಡಿದ್ದಂತೆ ಕಾಣುತ್ತದೆ. ಇದೇ ಕಾರಣಕ್ಕೆ ಘನಿ ದಿಢೀರ್ ದೇಶಬಿಟ್ಟು ಹೋಗಿದ್ದಾರೆ. ಹೀಗೆ ಪ್ರಜೆಗಳನ್ನು ಕಾಯಬೇಕಿದ್ದ ಅಧ್ಯಕ್ಷನೇ ಜೀವ ಭಯದಲ್ಲಿ ಓಡಿ ಹೋಗಿರುವುದು ಒಂದೆಡೆ ‘ಜೋಕ್' ಆಗಿದ್ದರೂ, ಮತ್ತೊಂದು ಕಡೆ ಈತನನ್ನೇ ನಂಬಿಕೊಂಡಿದ್ದ ಕೋಟ್ಯಂತರ ಪ್ರಜೆಗಳು ಅನಾಥರಾಗಿದ್ದಾರೆ. ಇನ್ನು ಮುಂದೆ ನಮ್ಮ ಪರಿಸ್ಥಿತಿ ಏನೋ, ಹೇಗೋ ಎಂಬ ಭಯ ಸಹಜವಾಗಿ ಅಫ್ಘಾನ್ ಜನರನ್ನ ಕಾಡುತ್ತಿದೆ.

ಅಧ್ಯಕ್ಷರ ಚೇರ್ ಮೇಲೆ ವಿಶ್ರಾಂತಿ

ಅಧ್ಯಕ್ಷರ ಚೇರ್ ಮೇಲೆ ವಿಶ್ರಾಂತಿ

ಇಷ್ಟೆಲ್ಲಾ ನಡೆಯುವಾಗಲೇ ತಾಲಿಬಾನ್ ಲೀಡರ್ಸ್ ನೇರವಾಗಿ ಅಧ್ಯಕ್ಷರ ಅರಮನೆ, ಅಂದ್ರೆ ಘನಿ ಬಿಟ್ಟು ಓಡಿ ಹೋದ ಅರಮನೆಗೆ ನುಗ್ಗಿದ್ದಾರೆ. ಈ ವೇಳೆ ತಾಲಿಬಾನ್ ವಿರುದ್ಧ ಮಾತನಾಡಲು ಒಂದೇ ಒಂದು ಹುಳ ಕೂಡ ಆ ಅರಮನೆಯಲ್ಲಿ ಇರಲಿಲ್ಲ. ಅಲ್ಲಿದ್ದ ಕೆಲವು ಜನರು ಕೂಡ ತಾಲಿಬಾನ್ ನಾಯಕರಿಗೆ ಸತ್ಕಾರ ಮಾಡಿದ್ದಾರೆ. ತಾಲಿಬಾನ್ ಮುಖಂಡರು ಅಲ್ಲೇ ಇದ್ದ ಅಶ್ರಫ್ ಘನಿ ಚೇರ್ ಮೇಲೆ ಕೂತು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಜೊತೆಗೆ ತಾಲಿಬಾನ್ ಮುಖಂಡರ ಪೈಕಿ ಒಬ್ಬೊಬ್ಬರೇ ಚೇರ್ ಮೇಲೆ ಕೂತು ಫೋಟೋ ತೆಗೆಸಿಕೊಂಡಿದ್ದಾರೆ.

ಅಮೆರಿಕ ವಶದಲ್ಲಿ ಏರ್ಪೋರ್ಟ್

ಅಮೆರಿಕ ವಶದಲ್ಲಿ ಏರ್ಪೋರ್ಟ್

ಇಡೀ ಅಫ್ಘಾನಿಸ್ತಾನವನ್ನೇ ತಾಲಿಬಾನ್ ತನ್ನ ವಶಕ್ಕೆ ಪಡೆದಾಗಿದೆ. ಆದರೆ ಅಫ್ಘಾನ್‌ನ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣ ಮಾತ್ರ ಈಗಲೂ ಅಮೆರಿಕದ ವಶದಲ್ಲಿದ್ದು, ರಾಜತಾಂತ್ರಿಕ ಅಧಿಕಾರಿಗಳು ಹಾಗೂ ಜನರನ್ನ ಏರ್‌ಲಿಫ್ಟ್ ಮಾಡಲಾಗುತ್ತಿದೆ. ಈಗಾಗಲೇ ಏರ್ಪೋರ್ಟ್ ಸುತ್ತಮುತ್ತ ಗುಂಡಿನ ಮೊರೆತ ಕೇಳಿಬಂದಿದ್ದು ಅಲ್ಲಿ ಕ್ಷಣಕ್ಷಣಕ್ಕೂ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಆದಷ್ಟು ಬೇಗ ಜಾಗ ಖಾಲಿ ಮಾಡಲು ಅಮೆರಿಕ ಸೇನೆ ಪರದಾಡುತ್ತಿವೆ. ಯಾವ ಕ್ಷಣದಲ್ಲಿ ಬೇಕಾದರೂ ತಾಲಿಬಾನ್ ಕಾಬೂಲ್ ವಿಮಾನ ನಿಲ್ದಾಣವನ್ನು ತನ್ನ ವಶಕ್ಕೆ ಪಡೆಯುವ ಸಾಧ್ಯತೆ ದಟ್ಟವಾಗಿದೆ.

ವಿಮಾನ ಏರಲು ಜನರ ಫೈಟಿಂಗ್

ವಿಮಾನ ಏರಲು ಜನರ ಫೈಟಿಂಗ್

ಒಂದು ಕಡೆ ಜನರು ಹಾಗೂ ಅಧಿಕಾರಿಗಳ ಸ್ಥಳಾಂತರ ಮಾಡಲು ಅಮೆರಿಕ ಅವಸರ ಮಾಡುತ್ತಿದ್ದರೆ, ಇತ್ತ ವಿಮಾನ ಹತ್ತಲು ಜನರು ಕಿತ್ತಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತಾರು ಸಾವಿರ ಜನ ದಿಢೀರ್ ವಿಮಾನ ನಿಲ್ದಾಣಕ್ಕೆ ನುಗ್ಗಿ ಬಂದಿದ್ದು, ಕುರಿಗಳಂತೆ ತುಂಬಿ ಜನರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರ ಮಾಡಲಾಗುತ್ತಿದೆ. ತಾಲಿಬಾನ್ ದಾಳಿಯ ಭಯದಲ್ಲಿ ಜನ ಕುಟುಂಬ ಸಮೇತ ಗಂಟುಮೂಟೆ ಕಟ್ಟಿ ತಾವು ಹುಟ್ಟಿ ಬೆಳೆದ ಜಾಗ ಖಾಲಿ ಮಾಡುತ್ತಿದ್ದಾರೆ. ಆದರೆ ಜನರ ಕಷ್ಟಗಳಿಗೆ ಸ್ಪಂದಿಸಬೇಕಿದ್ದ ಅಧ್ಯಕ್ಷ ನಾಪತ್ತೆಯಾಗಿದ್ದಾರೆ.

ಎಲ್ಲವೂ ಅಮೆರಿಕದ ಎಡವಟ್ಟು..!

ಎಲ್ಲವೂ ಅಮೆರಿಕದ ಎಡವಟ್ಟು..!

ದಿಢೀರ್ ಅಫ್ಘಾನಿಸ್ತಾನದಿಂದ ಸೇನೆ ವಾಪಸ್ ಕರೆಸಿಕೊಂಡಿದ್ದ ಅಮೆರಿಕ ಪತರುಗುಟ್ಟಿದೆ. ಅಮೆರಿಕ ಕನಸಲ್ಲೂ ಅಂದುಕೊಳ್ಳದ ರೀತಿ ತಾಲಿಬಾನ್ ಕಮ್‌ಬ್ಯಾಕ್ ಮಾಡಿದೆ. ಸತತ 20 ವರ್ಷಗಳ ಕಾಲ ಅಫ್ಘಾನಿಸ್ತಾನ ಆಳಿದ್ದ ಅಮೆರಿಕ ದಿಢೀರ್ ಅಂತಾ ಹೊರ ಬಂದಿದ್ದೇ ತಡ, ತಾಲಿಬಾನ್ ಅಲರ್ಟ್ ಆಗಿ ಇಡೀ ಅಫ್ಘಾನಿಸ್ತಾನವನ್ನ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಯಾವ ಕ್ಷಣದಲ್ಲಿ ಬೇಕಾದ್ರೂ ಕಾಬೂಲ್ ವಿಮಾನ ನಿಲ್ದಾಣದ ಮೇಲೆ ತಾಲಿಬಾನ್ ದಾಳಿ ನಡೆಸಿ ವಶಕ್ಕೆ ಪಡೆಯುವ ಸಾಧ್ಯತೆ ಇದ್ದು, ಅಕಸ್ಮಾತ್ ಈ ಜಾಗವೂ ಅಮೆರಿಕದ ತೆಕ್ಕೆಯಿಂದ ಬಿಟ್ಟು ಹೋದರೆ ಅಮೆರಿಕದ ಪಾಲಿಗೆ ಅಫ್ಘಾನಿಸ್ತಾನದ ಬಾಗಿಲು ಸಂಪೂರ್ಣ ಬಂದ್ ಆದಂತೆಯೇ.

English summary
Taliban leaders takes over the Afghanistan’s presidential palace in Kabul.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X