ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆಯರು ಹೊರಗೆ ಬರುವಂತೆ ಇಲ್ವಾ? ತಾಲಿಬಾನ್ ವಿಚಿತ್ರ ರೂಲ್ಸ್ ಜಾರಿ?

|
Google Oneindia Kannada News

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಸರ್ಕಾರ ರಚಿಸದಿದ್ರೂ ಈಗಾಗಲೇ ಜನರಿಗೆ ಕಿರಿಕ್ ಕೊಡಲು ಶುರುಮಾಡಿರುವ ತಾಲಿಬಾನ್, ಮಹಿಳೆಯರ ಮೇಲೆ ಕಠಿಣ ಕಾನೂನು ಹೇರುತ್ತಿದೆ. ಅಲ್ಲೀಗ ಮಹಿಳೆಯರು ಒಂಟಿಯಾಗಿ ಹೊರಗೆ ಕಾಲಿಡಲು ಆಗುತ್ತಿಲ್ಲ. ಏಕೆಂದರೆ ತಾಲಿಬಾನ್‌ನ ನಿಯಮ ಹೇಳುವಂತೆ, ಮಹಿಳೆಯರು ಒಬ್ಬರೇ ಹೊರಗೆ ಬರುವಂತಿಲ್ಲ.

ಅವರ ಜತೆ ಗಂಡ ಅಥವಾ ಅಪ್ಪ ಅಥವಾ ಸಹೋದರನಾದ್ರೂ ಇರಲೇಬೇಕು. ಅಕಸ್ಮಾತ್ ತಾಲಿಬಾನ್ ನಿಯಮ ಮೀರಿ ಮಹಿಳೆಯರು ಒಂಟಿಯಾಗೇ ಹೊರಬಂದರೆ ತಕ್ಷಣ ಹೆಗಲ ಮೇಲೆ ಗನ್ ಹಾಕಿಕೊಂಡ ವ್ಯಕ್ತಿ ಅವರ ಎದುರು ಬರುತ್ತಾನೆ. ಎಲ್ಲಮ್ಮಾ ನಿನ್ನ ಗಂಡ? ಒಬ್ಬಳೇ ಯಾಕೆ ಹೊರಗೆ ಬಂದೆ ಅಂತಾ ಪ್ರಶ್ನಿಸುತ್ತಾನೆ. ಹಾಗಂತಾ ನೀವು ಕಾರಲ್ಲಿ ಹೋದ್ರೆ ಸೇಫ್ ಅಂದುಕೊಂಡ್ರೆ ಅಲ್ಲಿ ಕೂಡ ಗನ್ ಹಿಡಿದ ವ್ಯಕ್ತಿಗಳು ಚೆಕ್‌ಪೋಸ್ಟ್‌ನಲ್ಲಿ ಕಾಯ್ತಾ ಇರ್ತಾರೆ.

ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಇರಲು ಹೇಳಿದೆ ತಾಲಿಬಾನ್; ಕಾರಣವೇನು?ಉದ್ಯೋಗಸ್ಥ ಮಹಿಳೆಯರನ್ನು ಮನೆಯಲ್ಲೇ ಇರಲು ಹೇಳಿದೆ ತಾಲಿಬಾನ್; ಕಾರಣವೇನು?

ಹೀಗೆ ಅಫ್ಘಾನಿಸ್ತಾನ ಜನ ತಾಲಿಬಾನ್ ರೂಲ್ಸ್ ಫಾಲೋ ಮಾಡಲು ಪರದಾಡುತ್ತಿದ್ದಾರೆ. ಟ್ಯಾಕ್ಸಿ ಅಥವಾ ಕಾರ್‌ನಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಇದು ಕಿರಿಕಿರಿ ಉಂಟುಮಾಡುತ್ತಿದೆ. ಆದರೆ ತಾಲಿಬಾನ್ ವಿರುದ್ಧ ಮಾತಾಡಿ ಅಫ್ಘಾನ್‌ನಲ್ಲಿ ಉಳಿಯಲು ಸಾಧ್ಯ ಇಲ್ಲ ಎಂಬುದು ಅಲ್ಲಿನ ಮಹಿಳೆಯರಿಗೆ ಗೊತ್ತಾಗಿದೆ. ಹೀಗಾಗಿ ಒತ್ತಡಗಳನ್ನು ಸಹಿಸಿಕೊಂಡು ಸಮ್ಮನಿರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಳೆಯುತ್ತಿದೆ ಆಹಾರ ಪದಾರ್ಥ

ಕೊಳೆಯುತ್ತಿದೆ ಆಹಾರ ಪದಾರ್ಥ

ಅಫ್ಘಾನಿಸ್ತಾನ ಎಂದರೆ ಬರೀ ಯುದ್ಧ, ಗನ್, ಉಗ್ರರ ನಾಡು ಎಂದು ಭಾವಿಸಬೇಕಿಲ್ಲ. ಏಕೆಂದರೆ ಅಲ್ಲೂ ನಮ್ಮ ನಿಮ್ಮಂತೆ ಜನರು ಬದುಕುತ್ತಿದ್ದಾರೆ. ಅದ್ರಲ್ಲೂ ಗ್ರಾಮೀಣ ಭಾಗಗಳಲ್ಲಿ ಭಾರತದಂತೆ ಹಳ್ಳಿಗಳು ಸ್ವಚ್ಛಂದವಾಗಿವೆ. ಕೃಷಿ ಚಟುವಟಿಕೆ ನಡೆಯುತ್ತದೆ, ಇದಕ್ಕಾಗಿ ಜಲಾಶಯಗಳಿವೆ. ಹಣ್ಣುಗಳನ್ನು ರಫ್ತು ಮಾಡುವಲ್ಲಿ ಅಫ್ಘಾನಿಸ್ತಾನದ ರೈತರು ಸಾಕಷ್ಟು ಹೆಸರು ಗಳಿಸಿದ್ದಾರೆ. ಆದರೆ ಈಗ ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆ ಎಲ್ಲಾ ಅಫ್ಘಾನಿಸ್ತಾನದ ಚೆಕ್‌ಪೋಸ್ಟ್‌ನಲ್ಲೇ ಕೊಳೆಯುತ್ತಿದೆ. ಏಕೆಂದ್ರೆ ತಾಲಿಬಾನ್ ಜಾರಿಗೆ ತಂದಿರುವ ಕಠಿಣ ನಿಯಮಗಳ ಪರಿಣಾಮ ಚೆಕ್‌ಪೋಸ್ಟ್‌ಗಳಲ್ಲಿ ಮುಲಾಜಿಲ್ಲದೆ ಎಲ್ಲರನ್ನೂ ಪರೀಕ್ಷೆ ನಡೆಸುತ್ತಿದ್ದಾರೆ. ಹೀಗಾಗಿ ಹತ್ತಾರು ಕಿಲೋ ಮೀಟರ್ ಉದ್ದಕ್ಕೆ ಟ್ರಾಫಿಕ್ ನಿಂತಿದ್ದು, ಲಾರಿ ಹಾಗೂ ಟ್ರಕ್‌ಗಳಲ್ಲಿ ಬಂದಿದ್ದ ಆಹಾರ ಪದಾರ್ಥ ಅಲ್ಲೇ ಕೊಳೆಯುತ್ತಿದೆ.

ತಾಲಿಬಾನಿಗಳ ಮದುವೆ: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಇದೆಂಥಾ ಹಿಂಸೆ!?ತಾಲಿಬಾನಿಗಳ ಮದುವೆ: ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ಇದೆಂಥಾ ಹಿಂಸೆ!?

ಎಲ್ಲೆಲ್ಲೂ ‘ಗನ್’ ಪ್ರದರ್ಶನ

ಎಲ್ಲೆಲ್ಲೂ ‘ಗನ್’ ಪ್ರದರ್ಶನ

ತಾಲಿಬಾನ್ ಆಡಳಿತ ಜಾರಿಗೆ ಬಂದರೂ ಅಫ್ಘಾನಿಸ್ತಾನದಲ್ಲಿ ದೊಡ್ಡ ಬದಲಾವಣೆ ಕಾಣುತ್ತಿಲ್ಲ. ಆದರೆ ಹಿಂದೆ ಅಮೆರಿಕ ಸೈನಿಕರು ಇದ್ದ ಜಾಗದಲ್ಲಿ ಹೊಸ ಅತಿಥಿಗಳು ಎಂಟ್ರಿ ಕೊಟ್ಟಿದ್ದಾರೆ. 1996ರಲ್ಲಿ ತಾಲಿಬಾನ್ ಆಡಳಿತ ನಡೆಸುವಾಗ ಇದ್ದ ಉಡುಪುಗಳನ್ನ ಧರಿಸಿ ಕಾವಲು ಕಾಯುತ್ತಿದ್ದಾರೆ. ಅದೇ ರೀತಿ ಬಟ್ಟೆ ತೊಟ್ಟು, ಗಡ್ಡ ಬಿಟ್ಟು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿರುವ ತಾಲಿಬಾನ್ ಯುವಕರು, ಕೈಯಲ್ಲಿ ಗನ್ ಹಿಡಿದು ಎಲ್ಲೆಲ್ಲೂ ಕಾವಲು ಕಾಯುತ್ತಿದ್ದಾರೆ. ಹೀಗೆ ಅಫ್ಘಾನ್‌ನ 34 ಪ್ರಾಂತ್ಯಗಳಿಂದ ಬಂದ ತಾಲಿಬಾನ್ ಪಡೆಯ ಸದಸ್ಯರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಶತ್ರುಗಳು ನುಸುಳದಂತೆ ಅಲರ್ಟ್ ಆಗಿದ್ದಾರೆ.

ತಾಲಿಬಾನ್ ಈಗ ಫುಲ್ ಸ್ಮಾರ್ಟ್

ತಾಲಿಬಾನ್ ಈಗ ಫುಲ್ ಸ್ಮಾರ್ಟ್

1996ರ ಸಮಯ ಈಗ ಮುಗಿದಿದೆ, ತಾಲಿಬಾನ್ ಬದಲಾಗಿದೆ. 2021ಕ್ಕೆ ತಕ್ಕಂತೆ ತಾಲಿಬಾನ್ ಕೂಡ ತನ್ನನ್ನು ಬದಲಾಯಿಸಿಕೊಂಡಿದೆ, ಸದಸ್ಯರ ಕೈಯಲ್ಲಿ ಸ್ಮಾರ್ಟ್ ಫೋನ್‌ ರಾರಾಜಿಸುತ್ತಿವೆ. ಹಾಗೇ ಮತ್ತೊಂದ್ಕಡೆ ಗನ್ ಹಿಡಿದು ರಸ್ತೆಯಲ್ಲಿ ನಿಂತಿರುವ ತಾಲಿಬಾನ್ ಪಡೆ ಜೊತೆಗೆ ಫೋಟೋ ತೆಗೆಯಲು ಜನ ಮುಗಿಬೀಳುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತಾಲಿಬಾನ್ ಪಡೆಗಳ ಜೊತೆಗಿನ ಫೋಟೋ ರಾರಾಜಿಸುತ್ತಿವೆ. ಕಾಬೂಲ್ ನಗರಕ್ಕೆ ಎಂಟ್ರಿ ಕೊಡುತ್ತಿರುವ ಪ್ರತಿಯೊಂದು ವಾಹನಗಳನ್ನೂ ಗನ್ ಹಿಡಿದು ನಿಂತ ತಾಲಿಬಾನ್‌ ಸದಸ್ಯರು ಪರಿಶೀಲನೆ ನಡೆಸುತ್ತಿದ್ದಾರೆ.

ಅಫ್ಘಾನಿಸ್ತಾದಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ..!

ಅಫ್ಘಾನಿಸ್ತಾದಲ್ಲಿ ಎಲ್ಲೆಲ್ಲೂ ಕಟ್ಟೆಚ್ಚರ..!

ಅಪರಾಧ ಮಾಡಿದವರಿಗೆ ತಾಲಿಬಾನ್ ತನ್ನದೇ ರೀತಿಯಲ್ಲಿ ಕಠಿಣಶಿಕ್ಷೆ ನೀಡುವುದು ವಾಡಿಕೆ. ಆದ್ರೆ ಈ ಬಾರಿ ಅಪರಾಧಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಗನ್ ಹಿಡಿದು ನಿಂತಿರುವ ತಾಲಿಬಾನ್ ಪಡೆಗಳು ಜನರಿಗೆ ರಕ್ಷಣೆ ನೀಡುತ್ತಿವೆ. ಅಫ್ಘಾನ್‌ನಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಪರಿಸ್ಥಿತಿ ಕೈಮೀರಿ ಹೋಗಬಹುದು. ಹಿಂಸೆ ಭುಗಿಲೆದ್ದಿದ್ದೇ ಆದರೆ ಲೂಟಿ, ದೊಂಬಿ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿರುವ ತಾಲಿಬಾನ್ ಆಡಳಿತಗಾರರು ಕತ್ತಲಾಗುತ್ತಿದ್ದಂತೆ ಎಲ್ಲೆಲ್ಲೂ ಕಟ್ಟೆಚ್ಚರ ವಹಿಸಿ ಜನರನ್ನ ಮನೆಗೆ ಕಳುಹಿಸುತ್ತಿದ್ದಾರೆ.

English summary
Taliban guards in Afghanistan are not allowing women’s to come out alone.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X