ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ ವಿರುದ್ಧ ಯುದ್ಧಕ್ಕೆ ನಾವು ರೆಡಿ ಎಂದು ತೈವಾನ್ ಘೋಷಣೆ

|
Google Oneindia Kannada News

ತೈಪೆ, ಅಕ್ಟೋಬರ್ 15: ತೈವಾನ್ ವಿಮಾನ ಪ್ರದೇಶದ ನಿಯಮ ಮೀರಿ ಚೀನಾ ತನ್ನ ಮಿಲಿಟರಿ ವಿಮಾನವನ್ನು ಹಾರಿಸುತ್ತಿದ್ದು, ಇದರಿಂದ ತೈವಾನ್ ಕೆರಳಿದೆ. ನಾವು ಯುದ್ಧ ಆರಂಭಿಸುವುದಿಲ್ಲ, ಆದರೆ, ನಾವು ಯುದ್ಧಕ್ಕೆ ಸಜ್ಜಾಗಿದ್ದೇವೆ ಎಂದು ಶುಕ್ರವಾರದಂದು ರಣಕಹಳೆ ಮೊಳಗಿಸಿದೆ.

ತೈವಾನ್‌ನ ಗಡಿಯಲ್ಲಿ ಯುದ್ಧ ವಿಮಾನ ಹಾರಿಸುತ್ತಿದೆ. ಅಲ್ಲದೆ ಮಿಲಿಟರಿ ಪ್ರಯೋಗಗಳು ನಡೆಯುತ್ತಿರುವ ಕಾರಣ ನಾವು ಯುದ್ಧಕ್ಕೆ ಸಿದ್ಧರಾಗಬೇಕು ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ತೈವಾನ್ ಚೀನಾಗೆ ಎಚ್ಚರಿಕೆ ಸಂದೇಶ ಕೊಟ್ಟಿದೆ. ಇದರ ಜೊತೆಗೆ ಮುಂದೆ ಏನಾಗುತ್ತೋ ಎಂಬ ಭೀತಿಯನ್ನೂ ಹುಟ್ಟುಹಾಕಿದೆ.

3ನೇ ವರ್ಲ್ಡ್ ವಾರ್‌ಗೆ ದೊಡ್ಡ ತಯಾರಿ..? ನೌಕಾಸೇನೆಯಲ್ಲಿ ನಂ. 1 ಸ್ಥಾನಕ್ಕೆ ಚೀನಾ!3ನೇ ವರ್ಲ್ಡ್ ವಾರ್‌ಗೆ ದೊಡ್ಡ ತಯಾರಿ..? ನೌಕಾಸೇನೆಯಲ್ಲಿ ನಂ. 1 ಸ್ಥಾನಕ್ಕೆ ಚೀನಾ!

ಈಗಿನ ಸ್ಥಿತಿ ನೋಡಿದರೆ ಚೀನಾ-ತೈವಾನ್ ಯುದ್ಧಕ್ಕೆ ಸಿದ್ಧವಾಗಿಲ್ಲ. ಇದಕ್ಕೆ ಕಾರಣ ನೂರಾರು, ಅದ್ರಲ್ಲೂ ಕೊರೊನಾ ಹೊಡೆತದಿಂದ ಸುಧಾರಿಸಿಕೊಳ್ಳಲು ಇಬ್ಬರಿಗೂ ಸಾಕಷ್ಟು ಸಮಯ ಅಗತ್ಯವಿದೆ. ಪರಿಸ್ಥಿತಿ ಹೀಗಿರುವಾಗ ಯುದ್ಧಕ್ಕೆ ಎರಡೂ ರಾಷ್ಟ್ರಗಳು ಸಿದ್ಧವಿಲ್ಲ! ತೈವಾನ್ ಸಚಿವರು ಇತ್ತೀಚೆಗೆ ಯುದ್ಧಕ್ಕೆ ಸಜ್ಜಾಗಬೇಕಿದೆ ಎಂದು ಹೇಳಿದ್ದರು. ಆದ್ರೆ ಚೀನಾಗೆ ಎಚ್ಚರಿಕೆ ನೀಡುವ ಸಲುವಾಗಿ ಹೀಗೆ ಹೇಳಿರಬಹುದು ಅಂತಿದ್ದಾರೆ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ, ತೈವಾನ್ ಯುದ್ಧಕ್ಕೆ ಸಜ್ಜು ಎಂದು ಘೋಷಿಸಿರುವುದು ಹಲವರ ಹುಬ್ಬೇರಿಸಿದೆ.

ತೈವಾನ್ ಡಚ್ಚರ ವಸಾಹತಾಗಿತ್ತು

ತೈವಾನ್ ಡಚ್ಚರ ವಸಾಹತಾಗಿತ್ತು

ಮೊದಲಿಗೆ ತೈವಾನ್ ಡಚ್ಚರ ವಸಾಹತಾಗಿತ್ತು. ನಂತರ ಜಪಾನ್ ಆಡಳಿತ ಮಾಡಿತ್ತು. 2ನೇ ಮಹಾಯುದ್ಧದ ಬಳಿಕ ಚೀನಾದ ರಾಷ್ಟ್ರೀಯವಾದಿ ಪಕ್ಷದ ಚಿಯಾಂಗ್ ಕೈ-ಶೇಕ್ ಅಧ್ಯಕ್ಷರಾದರು. 1949ರಲ್ಲಿ ಅಂತರ್ಯುದ್ಧ ನಡೆದಾಗ ಮಾವೋ ನೇತೃತ್ವದ ಕಮ್ಯುನಿಸ್ಟ್ ಸೇನೆ ಚಿಯಾಂಗ್ ಪಡೆಯನ್ನು ಹೊರದಬ್ಬಿತ್ತು. ತನ್ನ ಬೆಂಬಲಿಗರ ಜೊತೆ ಚಿಯಾಂಗ್ ಬಂದು ಸೇರಿದ್ದು ಇದೇ ತೈವಾನ್ ಅನ್ನು. ಮಾವೋ ವಶದಲ್ಲಿದ್ದ ಚೀನಾ ಮುಖ್ಯ ಭೂಭಾಗ ಕಮ್ಯೂನಿಸ್ಟರಿಗೆ ನೆಲೆ ಕೊಟ್ಟಿದ್ದರೆ, ತೈವಾನ್ 'ರಿಪಬ್ಲಿಕ್ ಆಫ್ ಚೀನಾ' ಆಗಿ ಉಳಿಯಿತು. ಬಳಿಕ ಚೀನಾ ಹಾಗೇ ತೈವಾನ್ ಮಧ್ಯೆ ನಿರಂತರ ಘರ್ಷಣೆಗಳು ನಡೆದಿದ್ದವು. ಇದು ಈಗಲೂ ಮುಂದುವರಿದಿದೆ.

ತೈವಾನ್ ಗಂಡೆದೆ ಮೆಚ್ಚಲೇಬೇಕು

ತೈವಾನ್ ಗಂಡೆದೆ ಮೆಚ್ಚಲೇಬೇಕು

ತೈವಾನ್ ಚೀನಾದಷ್ಟು ದೊಡ್ಡ ದೇಶವಲ್ಲ, ಆದರೂ ತೈವಾನ್ ಗಂಡೆದೆ ಮೆಚ್ಚಲೇಬೇಕು. ತನ್ನದೇ ಸರ್ಕಾರ ಹೊಂದಿರುವ ತೈವಾನ್‌ನಲ್ಲಿ 2.40 ಕೋಟಿ ಜನ ವಾಸಿಸುತ್ತಿದ್ದಾರೆ. ಇಲ್ಲಿ ಕೆಲ ದಶಕಗಳ ಹಿಂದೆ ರಾಜಕೀಯ ಸ್ಥಿರತೆ ಇರಲಿಲ್ಲ. 2 ದಶಕಗಳಿಂದ ಈಚೆಗೆ ಅಂದರೆ 1996ರ ನಂತರ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದಿದೆ. ಅದಕ್ಕೂ ಮೊದಲು ಹಲವು ದೇಶಗಳು, ಇದೇ ತೈವಾನ್‌ನ ಹರಿದು-ಹಂಚಿ ಆಳ್ವಿಕೆ ನಡೆಸಿದ್ದವು. ಹೀಗೆ ಕಮ್ಯುನಿಸ್ಟ್ ಚೀನಾ ಪಕ್ಕದಲ್ಲೇ ತೈವಾನ್ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ನಿಂತಿದೆ. ಇದು ಸಹಜವಾಗಿಯೇ ಎರಡೂ ರಾಷ್ಟ್ರಗಳ ನಡುವೆ ಘರ್ಷಣೆಗೆ ಕಾರಣವಾಗಿದೆ. ಆಗಾಗ ಅಮೆರಿಕ ತೈವಾನ್ ವಿಚಾರದಲ್ಲಿ ಚೀನಾಗೆ ಎಚ್ಚರಿಕೆ ನೀಡುವುದು ದ್ವೇಷ ಹೆಚ್ಚಾಗುವಂತೆ ಮಾಡುತ್ತಿದೆ.

ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು

ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು

ಲೀ ಟೆಂಗ್ ಹೂಯಿ ಇರದೇ ಇದ್ದಿದ್ದರೆ ತೈವಾನ್‌ ಸ್ವಾಭಿಮಾನದ ಉಳಿವಿನ ಪ್ರಶ್ನೆ ಉದ್ಭವಿಸುತ್ತಲೇ ಇರಲಿಲ್ಲ. ಏಕೆಂದರೆ ಇಷ್ಟೊತ್ತಿಗೆ ಹಾಂಕಾಂಗ್ ರೀತಿಯಲ್ಲೇ ತೈವಾನ್ ಕೂಡ ಚೀನಾ ಪಾಲಾಗುತ್ತಿತ್ತು. ಆದರೆ ತೈವಾನ್‌ನ 'ಮಿಸ್ಟರ್ ಡೆಮಾಕ್ರಸಿ' ಎಂದು ಕರೆಸಿಕೊಳ್ಳುವ ಲೀ ಟೆಂಗ್ ಹೂಯಿ, 90ರ ದಶಕದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆ ತಂದರು. ಇವರ ಪರಿಶ್ರಮದಿಂದ 1996ರಲ್ಲಿ ತೈವಾನ್ ಪೂರ್ಣ ಪ್ರಜಾಪ್ರಭುತ್ವದತ್ತ ತಿರುಗಿತು. 1996ರಲ್ಲಿ ನಡೆದ ತೈವಾನ್‌ನ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ಲೀ ಗೆದ್ದರು. ಈ ಮೂಲಕ ಚೀನಾಗೆ ಸರಿಯಾಗೇ ಬುದ್ಧಿ ಕಲಿಸಿದ್ದವರು ಲೀ. ಆದರೆ 97 ವರ್ಷದ ಲೀ ಜುಲೈ 30ರಂದು ನಿಧನರಾಗಿದ್ದರು.

ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ

ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ

ಚೀನಾ ಸರ್ಕಾರ ನೌಕಾ ಬಲ ಹೆಚ್ಚಿಸಲು ಮತ್ತಷ್ಟು ಆದ್ಯತೆ ನೀಡುತ್ತಿದ್ದು, ಮುಂದಿನ 4 ವರ್ಷಗಳ ಅವಧಿಯಲ್ಲಿ ಈಗಿರುವ 360 ಯುದ್ಧ ನೌಕೆಗಳನ್ನು 400ಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಇದು ತನ್ನ ಜಲ ಗಡಿಯಲ್ಲಿನ ಭದ್ರತೆ ಹಾಗೂ ಶತ್ರು ಪಡೆಗಳಿಗೆ ದೊಡ್ಡ ಸಂದೇಶವಾಗಲಿದೆ ಎಂಬುದು ಚೀನಾ ಲೆಕ್ಕಾಚಾರ. ಈಗಾಗಲೇ ಭೂ ಸೇನೆ ಹಾಗೂ ವಾಯು ಸೇನೆಗಳಲ್ಲೂ ಬಲ ಪ್ರದರ್ಶನ ಮಾಡಿರುವ ಚೀನಿ ಸೇನೆ, ಸಮದ್ರದ ಮೇಲೂ ಹಿಡಿತ ಸಾಧಿಸುವ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾ ಪ್ರತಿಪಾದಿಸುವ ಹಕ್ಕು ಸ್ವಾಮ್ಯ ಇದರಿಂದ ಮತ್ತಷ್ಟು ಗಟ್ಟಿಯಾಗಲಿದೆ.

English summary
Taiwan on Friday said we are'prepared' for war amid increasing Chinese military activity but, we will not start a war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X