ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾನಂಗಳದಲ್ಲಿ ಬೆರಗು: ಕಾರ ಹುಣ್ಣಿಮೆ ದಿನ ಗೋಚರಿಸುವ ಸ್ಟ್ರಾಬೆರಿ ಮೂನ್​

|
Google Oneindia Kannada News

ನವದೆಹಲಿ, ಜೂನ್ 24: ನೀಲಿ ಬಾನಿನಲ್ಲಿ ನಡೆಯುವ ಪ್ರತಿಯೊಂದು ವಿಸ್ಮಯಗಳು ಎಂಥವರಲ್ಲೂ ಬೆರಗು ಹುಟ್ಟಿಸುತ್ತವೆ. ಪೂರ್ಣ ಚಂದಿರನ ಅಂದವನ್ನು ಹೆಚ್ಚಿಸುವಂತಾ ಘಟನೆಯೊಂದು ಗುರುವಾರ ಬಾನಂಗಣದಲ್ಲಿ ಸೃಷ್ಟಿಯಾಗಲಿದೆ.

ಸೂಪರ್ ಮೂನ್, ನೀಲಿ ಚಂದಿರ ಹಾಗೂ ರಕ್ತ ಚಂದ್ರ ಸೇರಿದಂತೆ ಹಲವು ರೀತಿಯಲ್ಲಿ ಚಂದಿರ ಗೋಚಿಸುವದರ ಹಿಂದೆ ನಾನಾ ವೈಜ್ಞಾನಿಕ ಕಾರಣಗಳಿವೆ. ಕೆಲವೊಮ್ಮೆ ಘಟಿಸುವ ಚಂದ್ರ ಗ್ರಹಣವನ್ನೇ ರಕ್ತಚಂದ್ರ ಎಂದೂ ಕರೆಯಲಾಗುತ್ತದೆ. ಕಾರ ಹುಣ್ಣಿಮೆ ದಿನ ಆಕಾಶದಲ್ಲಿ ಮೂಡವ ಪೂರ್ಣ ಚಂದಿರನಲ್ಲಿ ವಿಸ್ಮಯ ಮೂಡಲಿದೆ.

Lunar Eclipse 2021 : ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?Lunar Eclipse 2021 : ಮೇ 26ರಂದು ಒಂದೇ ದಿನ ಚಂದ್ರಗ್ರಹಣ, ಬ್ಲಡ್ ಮೂನ್, ಸೂಪರ್ ಮೂನ್, ಎಲ್ಲೆಲ್ಲಿ ಗೋಚರ?

ತನ್ನ ಕಕ್ಷೆಯಲ್ಲಿ ಸುತ್ತುತ್ತಾ ಚಂದ್ರನು ಭೂಮಿಗೆ ಅತಿ ಸಮೀಪದಲ್ಲಿ ಹಾದು ಹೋಗುವ ಹಿನ್ನೆಲೆ ಅತ್ಯಂತ ಪ್ರಕಾಶಮಾನ ಹಾಗೂ ದೊಡ್ಡದಾಗಿ ಕಾಣಿಸಿಕೊಳ್ಳುತ್ತಾನೆ. ಹೀಗೆ ಪೂರ್ಣ ಚಂದ್ರ ಗೋಚರಿಸುವ ದಿನವನ್ನು ವಿವಿಧ ಹೆಸರಿನ ಹುಣ್ಣಿಮೆ ಎಂದು ಹೇಳಲಾಗುತ್ತದೆ. ಇದರ ಹೊರತಾಗಿ ಕಾರ ಹುಣ್ಣಿಮೆಯ ಗುರುವಾರ ಆಕಾಶದಲ್ಲಿ ಸ್ಟ್ರಾಬೆರಿ ಚಂದ್ರನನ್ನು ನೀವೆಲ್ಲ ಕಣ್ತುಂಬಿಕೊಳ್ಳಬಹುದು.

Super Strawberry Moon On June 24, 2021, What It Means, How To See It

ಆಕಾಶದಲ್ಲಿ ಇಂದು ಸ್ಟ್ರಾಬೆರಿ ಮೂನ್​ ಕಾಣಿಸಿಕೊಳ್ಳುತ್ತದೆ. ಆದರೆ ಈ ವಿಶಿಷ್ಟ ಹೆಸರಿನ ಸ್ಟ್ರಾಬೆರಿ ಮೂನ್​ ಭಾರತದಲ್ಲಿ ಗೋಚರಿಸುವುದಿಲ್ಲ ಬದಲಿಗೆ ಉತ್ತರ ಅಮೇರಿಕಾದಲ್ಲಿ ಸ್ಟ್ರಾಬೆರಿ ಮೂನ್ ಕಾಣಿಸಿಕೊಳ್ಳುತ್ತದೆ. ಉತ್ತರ ಅಮೆರಿಕಾ ಭಾಗದಲ್ಲಿ ಈ ವೇಳೆ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯವಾಗಿದ್ದು, ಈ ದಿನದ ನಂತರದಲ್ಲಿ ಸ್ಟ್ರಾಬೆರಿ ಕೊಯ್ಲು ಶುರು ಆಗುತ್ತದೆ. ಹೀಗಾಗಿ ಇಂದು ಗೋಚರಿಸುವ ವಿಭಿನ್ನ ಚಂದ್ರನನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.

ಸ್ಟ್ರಾಬೆರಿ ಹುಣ್ಣಿಮೆ ಜೂನ್​ 24 ಅಂದರೆ ಗುರುವಾರ ಗೋಚರಿಸಲಿದೆ. ಮೊದಲಿಗೆ ಕಿತ್ತಳೆ ಮಂಡಲದಂತೆ ಕಂಡು ಬರುವ ಚಂದ್ರ ನಂತರದಲ್ಲಿ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತಾನೆ. ಆಕಾಶದಲ್ಲಿ ಚಂದ್ರನು ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸುತ್ತದೆ. ಅದಕ್ಕಾಗಿ ಸ್ಟ್ರಾಬೆರಿ ಮೂನ್​, ಬ್ಲೂಮಿಂಗ್​ ಮೂನ್​, ಗ್ರೀನ್​ ಕಾರ್ನ್​ ಮೂನ್​, ಆನರ್​ ಮೂನ್​, ಬರ್ತ್​ ಮೂನ್​, ಎಗ್​ ಲೇಯಿಂಗ್​ ಮೂನ್​, ಹ್ಯಾಚಿಂಗ್​ ಮೂನ್​ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ವಿವಿಧ ಪ್ರದೇಶಗಳಲ್ಲಿ ಸ್ಟ್ರಾಬೆರಿ ಮೂನ್ ಅನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಆದರೆ, ಭಾತರದಲ್ಲಿ ಸ್ಟ್ರಾಬೆರಿ ಮೂನ್ ಎಂಬ ಕೌತುಕವನ್ನು ಕಣ್ತುಂಬಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದರ ಬದಲಿಗೆ ಆನ್​ಲೈನ್​ ಮೂಲಕ ವಿಸ್ಮಯವನ್ನು ನೋಡಬಹುದು.

ಭಾರತದಲ್ಲಿ ಗೋಚರಿಸುತ್ತದೆಯೇ ಸ್ಟ್ರಾಬೆರಿ ಮೂನ್?

ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸ್ಟ್ರಾಬೆರಿ ಮೂನ್

ವಿವಿಧ ಹೆಸರುಗಳಿಂದ ಕರೆಯಲ್ಪಡುವ ಸ್ಟ್ರಾಬೆರಿ ಮೂನ್

ಸ್ಟ್ರಾಬೆರಿ ಹುಣ್ಣಿಮೆ ಜೂನ್​ 24 ಅಂದರೆ ಗುರುವಾರ ಗೋಚರಿಸಲಿದೆ. ಮೊದಲಿಗೆ ಕಿತ್ತಳೆ ಮಂಡಲದಂತೆ ಕಂಡು ಬರುವ ಚಂದ್ರ ನಂತರದಲ್ಲಿ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತಾನೆ. ಆಕಾಶದಲ್ಲಿ ಚಂದ್ರನು ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸುತ್ತದೆ. ಅದಕ್ಕಾಗಿ ಸ್ಟ್ರಾಬೆರಿ ಮೂನ್​, ಬ್ಲೂಮಿಂಗ್​ ಮೂನ್​, ಗ್ರೀನ್​ ಕಾರ್ನ್​ ಮೂನ್​, ಆನರ್​ ಮೂನ್​, ಬರ್ತ್​ ಮೂನ್​, ಎಗ್​ ಲೇಯಿಂಗ್​ ಮೂನ್​, ಹ್ಯಾಚಿಂಗ್​ ಮೂನ್​ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಸೂಪರ್ ಮೂನ್ ಆಗಿರುತ್ತಾ ಸ್ಟ್ರಾಬೆರಿ ಮೂನ್?

ಸೂಪರ್ ಮೂನ್ ಆಗಿರುತ್ತಾ ಸ್ಟ್ರಾಬೆರಿ ಮೂನ್?

ಸ್ಟ್ರಾಬೆರಿ ಮೂನ್ ಅನ್ನು ಸೂಪರ್ ಮೂನ್ ಎಂದು ಕರೆಯಾಗುತ್ತದೆಯೇ ಎಂಬ ಪ್ರಶ್ನೆಗೆ ನಾಸಾ ಉತ್ತರಿಸಿದೆ. ನಾಸಾ ಪ್ರಕಾರ, ಇಡೀ ವರ್ಷದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಸೂಪರ್ ಮೂನ್ ಗೋಚರಿಸುತ್ತದೆ. ಸೂಪರ್ ಮೂನ್ ಎಂದರೆ ಚಂದ್ರನು ತನ್ನ ಕಕ್ಷೆಯನ್ನು ಸುತ್ತುತ್ತಾ ಭೂಮಿಗೆ ಹತ್ತಿರದಲ್ಲಿ ಬರುತ್ತಾನೆ. ಈ ವೇಳೆ ಪೂರ್ಣ ಚಂದ್ರನು ದೊಡ್ಡ ಆಕಾರದಲ್ಲಿ ಗೋಚರಿಸುತ್ತಾನೆ. ಏಪ್ರಿಲ್ 26ರಂದು ಸೂಪರ್ ಮೂನ್ ಗೋಚರಿಸುತ್ತದೆ. ಏಪ್ರಿಲ್ ತಿಂಗಳ ಗೋಚರಿಸಿದ್ದಕ್ಕಿಂತ ಮೇ 26ರ ಹುಣ್ಣಿಮೆಯ ದಿನ ಗೋಚರಿಸುವ ಸೂಪರ್ ಮೂನ್ ಭೂಮಿಗೆ ಮತ್ತಷ್ಟು ಅಂದರೆ 0.04ರಷ್ಟು ಹತ್ತಿರದಲ್ಲಿ ಕಾಣಿಸುತ್ತದೆ. ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಮೂರು ಬಾರಿ ಸೂಪರ್ ಮೂನ್ ಗೋಚರಿಸುತ್ತದೆ.

ಸೂಪರ್ ಮೂನ್ ಅರ್ಥವೇನು, ಯಾವಾಗ ಗೋಚರಿಸುತ್ತದೆ?

ಸೂಪರ್ ಮೂನ್ ಅರ್ಥವೇನು, ಯಾವಾಗ ಗೋಚರಿಸುತ್ತದೆ?

ಸೂಪರ್ ಮೂನ್ ಬಗ್ಗೆ ಅರ್ಥ್ ಸ್ಕೈ ಡಾಟ್ ಕಾಮ್ ಉಲ್ಲೇಖಿಸಿದೆ. ಅದರ ಪ್ರಕಾರ, "ಚಂದ್ರನು ಭೂಮಿಗೆ ಶೇ.90ರಷ್ಟು ಹತ್ತಿರಕ್ಕೆ ಬಂದ ಸಂದರ್ಭದಲ್ಲಿ ಸೂಪರ್ ಮೂನ್ ಅಥವಾ ಪೂರ್ಣ ಚಂದ್ರ ಗೋಚರಿಸುತ್ತವೆ. ಅಂದರೆ ಭೂಮಿಯಿಂದ 2,24,791 ಮೈಲಿ ಅಥವಾ 3,61,766 ಕಿಲೋ ಮೀಟರ್ ದೂರದಲ್ಲಿ ಇಲ್ಲವೇ ಇದಕ್ಕಿಂತ ಕಡಿಮೆ ಅಂತರದಲ್ಲಿ ಚಂದ್ರನು ಬಂದಾಗ ದೊಡ್ಡ ಗಾತ್ರದಲ್ಲಿ ಕಾಣಿಸುವ ಚಂದ್ರನನ್ನು ಸೂಪರ್ ಮೂನ್," ಎಂದು ಕರೆಯಲಾಗುತ್ತದೆ. 2021ರಲ್ಲಿ ಈಗಾಗಲೇ ಮೂರು ಬಾರಿ ಸೂಪರ್ ಮೂನ್ ಗೋಚರಿಸಿದೆ. ಹೀಗೆ ಗೋಚರಿಸಿದ ಸೂಪರ್ ಮೂನ್ ಭೂಮಿಯಿಂದ ಎಷ್ಟು ಅಂತರದಲ್ಲಿತ್ತು ಎಂಬುದನ್ನು ಈ ಕೆಳಗಿನ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

'ಸೂಪರ್ ಮೂನ್' ಕಂಡಾಗ: ( ಸೂರ್ಯ ಮತ್ತು ಭೂಮಿ ನಡುವಿನ ಅಂತರ)

ದಿನಾಂಕ - ಅಂತರ

ಏಪ್ರಿಲ್ 27, 2021 - 2,22,212 ಮೈಲಿ ಅಥವಾ 3,57,615 ಕಿಲೋ ಮೀಟರ್

ಮೇ 26, 2021 - 2,22,117 ಮೈಲಿ ಅಥವಾ 3,57,462 ಕಿಲೋ ಮೀಟರ್

ಜೂನ್ 24, 2021 - 2,24,662 ಮೈಲಿ ಅಥವಾ 3,61,558 ಕಿಲೋ ಮೀಟರ್

English summary
Super Strawberry Moon On June 24, 2021, What It Means, How To See It: Read Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X