• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜನವರಿ 20- 21ರ ಚಂದ್ರ ಗ್ರಹಣದ ಬಗ್ಗೆ ತಿಳಿದುಕೊಳ್ಳಲೇಬೇಕಾದ ಮಾಹಿತಿ

By ಅನಿಲ್ ಆಚಾರ್
|

ಬಾಹ್ಯಾಕಾಶದಲ್ಲಿ ಮತ್ತೊಂದು ಸುಂದರ ದೃಶ್ಯ ನೋಡುವ ಅವಕಾಶ. ಇದೇ ತಿಂಗಳು ಅಂದರೆ ಜನವರಿ 20 ಹಾಗೂ 21ನೇ ತಾರೀಕು ಸೂಪರ್ ಬ್ಲಡ್ ವೂಲ್ಫ್ ಚಂದ್ರ ಗ್ರಹಣವನ್ನು ನೋಡುವ ಅವಕಾಶಕ್ಕಾಗಿ ಕುತೂಹಲಿಗಳು ಎದುರು ನೋಡುತ್ತಿದ್ದಾರೆ. ಇದು ಸಂಪೂರ್ಣ ಚಂದ್ರ ಗ್ರಹಣ.

ಚಳಿಗಾಲದ ಮಧ್ಯ ಭಾಗದಲ್ಲಿ ಕಾಣಿಸಿಕೊಳ್ಳುವ ಪೂರ್ಣ ಚಂದ್ರನಿಗೆ ವೂಲ್ಫ್ ಮೂನ್ ಎಂಬ ಹೆಸರನ್ನು ನೀಡಿರುವವರು ಅಮೆರಿಕನ್ನರು. ಈ ಪೂರ್ಣ ಚಂದ್ರ ಗ್ರಹಣವು ಆದ ಮೇಲೆ ಮುಂದೆ ಈ ರೀತಿ ಪೂರ್ಣ ಗ್ರಹಣ ನೋಡುವುದಕ್ಕೆ ಮೇ ತಿಂಗಳ 2021ರ ತನಕ ಕಾಯಬೇಕು. ನಿಮಗೆ ನೆನಪಿದ್ದರೆ, ಕಳೆದ ವರ್ಷದ ಜುಲೈನಲ್ಲಿ ಕೂಡ ಚಂದ್ರ ಗ್ರಹಣ ಸಂಭವಿಸಿತ್ತು.

ಇಸ್ರೋ ಚಂದ್ರಯಾನ-2 ಮಾರ್ಚ್‌ನಲ್ಲಿ ಉಡಾವಣೆ: ಕೆ. ಶಿವನ್

ಏನಿದು ಸೂಪರ್ ಬ್ಲಡ್ ಮೂನ್?

ಪೂರ್ಣ ಪ್ರಮಾಣದಲ್ಲಿ ಚಂದ್ರ ಗ್ರಹಣ ಅಂದರೆ ರವಿ ಹಾಗೂ ಚಂದ್ರನ ಮಧ್ಯೆ ಭೂಮಿ ಸಂಚರಿಸಿದಾಗ, ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳುವುದನ್ನು ತಡೆಯುತ್ತದೆ. ಆಗ ಭೂಮಿಯ ವಾತಾವರಣದ ತುದಿಯಿಂದ ಬೆಳಕು ಸಾಗಿ ಚಂದ್ರನ ಮೇಲೆ ಬಿದ್ದು, ಕೆಂಪಾಗಿ ಕಾಣುತ್ತದೆ. ಆದ್ದರಿಂದ ಅದನ್ನು ಸೂಪರ್ 'ಬ್ಲಡ್ ಮೂನ್' ಎನ್ನಲಾಗುತ್ತದೆ.

Super blood moon lunar eclipse: Must know details

ಚಂದ್ರ ಗ್ರಹದ ಸಮಯದಲ್ಲಿ ರವಿ, ಭೂಮಿ ಹಾಗೂ ಚಂದ್ರ ಒಂದೇ ರೇಖೆಯಲ್ಲಿ ಇರುತ್ತವೆ. ಜತೆಗೆ ಪೌರ್ಣಮಿಯಂದು ಮಾತ್ರ ಚಂದ್ರ ಗ್ರಹಣ ಸಂಭವಿಸುತ್ತದೆ. ಸೂಪರ್ ಮೂನ್ ಸಂದರ್ಭದಲ್ಲಿ ಮಾಮೂಲಿಗಿಂತ ಭೂಮಿಗೆ ಹತ್ತಿರದಲ್ಲಿರುವ ಚಂದ್ರ, ಹೆಚ್ಚು ಪ್ರಕಾಶಮಾನವಾಗಿಯೂ ದೊಡ್ಡದಾಗಿಯೂ ಕಾಣುತ್ತದೆ.

ಈ ಗ್ರಹಣ ಎಲ್ಲೆಲ್ಲಿ ಕಾಣುತ್ತದೆ?

ಈ ಅಪರೂಪದ ಬಾಹ್ಯಾಕಾಶ ಕೌತುಕವು ಭಾರತ ಸೇರಿದಂತೆ ಏಷ್ಯಾದ ಬಹುತೇಕ ಭಾಗದಲ್ಲಿ ಗೋಚರಿಸುವುದಿಲ್ಲ. ಅಮೆರಿಕ, ಗ್ರೀನ್ ಲ್ಯಾಂಡ್, ಐಸ್ ಲ್ಯಾಂಡ್, ಪಶ್ಚಿಮ ಯುರೋಪ್ ಹಾಗೂ ಆಫ್ರಿಕಾದ ಪಶ್ಚಿಮ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಪೂರ್ವ ಆಫ್ರಿಕಾ ಹಾಗೂ ಯುರೋಪ್ ನ ಪೂರ್ವ ಭಾಗದ ಜನರು ಭಾಗಶಃ ಚಂದ್ರ ಗ್ರಹಣವನ್ನು ಮಾತ್ರ ನೋಡಬಹುದು.

ಭೂಮಿಯ ಚಂದಿರ ಒಂಟಿಯಲ್ಲ; ಆತನಿಗೆ ಇನ್ನೂ ಇಬ್ಬರು ಜತೆಗಾರರಿದ್ದಾರೆ!

ಈ ಗ್ರಹಣದ ಸಮಯ ಏನು?

ಸಂಪೂರ್ಣ ಚಂದ್ರ ಗ್ರಹಣವು ಭಾರತೀಯ ಕಾಲ ಮಾನದ ಪ್ರಕಾರ ಜನವರಿ 20ರಂದು ರಾತ್ರಿ 11.41ಕ್ಕೆ ಆರಂಭವಾದರೆ ಮರು ದಿನ ಜನವರಿ 21ರ ಬೆಳಗ್ಗೆ 10.11ಕ್ಕೆ ಸಂಪೂರ್ಣವಾಗುತ್ತದೆ. ಪ್ರಮುಖ ವಿದ್ಯಮಾನ 62 ನಿಮಿಷಗಳ ಕಾಲ ಸಂಭವಿಸಿದರೆ, ಒಟ್ಟಾರೆ ಸಂಪೂರ್ಣ ಹಾಗೂ ಭಾಗಶಃ ಚಂದ್ರ ಗ್ರಹಣವು 3 ಗಂಟೆ 30 ನಿಮಿಷಗಳ ಕಾಲ ಸಂಭವಿಸುತ್ತದೆ.

English summary
Super blood moon lunar eclipse on January 20th and 21st. Here is the complete details about total lunar eclipse. Where it will visible, timings, details relating to India mentioned in Oneindia Kannada exclusive article.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X