ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂರ್ಯನ ಮೇಲೆ ‘ಕ್ಯಾಂಪ್‌ಫೈರ್’ ಕಂಡ ಬಾಹ್ಯಾಕಾಶ ವಿಜ್ಞಾನಿಗಳು..!

By ಅನಿಕೇತ್
|
Google Oneindia Kannada News

ಸೂರ್ಯನ ಮೇಲೆ 'ಕ್ಯಾಂಪ್‌ಫೈರ್' ಪತ್ತೆಯಾಗಿದೆ. ಅಷ್ಟಕ್ಕೂ ಇದು ಟ್ರಿಪ್‌ಗೆ ಹೋದಾಗ ಚಳಿ ಕಾಯಿಸಲು ಹಾಕುವ 'ಕ್ಯಾಂಪ್‌ಫೈರ್' ಅಲ್ಲ. ಸೂರ್ಯನ ಮೇಲೆ ಕೊತಕೊತ ಕುದಿಯುತ್ತಿರುವ ಹೈಡ್ರೋಜನ್ ಸಂಯುಕ್ತದಿಂದ ಉಂಟಾಗುತ್ತಿರುವ ವಿದ್ಯಮಾನ.ಅಂದಹಾಗೆ ಭೂಮಿಗೆ ಬೆಳಕು ನೀಡುವ, ಅತ್ಯಂತ ಹತ್ತಿರದ ನಕ್ಷತ್ರ ಸೂರ್ಯನ ಬಗ್ಗೆ ಸ್ವಾರಸ್ಯಕರ ವಿಚಾರಗಳು ಹೊರಬೀಳುತ್ತಿವೆ.

Recommended Video

Corona ಹೋರಾಟದಲ್ಲಿ ಭಾರತ ಮುಖ್ಯ ಪಾತ್ರ | Oneindia Kannada

ಕೆಲ ದಿನಗಳ ಹಿಂದೆ 'ಸೋಲಾರ್ ಆರ್ಬಿಟರ್ ಪ್ರೋಬ್' ಕಳುಹಿಸಿದ್ದ ಸೂರ್ಯನ ಸಮೀಪದ ಚಿತ್ರ ಮತ್ತೊಂದು ಮಹತ್ವದ ಮಾಹಿತಿ ನೀಡಿದೆ. ಇದುವರೆಗೂ ಸೂರ್ಯನಿಗೆ ಇಷ್ಟು ಸಮೀಪದಲ್ಲಿ ಯಾವ ನೌಕೆಯೂ ಸಾಗಲು ಸಾಧ್ಯವಾಗಿರಲಿಲ್ಲ. ಇಷ್ಟು ಹತ್ತಿರದ ಫೋಟೋ ಕ್ಲಿಕ್ ಮಾಡಲು ಕೂಡ ಸಾಧ್ಯವಾಗಿರಲಿಲ್ಲ. ಅದನ್ನ ಮಾಡಿ ತೋರಿಸಿದ್ದು ನಾಸಾ ಹಾಗೂ ಯುರೋಪ್ ಸ್ಪೇಸ್ ಏಜೆನ್ಸಿಯ 'ಸೋಲಾರ್ ಆರ್ಬಿಟರ್ ಪ್ರೋಬ್' ನೌಕೆ.

ವಾಹ್! ಅತ್ಯಂತ ಸಮೀಪದಲ್ಲಿ ಸೆರೆ ಸಿಕ್ಕ ಸೂರ್ಯ..!ವಾಹ್! ಅತ್ಯಂತ ಸಮೀಪದಲ್ಲಿ ಸೆರೆ ಸಿಕ್ಕ ಸೂರ್ಯ..!

ಈಗ ಇದೇ ನೌಕೆ ಕಳುಹಿಸಿರುವ ಚಿತ್ರದಲ್ಲಿ ಸೂರ್ಯನ ಮೇಲ್ಮೈಯಲ್ಲಿ 'ಕ್ಯಾಂಪ್‌ಫೈರ್' ಕುರುಹುಗಳು ಕಂಡುಬಂದಿವೆ. ಈ 'ಕ್ಯಾಂಪ್‌ಫೈರ್'ಗಳು ಸಣ್ಣ ಸಣ್ಣ ಸ್ಫೋಟಕಗಳ ರೀತಿ ಕಂಡುಬಂದಿವೆ. ಸೋಲಾರ್ ಆರ್ಬಿಟರ್ ಪ್ರೋಬ್ ಸೂರ್ಯನಿಂದ 77 ಮಿಲಿಯನ್ ಕಿಲೋಮೀಟರ್ ಅಂದರೆ 7.7 ಕೋಟಿ ಕಿಲೋಮೀಟರ್ ದೂರದಿಂದ ಫೋಟೋ ತೆಗೆದಿತ್ತು. ಈ ಚಿತ್ರಗಳು ಸೂರ್ಯನ ರಚನೆಯ ಬಗ್ಗೆ ಮಹತ್ವದ ಮಾಹಿತಿ ಹೊರ ಹಾಕುತ್ತಿವೆ.

ಮಿಲಿಯನ್ ಡಿಗ್ರಿ ತಾಪಮಾನ..!

ಮಿಲಿಯನ್ ಡಿಗ್ರಿ ತಾಪಮಾನ..!

ಸೂರ್ಯನ ಕುರಿತು ಈಗ ನಡೆಯುತ್ತಿರುವ ಅಧ್ಯಯನಗಳಿಂದ ಬಾಹ್ಯಾಕಾಶ ವಿಜ್ಞಾನ ವಿಭಾಗದಲ್ಲಿ ಬಹುದೊಡ್ಡ ಸಾಧನೆ ಆಗಿದೆ. ಇಷ್ಟುದಿನ ಸೂರ್ಯನ ಒಳಭಾಗಕ್ಕಿಂತ, ಹೊರ ಭಾಗದಲ್ಲಿ ಅಂದರೆ ‘ಕೊರೊನಾ' ಭಾಗದಲ್ಲೇ ಅತಿಹೆಚ್ಚು ತಾಪಮಾನ ಇದೆ ಅಂತಾ ವಿಜ್ಞಾನಿಗಳು ಪ್ರತಿಪಾದಿಸಿದ್ದರು. ಸದ್ಯ ಸೋಲಾರ್ ಪ್ರೋಬ್ ನೌಕೆ ಕಳುಹಿಸಿರುವ ಚಿತ್ರ ಈ ಪ್ರತಿಪಾದನೆಗೆ ಜೀವ ತುಂಬಿದೆ. ಸೂರ್ಯನ ‘ಕೊರೊನಾ' ವಲಯ, ಸೂರ್ಯನ ಮೇಲ್ಮೈಗಿಂತ ಸುಮಾರು 300 ಪಟ್ಟು ಹೆಚ್ಚು ಬಿಸಿಯಾಗಿದೆ. ವಿಜ್ಞಾನಿಗಳ ವರದಿಯ ಪ್ರಕಾರ ಸೂರ್ಯನ ‘ಕೊರೊನಾ' ವಲಯದಲ್ಲಿ 1 ಮಿಲಿಯನ್ ಡಿಗ್ರಿ ತಾಪಮಾನ ಇದೆಯಂತೆ.

ಸ್ವತಃ ವಿಜ್ಞಾನಿಗಳೇ ನಂಬಲಿಲ್ಲ..!

ಸ್ವತಃ ವಿಜ್ಞಾನಿಗಳೇ ನಂಬಲಿಲ್ಲ..!

ಸೋಲಾರ್ ಆರ್ಬಿಟರ್ ಪ್ರೋಬ್ ಕಳುಹಿಸಿದ ಚಿತ್ರವನ್ನು ಮೊದ ಮೊದಲಿಗೆ ಸ್ವತಃ ಬಾಹ್ಯಾಕಾಶ ವಿಜ್ಞಾನಿಗಳೇ ನಂಬಲಿಲ್ಲ. ಏಕೆಂದರೆ ಇಷ್ಟು ಸಮೀಪ ತೆರಳಿ ಸೂರ್ಯನ ಫೋಟೋ ಕ್ಲಿಕ್ ಮಾಡುವುದು ಬಹುದೊಡ್ಡ ಸಾಹಸವಾಗಿತ್ತು. ಆದರೆ ‘ಸೋಲಾರ್ ಆರ್ಬಿಟರ್ ಪ್ರೋಬ್' ನೌಕೆ ಚಿತ್ರ ಕಳುಹಿಸುತ್ತಿದ್ದಂತೆ ಎಲ್ಲರಿಗೂ ಶಾಕ್ ಆಗಿತ್ತು. ಮೊದಲಿಗೆ ನಂಬಲು ಸಾಧ್ಯವಾಗದೇ ಇದ್ದರೂ, ಪರಿಶೀಲನೆ ನಂತರ ಇದನ್ನ ವಿಜ್ಞಾನಿಗಳು ದೃಢಪಡಿಸಿದ್ದಾರೆ. ಹಿರಿಯ ವಿಜ್ಞಾನಿಗಳಂತೂ ಸೋಲಾರ್ ಪ್ರೋಬ್ ಸಾಧನೆ ಕಂಡು ದಂಗಾಗಿ ಹೋಗಿದ್ದರಂತೆ.

ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್

ನೌಕೆಗೂ ‘ಕೊರೊನಾ’ ಕಂಟಕ..!

ನೌಕೆಗೂ ‘ಕೊರೊನಾ’ ಕಂಟಕ..!

ಸೂರ್ಯನ ‘ಕೊರೊನಾ' ವಲಯದ ಬಗ್ಗೆ ಮಹತ್ವದ ಮಾಹಿತಿ ನೀಡಿರುವ ಸೋಲಾರ್ ಆರ್ಬಿಟರ್ ಪ್ರೋಬ್ ನೌಕೆಗೂ ಕೊರೊನಾ ವೈರಸ್‌ನಿಂದ ಕಂಟಕ ಎದುರಾಗಿದೆ. ಮೂಲತಃ ಜರ್ಮನಿಯಲ್ಲಿ ಈ ನೌಕೆ ನಿರ್ವಹಣೆ ನಡೆಯುತ್ತಿದೆ. ಆದರೆ ಸೋಂಕು ಹರಡುವ ಭೀತಿಯಲ್ಲಿ ವಿಜ್ಞಾನಿಗಳು ಬಾಹ್ಯಾಕಾಶ ಕೇಂದ್ರಕ್ಕೆ ಬರುತ್ತಿಲ್ಲ. ಈ ಯೋಜನೆಯಲ್ಲಿರುವ ಬಹುಪಾಲು ವಿಜ್ಞಾನಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

ವಿಜ್ಞಾನಿಗಳಿಂದ ಮಹತ್ವದ ಸಾಧನೆ

ವಿಜ್ಞಾನಿಗಳಿಂದ ಮಹತ್ವದ ಸಾಧನೆ

ಅತ್ಯಗತ್ಯವಾಗಿರುವ ಕೆಲವೇ ಕೆಲವು ಸಿಬ್ಬಂದಿ European Space Agency ಕೇಂದ್ರಕ್ಕೆ ಹಾಜರಾಗುತ್ತಿದ್ದಾರೆ. ಇದು ನೌಕೆಯ ನಿರ್ವಹಣೆ ಹಾಗೂ ಮಾಹಿತಿ ಸಂಗ್ರಹಕ್ಕೆ ದೊಡ್ಡ ಅಡಚಣೆ ಉಂಟುಮಾಡುತ್ತಿದೆ. ಆದರೂ ಇದನ್ನೆಲ್ಲಾ ಮೆಟ್ಟಿ ನಿಂತಿರುವ ಯುರೋಪ್ ಹಾಗೂ ಅಮೆರಿಕದ ಬಾಹ್ಯಾಕಾಶ ವಿಜ್ಞಾನಿಗಳು ಮಹತ್ವದ ಸಾಧನೆ ಮಾಡಿದ್ದಾರೆ.

English summary
Astronomers Have Found Something Big On The Sun. Closest Photos Ever Taken Of Sun's Surface Is Revealing A Landscape Rife With Thousands Of Tiny Solar Flares That Scientists Have Dubbed ‘Campfires’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X