ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶ ನೋಡಲು ನೂಕು ನುಗ್ಗಲು, ಸೂರ್ಯನ ಸುತ್ತ ಏನಿದು ಉಂಗುರ!

|
Google Oneindia Kannada News

ಆಕಾಶ ನೋಡಲು ನೂಕು ನುಗ್ಗಲು ಎನ್ನುವಂಥ ಪರಿಸ್ಥಿತಿ ಇಂದು ಬೆಳಗ್ಗೆ ಬೆಂಗಳೂರಿಗರಿಗೆ ಅನುಭವವಾಗಿರಬಹುದು. ಅನಂತ ವಿಸ್ಮಯಗಳನ್ನು ತನ್ನ ಒಡಲಲ್ಲಿ ಹುದುಗಿಸಿಟ್ಟುಕೊಂಡಿರುವ ಆಗಸದಲ್ಲಿ ಮೇ 24ರಂದು ವಿಸ್ಮಯ ಕಾಣಿಸಿಕೊಂಡಿದೆ. ಸೂರ್ಯನ ಸುತ್ತ ವಿಸ್ಮಯಕಾರಿ ಉಂಗುರ ನೋಡಿ ಅನೇಕ ಮಂದಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Recommended Video

HALO SUN ಬಗ್ಗೆ ಸಂಪೂರ್ಣ ಮಾಹಿತಿ ! | Oneindia Kannada

ವಾಟ್ಸಾಪ್ ಸ್ಟೇಟಸ್, ಇನ್ಸ್ಟಾ ರೀಲು, ಫೇಸ್ಬುಕ್ ಸ್ಟೇಟಸ್, ಸ್ಟೋರಿಯಲ್ಲಿ ಇದು ಸೂರ್ಯನದ್ದೇ ಸದ್ದು. ಸದ್ಯಕ್ಕೆ ಇನ್ನೂ ನಮ್ಮ ಜ್ಯೋತಿಷಿಗಳ ಕಣ್ಣಿಗೆ ಬಿದ್ದಿಲ್ಲ. ಇಲ್ಲದಿದ್ದರೆ ಈ ವೇಳೆಗೆ ಎಲ್ಲಾ ಚಾನೆಲ್ ಗಳಲ್ಲೂ ಇದು ಸೂರ್ಯ ನಮ್ಮ ಮೇಲೆ ಬೀರಿರುವ ವಕ್ರದೃಷ್ಟಿ.. ಈ ರಾಶಿಯವರಿಗೆ ಕಷ್ಟ, ಆ ರಾಶಿಯವರಿಗೆ ಶುಭ ಎಂದು ಶಾಸ್ತ್ರ ಓದುತ್ತಿದ್ದರು..

ಇಷ್ಟಕ್ಕೂ ಸೂರ್ಯ ಸುತ್ತಾ ಕಾಮನಬಿಲ್ಲಿನಂಥ ಈ ಸುಂದರ ಉಂಗುರ ಮೂಡಿದ್ದಾದರೂ ಏಕೆ? ಇದರಿಂದ ಪ್ರಕೃತಿಯಲ್ಲಿ ಏನಾದರೂ ಬದಲಾವಣೆಯಾಗುತ್ತದೆಯೇ? ಇದು ಅಪಾಯದ ಮುನ್ಸೂಚನೆಯೆ? ಎಂಬುದಕ್ಕೆ ಈಗಾಗಲೇ ಅನೇಕ ವೈಜ್ಞಾನಿಕ ವಿಶ್ಲೇಷಣೆಗಳು ಗೂಗಲ್ ಮಾಡಿದರೆ ಸಿಗುತ್ತದೆ.

ಮೊಟ್ಟ ಮೊದಲ ಎಚ್ಚರಿಕೆ ಎಂದರೆ, ಸೂರ್ಯ ಸುತ್ತ ಉಂಗುರ ವಿರಲಿ, ಇಲ್ಲದಿರಲಿ, ಬರಿಗಣ್ಣಿನಿಂದ ದಿಟ್ಟಿಸಿ ನೋಡಬೇಡಿ, ಯುವಿ ಕಿರಣಗಳು ನಿಮ್ಮ ಕಣ್ಣು ಹಾಳು ಮಾಡುತ್ತವೆ. ಇನ್ನೂ ಸನ್ ಹ್ಯಾಲೋ ಉಂಗುರದ ರೀತಿಯೇ ಕಾಣಿಸಬೇಕು ಎಂದೇನಿಲ್ಲ, ಲೈಟ್ ಕಂಬದ ರೀತಿ ಲಂಬವಾಗಿ, ಸೂರ್ಯನ ಮೇಲೆ ಪ್ರಭೆಯಂತೆ ನೇರವಾಗಿ ಕಾಣಿಸಬಹುದು.

ಇದು ಸೂರ್ಯನ ಸುತ್ತಾ ಮಾತ್ರ ಕಾಣುವುದೇ?

ಇದು ಸೂರ್ಯನ ಸುತ್ತಾ ಮಾತ್ರ ಕಾಣುವುದೇ?

ಇಲ್ಲ, ಸೂರ್ಯ, ಚಂದ್ರ ಎರಡರ ಸುತ್ತ ಈ ರೀತಿ ಉಂಗುರವನ್ನು ಕಾಣಬಹುದು. ಇದನ್ನು ಉಂಗುರ ಅನ್ನುವುದರ ಬದಲು halo ಎಂದು ಕರೆಯಲಾಗುತ್ತದೆ. ಮಳೆಗಾಲಕ್ಕೂ ಮುನ್ನ ಈ ರೀತಿ ಉಂಗುರ ವಿನ್ಯಾಸ ಕಾಣಿಸಬಹುದು. ಮಳೆಹನಿಯ ಕಣಗಳು, ಮಂಜಿನಿಂದ ಕೂಡಿದ ಕಣಗಳೇ ತುಂಬಿದ ಮೋಡಗಳು ಒಗ್ಗೂಡಿದಾಗ ಆಗುವ prism effect ನಿಂದ ಸಂಭವಿಸುವ ಖಗೋಳ ವಿದ್ಯಮಾನ ಇದಾಗಿದೆ. ಇದು ಈ ದಿನ ಅಚ್ಚರಿ, ವಿಸ್ಮಯ ಅಲ್ಲವೇ ಅಲ್ಲ, ಈ ಹಿಂದೆಯೂ ಕಂಡು ಬಂದಿತ್ತು. ಇನ್ಮುಂದೆಯೂ ಕಾಣಬಹುದು. ತನ್ನ ಸುತ್ತ ಇರುವ ಮಂಜಿನ ಕಣಗಳ ಮೇಲೆ ಸೂರ್ಯ ಬೀರುವ ಕಿರಣಗಳು ಕಾಮನ ಬಿಲ್ಲಿನ ಬಣ್ಣದ ರೀತಿ ಕಾಣಿಸುವಂತೆ ಮಾಡುತ್ತವೆ. ಇದಕ್ಕೆ ವಕ್ರೀಭವನ(refraction) ಕ್ರಿಯೆ ಕಾರಣ. ಆದರೆ, ಸೂರ್ಯ ಸುತ್ತ ಕಾಣುವ ಉಂಗುರ ಕಾಮನಬಿಲ್ಲಲ್ಲ.

ಇದು ಮಳೆ ಬರುವ ಮುನ್ಸೂಚನೆ

ಇದು ಮಳೆ ಬರುವ ಮುನ್ಸೂಚನೆ

ಸೂರ್ಯನ ಸುತ್ತಾ ಈ ರೀತಿ ಉಂಗುರ ಕಾಣಿಸಿಕೊಂಡರೆ ಭಾರಿ ಮಳೆ ಬರುವ ಮುನ್ಸೂಚನೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯನಿಂದ 22 ಡಿಗ್ರಿಯಲ್ಲಿ ಉಂಟಾಗಿರುವ ಈ 22 ಡಿಗ್ರಿ ಹ್ಯಾಲೋ ಉಂಟಾಗುವುದಕ್ಕೆ ಮಂಜಿನ ಕಣಗಳು ಉಂಗುರ ವಿನ್ಯಾಸದಲ್ಲಿ ಕಾಣಿಸಿಕೊಳ್ಳಲಿ ಬಿಡಲಿ, ಮಳೆ ಬೀಳಲು ಕಾರ್ಮೋಡಗಳು ಅಗತ್ಯ ಎಂದು ಸಾಮಾನ್ಯ ವಿಜ್ಞಾನ ತಿಳಿದವರಿಗೆ ಅರಿವಿರುತ್ತದೆ. ಹೀಗಾಗಿ, ಈ ರೀತಿ ಉಂಗುರದ ಸೂರ್ಯ ಕಾಣಿಸಿಕೊಂಡ ತಕ್ಷಣಕ್ಕೆ ಯಾವ ಮಳೆಯೂ ಬೀಳುವುದಿಲ್ಲ. ಇನ್ನು ಕಾಮನಬಿಲ್ಲು ಬರುವುದು, ಬಿಸಿಲು ಮಳೆ ಬಿದ್ದಾಗ ಎಂಬುದು ತಿಳಿದಿದೆಯಷ್ಟೇ.

ಕಾಮನಬಿಲ್ಲುಗೂ ಉಂಗುರದ ಸೂರ್ಯನಿಗೂ ಏನು ವ್ಯತ್ಯಾಸ

ಕಾಮನಬಿಲ್ಲುಗೂ ಉಂಗುರದ ಸೂರ್ಯನಿಗೂ ಏನು ವ್ಯತ್ಯಾಸ

ಕಾಮನಬಿಲ್ಲಿನಂತೆ ಕಾಣುವ ಈ ಉಂಗುರದಲ್ಲಿ ಕಾಮನಬಿಲ್ಲಿನಲ್ಲಿ ಕಾಣುವ ಎಲ್ಲಾ ಬಣ್ಣಗಳು ಕಾಣಿಸುವುದಿಲ್ಲ. ಉಂಗುರದ ಸೂರ್ಯನ ಸುತ್ತಾ ಹೆಚ್ಚೆಂದರೆ ಕೆಂಪು, ಹಳದಿ, ಬೂದು ಬಣ್ಣ ಕಾಣಿಸಿದರೆ ಹೆಚ್ಚು. ಇನ್ನು ಕಾಮನಬಿಲ್ಲು ಅರ್ಧ ಚಂದ್ರಾಕೃತಿಯಲ್ಲಿ ಮಾತ್ರ ಕಾಣಿಸುತ್ತದೆ. ಸೂರ್ಯನ ಸುತ್ತಲಿರುವ ಉಂಗುರದ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಪ್ರತಿಬಾರಿ ಮಂಜಿನ ಮೋಡಗಳು ಸೃಷ್ಟಿಯಾದಾಗ ಈ ಉಂಗುರಗಳು ಕಾಣಿಸುವುದಿಲ್ಲ, ಬಿಸಿಲು ಮಳೆ ಬಿದ್ದರೆ ಕಾಮನಬಿಲ್ಲು ನಿರೀಕ್ಷಿಸಬಹುದು.

ಹ್ಯಾಲೋಸ್ ಬಗ್ಗೆ ಅರಿಸ್ಟಾಟಲ್

ವಿಜ್ಞಾನಿ, ತತ್ತ್ವಜ್ಞಾನಿ ಅರಿಸ್ಟಾಟಲ್ ಹ್ಯಾಲೋಸ್ ಬಗ್ಗೆ ಮೊದಲಿಗೆ ಪ್ರಸ್ತಾಪಿಸಿದ ಉಲ್ಲೇಖಗಳಿವೆ. 1630ರಲ್ಲಿ ಯುರೋಪ್ ನ ವಿಜ್ಞಾನಿ ಕ್ರಿಸ್ಟೋಫ್ ಶೀನರ್ ಎಂಬಾತ ಈ ಉಂಗುರಗಳ ಬಗ್ಗೆ ವಿವರಣೆ ನೀಡಿದ್ದ ಎನ್ನಲಾಗಿದೆ. ಚೀನಾದ ಪುರಾತನ ಖಗೋಳಶಾಸ್ತ್ರಜ್ಞರುಅಫಿಷಿಯಲ್ ಹಿಸ್ಟರಿ ಆಫ್ ದಿ ಚೈನೀಸ್ ಡೈನಾಸ್ಟಿ ಎಂಬ ಪುಸ್ತಕದಲ್ಲಿಉಲ್ಲೇಖಿಸಿದ್ದಾರೆ. ವಿಶ್ವದೆಲ್ಲೆಡೆ ಇದು ಕಾಣಬಹುದಾಗಿದೆ. ಆದರೆ, ಸೂರ್ಯ ನೋಡುವಾಗ ಅನುಸರಿಸಬಹುದಾದ ಸಾಮಾನ್ಯ ಎಚ್ಚರಿಕೆ ಅವಶ್ಯ, ಬರಿಗಣ್ಣಿನಿಂದ ನೋಡುವುದು ಎಂದಿದ್ದರೂ ಅಪಾಯ. ಸನ್ ಗ್ಲಾಸ್ ಬಳಕೆ ಒಳ್ಳೆಯದು

English summary
Sun Halo in Bangalore: What Causes A Sun Halo? What Does This Rare Phenomenon Mean? all you need to know in kannada. read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X