ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೆಬ್ರವರಿಯಲ್ಲೇ ಸೂರ್ಯನ ಪ್ರಖರತೆ: ಸನ್ ಸ್ಟ್ರೋಕ್ಸ್ ನಿಂದ ತಪ್ಪಿಸಿಕೊಳ್ಳಲು 14 ಸೂತ್ರಗಳು

|
Google Oneindia Kannada News

ಈ ವರ್ಷ ಎಲ್ಲೆಲ್ಲೂ ಹಿಂದೆಂದೂ ಕಾಣದ ಸೂರ್ಯನ ಶಾಖದ ಪ್ರಖರತೆ ಫೆಬ್ರವರಿಯಿಂದ ದಿನ ದಿನಕ್ಕೆ ಹೆಚ್ಚಾಗುತ್ತಿದೆ. ಇನ್ನೂ ಈ ಪ್ರಖರತೆ ಜೂನ್ ಎರಡನೇ ವಾರದ ವರೆಗೂ ಮುಂದುವರೆಯಲಿದೆ.

ಹೀಗಾಗಿ, ಕೆಲವೊಂದು ವ್ಯವಸ್ಥೆಗಳನ್ನು ಮಾಡಿಕೊಳ್ಳಲೇಬೇಕಿದೆ, ಇಲ್ಲವಾದರೆ ವಯಸ್ಕರು ಮಕ್ಕಳು ವಯೋವೃದ್ಧರು ಎಲ್ಲರೂ ಜೀವಕ್ಕೆ ಅಪಾಯ ತಂದುಕೊಳ್ಳಬೇಕಾದೀತು. ಮಕ್ಕಳಲ್ಲಿ Dehydration ವೃದ್ಧರಲ್ಲಿ Sun stroke ಮಧ್ಯವಯಸ್ಕರಲ್ಲಿ ವಿಪರೀತ ತಲೆನೋವು ಹೆಚ್ಚಾಗುತ್ತದೆ.

ಚಕ್ರಾಸನ ರೇಸ್ ನಲ್ಲಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀಚಕ್ರಾಸನ ರೇಸ್ ನಲ್ಲಿ ವಿಶ್ವದಾಖಲೆ ಬರೆದ ಉಡುಪಿಯ ತನುಶ್ರೀ

ಆದ್ದರಿಂದ ಕೆಳಗೆ ಸೂಚಿಸುವಂತೆ ಈ ಬೇಸಿಗೆಯಲ್ಲಿ ತಮ್ಮನ್ನು ತಾವು ಕಾಪಾಡಿಕೊಳ್ಳಿಬಹುದು ಎಂದು ಔಷಧೀಯ ಸಸ್ಯಗಳ ತಜ್ಞರಾಗಿರುವ ಆರ್.ಮಧುಸೂದನ್, ವಾಟ್ಸಾಪ್ ನಲ್ಲಿ ಬರೆದುಕೊಂಡಿದ್ದು ಹೀಗೆ:

1.ಗೃಹಿಣಿಯರು ಹೊರಗಿನ ಕೆಲಸಗಳನ್ನು ಸಂಜೆ ವೇಳೆಯಲ್ಲಿ ಮುಗಿಸಿಕೊಳ್ಳುವುದು.

ರಾಜ್ಯದ ಹಲವೆಡೆ ಕಿದ್ವಾಯಿ ಆಸ್ಪತ್ರೆಯ ವಿಭಾಗೀಯ ಕೇಂದ್ರ: ಸುಧಾಕರ್ರಾಜ್ಯದ ಹಲವೆಡೆ ಕಿದ್ವಾಯಿ ಆಸ್ಪತ್ರೆಯ ವಿಭಾಗೀಯ ಕೇಂದ್ರ: ಸುಧಾಕರ್

2. ಬಿಸಿಲಿನಲ್ಲಿ ಹೊರ ಹೋಗಲೇ ಬೇಕಾದ ಅನಿವಾರ್ಯತೆ ಇದ್ದಲ್ಲಿ ಬಿಳಿ ಬಣ್ಣದ ಛತ್ರಿಯನ್ನು ಬಳಸಿಕೊಳ್ಳುವುದು.

ಸಾಧ್ಯವಾದಷ್ಟು ಕಾಟನ್ ಬಟ್ಟೆಗಳನ್ನು ಧರಿಸುವುದು

ಸಾಧ್ಯವಾದಷ್ಟು ಕಾಟನ್ ಬಟ್ಟೆಗಳನ್ನು ಧರಿಸುವುದು

3. ಬಿಸಿಲಿನ ಪ್ರಖರತೆಯನ್ನು ಕಪ್ಪು ಮತ್ತು ನೀಲಿ ಬಣ್ಣ ಬೇಗ ಹೀರುವುದರಿಂದ ಕಪ್ಪು ಮತ್ತು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸದೇ ಇರುವುದು.
4. ಸಾಧ್ಯವಾದಷ್ಟು ಕಾಟನ್ ಬಟ್ಟೆಗಳನ್ನು ಧರಿಸಿ. ವಯೋವೃದ್ಧರಿಗೆ ಮತ್ತು ಮಕ್ಕಳಿಗೆ ಮನೆಯಲ್ಲಿ ಹೆಚ್ಚು ಹೆಚ್ಚು ನೀರು ಕುಡಿಯಲು ಹೇಳುವುದು.
5. ಬಿಸಿಲಿನಲ್ಲಿ ವಿಟಮಿನ್ "ಸಿ" ಕೊರತೆ ಎದುರಾಗುವುದರಿಂದ ಪ್ರಕೃತಿಯ ಅಮೂಲ್ಯ ಕೊಡುಗೆ ನಿಂಬೆಹಣ್ಣಿನ ಪಾನಕ ಮಾಡಿಕೊಂಡು ಕುಡಿಯುವುದು, ಇದಕ್ಕೆ, ಸಕ್ಕರೆ ಬದಲು ಬೆಲ್ಲವನ್ನು ಬಳಸಿಕೊಳ್ಳುವುದು.

ತುಳಸಿ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿ ಕುಡಿಯುವುದು

ತುಳಸಿ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿ ಕುಡಿಯುವುದು

6. ಬೆಳಗ್ಗೆ ಎದ್ದ ತಕ್ಷಣ "ತುಳಸಿ" ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ಎರಡು ಲೋಟದಷ್ಟು ನೀರನ್ನು ಬೆರೆಸಿ ಕುಡಿಯುವುದು, ಇದರಿಂದ ಕೆಲಸ ಮಾಡುವಾಗ ಸುಸ್ತಾಗುವುದನ್ನು ತಪ್ಪಿಸಿಕೊಳ್ಳಬಹುದು.
7. ಆಹಾರದಲ್ಲಿ ಮಸಾಲೆ ಪದಾರ್ಥಗಳನ್ನು ಹೆಚ್ಚು ಬಳಸದೇ ಇರುವುದು. ಇದರಿಂದ ಗುದದ್ವಾರದಲ್ಲಿ ಉಷ್ಣತೆ ಹೆಚ್ಚಾಗಿ ಮಲವಿಸರ್ಜನೆಗೆ ತೊಂದರೆ ಜೊತೆಗೆ ಪೈಲ್ಸ್ ಬರುವ ಸಾಧ್ಯತೆಯನ್ನು ತಪ್ಪಿಸಿಕೊಳ್ಳಬಹುದು
8. ಈ ಬಿರು ಬೇಸಿಗೆಯಲ್ಲಿ ತಲೆ ಮತ್ತು ಮೆದುಳು ತಂಪಾಗಿರಬೇಕು. ಹಾಗಾಗಿ, ಮಕ್ಕಳಿಗೆ ಎರಡು ದಿನಕ್ಕೊಮ್ಮೆ ಕೊಬ್ಬರಿ ಎಣ್ಣೆ ಬದಲು ರಾತ್ರಿ ಮಲಗುವಾಗ "ಹರಳೆಣ್ಣೆ" ಹಚ್ಚಿ ಬೆಳಗ್ಗೆ ಸ್ನಾನ ಮಾಡಿಸಿ. ವಯಸ್ಕರೂ ಇದನ್ನು ಅನುಸರಿಸಬಹುದು.

ಹೆಸರು ಕಾಳು

ಹೆಸರು ಕಾಳು

9. ರಾತ್ರಿ ಮಲಗುವ ಮೊದಲು ತಣ್ಣೀರಿನ ಬಟ್ಟೆಯಿಂದ ನೆಲವನ್ನು ಒರೆಸಿಕೊಂಡು ತೆಳುವಾದ ಬಟ್ಟೆಯ ಮೇಲೆ ಮಲಗುವುದು ಸೂಕ್ತ. ಹಾಸಿಗೆ ಕೂಡ ಈ ಸಮಯದಲ್ಲಿ ಉಷ್ಣ ಹೆಚ್ಚು ಮಾಡುತ್ತದೆ
10. ಹೆಸರು ಕಾಳುಗಳನ್ನು ನೀರಿನಲ್ಲಿ ಅರ್ಧ ಗಂಟೆಯಷ್ಟು ನೆನಸಿಟ್ಟು ನಂತರ ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಂಡು ದಿನಕ್ಕೆರಡು ಬಾರಿ ಕುಡಿದರೆ ದೇಹವನ್ನು ತಂಪಾಗಿ ಇಟ್ಟುಕೊಳ್ಳಬಹುದು.
11. ಬಾಣಂತಿ ಹೆಣ್ಣು ಮಕ್ಕಳು ಕಾಯಿಸಿ ಆರಿಸಿದ ನೀರನ್ನೇ ಕುಡಿಯಬೇಕು. ಇದರಿಂದ, ತಾಯಿ ಮತ್ತು ಮಗುವಿಗೆ ಯಾವುದೇ ಸೋಂಕು ತಗಲದಂತೆ ತಡೆಯಬಹುದು

ತಣ್ಣೀರಿನ ಸ್ನಾನ ಕ್ಷೇಮ

ತಣ್ಣೀರಿನ ಸ್ನಾನ ಕ್ಷೇಮ

12. ಬೇಸಿಗೆಯಲ್ಲಿ ಮೊಸರಿನ ಬದಲು ಕಡೆದ ಮಜ್ಜಿಗೆಯನ್ನು ಆಹಾರಕ್ಕೆ ಬಳಸಿದರೆ, ಜೀರ್ಣಕ್ರಿಯೆ ಚೆನ್ನಾಗಿ ಆಗುವುದರಿಂದ ಅಸಿಡಿಟಿ ತಪ್ಪಿಸಬಹುದು.
13. ಐದು ವರ್ಷದ ಒಳಗಿನ ಮಕ್ಕಳಿಗೆ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ಚಿಟಿಕೆಯಷ್ಟು ಅಯೋಡಿನ್ ಉಪ್ಪು ಬೆರೆಸಿದ ನೀರನ್ನು ಕುಡಿಸಿದರೆ, ಮಕ್ಕಳನ್ನು Dehydration ನಿಂದ ಕಾಪಾಡಿಕೊಳ್ಳಬಹುದು
14. ಈ ಬೇಸಿಗೆ ದಿನಗಳಲ್ಲಿ ತಣ್ಣೀರಿನ ಸ್ನಾನ ಕ್ಷೇಮ, ದಿನಕ್ಕೆರಡು ಬಾರಿ ಅಂದರೆ ಸಂಜೆ ಅಥವಾ ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ತಣ್ಣೀರಿಗೆ ಕನಿಷ್ಠ 10 ಪುದಿನ ಎಲೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು ತಣ್ಣೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಬೆವರಿನ ದುರ್ಗಂಧ ದೂರವಾಗುವುದು. ಅಲ್ಲದೇ, ಬೆವರು ಗುಳ್ಳೆಗಳು ಚರ್ಮದ ಮೇಲೆ ಬರುವುದಿಲ್ಲ.

English summary
Summer In February: How To Protect From Sun Stroke And Dehydration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X