ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Tattoo ಹಾಕಿಸಿಕೊಂಡವರಿಗೆ HIV ರೋಗ ಸಂಪೂರ್ಣ ಉಚಿತ!?

|
Google Oneindia Kannada News

ಭಾರತದಲ್ಲಿ ಸಡನ್ ಆಗಿ ಎಚ್ಐವಿ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿದೆ. ಉತ್ತರ ಪ್ರದೇಶದಲ್ಲಿ ಇತ್ತೀಚಿಗೆ ವರದಿಯಾದ ಪ್ರಕರಣಗಳನ್ನು ಗಮನಿಸಿದಾಗ ಜನರು ಹಾಕಿಸಿಕೊಳ್ಳುವ ಹಚ್ಚೆಯಿಂದಲೂ ಎಚ್ಐವಿ ಅಂಟಿಕೊಳ್ಳುವುದೇ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ.

ಉತ್ತರ ಪ್ರದೇಶದಲ್ಲಿ ಕಳೆದ ಕೆಲವೇ ದಿನಗಳಲ್ಲಿ ಬರೋಬ್ಬರಿ 14 ಮಂದಿಗೆ ಎಚ್ಐವಿ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಪಕ್ಕಾ ಆಗಿದೆ. ಆದರೆ ಈ ಸೋಂಕು ಅಂಚಿಕೊಳ್ಳುವುದಕ್ಕೆ ಕಾರಣವೇನು ಎಂಬುದನ್ನು ಹುಡುಕುತ್ತಾ ಹೋಗಾದ ಹಚ್ಚೆಯ ಕಥೆ ತೆರೆದುಕೊಳ್ಳುತ್ತದೆ.

ಕೊರೊನಾದಿಂದ ತಪ್ಪಿಸಿಕೊಳ್ಳೋಕೆ ಮನೇಲಿರಿ ಅಂದ್ರೆ ಹೆಚ್ಐವಿ ಅಂಟಿಸಿಕೊಳ್ಳುವುದೇ!?ಕೊರೊನಾದಿಂದ ತಪ್ಪಿಸಿಕೊಳ್ಳೋಕೆ ಮನೇಲಿರಿ ಅಂದ್ರೆ ಹೆಚ್ಐವಿ ಅಂಟಿಸಿಕೊಳ್ಳುವುದೇ!?

ಸಾಮಾನ್ಯವಾಗಿ ಹಚ್ಚೆ ಹಾಕಿಸಿಕೊಳ್ಳುವುದು ಹೊಸ ಟ್ರೆಂಡ್ ಆಗಿ ಬಿಟ್ಟಿದೆ. ಯುವಕರು ತಮ್ಮಿಷ್ಟದ ಚಿತ್ರಗಳನ್ನು ಮೈ ಮೇಲೆ ಹಾಕಿಸಿಕೊಳ್ಳುತ್ತಿದ್ದು, ಅದರ ಎಫೆಕ್ಟ್ ಏನು ಎಂಬುದರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಂಥ ನಿರ್ಲಕ್ಷ್ಯವೇ ಏಡ್ಸ್ ರೋಗದ ಅಪಾಯಕ್ಕೆ ದೂಡುತ್ತಿದೆ. ಆದರೆ ಹಚ್ಚೆಗೂ ಎಚ್ಐವಿ ಸೋಂಕಿಗೂ ಎಲ್ಲಿದೆಲ್ಲಿಯ ಸಂಬಂಧ?, ಎಚ್ಐವಿ ಸೋಂಕು ಹರಡಿಕೊಳ್ಳುವುದು ಹೇಗೆ?, ಎಚ್ಐವಿ ರೋಗವು ಹೇಗೆ ಪ್ರಾಣಕ್ಕೆ ಕುತ್ತು ತರುವುದು? ಎಚ್ಐವಿ ಸೋಂಕಿನಿಂದ ಸುರಕ್ಷಿತವಾಗಿರುವುದು ಹೇಗೆ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಉತ್ತರ ಪ್ರದೇಶದಲ್ಲಿ ಹಚ್ಚೆ ಹಾಕಿಸಿಕೊಂಡವರಲ್ಲಿ ಎಚ್ಐವಿ

ಉತ್ತರ ಪ್ರದೇಶದಲ್ಲಿ ಹಚ್ಚೆ ಹಾಕಿಸಿಕೊಂಡವರಲ್ಲಿ ಎಚ್ಐವಿ

ಟ್ಯಾಟೂ ಹಾಕಿಸಿಕೊಂಡ ಮಂದಿಗೆ ಎಚ್ಐವಿ ಸೋಂಕು ತಗುಲಿರುವ ಘಟನೆಯೊಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ವರದಿಯಾಗಿದೆ. ಇತ್ತೀಚಿಗೆ ವೈದ್ಯಕೀಯ ಪರೀಕ್ಷೆಗೆ ಒಳಗಾದ 14 ಮಂದಿಯಲ್ಲಿ ಎಚ್ಐವಿ ಸೋಂಕು ದೃಢಪಟ್ಟಿತು. ಈ ಸೋಂಕು ತಗುಲುವುದಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಿದಾಗ ಎಲ್ಲರೂ ವಾರಣಾಸಿಯ ಟ್ಯಾಟೂ ಪಾರ್ಲರ್ ಒಂದರಲ್ಲಿ ಟ್ಯಾಟೂ ಹಾಕಿಸಿಕೊಂಡ ಹಿನ್ನೆಲೆಯನ್ನು ಹೊಂದಿದ್ದರು ಎಂಬುದು ಗೊತ್ತಾಗಿದೆ.

ಎಚ್ಐವಿ ಸೋಂಕು ಅಂಟಲು ಒಂದೇ ಸೂಜಿ ಬಳಕೆ ಕಾರಣ

ಎಚ್ಐವಿ ಸೋಂಕು ಅಂಟಲು ಒಂದೇ ಸೂಜಿ ಬಳಕೆ ಕಾರಣ

ಟ್ಯಾಟೂ ಬಿಡಿಸುವುದಕ್ಕೆ ಸಾಮಾನ್ಯವಾಗಿ ಸೂಜಿಯೊಂದನ್ನು ಬಳಸುತ್ತಾರೆ. ಒಬ್ಬರಿಗೆ ಟ್ಯಾಟೂ ಬಿಡಿಸುವುದಕ್ಕೆ ಬಳಸಿದ ಸೂಜಿಯನ್ನೇ ಮತ್ತೊಬ್ಬರಿಗೆ ಟ್ಯಾಟೂ ಬಿಡಿಸುವುದಕ್ಕೆ ಬಳಸಿರುವುದೇ ಸೋಂಕು ಹರಡುವುದಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇದುವರೆಗೂ ಒಟ್ಟು 23,18,737 ಮಂದಿಗೆ ಎಚ್ಐವಿ ಸೋಂಕು ತಗುಲಿರುವುದು ಪಕ್ಕಾ ಆಗಿದ್ದು, ಇದರಲ್ಲಿ 81,430 ಮಕ್ಕಳೂ ಸೇರಿದ್ದಾರೆ.

ಎಚ್ಐವಿ ಸೋಂಕಿನಿಂದ ಜೀವಕ್ಕೆ ಹೇಗೆ ಕುತ್ತು?

ಎಚ್ಐವಿ ಸೋಂಕಿನಿಂದ ಜೀವಕ್ಕೆ ಹೇಗೆ ಕುತ್ತು?

ಒಂದು ಬಾರಿ ಎಚ್ಐವಿ ಸೋಂಕು ಮನುಷ್ಯನಿಗೆ ಅಂಟಿಕೊಂಡರೆ ಅದು ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತದೆ. ರೋಗಗಳ ವಿರುದ್ಧ ಹೋರಾಡುವ ಟಿ ಸೆಲ್ ಮೇಲೆ ಹೆಚ್ಐವಿ ವೈರಸ್ ಆಕ್ರಮಣ ಮಾಡುತ್ತದೆ. ಇದರಿಂದ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ. ಎಚ್ಐವಿ ವೈರಸ್ ಬೇರೆ ರೋಗಗಳನ್ನು ನಿವಾರಿಸುವ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಜಗತ್ತಿನಲ್ಲೇ ಏಡ್ಸ್ ರೋಗಕ್ಕೆ ಯಾವುದೇ ಮದ್ದು ಇಲ್ಲ

ಜಗತ್ತಿನಲ್ಲೇ ಏಡ್ಸ್ ರೋಗಕ್ಕೆ ಯಾವುದೇ ಮದ್ದು ಇಲ್ಲ

ಎಚ್ಐವಿ ಎಂದರೆ ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್. ಈ ರೋಗದ ಬಗ್ಗೆ ಇಂದಿಗೂ ಜನರಲ್ಲಿ ಆತಂಕ ಇದ್ದೇ ಇದೆ. ಏಕೆಂದರೆ ಈ ವೈರಸ್ ಪ್ರಭಾವ ಹೆಚ್ಚಾದರೆ ಅದು ಏಡ್ಸ್ ರೋಗವಾಗಿ ಪರಿವರ್ತನೆ ಆಗುತ್ತದೆ. ಜಗತ್ತಿನಲ್ಲಿ ಇದುವರೆಗೂ ಏಡ್ಸ್ ರೋಗಕ್ಕೆ ಯಾವುದೇ ಔಷಧಿಯನ್ನು ಕಂಡು ಹಿಡಿದಿಲ್ಲ. ಮದ್ದು ಕಂಡು ಹಿಡಿಯುವುದಕ್ಕಾಗಿ ಸಂಶೋಧನೆ ನಡೆಸಲಾಗುತ್ತಿದೆಯಾದರೂ, ಯಶಸ್ವಿಯಾಗಿಲ್ಲ. ಆದರೆ ಏಡ್ಸ್ ರೋಗದ ಕುರಿತು ಯಾವ ರೀತಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ.

ಏಡ್ಸ್ ರೋಗದಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?

ಏಡ್ಸ್ ರೋಗದಿಂದ ಸುರಕ್ಷಿತವಾಗಿರಲು ಏನು ಮಾಡಬೇಕು?

ಕಾರಣ ಮತ್ತು ಸುರಕ್ಷತೆ ನಂಬರ್ 1:

ಲೈಂಗಿಕ ಸಂಪರ್ಕದ ಮೂಲಕ ಎಚ್ಐವಿ ಸೋಂಕು ಹೆಚ್ಚಾಗಿ ಹರಡುತ್ತದೆ. ಆದ್ದರಿಂದ ಅಸುರಕ್ಷಿತ ಲೈಂಗಿಕತೆಯನ್ನು ತಪ್ಪಿಸುವುದರ ಮೂಲಕ ಎಚ್ಐವಿ ಹರಡುವಿಕೆಯನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವುದಕ್ಕೂ ಮೊದಲು ಕಾಂಡೋಮ್‌ಗಳನ್ನು ಬಳಸುವುದು ತೀರಾ ಅಗತ್ಯವಾಗಿದೆ. ಅಲ್ಲದೇ ಒಬ್ಬರಿಗಿಂತ ಹೆಚ್ಚು ಜನರೊಂದಿಗೆ ಲೈಂಗಿಕ ಸಂಪರ್ಕ ಮಾಡುವುದನ್ನು ತಪ್ಪಿಸುವುದು ಸೂಕ್ತ.

ಕಾರಣ ಮತ್ತು ಸುರಕ್ಷತೆ ನಂಬರ್ 2:

ಎಚ್ಐವಿ ವೈರಸ್ ಎನ್ನುವುದು ರಕ್ತದ ಮೂಲಕ ಹರಡುವ ಸೋಂಕು ಆಗಿದೆ. ಹೀಗಾಗಿ ರಕ್ತದಾನ ಮಾಡಿದವರ ರಕ್ತವನ್ನು ಹಾಕಿಸಿಕೊಳ್ಳುವುದಕ್ಕೂ ಪೂರ್ವದಲ್ಲಿ ಅದರ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯವಾಗಿರುತ್ತದೆ. ಇದರ ಜೊತೆಗೆ ಒಬ್ಬರಿಗೆ ನೀಡಿದ ಸಿರಿಂಜ್ ಬಳಸಿ, ಮತ್ತೊಬ್ಬರಿಗೆ ಲಸಿಕೆಯನ್ನು ನೀಡುವುದು ಅಪಾಯಕಾರಿ ಆಗಿರುತ್ತದೆ. ಇದರಿಂದ ಎಚ್ಐವಿ ಸೋಂಕಿನಿಗೆ ಬಳಸಿದ ಸಿರಿಂಜ್ ಮೂಲಕ ಬೇರೆಯವರಿಗೆ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ಒಬ್ಬರಿಗೆ ಬಳಸಿದ ಸಿರಿಂಜ್ ಅನ್ನು ಮರುಬಳಕೆಯನ್ನು ತಡೆಯಬೇಕಿದೆ.

ಕಾರಣ ಮತ್ತು ಸುರಕ್ಷತೆ ನಂಬರ್ 3:

ಗರ್ಭಾವಸ್ಥೆಯಲ್ಲಿ ಅಥವಾ ಹಾಲುಣಿಸುವ ಸಮಯದಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಅಂಟಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಗುವಿಗೆ ಎಚ್ಐವಿ ಹರಡುವುದನ್ನು ತಡೆಯುವ ಸರಿಯಾದ ಔಷಧಿ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಏಡ್ಸ್ ಕುರಿತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಏಡ್ಸ್ ಕುರಿತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

ಸಾಮಾನ್ಯವಾಗಿ ವ್ಯಕ್ತಿಯೊಂದಿಗೆ ದೈಹಿಕ ದ್ರವ್ಯದ ವಿನಿಮಯದ ಸಂದರ್ಭದಲ್ಲಿ ಎಚ್‌ಐವಿ ಸೋಂಕು ತಡೆಗಟ್ಟಲು ಮತ್ತು ಸೋಂಕಿಗೆ ಒಳಗಾಗುವ ಅಪಾಯ ಕಡಿಮೆ ಮಾಡಲು ಹಲವು ಮಾರ್ಗಗಳಿವೆ. ಈ ಪೈಕಿ ಎಚ್ಐವಿ ಸೋಂಕಿಗೆ ಒಳಗಾಗುವ ಹೆಚ್ಚಿನ ಸಾಧ್ಯತೆಯನ್ನು ನೀವು ಅನುಮಾನಿಸಿದರೆ ನಿಯಮಿತವಾಗಿ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು. ಆರಂಭಿಕ ಹಂತದಲ್ಲಿ ಎಚ್ಐವಿ ಚಿಕಿತ್ಸೆಯು ಅಪಾಯವನ್ನು ನಿಯಂತ್ರಿಸುತ್ತದೆ ಹಾಗೂ ಹರಡುವಿಕೆಯನ್ನು ತಡೆಯುತ್ತದೆ. ಇನ್ನು ಈಗಾಗಲೇ ನೀವು ಎಚ್ಐವಿ ಸೋಂಕಿಗೆ ಒಳಗಾಗಿದ್ದರೆ, ಆಂಟಿರೆಟ್ರೋವೈರಲ್ ಥೆರಪಿ (ART) ಮತ್ತು ದೈನಂದಿನ ಔಷಧಿಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿ. ART ಸಂಪೂರ್ಣವಾಗಿ HIV ಯನ್ನು ಗುಣಪಡಿಸುವುದಿಲ್ಲ ಆದರೆ ದೇಹದಿಂದ ವೈರಸ್ ಪ್ರಮಾಣ ಹೆಚ್ಚಾಗುವುದನ್ನು ಕಡಿಮೆ ಮಾಡುತ್ತದೆ.

English summary
India is witnessing a sudden spike in HIV cases: know how to protect yourself from transmitting, contracting AIDS in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X