ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊದಲು ಓದಿ: ಕೊರೊನಾ ಬಂದು ಹೋದ್ರೆ ಅಂಟಿಕೊಳ್ಳುವುದು ಹೇಗೆ ಮಧುಮೇಹ!?

|
Google Oneindia Kannada News

ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲ ಎನ್ನುವ ಮಾತನ್ನು ಕೇಳಿದ್ದೀರಿ ಅಲ್ಲವೇ. ಈ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಕಥೆಯೂ ಸೇಮ್ ಟು ಸೇಮ್ ಹಾಗೇ ಆಗುತ್ತಿದೆ. ಕೋವಿಡ್-19 ಸೋಂಕಿನ ಹಾವಳಿ ತಗ್ಗಿತು ಎನ್ನುವಷ್ಟರಲ್ಲೇ ಮತ್ತೊಂದು ಆಘಾತಕಾರಿ ಸಂಗತಿ ಹೊರ ಬಿದ್ದಿದೆ.

ಭಾರತದಲ್ಲಿ ಕೊರೊನಾ ವೈರಸ್ ಸೋಂಕು ತಗುಲಿದವರುಲ್ಲಿ ಹೊಸ ಹೊಸ ರೋಗದ ಲಕ್ಷಣಗಳು ಗೋಚರಿಸುತ್ತಿವೆ. ಕೋವಿಡ್-19 ಸೋಂಕಿನಿಂದ ಗುಣಮುಖರಾದ ಜನರಲ್ಲಿ ಮಧುಮೇಹ (ಶುಗರ್), ಥೈರಾಯ್ಡ್ ರೋಗ ಕಾಣಿಸಿಕೊಂಡಿರುವುದು ವೈದ್ಯಕೀಯ ಸಂಶೋಧನೆಗಳಲ್ಲಿ ಬಹಿರಂಗವಾಗಿದೆ.

Breaking: ಕರ್ನಾಟಕದಲ್ಲಿ ಒಂದೇ ದಿನ 975 ಮಂದಿಗೆ ಕೊರೊನಾ ವೈರಸ್!Breaking: ಕರ್ನಾಟಕದಲ್ಲಿ ಒಂದೇ ದಿನ 975 ಮಂದಿಗೆ ಕೊರೊನಾ ವೈರಸ್!

ಕಳೆದ 2020ರ ವೇಳೆಗೆ ಕೋವಿಡ್-19 ಪ್ರಾರಂಭಿಕ ಹಂತದಲ್ಲಿಯೇ ಕೊರೊನಾ ವೈರಸ್ ಮತ್ತು ಮಧುಮೇಹದ ನಡುವಿನ ನಂಟು ಇದೆಯೇ ಎಂಬ ಬಗ್ಗೆ ಅಧ್ಯಯನಗಳನ್ನು ನಡೆಸಲಾಗುತ್ತಿತ್ತು. ರಕ್ತದೊತ್ತಡ(ಬಿಪಿ), ಮಧುಮೇಹ ರೋಗಿಗಳಲ್ಲಿ ಕೋವಿಡ್-19 ಯಾವ ರೀತಿ ಪರಿಣಾಮ ಬೀರಬಹುದು? ಕೋವಿಡ್-19 ಮತ್ತು ಮಧುಮೇಹದ ನಡುವಿನ ನಂಟು ಏನಿದೆ?, ಮಧುಮೇಹ ರೋಗಿಗಳು ಕೋವಿಡ್-19 ಸೋಂಕಿಗೆ ತುತ್ತಾದರೆ ಏನಾಗುತ್ತದೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಎರಡು ವರ್ಷಗಳ ನಂತರದಲ್ಲಿ ಈ ಅನ್ವೇಷಣಾ ಸಂಶೋಧನೆಯ ಪ್ರಬಂಧಗಳು ಪ್ರಕಟಗೊಂಡಿವೆ. ಅದರ ಕುರಿತು ವರದಿಯನ್ನು ಮುಂದೆ ಓದಿ.

ಕೊರೊನಾ ಸೋಂಕಿತರಿಗೆ ಮಧುಮೇಹದ ಅಪಾಯ ಹೆಚ್ಚು

ಕೊರೊನಾ ಸೋಂಕಿತರಿಗೆ ಮಧುಮೇಹದ ಅಪಾಯ ಹೆಚ್ಚು

ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್-19 ಪೀಡಿತ ಜನರಲ್ಲಿ ಮಧುಮೇಹದ ಅಪಾಯ ಹೆಚ್ಚಾಗಿರುವ ಪ್ರಕರಣಗಳು ಪತ್ತೆಯಾಗಿವೆ. ರಾಯಗಢ ಜಿಲ್ಲೆಯ ಮಹಾಡ್‌ನಲ್ಲಿ ಬಾವಸ್ಕರ್ ಆಸ್ಪತ್ರೆ ಮತ್ತು ಕ್ಲಿನಿಕಲ್ ಸಂಶೋಧನಾ ಕೇಂದ್ರವನ್ನು ನಡೆಸುತ್ತಿರುವ ಡಾ ಹಿಮ್ಮತ್ ಬಾವಸ್ಕರ್, 'ಜರ್ನಲ್ ಆಫ್ ಫ್ಯಾಮಿಲಿ ಮೆಡಿಸಿನ್ ಅಂಡ್ ಪ್ರೈಮರಿ ಕೇರ್' ನ ಇತ್ತೀಚಿನ ಸಂಚಿಕೆಯಲ್ಲಿ ಸಾಮಾನ್ಯ HbA1c ವರದಿಗಳನ್ನು ಹೊಂದಿದ್ದ ಕೋವಿಡ್ -19 ರೋಗಿಗಳ ಬಗ್ಗೆ ಒಂದು ಪ್ರಬಂಧವನ್ನು ಪ್ರಕಟಿಸಿದ್ದಾರೆ. ಈ ವರದಿಯು ಕೋವಿಡ್-19 ಪೀಡಿತರಲ್ಲಿ ಸಕ್ಕರೆ ಕಾಯಿಲೆ ಮತ್ತು ಥೈರಾಯ್ಡ್ ಹಾರ್ಮೋನುಗಳ ಹೆಚ್ಚಾಗುತ್ತಿರುವ ಬಗ್ಗೆ ಉಲ್ಲೇಖಿಸಲಾಗಿದೆ.

ಬ್ರಿಟಿಷ್ ಮತ್ತು ಯುಎಸ್ ಸಂಶೋಧನೆಗಳು ಹೇಳಿದ್ದೇನು?

ಬ್ರಿಟಿಷ್ ಮತ್ತು ಯುಎಸ್ ಸಂಶೋಧನೆಗಳು ಹೇಳಿದ್ದೇನು?

ಭಾರತದಲ್ಲಿ ನಡೆಸಿರುವ ಸಂಶೋಧನೆಗಳಲ್ಲಿ ಕೋವಿಡ್-19 ಸೋಂಕಿತರು ಅತಿಹೆಚ್ಚು ಮಧುಮೇಹ ಮತ್ತು ಥೈರಾಡ್ಯ್ ಸಮಸ್ಯೆಯನ್ನು ಎದುರಿಸುತ್ತಾರೆ ಎಂಬ ಅಂಶವನ್ನು ಪತ್ತೆ ಮಾಡಿದೆ. ಅದೇ ರೀತಿ ಯುಎಸ್ ಮತ್ತು ಬ್ರಿಟಿಷ್ ಸಂಶೋಧನಾ ಕೇಂದ್ರಗಳಲ್ಲೂ ಈ ಸಂಬಂಧ ಅಧ್ಯಯನಗಳನ್ನು ನಡೆಸಲಾಗಿತ್ತು.

ಯುಎಸ್ ಅಧ್ಯಯನ; ಯುಎಸ್ ಅಧ್ಯಯನದಲ್ಲಿ 2 ಲಕ್ಷ ಜನರನ್ನು ಒಳಗೊಂಡಿದ್ದು, ಪೀಡಿತರಲ್ಲಿ ಮಧುಮೇಹದ ರೋಗಿಗಳ ಬಗ್ಗೆ ಸಂಶೋಧಿಸಲಾಯಿತು. ಕೊರೊನಾ ವೈರಸ್ ಸೋಂಕಿನ ಸೌಮ್ಯ ಲಕ್ಷಣಗಳನ್ನೂ ಹೊಂದಿದವರಿಗೂ ಮಧುಮೇಹದ ಅಪಾಯ ತಪ್ಪಿದ್ದಲ್ಲ. ಕೋವಿಡ್-19 ಸೋಂಕು ತಗುಲಿದವರಲ್ಲಿ ಶೇ.40ರಷ್ಟು ಜನರಿಗೆ ಮಧುಮೇಹವು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ. ಕೊರೊನಾ ವೈರಸ್ ಸೋಂಕಿಗೂ ಮೊದಲು ಮಧುಮೇಹದ ಸಮಸ್ಯೆಯಿಲ್ಲದವರು ಒಂದು ವರ್ಷದ ನಂತರದಲ್ಲಿ ಮಧುಮೇಹ ಸಮಸ್ಯೆಗೆ ತುತ್ತಾಗಿರುವುದು ಸಂಶೋಧನೆಯಲ್ಲಿ ಗೊತ್ತಾಗಿದೆ.

ಬ್ರಿಟಿಷ್ ಅಧ್ಯಯನ: ಕಳೆದ 2020ರ ಆಗಸ್ಟ್ ತಿಂಗಳಿಗೂ ಪೂರ್ವದಲ್ಲಿ ಆಸ್ಪತ್ರೆಗೆ ದಾಖಲಾದ 47,000 ಕೊರೊನಾ ವೈರಸ್ ಸೋಂಕಿತರನ್ನು ಒಳಗೊಂಡಂತೆ ಅಧ್ಯಯನವನ್ನು ನಡೆಸಲಾಗಿತ್ತು. ಹೀಗೆ ಆಸ್ಪತ್ರೆಗೆ ದಾಖಲಾದ ಸೋಂಕಿತರಲ್ಲಿ ಶೇ.5ರಷ್ಟು ಮಂದಿಗೆ ಮಧುಮೇಹ ಕಾಣಿಸಿಕೊಂಡಿರುವುದು ಅಧ್ಯಯನದಿಂದ ತಿಳಿದು ಬಂದಿದೆ. ಅದೇ ರೀತಿ ಆಸ್ಪತ್ರೆಗೆ ದಾಖಲಾಗದಿರುವ ಕೊರೊನಾ ವೈರಸ್ ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ 1.5 ಪಟ್ಟು ಮಧುಮೇಹದ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂಬುದು ಸಂಶೋಧನೆಯಲ್ಲಿ ಗೊತ್ತಾಗಿದೆ.

ಕುಟುಂಬದಲ್ಲಿ ಯಾರೊಬ್ಬರಿಗೂ ಇರಲಿಲ್ಲ ಮಧುಮೇಹ

ಕುಟುಂಬದಲ್ಲಿ ಯಾರೊಬ್ಬರಿಗೂ ಇರಲಿಲ್ಲ ಮಧುಮೇಹ

ಒಂದು ಕುಟುಂಬದ 17 ಜನರನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದ್ದು, ಈ ಕುಟುಂಬ ಯಾರೊಬ್ಬರಿಗೂ ಮೊದಲಿಗೆ ಮಧುಮೇಹವಾಗಲಿ ಅಥವಾ ಹೈಪೋಥೈರಾಯ್ಡಿಸಮ್ ಸಮಸ್ಯೆಯನ್ನಾಗಲಿ ಹೊಂದಿರಲಿಲ್ಲ. "ಕೊರೊನಾ ವೈರಸ್ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ನಾವು ಅವರಿಗೆ ಅಲ್ಪಾವಧಿಯ ಇನ್ಸುಲಿನ್ ಅನ್ನು ನೀಡಿದ್ದೇವೆ. ನಂತರ ಅವರ ರಕ್ತದಲ್ಲಿ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಹೈಪೊಗ್ಲಿಸಿಮಿಕ್ ಅನ್ನು ಹಾಕಿದ್ದೇವೆ. ಆದರೆ ಈ ರೋಗಿಗಳು ಈಗಲೂ ಮಧುಮೇಹ ಔಷಧಿಗಳನ್ನು ತೆಗೆದುಕೊಳ್ಳುವಂತಾಗಿದೆ," ಎಂದು ಡಾ. ಬಾವಸ್ಕರ್ ಹೇಳಿದ್ದಾರೆ.

ಶುಗರ್ ಲೆವೆಲ್ ಮೇಲೆ ವೈದ್ಯರು ಗಮನ ಹರಿಸಿದ ಬಗ್ಗೆ ಉಲ್ಲೇಖ

ಶುಗರ್ ಲೆವೆಲ್ ಮೇಲೆ ವೈದ್ಯರು ಗಮನ ಹರಿಸಿದ ಬಗ್ಗೆ ಉಲ್ಲೇಖ

ಸಾಂಕ್ರಾಮಿಕ ರೋಗದ ಆರಂಭದಲ್ಲಿ ಕೋವಿಡ್-ಮಧುಮೇಹದ ನಡುವಿನ ನಂಟು ಏನು ಎಂಬುದನ್ನು ಗಮನಿಸಿದ್ದೇವೆ. "ಮಧುಮೇಹ ಹೊಂದಿರುವ ಕೆಲವು ರೋಗಿಗಳು ಕೋವಿಡ್‌ನೊಂದಿಗೆ ಆಸ್ಪತ್ರೆಗಳಿಗೆ ದಾಖಲಾದಾಗ ಶುಗರ್ ಲೆವೆಲ್ ಹೆಚ್ಚಾಗಿತ್ತು. ಈ ಶುಗರ್ ಲೆವೆಲ್ ನಿಯಂತ್ರಿಸುವುದಕ್ಕಾಗಿ ಇನ್ಸುಲಿನ್ ಅಥವಾ ಔಷಧಿಗಳ ಅಗತ್ಯವಿತ್ತು. ಆದರೆ ಕೆಲವು ತಿಂಗಳುಗಳ ನಂತರ ಅವರ ಶುಗರ್ ಲೆವೆಲ್ ಕೋವಿಡ್-19 ಸೋಂಕಿಗೂ ಪೂರ್ವದಲ್ಲಿ ಯಾವ ಪ್ರಮಾಣದಲ್ಲಿತ್ತೋ ಅದೇ ಮಟ್ಟಕ್ಕೆ ಇಳಿಯುತ್ತಿತ್ತು," ಎಂದು ಬಾಂದ್ರಾದ ಲೀಲಾವತಿ ಆಸ್ಪತ್ರೆಯ ಹಿರಿಯ ಸಲಹೆಗಾರ ಡಾ ಜಲೀಲ್ ಪಾರ್ಕರ್ ಹೇಳಿದ್ದಾರೆ. ಅಲ್ಲದೇ ಈ ಹಿಂದೆ ಮಧುಮೇಹದ ಸಮಸ್ಯೆ ಇಲ್ಲದವರು ನಂತರದಲ್ಲಿ ಸಕ್ಕರೆ ಕಾಯಿಲೆಗೆ ತುತ್ತಾಗಿರುವುದು ಕಂಡು ಬಂದಿದೆ ಎಂದು ಡಾ. ಪಾರ್ಕರ್ ತಿಳಿಸಿದ್ದಾರೆ.

ಕೊರೊನಾ ವೈರಸ್ ಸೋಂಕಿತರಲ್ಲಿ ಹೆಚ್ಚಿದ ಮಧುಮೇಹ ಸಮಸ್ಯೆ

ಕೊರೊನಾ ವೈರಸ್ ಸೋಂಕಿತರಲ್ಲಿ ಹೆಚ್ಚಿದ ಮಧುಮೇಹ ಸಮಸ್ಯೆ

ದೇಶಾದ್ಯಂತ ಕೋವಿಡ್ -19 ರೋಗಿಗಳಲ್ಲಿ ಹೊಸದಾಗಿ ಮಧುಮೇಹ ಮತ್ತು ಥೈರಾಯ್ಡ್ ರೋಗ ಪತ್ತೆಯಾಗಿರುವುದು ಗಮನಕ್ಕೆ ಬಂದಿದೆ. ಸೈಟೊಕಿನ್ ಉಲ್ಬಣವು ತೀವ್ರವಾದ ಪರಿಣಾಮಗಳ ಹಿಂದೆ ಹಲವು ಕಾರಣಗಳಿವೆ. ಕೋವಿಡ್ -19 ರೋಗಿಗಳಲ್ಲಿ ಕೆಲವು ಪ್ರತಿರಕ್ಷಣಾ ಪ್ರತಿಕ್ರಿಯೆಗಳು ಕಂಡು ಬರುತ್ತದೆ. ಅಥವಾ ಸ್ವಯಂ ನಿರೋಧಕ ಶಕ್ತಿಯಲ್ಲಿ ವ್ಯತ್ಯಾಸವಾದ ಸಂದರ್ಭದಲ್ಲಿ ಮಧುಮೇಹದ ಸಮಸ್ಯೆ ಹೆಚ್ಚಾಗುತ್ತದೆ," ಎಂದು ದೆಹಲಿಯ ಹಿರಿಯ ಅಂತಃಸ್ರಾವಶಾಸ್ತ್ರಜ್ಞ ಡಾ ಅನೂಪ್ ಮಿಶ್ರಾ ಹೇಳಿದ್ದಾರೆ.

ಕೋವಿಡ್-ಉಂಟುಮಾಡುವ SARS CoV 2 ವೈರಸ್ ಕೋಶಗಳ ಮೇಲೆ ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ 2 (ACE2)ದ ಬಗ್ಗೆ ಡಾ ಬಾವಸ್ಕರ್ ಪತ್ರಿಕೆಯಲ್ಲಿ ಉಲ್ಲೇಖಿಸಲಾಗಿದೆ. "ಹೆಚ್ಚಿನ ಸಾಂದ್ರತೆಯ ACE2 ಮೇದೋಜ್ಜೀರಕ ಗ್ರಂಥಿಯ ಇನ್ಸುಲಿನ್-ಸ್ರವಿಸುವ ಬೀಟಾ ಕೋಶಗಳಲ್ಲಿ ನೆಲೆಗೊಂಡಿವೆ. ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿರ್ವಹಿಸುವ ಅಂಗ, ಹಾಗೆಯೇ ಥೈರಾಯ್ಡ್ ಫೋಲಿಕ್ಯುಲರ್ ಕೋಶ, ಕೆಲವು ರೋಗಿಗಳು ಮಧುಮೇಹ ಮತ್ತು ಥೈರಾಯ್ಡ್ ಅಸ್ವಸ್ಥತೆಯನ್ನು ಅನುಭವಿಸುತ್ತಾರೆ ಎಂದು ಅವರು ಹೇಳಿದ್ದಾರೆ.

Recommended Video

ಬಸವರಾಜ್ ಬೊಮ್ಮಾಯಿ ಅವರು ಪಿಎಸ್‌ಐ ನೇಮಕಾತಿ ಬಗ್ಗೆ ಮಾತನಾಡಿದ್ದಾರೆ | Oneindia

English summary
Recent study finds sudden rise in diabetes cases among those affected by Covid in rural areas. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X